Morning Digest:ಡಾ. ರಾಜ್​ಕುಮಾರ್, ಸಚಿನ್ ತೆಂಡಲ್ಕೂರ್ ಹುಟ್ಟುಹಬ್ಬ, AIMIM ಕಾರ್ಪೂರೇಟರ್ ಅರೆಸ್ಟ್: ಬೆಳಗಿನ ಟಾಪ್ ನ್ಯೂಸ್ ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಇಂದಿನ ಟಾಪ್ ನ್ಯೂಸ್‌ಗಳು

ಇಂದಿನ ಟಾಪ್ ನ್ಯೂಸ್‌ಗಳು

  • Share this:
1.ಇಂದು ಯುಗಪುರುಷ ಡಾ. ರಾಜ್​ಕುಮಾರ್ ಹುಟ್ಟುಹಬ್ಬ

ಡಾ.ರಾಜ್ (Dr. Raj) , ಕನ್ನಡಿಗರ ಎದೆಬಡಿತದ ಸದ್ದು, ಕನ್ನಡಿಗರ ಉಸಿರು, ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಜ್ಯದ ಅಧಿಪತಿ. ರಾಜ್ ಕುಮಾರ್ (Rajkumar) ಅಂದ್ರೆ ಬರೀ ಹೆಸರಲ್ಲ, ಅದೊಂದು ಶಕ್ತಿ, ಅದು ಕನ್ನಡದ ಪ್ರತಿಧ್ವನಿ, ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ, ಹೆಮ್ಮೆಯ ಕನ್ನಡಿಗ, ಇಂದು ವರನಟ ಡಾ.ರಾಜಕುಮಾರ್ ಅವರ 93ನೇ ಹುಟ್ಟುಹಬ್ಬ (Dr Rajkumar Birthday) . ಕರುನಾಡಿಗೆ ಒಂದು ರೀತಿ ವಿಶೇಷ. ಸತತ ಎರಡು ವರ್ಷ ಈ ಕೊರೋನಾ (Corona) ವೈರೆಸ್ ನಿಂದ ಯಾವ ನಟರು ಸಹ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಜೊತೆಗೆ ಅಪ್ಪಾಜಿಯಯ ಹುಟ್ಟುಹಬ್ಬ ಕೂಡ ಆಚರಣೆ ಮಾಡಿರಲಿಲ್ಲ.

2.Hubballi Riots: ಎಐಎಂಐಎಂ ಕಾರ್ಪೊರೇಟರ್ ನಜೀರ್ ಬಂಧನ

ಹುಬ್ಬಳ್ಳಿ ಗಲಭೆ (Hubballi Riots)ತನಿಖೆ ತೀವ್ರಗೊಂಡಿದ್ದು, ಗಲಭೆಗೆ ಸಂಬಂಧಿಸಿ ಬಂಧನಗಳು ಮುಂದುವರೆದಿವೆ. ಕೊನೆಗೂ ಎಐಎಂಐಎಂ ಕಾರ್ಪೊರೇಟರ್ (AIMIM corporator) ನಜೀರ್ ಅಹ್ಮದ್ ಹೊನ್ಯಾಳ (Nazeer Ahmad Honyala) ಅರೆಸ್ಟ್ (Arrest) ಆಗಿದ್ದಾನೆ. ಮನೆಯಲ್ಲಿದ್ದ ನಜೀರ್ ಅಹ್ಮದ್ ಹೊನ್ಯಾಳನನ್ನು ವಶಕ್ಕೆ ಪಡೆದ ಪೊಲೀಸರು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ (Hale Hubballi Police Station) ವಿಚಾರಣೆ ನಡೆಸಿದರು. ಮೊಬೈಲ್ ಸಂದೇಶ (Mobile Message) ಇತ್ಯಾದಿಗಳನ್ನು ಪರಿಶೀಲಿಸಿದ ಪೊಲೀಸರು, ನಜೀರ್ ನನ್ನು ಬಂಧಿಸಿ ಆರೋಗ್ಯ ತಪಾಸಣೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ (KIMS Hospital) ಕರೆದೊಯ್ದರು.

3.ಮದ್ಯ ಕೊಳ್ಳಲು 100 ರೂ. ಕೊಡದ್ದಕ್ಕೆ ತಾಯಿಯನ್ನು ಹೊಡೆದು ಕೊಂದ ಮಗ

ಒಡಿಶಾದ (Odisha) ಮಯೂರ್‌ಭಂಜ್ ಜಿಲ್ಲೆಯಲ್ಲಿ ಮದ್ಯ ಖರೀದಿಸಲು 100 ರೂಪಾಯಿ ನೀಡದ ಕಾರಣಕ್ಕೆ ಆಕೆಯ ಮಗ ಮಹಿಳೆಯನ್ನು ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು (Police) ಶನಿವಾರ ತಿಳಿಸಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಜಶಿಪುರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, 21 ವರ್ಷದ ಸರೋಜ್ ನಾಯಕ್ (Saroj Nayak) ಮದ್ಯ ಖರೀದಿಸಲು ತನ್ನ ತಾಯಿ ಸಾಲಂದಿ ನಾಯಕ್‌ಗೆ 100 ರೂ. ಕೇಳಿದ್ದಾನೆ. ಆದರೆ, ಅವರ ತಾಯಿಗೆ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಕುಪಿತಗೊಂಡ ಸರೋಜ ತನ್ನ ತಾಯಿಯನ್ನು ನಿರಂತರವಾಗಿ ಥಳಿಸಲು ಆರಂಭಿಸಿದ್ದು ಆಕೆಯ ಸಾವಿಗೆ ಕಾರಣವಾಯಿತು. ಕೃತ್ಯ ಎಸಗಿದ ಬಳಿಕ ಆರೋಪಿ ಸರೋಜ್ ಸ್ಥಳದಿಂದ ಪರಾರಿಯಾಗಿದ್ದಾನೆ.

4.ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜನ್ಮದಿನ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇಂದು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 24, 1973 ರಂದು ಜನಿಸಿದ ಸಚಿನ್ ತೆಂಡೂಲ್ಕರ್ 16 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಅಲ್ಲಿಂದ ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ನ ಕಿರೀಟವಿಲ್ಲದ ಮಹಾರಾಜರಾದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇಂದು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 24, 1973 ರಂದು ಜನಿಸಿದ ಸಚಿನ್ ತೆಂಡೂಲ್ಕರ್ 16 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಅಲ್ಲಿಂದ ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ನ ಕಿರೀಟವಿಲ್ಲದ ಮಹಾರಾಜರಾದರು. ಇವರು 1989ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಸಚಿನ್ 1989ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಅದರಂತೆ 2013ರಲ್ಲಿ ವಿಂಡೀಸ್​ ವಿರುದ್ಧವೇ ಟೆಸ್ಟ್ ಪಂದ್ಯಕ್ಕೆ ಹಾಗೂ 2012ರಲ್ಲಿ ಪಾಕ್ ವಿರುದ್ಧದ ಏಕದಿನ ಪಂದ್ಯಕ್ಕೆ ವಿದಾಯ ಹೇಳುವ ಮೂಲಕ ಅಂತರಾಷ್ಟ್ರೀಯ ಕ್ರಿಕರೆಟ್ ಲೋಕಕ್ಕೆ ಗುಡ್ ಬೈ ಹೇಳಿದರು.

5.ಟಾಯ್ಲೆಟ್ ಕಮೋಡ್ ನಲ್ಲಿ ಬಿದ್ದ ಮೊಬೈಲ್; ತೆಗೆಯಲು ಹೋದಾಗ ಅಲ್ಲಿಯೇ ತಗ್ಲಾಕೊಳ್ತು ಮಹಿಳೆಯ ತಲೆ

ಎಷ್ಟೋ ಸಲ ಮೊಬೈಲ್ ವಾಶ್ ರೂಂನಲ್ಲಿ ಬೀಳುತ್ತದೆ. ಟಾಯ್ಲೆಟ್ ಸೀಟ್ ಅಥವಾ ಕಮೋಡ್ ನಲ್ಲಿ ಬಿದ್ದ ದುಬಾರಿ ಫೋನ್‌ ನೋಡಿ, ಹಲವರು ಕಣ್ಣೀರು ಹಾಕುತ್ತಾರೆ. ಅಮೆರಿಕದ ವಾಷಿಂಗ್ಟನ್‌ ನಲ್ಲಿ ಮಹಿಳೆಯೊಬ್ಬರ ಜೊತೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಮಹಿಳೆಯ ಫೋನ್ ಇದ್ದಕ್ಕಿದ್ದಂತೆ ಟಾಯ್ಲೆಟ್ ಕಮೋಡ್ ನಲ್ಲಿ ಬಿದ್ದಿದೆ. ಕಮೋಡ್ ನೊಳಗೆ ಬಿದ್ದಿದ ಮೊಬೈಲ್ ತೆಗೆಯಲು ಮಹಿಳೆ ಕೈ ಹಾಕಿದ್ದಾರೆ. ನೋಡ ನೋಡುತ್ತಿದ್ದಂತೆ ಮಹಿಳೆಯ ತಲೆ ಕಮೋಡ್ ನಲ್ಲಿ ಸಿಲುಕಿಕೊಂಡಿದೆ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಬಂದು ಆ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಮಹಿಳೆಯ ಹೆಸರನ್ನು ಗೌಪ್ಯವಾಗಿ ಇರಿಸಲಾಗಿದೆ.
Published by:Mahmadrafik K
First published: