• Home
  • »
  • News
  • »
  • state
  • »
  • Morning Digest: ಬ್ಯಾಂಕ್ ಹಣ ದುರುಪಯೋಗ, ಶಾಸಕ ಮೇವಾನಿ ಮತ್ತೆ ಅರೆಸ್ಟ್, ಚಿನ್ನದ ಇವತ್ತಿನ ಬೆಲೆ; ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಬ್ಯಾಂಕ್ ಹಣ ದುರುಪಯೋಗ, ಶಾಸಕ ಮೇವಾನಿ ಮತ್ತೆ ಅರೆಸ್ಟ್, ಚಿನ್ನದ ಇವತ್ತಿನ ಬೆಲೆ; ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.SBI Bank: ಒಂದೂವರೆ ಕೋಟಿ ಹಣ ದುರುಪಯೋಗ ಮಾಡಿ ಮ್ಯಾನೇಜರ್ ಎಸ್ಕೇಪ್!


ಫೈನಾನ್ಸ್ ಗಳ (Finance) ಹಾವಳಿಯಿಂದ ಗ್ರಾಹಕರು (Customer) ತಮ್ಮ ಹಣ (Money) ಸುರಕ್ಷಿತವಾಗಿರಲೆಂದು (Safe) ನ್ಯಾಷನಲೈಜ್ಡ್ ಬ್ಯಾಂಕುಗಳಲ್ಲಿ (Nationalized Bank) ಹಣ ಇಡ್ತಾರೆ. ಅಲ್ಲಿ ನಮ್ಮ ಹಣ ಸೇಫ್ ಆಗಿ ಇರುತ್ತೆ, ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಸರ್ಕಾರ (Government) ನಮ್ಮ ಸಹಾಯಕ್ಕೆ ಬರುತ್ತೆ ಅನ್ನೋದು ಜನರ ಭರವಸೆ. ಆದ್ರೆ ಕೆಲ ಬ್ಯಾಂಕ್ ವ್ಯವಸ್ಥಾಪಕರು (Bank Manager) ಹಣ ದುರುಪಯೋಗಪಡಿಸಿಕೊಳ್ತಿರೋ ಘಟನೆ ನಡೆಯುತ್ತಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಮ್ಯಾನೇಜರ್ ಓರ್ವ ಹಣ ದುರುಪಯೋಗ ಪಡಿಸಿ ನಾಪತ್ತೆಯಾಗಿರೋದು (Escape) ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.


2.Hubballi: ಸಚಿವ ಸೋಮಣ್ಣಗೆ ಶೆಟ್ಟರ್ ಟೋಪಿ


- ಮಾಜಿ ಸಿಎಂ ಒಬ್ಬರು ಸಚಿವ ಸೋಮಣ್ಣಗೆ ಟೋಪಿ ಹಾಕಿದ್ದಾರೆ..! ಒಳ್ಳೆಯವರಿಂದ್ಲೇ ಟೋಪಿ ಬಿತ್ತಲ್ಲ ಅಂತ ಸಚಿವ ಸೋಮಣ್ಣ ಹೇಳಿದ್ದಾರೆ. ಇಂಥದ್ದೊಂದು ಘಟನೆಗೆ ಸಾಕ್ಷಿಯಾದದ್ದು ಹುಬ್ಬಳ್ಳಿ. ಹೌದು... ವಸತಿ ಸಚಿವ ಸೋಮಣ್ಣ (Minister V Somanna) ಹುಬ್ಬಳ್ಳಿಗೆ (Hubballi) ಭೇಟಿ ನೀಡಿದ ವೇಳೆ ಟೋಪಿ ಪ್ರಸಂಗ ನಡೆದಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರ ಸಭೆ ಆಯೋಜಿಸಲಾಗಿತ್ತು. ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Minister Halappa Achar) , ಸಚಿವ ವಿ ಸೋಮಣ್ಣ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar), ಸ್ಥಳೀಯ ಬಿಜೆಪಿ ಶಾಸಕರು (BJP MLAs) ಸಭೆಯಲ್ಲಿ ಭಾಗಿಯಾಗಿದ್ದಾರೆ.


3.ಬೇಲ್ ಪಡೆದ ನಂತರ ಮತ್ತೊಮ್ಮೆ ಅರೆಸ್ಟ್ ಆದ ದಲಿತ ಶಾಸಕ ಮೇವಾನಿ!


ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧದ ವಿವಾದಾತ್ಮಕ ಟ್ವೀಟ್‌ಗಳ (Controversial Tweet) ಪ್ರಕರಣದಲ್ಲಿ ಜಾಮೀನು (Bail) ಪಡೆದ ಕೆಲವೇ ಕ್ಷಣಗಳಲ್ಲಿ ಗುಜರಾತ್ ಶಾಸಕ (Gujarat MLA) ಜಿಗ್ನೇಶ್ ಮೇವಾನಿ (Jignesh Mevani) ಅವರನ್ನು ಅಸ್ಸಾಂ ಪೊಲೀಸರು (Assam Police) ಮತ್ತೆ ಬಂಧಿಸಿದ್ದಾರೆ. ಮಹಿಳಾ ಪೊಲೀಸ್ (Lady Police) ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಇದೀಗ ಅವರನ್ನು ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಅಸ್ಸಾಂನಲ್ಲಿ ದೂರು ದಾಖಲಿಸಿದ ನಂತರ ಗುಜರಾತ್‌ನ ಸ್ವತಂತ್ರ ಶಾಸಕರನ್ನು ಅಸ್ಸಾಂ ಪೊಲೀಸರು ಗುಜರಾತ್‌ನ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಏಪ್ರಿಲ್ 20 ರಂದು ಬಂಧಿಸಿದರು. ಅಸ್ಸಾಂನ ಸ್ಥಳೀಯ ನ್ಯಾಯಾಲಯ ಇಂದು ಮಧ್ಯಾಹ್ನ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ವಿಚಾರಣೆ ಪ್ರಾರಂಭವಾಗುವ ಮೊದಲು, ಪೊಲೀಸರು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇವಾನಿಯನ್ನು ಎತ್ತಿಕೊಂಡರು.


4.ಡ್ರಾಪ್ ನೆಪದಲ್ಲಿ ಮಹಿಳೆಯ ಅತ್ಯಾಚಾರ, ಕೊಲೆ


ದೌಸಾ ಜಿಲ್ಲೆಯ ಹಳ್ಳಿಯೊಂದರಲ್ಲಿ 35 ವರ್ಷದ ವಿವಾಹಿತ ಮಹಿಳೆಯನ್ನು (Married woman) ಇಬ್ಬರು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (Murder) ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಸೋಮವಾರ ಜೈಪುರ (Jaipur) ಜಿಲ್ಲೆಯ ಬಸ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾವಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಶಂಕಿತರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ


5.Gold Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ!


ಭಾರತದ ಮಾರುಕಟ್ಟೆಗಳಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,990 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 53,440 ರೂ. ಇತ್ತು. ಇಂದು ಸಹ ದರದಲ್ಲಿ ಯಾವುದೇ ವ್ಯತ್ಯಸವಾಗಿಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 53,440 ರೂ. ಇತ್ತು. ಇಂದು ಸಹ ದರದಲ್ಲಿ ಯಾವುದೇ ವ್ಯತ್ಯಸವಾಗಿಲ್ಲ. ಅದೇ ರೀತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,990 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 53,590 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 53,440 ರೂ. ಆಗಿದೆ.

Published by:Mahmadrafik K
First published: