Morning Digest: ಬ್ರಿಜೇಶ್ ಕಾಳಪ್ಪ ರಾಜೀನಾಮೆ, ಗಾಯಕ ಕೆಕೆ ಸಾವು, ಮತ್ತೆ ಇಳಿಕೆಯಾದ ಚಿನ್ನ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
1.Congress Crisis: ಮುಖ್ಯಮಂತ್ರಿ ಚಂದ್ರು ಬಳಿಕ ಕಾಂಗ್ರೆಸ್ ಗೆ ಗುಡ್ ಬೈ ಹೇಳಿಕ ಬ್ರಿಜೇಶ್ ಕಾಳಪ್ಪ

ರಾಜ್ಯ ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯ (Vidhana Parishat And Rajyasbha Election) ಅಭ್ಯರ್ಥಿಗಳ ಘೋಷಣೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ (Karnataka Congress) ನಲ್ಲಿ ಅಸಮಾಧಾನ ಸ್ಫೋಟವಾಗಿದೆ. ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ರಿಜೇಶ್ ಕಾಳಪ್ಪ (Congress Spoke person Brijesh Kalappa) ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಸಂಬಂಧ ತಮ್ಮ ರಾಜೀನಾಮೆ ಪತ್ರವನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅವರಿಗೆ ಸಲ್ಲಿಸಿದ್ದಾರೆ. ಆದ್ರೆ ಇದುವರೆಗೂ ಡಿ.ಕೆ.ಶಿವಕುಮಾರ್ ರಾಜೀನಾಮೆ ಪತ್ರವನ್ನು ಅಂಗೀಕರಿಸಲ್ಲ. ಪಕ್ಷ ಬಿಡದಂತೆ ಬ್ರಿಜೇಶ್ ಕಾಳಪ್ಪ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. 2018ರ ವಿಧಾನಸಭಾ ಚುನಾವಣೆ ವೇಳೆಯೂ ಬ್ರಿಜೇಶ್ ಕಾಳಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಂದು ಸಹ ಟಿಕೆಟ್ ಸಿಗದ ಹಿನ್ನೆಲೆ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

2.Bengaluru Vehicles: ವಾಹನಗಳ ವೇಗ ಚಾಲನೆಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ

2020ರಲ್ಲಿ ಅತಿವೇಗದ ಚಾಲನೆಯಿಂದ ನಗರದಲ್ಲಿ 2,993 ಅಪಘಾತಗಳು ಸಂಭವಿಸಿದ್ದು, 596 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದೋರ್ 3,032 ಪ್ರಕರಣಗಳೊಂದಿಗೆ ಬೆಂಗಳೂರಿಗಿಂತ ಸ್ವಲ್ಪ ಮುಂದಿದೆ. ಕೋವಿಡ್ ಮತ್ತು ಲಾಕ್‌ಡೌನ್‌ ಗಳಿಂದಾಗಿ 2020ರಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು. ಆದಾಗ್ಯೂ, ಅಂಕಿಅಂಶಗಳು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಭೀಕರವಾಗಿವೆ. 2016 ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳಲ್ಲಿ 835 ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ 2017ರಲ್ಲಿ 653, 2018ರಲ್ಲಿ 686 ಆಗಿತ್ತು. 2019ರಲ್ಲಿ 768ರ ಇದ್ದರೆ 2020 ರಲ್ಲಿ 646ಕ್ಕೆ ಇಳಿದಿದೆ. 2016ಕ್ಕೆ ಹೋಲಿಸಿದರೆ, ನಗರದಲ್ಲಿ ಅಪಘಾತಗಳಲ್ಲಿ ಶೇಕಡಾ 15.9 ರಷ್ಟು ಕಡಿಮೆಯಾಗಿದೆ. ಇನ್ನೂ, ಲಾಕ್‌ಡೌನ್‌ಗಳ ಹೊರತಾಗಿಯೂ, 2020 ರಲ್ಲಿ ದೇಶದ ಅಪಘಾತ ಸಾವುಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. 1,196 ಸಾವುಗಳೊಂದಿಗೆ ದೆಹಲಿ ಅಗ್ರಸ್ಥಾನದಲ್ಲಿದ್ದು, 872 ರೊಂದಿಗೆ ಚೆನ್ನೈ ನಂತರದ ಸ್ಥಾನದಲ್ಲಿದೆ.

3.Singer KK Death: ಕೊಲ್ಕತ್ತಾ ಬೀದಿಗಳಲ್ಲಿ ಕೆಲವು ಸೆಲ್ಫಿ, ಕೆಕೆ ಕೊನೆಯ ಶೋ!

ದೇಶದಲ್ಲಿ ಮೂಸೇವಾಲನ ಸಾವಿನ ನೋವು ಮರೆಯಾಗುವ ಮುನ್ನವೇ ಇನ್ನೊಬ್ಬ ಖ್ಯಾತ ಗಾಯನ ಸಾವಿನ ಸುದ್ದಿ ಜನರನ್ನು ಬೆಚ್ಚಿಬೀಳಿಸಿದೆ. ಸಾವಿನ ಸುದ್ದಿ ತಿಳಿದ ನೆಟ್ಟಿಗರು ತಮ್ಮ ನೆಚ್ಚಿನ ಗಾಯಕನ ಕೆಲವು ಫೇಸ್​ಬುಕ್ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ಕೋಲ್ಕತ್ತಾದ ನಜ್ರುಲ್ ಮಂಚದಲ್ಲಿ ಜನಸಮೂಹ ನೆರೆದಿತ್ತು. ಕೆಕೆ ಅವರ ಲೈವ್ ಪ್ರದರ್ಶನದಲ್ಲಿ ಅವರು ಮಾಡಿದಂತೆಯೇ. ಗುರುದಾಸ್ ಕಾಲೇಜಿನ 'ಉತ್ಕರ್ಷ್ 2022' ಕಾರ್ಯಕ್ರಮವು ಸ್ಟಾರ್ ಕಲಾವಿದರ ಹಾಡಿನೊಂದಿಗೆ ಸಂಭ್ರಮದಲ್ಲಿತ್ತು. ಕಾಲೇಜು ವಿದ್ಯಾರ್ಥಿಗಳು ಖುಷಿಯಲ್ಲಿದ್ದರು. ಕಾರ್ಯಕ್ರಮದ ಚಿತ್ರಗಳನ್ನು ಕೆಕೆ ಅವರ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ಮುಂದೆ ಗಾಯಕ ಕೋಲ್ಕತ್ತಾದಲ್ಲಿ ನಡೆದ ಈ ಕಾರ್ಯಕ್ರಮದ ಬಗ್ಗೆ ಅವರೇ ಥ್ರಿಲ್ ಆಗಿದ್ದರು. ಎಲ್ಲರೂ ತಮ್ಮ ಹಾಡಿನೊಂದಿಗೆ ಉಳಿಯುವಂತೆ ಫೇಸ್ ಬುಕ್ ನಲ್ಲಿ ವಿಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದರು.

4.Gold Price: ಬಂಗಾರದ ಬೆಲೆ ನಿನ್ನೆ ಏರಿಕೆ, ಇಂದು ಇಳಿಕೆ; ಚಿನ್ನ ಖರೀದಿಗೂ ಮುನ್ನ ಇವತ್ತಿನ ದರ ತಿಳಿದುಕೊಳ್ಳಿ

ಮಾರುಕಟ್ಟೆಯಲ್ಲಿ ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,785 ಇದ್ದದ್ದು ಇಂದು 4,775 ರೂಪಾಯಿಯಾಗಿದ್ದು, ಕಳೆದೆರೆಡು ದಿನಗಳಲ್ಲಿ ಏರಿಳಿತಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,750 ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,920, ರೂ. 47,750, ರೂ. 47,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,750 ರೂ. ಆಗಿದೆ.

5.Second PUC ಪರೀಕ್ಷಾ & ಮೌಲ್ಯಮಾಪನ ಕಾರ್ಯನಿರತ ಸಿಬ್ಬಂದಿಗೆ ಗುಡ್ ನ್ಯೂಸ್

ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಿದೆ. ದ್ವಿತೀಯ ಪಿಯು ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ನೀಡಲಾಗುವ ಸಂಭಾವನೆಯನ್ನು ಹೆಚ್ಚಿಸಲಾಗಿದೆ. ಸಿಬ್ಬಂದಿಯ ಸಂಭಾವನೆ ದರವನ್ನು ಶೇ.20ರಷ್ಟು ಹೆಚ್ಚಳ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದರ ಜೊತೆಗೆ ಶಿಕ್ಷಣ ಇಲಾಖೆ ಮೂರು ಷರತ್ತುಗಳನ್ನು ಸಹ ವಿಧಿಸಿದೆ. ಈ ನಿಯಮಗಳು ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
Published by:Mahmadrafik K
First published: