Morning Digest: ಕಿಚ್ಚ-ಅಜಯ್ ದೇವಗನ್ ಟ್ವೀಟ್ ವಾರ್, ಕಾಲೇಜ್‌ನಲ್ಲಿ ಸ್ಟೂಡೆಂಟ್ ಸೂಸೈಡ್! ಈವರೆಗಿನ ಟಾಪ್ ನ್ಯೂಸ್ ಇಲ್ಲಿದೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್ ಶುರುವಾಗಿದ್ದು ಹೇಗೆ?

ಸ್ಯಾಂಡಲ್‌ವುಡ್ ಸಿಂಗ್‌, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಹಾಗೂ ಬಾಲಿವುಡ್‌ ಸಿಂಗಂ ಅಜಯ್ ದೇವಗನ್‌ (Ajay Devgan) ನಡುವೆ ‘ಹಿಂದಿ ರಾಷ್ಟ್ರಭಾಷೆ’ (National Language) ಎಂಬ ವಿಚಾರಕ್ಕೆ ಟ್ವಿಟ್ಟರ್‌ನಲ್ಲಿ ದೊಡ್ಡ ಯುದ್ಧವೇ ನಡೆದಿದೆ. ಇದಕ್ಕೆ ಎರಡೂ ಕಡೆ ಬೆಂಬಲಿಗರು ಭಾರೀ ಕಾಮೆಂಟ್ (Comment) ಮಾಡಿದ್ದಾರೆ.

ಇತ್ತ ಕಿಚ್ಚನ ಬೆಂಬಲಕ್ಕೆ ಸೌತ್‌ ಇಂಡಿಯಾ ಸಿನಿಮಾದ (South India Cinema) ಗಣ್ಯರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ನಟಿ ರಮ್ಯಾ, ಆಶಿಕಾ ರಂಗನಾಥ್, ನಟ ನಿನಾಸಂ ಸತೀಶ್, ಮೇಘನಾ ಗಾಂವ್ಕರ್ ಸೇರಿದಂತೆ ಹಲವರು ನಿಂತಿದ್ದಾರೆ.  ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಗೆ ಈಗಾಗಲೇ 56 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಗಳು ಬಂದಿದ್ದರೆ, 12,300ಕ್ಕಿಂತ ರೀಟ್ವೀಟ್ ಹಾಗೂ19 ಸಾವಿರಕ್ಕಿಂತ ಹೆಚ್ಚು ಕೋಟ್ ಟ್ವೀಟ್ ಗಳಾಗಿವೆ. ಆ ಮೂಲಕ ಸುದೀಪ್ ಅವರ ಈವರೆಗಿನ ಅತ್ಯಂತ ಪ್ರಖ್ಯಾತ ಟ್ವೀಟ್ ಇದು ಎನಿಸಿತು.

ಇದನ್ನೂ ಓದಿ: Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?

200 ಕೋಟಿ ಮನೆಗೆ ದುಬಾರಿ ನೇಮ್​ಪ್ಲೇಟ್ ಹಾಕಿದ ಶಾರೂಖ್!

ಶಾರೂಖ್ ಖಾನ್ ತಮ್ಮ 200 ಕೋಟಿ ವೆಚ್ಚದ ಮನೆಯ ನೇಮ್​ಪ್ಲೇಟ್ ಬದಲಾಯಿಸಿದ್ದಾರೆ. ಈ ಮನೆಯ ನೇಮ್​ಪ್ಲೇಟ್ ತಯಾರಿಸಿದ್ದು ಅವರ ಪತ್ನಿ ಗೌರಿ. ಮನೆ ಮೇಲೆ ಮನ್ನತ್ ಬರೆದಿರುವ ಹೊಸ ನಾಮಫಲಕ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೊದಲು ಅಡ್ಡಲಾಗಿ ಬರೆದ ನಾಮಫಲಕ ಇತ್ತು. ನಾಮಫಲಕವನ್ನು ಈಗ ಕಡಿದಾದ ರೀತಿಯಲ್ಲಿ ಬರೆಯಲಾಗಿದೆ. ನಾಮಫಲಕವನ್ನು ಶಾರುಖ್ ಪತ್ನಿ ಗೌರಿ ಖಾನ್ ಮತ್ತು ಮನ್ನತ್ ಬಾಸ್ ತಯಾರಿಸಿದ್ದಾರೆ.

ಇದರ ಬೆಲೆ ಕೇಳಿದ್ರೆ ಮಾತ್ರ ಶಾಕ್ ಆಗುತ್ತೀರಿ ಖಂಡಿತಾ! ಈ ಖರ್ಚಲ್ಲಿ ಮಾಲ್ಡೀವ್ಸ್ ಟ್ರಿಪ್ ಹೋಗಿಬರಬಹುದಿತ್ತು! ಬಾಲಿವುಡ್ ವರದಿಗಳ ಪ್ರಕಾರ ಗೌರಿ ಖಾನ್ ಹೊಸ ನಾಮ ಫಲಕಕ್ಕೆ ಸುಮಾರು 20-25 ಲಕ್ಷ ರೂ. ಗೌರಿ ಖಾನ್ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಶಾರುಖ್ ಖಾನ್ ಈ ಯಾವುದೇ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

Uttar Pradesh: 6,000 ಲೌಡ್​ ಸ್ಪೀಕರ್ ತೆರವು, 30 ಸಾವಿರ ಸ್ಪೀಕರ್ ಧ್ವನಿ ಇಳಿಕೆ

ಲಕ್ನೋ(ಏ.28): ದೇಶದಾದ್ಯಂತ ಧ್ವನಿವರ್ಧಕ, ಲೌಡ್​ಸ್ಪೀಕರ್​ಗಳ (Loudspeaker) ಶಬ್ದದ ಕುರಿತು ಚರ್ಚೆ ಹೆಚ್ಚಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ 6 ಸಾವಿರ ಲೌಡ್​ಸ್ಪೀಕರ್​​ಗಳನ್ನು ತೆರವುಗೊಳಿಸಿದೆ. ಉತ್ತರ ಪ್ರದೇಶದಲ್ಲಿ (Uttara Pradesh) ಸರ್ಕಾರದ ಆದೇಶದ ನಂತರ 6,000 ಕ್ಕೂ ಹೆಚ್ಚು ಅನಧಿಕೃತ ಧ್ವನಿವರ್ಧಕಗಳನ್ನು ಧಾರ್ಮಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ.

ಇತರ 30,000 ಧ್ವನಿವರ್ಧಕಗಳನ್ನು ಉತ್ತರ ಪ್ರದೇಶದಾದ್ಯಂತ ಅನುಮತಿಸುವ ಮಿತಿಗಳಿಗೆ ಹೊಂದಿಸಲಾಗಿದೆ ಎಂದು ಹಿರಿಯ ಪೊಲೀಸ್ (Police) ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಕಾಲೇಜ್‌ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸೂಸೈಡ್! ರೊಚ್ಚಿಗೆದ್ದು ದಾಂಧಲೆ ನಡೆಸಿದ ಸ್ಟೂಡೆಂಟ್ಸ್

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ (Doddaballapur) ಗೀತಂ ಯೂನಿವರ್ಸಿಟಿ (Gitam University) ಮತ್ತೆ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿ ಆಂಧ್ರ (Andhra) ಹಾಗೂ ಕರ್ನಾಟಕದ (Karnataka) ವಿದ್ಯಾರ್ಥಿಗಳು (Students) ಕಿತ್ತಾಡಿಕೊಂಡಿದ್ದರು. ಕ್ಷುಲ್ಲಕ ಕಾರಣಕ್ಕೆ ಕೈ-ಕೈ ಮಿಲಾಯಿಸಿ, ದಾಂಧಲೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದಾಂಧಲೆ ಮಾಡಿದ್ದಾರೆ. ಅದಕ್ಕೆ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆ (Student Suicide).

ಅದೇ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಉಗಾಂಡಾ (Uganda) ಮೂಲದ ವಿದ್ಯಾರ್ಥಿನಿಯೊಬ್ಬಳು ಯೂನಿವರ್ಸಿಟಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಕಾಲೇಜ್‌ನಲ್ಲಿ (College) ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಇದನ್ನೂ ಓದಿ: Student Suicide: ಕಾಲೇಜ್‌ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸೂಸೈಡ್! ರೊಚ್ಚಿಗೆದ್ದು ದಾಂಧಲೆ ನಡೆಸಿದ ಸ್ಟೂಡೆಂಟ್ಸ್

Gold Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ, ಬೆಳ್ಳಿ ಬೆಲೆ ಇಳಿಕೆ!

ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,450 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,860 ರೂ. ಇತ್ತು. ಇಂದು ಸಹ ಬಂಗಾರದ ದರ ಅಷ್ಟೇ ಇದೆ.  ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 52,860 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅದೇ ರೀತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,450 ರೂ. ಇತ್ತು. ಇಂದು ಸಹ ಆ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳಿ ದರ (Silver Rate) ಮತ್ತಷ್ಟು ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 65,000 ರೂ. ಇತ್ತು. ಇಂದು 300 ರೂ. ಕಡಿಮೆಯಾಗಿ 64,700 ರೂ. ಆಗಿದೆ.
Published by:Annappa Achari
First published: