• Home
  • »
  • News
  • »
  • state
  • »
  • Morning Digest: ಹುಬ್ಬಳ್ಳಿ ಗಲಾಟೆ ಅಪ್ ಡೇಟ್, ದೆಹಲಿಯತ್ತ ಡಿಕೆಶಿ ಪ್ರಯಾಣ, ನಿದ್ದೆ ಮಾಡಿ ಹಣ ಎಣಿಸಿ: ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಹುಬ್ಬಳ್ಳಿ ಗಲಾಟೆ ಅಪ್ ಡೇಟ್, ದೆಹಲಿಯತ್ತ ಡಿಕೆಶಿ ಪ್ರಯಾಣ, ನಿದ್ದೆ ಮಾಡಿ ಹಣ ಎಣಿಸಿ: ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Hubballi Riots: ಪ್ರಮುಖ ಆರೋಪಿ ವಸೀಂ ಐದು ದಿನ ಪೊಲೀಸ್ ಕಸ್ಟಡಿಗೆ


ಗಲಭೆ ಪೀಡಿತ ಹುಬ್ಬಳ್ಳಿ (Hubballi) ಸಹಜ ಸ್ಥಿತಿಯತ್ತ ಮರಳಿದೆ. ಗಲಭೆಯ ಮಾಸ್ಟರ್ ಮೈಂಡ್ (Master mind) ಎಂದೇ ಹೇಳಲಾಗಿರೋ ವಸೀಂ ಪಠಾಣ್ (Vasim Pathan) ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ನೀಡಲಾಗಿದೆ. ಇದೇ ವೇಳೆ ಪ್ರಚೋದನಾಕಾರಿ ಪೋಸ್ಟ್ (Provocative Post) ಹಾಕಿದ ಯುವಕನ ಜಾಮೀನು ಅರ್ಜಿ (Bail Plea) ತಿರಸ್ಕೃತಗೊಂಡಿದೆ. ಹುಬ್ಬಳ್ಳಿ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗಿದೆ. ಗಲಭೆಯಲ್ಲಿ ಎಐಎಂಐಎಂ (AIMIM) ಪಾತ್ರ ಇದೆ ಎಂದು ಹೇಳುತ್ತಿರುವಾಗಲೇ ಸಂಘಟನೆಯೊಂದರ ಹೆಸರೂ ತಳಕು ಹಾಕಿಕೊಡಿದೆ.


2.ಮಾಜಿ ನಕ್ಸಲರ ಮದುವೆ ಮಾಡಿದ ಪೊಲೀಸರು!


ಕಲಹಂಡಿ ಜಿಲ್ಲಾ ಪೊಲೀಸ್ (Police) ಮೀಸಲು ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಅಪರೂಪದ ಘಟನೆಯ ದೃಶ್ಯವಿದು. ಕವಾಯತು ಮೈದಾನದಲ್ಲಿ ಗಂಭೀರವಾಗಿ ಕಾಣುವ ಶಸ್ತ್ರಸಜ್ಜಿತ ಪೋಲೀಸ್‌ಸರು ಅದೇ ಮೈದಾನದಲ್ಲಿ ಸರಳ ವಿವಾಹವನ್ನು (Marriage) ಆಚರಿಸಲು ಡೆಕೊರೇಷನ್ ಮತ್ತು ಹೂವಿನಿಂದ ಅಲಂಕರಿಸಲ್ಪಟ್ಟ ಆಹಾರ ಮಳಿಗೆಗಳಿಂದ ಅಲಂಕರಿಸಿದ್ದರು. ವಿಶೇಷವೆಂದರೆ ಕವಾಯತು ಮೈದಾನದಲ್ಲಿ ಮದುವೆ ನಡೆಯುತ್ತಿದ್ದು, ಅದೂ ವಾಂಟೆಂಡ್ ಜೋಡಿಗಳದ್ದು. ಹೌದು ಪೊಲೀಸರಿಂದ ವಾಂಟೆಡ್ ಲಿಸ್ಟ್​​ನಲ್ಲಿದ್ದ ಮಾಜಿ ಮಾವೋಯಿಸ್ಟ್​ಗಳನ್ನು (Ex-Maoist) ಒಂದು ಮಾಡಿದ ಪೊಲೀಸರು ಸರಳವಾಗಿ ಅವರ ಮದುವೆ ಮಾಡಿದ್ದಾರೆ.


3.Afghanistan: ಪ್ರಾರ್ಥನೆ ವೇಳೆ ಮಸೀದಿ ಮೇಲೆ ಸ್ಫೋಟ, 33 ಸಾವು


ಉತ್ತರ ಅಫ್ಘಾನಿಸ್ತಾನದಲ್ಲಿ ಶುಕ್ರವಾರದ ಪ್ರಾರ್ಥನೆಯ (Friday Prayers) ವೇಳೆ ಮಸೀದಿಯೊಂದರಲ್ಲಿ (Mosque) ಬಾಂಬ್ ಸ್ಫೋಟ (Bomb Blast) ಸಂಭವಿಸಿದ್ದು, ಮಕ್ಕಳು ಸೇರಿದಂತೆ 33 ಜನರು ಸಾವನ್ನಪ್ಪಿದ್ದಾರೆ. ಎರಡು ಪ್ರತ್ಯೇಕ ಮಾರಣಾಂತಿಕ ದಾಳಿಗಳ (Deadly Attack) ಜವಾಬ್ದಾರಿಯನ್ನು ಐಸಿಸ್ (ISIS) ಗುಂಪು ಹೇಳಿಕೊಂಡ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ. ಯುಎಸ್ ಬೆಂಬಲಿತ ಸರ್ಕಾರವನ್ನು ಹೊರಹಾಕಿದ ನಂತರ ತಾಲಿಬಾನ್ (Taliban) ಹೋರಾಟಗಾರರು ಕಳೆದ ವರ್ಷ ಅಫ್ಘಾನಿಸ್ತಾನದ ನಿಯಂತ್ರಣವನ್ನು ವಶಪಡಿಸಿಕೊಂಡಿದ್ದದಾರೆ. ಬಾಂಬ್ ದಾಳಿಗಳ ಸಂಖ್ಯೆಯು ಕುಸಿದಿದೆ. ಆದರೆ ಜಿಹಾದಿ ಮತ್ತು ಸುನ್ನಿ IS ಅವರು ಧರ್ಮದ್ರೋಹಿ ಎಂದು ನೋಡುವ ಗುರಿಗಳ ವಿರುದ್ಧ ದಾಳಿಯನ್ನು ಮುಂದುವರೆಸಿದ್ದಾರೆ.


4.ದೆಹಲಿಯತ್ತ ಡಿಕೆಶಿ ಪ್ರಯಾಣ


ನಿರ್ಣಾಯಕವಾಗಿರುವ 2024ರ ಲೋಕಸಭಾ ಚುನಾವಣೆ(2024 Parliament Elections) ಮತ್ತು ಅದಕ್ಕೂ ಮುನ್ನ ಕರ್ನಾಟಕವೂ (Karnataka) ಸೇರಿದಂತೆ ಬರುವ ಸಾಲು ಸಾಲು ವಿಧಾನಸಭಾ ಚುನಾವಣೆಗಳಿಗೆ (Assembly Election) ಈಗಿನಿಂದಲೇ ತಯಾರಿ ಆರಂಭಿಸುತ್ತಿರುವ ಕಾಂಗ್ರೆಸ್ ಪಕ್ಷವು (Congress Party) ಪಕ್ಷ ಸಂಘಟನೆ, ಸದಸ್ಯತ್ವ ನೊಂದಣಿ‌, ಅಭ್ಯರ್ಥಿಗಳ ಹುಡುಕಾಟದ ಬಗ್ಗೆ ನೀತಿ ನಿಲುವುಗಳನ್ನು ರೂಪಿಸುತ್ತಿದೆ. ಈ ಬಗ್ಗೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Poll Strategist Prashant Kishore) ನಿರಂತರವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಹಾಗೂ ಇನ್ನಿತರ ಕಾಂಗ್ರೆಸ್ ಹಿರಿಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ‌. ಮುಂದುವರೆದ ಭಾಗವಾಗಿ ಇಂದು ಸೋನಿಯಾ ಗಾಂಧಿ ಸಮ್ಮುಖದಲ್ಲಿ ಪ್ರಶಾಂತ್ ಕಿಶೋರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಕರ್ನಾಟಕದ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.


5.30 ದಿನ ನಿದ್ದೆ ಮಾಡಿದ್ರೆ ಕೈ ತುಂಬ ಸಿಗುತ್ತೆ ಐದಂಕಿಯ ಸಂಬಳ


ಮಲೇಷ್ಯಾದ ಕಂಪನಿಯೊಂದು ಈ ರೀತಿಯ ಜಾಹೀರಾತು ನೀಡಿದೆ. ಸದ್ಯ ಜಾಹೀರಾತಿನ ಪೋಸ್ಟ್ಗರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮಗೆ ನಿದ್ದೆಯ ಬದಲಾಗಿ ಕಂಪನಿ ಸಂಬಳ ನೀಡುತ್ತದೆ. 30 ದಿನ ನಿದ್ದೆ ಮಾಡಿದ್ರೆ ನಿಮಗೆ 25 ಸಾವಿರ ರೂಪಾಯಿ ಸಿಗಲಿದೆ. ಮಲೇಷ್ಯಾ ವಿಶ್ವವಿದ್ಯಾಲಯದ ಕೆಲವು ಸಂಶೋಧಕರು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಶೋಧಕರು ತಮಗಾಗಿ ಮಲಗುವ ಜನರನ್ನು ಹುಡುಕುತ್ತಿದ್ದಾರೆ. ಇಲ್ಲಿ ನಿದ್ದೆ ಮಾಡುವ ಉದ್ಯೋಗಿ ಬೇರೆ ಯಾವುದೇ ಕೆಲಸ ಮಾಡಬೇಕಾಗಿಲ್ಲ. ಸಂಶೋಧಕರ ತಂಡವೇ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಸತತ ಒಂದು ತಿಂಗಳು ನೌಕರನ ನಿದ್ರೆಯ ಮಾದರಿಯನ್ನು ಸಂಶೋಧಕರ ತಂಡ ಗಮನಿಸಲಿದೆ. ಈ ನಿದ್ದೆಯ ಕುರಿತು ಸಂಶೋಧಕರ ತಂಡ ಅಧ್ಯಯನದಲ್ಲಿ ತೊಡಗಿಕೊಳ್ಳಲಿದೆ.

Published by:Mahmadrafik K
First published: