Morning Digest: ಉ.ಭಾರತದಲ್ಲಿ ಶಾಖದ ಅಲೆ, ದೇವಗನ್ ಬೆಂಬಲಕ್ಕೆ ಕಂಗನಾ, ಹಿಜಾಬ್ ವಿದ್ಯಾರ್ಥಿನಿ ವಿಡಿಯೋ: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
1.Heat Wave: ದೇಶದ ಹಲವೆಡೆ 47 ಡಿಗ್ರಿ ಸೆಲ್ಶಿಯಸ್ ದಾಟಿದ ಉಷ್ಣಾಂಶ, ಭಾರತ ಬಿಸಿ ಬಿಸಿ!

ತಾಪಮಾನವು ಹೆಚ್ಚಾಗುತ್ತಿದ್ದಂತೆ ಭಾರತದ ಹವಾಮಾನ ಇಲಾಖೆಯು ತೀವ್ರವಾದ ಶಾಖದ ಅಲೆಯ (Heat wave) ಎಚ್ಚರಿಕೆಯನ್ನು ನೀಡಿದೆ. ಲಕ್ಷಾಂತರ ಜೀವನ (Life) ಮತ್ತು ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದೆ. ದೇಶದಲ್ಲಿ ತಾಪಮಾನವು ವೇಗವಾಗಿ ಏರುತ್ತಿದೆ ಮತ್ತು ಸಾಮಾನ್ಯಕ್ಕಿಂತ ಮುಂಚಿತವಾಗಿ ಏರುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ರಾಜ್ಯಗಳ ಮುಖ್ಯಮಂತ್ರಿಗಳಿಗೆ (CM) ತಿಳಿಸಿದ್ದಾರೆ. ಭಾರತದ (India) ಹವಾಮಾನ ಇಲಾಖೆ (IMD) ಈ ವಾರ ವಾಯುವ್ಯ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ (Maximum Temperature) 2-4C ಯಿಂದ ಕ್ರಮೇಣ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ, "ನಂತರ ಯಾವುದೇ ದೊಡ್ಡ ಬದಲಾವಣೆಗಳಿಲ್ಲ.

2.Hindi Controversy: ಅಜಯ್‌ ದೇವಗನ್ ಬೆಂಬಲಕ್ಕೆ ನಿಂತ ಕಂಗನಾ! "ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದ ನಟಿ

“ಹಿಂದಿ ನಮ್ಮ ರಾಷ್ಟ್ರ ಭಾಷೆ” (Hindi is our National Language) ಎಂಬ ಖ್ಯಾತ ಬಾಲಿವುಡ್‌ ನಟ (Bollywood Actor) ಅಜಯ್ ದೇವಗನ್ (Ajay Devagan) ಹೇಳಿಕೆಗೆ ದಕ್ಷಿಣ ಭಾರತದಾದ್ಯಂತ (South India) ತೀವ್ರ ವಿರೋಧ ವ್ಯಕ್ತವಾಗಿದೆ. ಅಜಯ್ ದೇವಗನ್ ಹಿಂದಿ ಹೇಳಿಕೆಗೆ ಕನ್ನಡದ ಖ್ಯಾತ ನಟ, ಕಿಚ್ಚ ಸುದೀಪ್ (Kichcha Sudeep) ಸರಿಯಾಗಿಯೇ ತಿರುಗೇಟು ನೀಡಿದ್ದರು. ಕಿಚ್ಚನ ಬೆನ್ನಿಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ನಟಿ ರಮ್ಯಾ (Actress Ramya) ಸೇರಿದಂತೆ ಸಾಕಷ್ಟು ಮಂದಿ ಬೆಂಬಲ ಸೂಚಿಸಿದ್ದರು. ಇನ್ನು ದಕ್ಷಿಣ ಭಾರತದ ಬೇರೆ ಬೇರೆ ಭಾಷೆಯ ಜನರು, ಸೆಲಬ್ರಿಟಿಗಳೂ (Celebrity) ಸಹ ಕಿಚ್ಚನ ಮಾತಿಗೆ ದನಿಗೂಡಿಸಿದ್ದರು. ಇದೇ ವಿಚಾರವಾಗಿ ಟ್ವಿಟರ್ (Twitter) ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಾಕಷ್ಟು ಪರ-ವಿರೋಧದ ಚರ್ಚೆಯಾಗಿತ್ತು. ಇದೀಗ ಅಜಯ್ ದೇವಗನ್ ಬೆಂಬಲಕ್ಕೆ ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರಣಾವತ್ (Kangana Ranaut) ನಿಂತಿದ್ದಾರೆ.

3.Hijab ಧರಿಸಿ ಬಂದಿದ್ದಕ್ಕೆ ಪರೀಕ್ಷೆಗೆ ನಿರಾಕರಣೆ: ಕಣ್ಣೀರಿಟ್ಟು ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿನಿ

ಇದೀಗ ಶಿವಮೊಗ್ಗದ ವಿದ್ಯಾರ್ಥಿನಿ ತನಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ ಎಂದು ವಿಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಶಾಹಿನ್ ಆಕ್ರೋಶ ಹೊರ ಹಾಕಿರುವ ವಿದ್ಯಾರ್ಥಿನಿ. ಶಿವಮೊಗ್ಗದ ಡಿವಿಎಸ್ ಕಾಲೇಜಿನ ಕೊನೆಯ ವರ್ಷದ ಬಿಎ ಪರೀಕ್ಷೆಗಾಗಿ ಶಾಹಿನ್ ಆಗಮಿಸಿದ್ದರು. ನ್ಯಾಯಲಯದ ಆದೇಶದಂತೆ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದ ಕಾರಣ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ. ಆಡಳಿತ ಮಂಡಳಿ ನಿರ್ಧಾರ ವಿರುದ್ಧ ವಿಡಿಯೋ ಮಾಡಿರುವ ಶಾಹಿನ್ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

4.ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಕಚೇರಿಗೆ ಬಿಜೆಪಿ ಶಾಸಕನ ಅತ್ಯಾಪ್ತನಿಂದ ದೂರು

ಪಿಎಸ್ಐ ಪರೀಕ್ಷೆ ಅಕ್ರಮದ (PSI Recruitment Scam) ಕ್ವೀನ್ ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯ (BJP Leader Divya Hagarag Arrest) ಬಂಧನವಾಗಿದೆ. ಪಿಎಸ್ಐ ಅಕ್ರಮದಲ್ಲಿ ದೊಡ್ಡವರು ಭಾಗಿಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದೀಗ ಬಿಜೆಪಿ ನಾಯಕರೊಬ್ಬರು (BJP Leader) ಪಿಎಸ್ಐ ಅಕ್ರಮ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿ ಪ್ರಧಾನಿ ಕಚೇರಿಗೆ (Prime Minister Office) ದೂರು ಸಲ್ಲಿಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧವೇ ಬಿಜೆಪಿ ನಾಯಕ ರಾಘವ್ ಅಣ್ಣಿಗೇರಿ (Raghav Annigeri) ದೂರು ನೀಡಿದ್ದಾರೆ. ರಾಜ್ಯದಲ್ಲಿರುವ ಸರ್ಕಾರ ಭ್ರಷ್ಟವಾಗಿದ್ದು, ಪೊಲೀಸ್ ಇಲಾಖೆ ಅಲ್ಲದೆ ಬೇರೆ ಇಲಾಖೆಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ದೂರು ಸಲ್ಲಿಸಿರುವ ರಾಘವ್​ ಅಣ್ಣೀಗೇರಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತರಾಗಿದ್ದಾರೆ.

5.ಕಾಶ್ಮೀರಿ ಪಂಡಿತ ಮಕ್ಕಳಿಗೆ ಉಚಿತ ವಸತಿ ಶಿಕ್ಷಣದ ಆಫರ್ ನೀಡಿದ ಪುತ್ತೂರಿನ ವಿದ್ಯಾಸಂಸ್ಥೆ

ಸರಿ ಸುಮಾರು 30-32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಪಂಡಿತರ (Kashmiri Pandits) ಮೇಲೆ ನಡೆದ ದೌರ್ಜನ್ಯ ಇದೀಗ ದೇಶದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಶ್ಮೀರೀ ಪಂಡಿತರ ಮೇಲಾದ ಶೋಷಣೆಯ ಘಟನೆಗಳನ್ನು ಹೊಂದಿರುವ ದಿ ಕಾಶ್ಮೀರೀ ಫೈಲ್ಸ್ ಚಿತ್ರ (Kashmiri Files) ತೆರೆಗೆ ಬಂದ ಬಳಿಕ ಈ ಚರ್ಚೆ ದೇಶದಲ್ಲಿ ಆರಂಭಗೊಂಡಿದೆ. ಕಾಶ್ಮೀರಿ ಪಂಡಿತರ ಇಂದಿನ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಣ ಸಂಸ್ಥೆಯೊಂದು ನಿರಾಶ್ರಿತ ಕಾಶ್ಮೀರ ಪಂಡಿತರ ಮಕ್ಕಳಿಗೆ ಉಚಿತ ವಸತಿ ಸೇರಿದಂತೆ ಶಿಕ್ಷಣ ನೀಡಲು (Free education) ಮುಂದಾಗಿದೆ.
Published by:Mahmadrafik K
First published: