• Home
  • »
  • News
  • »
  • state
  • »
  • Morning Digest: ಅಪ್ರಾಪ್ತೆ ಅಪಹರಿಸಿ ಮದ್ವೆಯಾದವ ಅಂದರ್, ಕೊಳೆತು ಹೋಯ್ತು ಮಹಿಳೆ ಶವ! ಇಂದಿನ Top News ಇಲ್ಲಿದೆ ಓದಿ

Morning Digest: ಅಪ್ರಾಪ್ತೆ ಅಪಹರಿಸಿ ಮದ್ವೆಯಾದವ ಅಂದರ್, ಕೊಳೆತು ಹೋಯ್ತು ಮಹಿಳೆ ಶವ! ಇಂದಿನ Top News ಇಲ್ಲಿದೆ ಓದಿ

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ...

  • Share this:

ಅಪ್ರಾಪ್ತೆಯನ್ನು ಅಪಹರಿಸಿ ಮದುವೆ, ಬೆಂಗಳೂರಿನ ಮನೆಯಲ್ಲಿಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಿದವ ಅರೆಸ್ಟ್


ಚಾಮರಾಜನಗರ (ಏ.21): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು(Minor Girl) ಹೆದರಿಸಿ ಅಪಹರಿಸಿಕೊಂಡು (Kidnap) ಹೋಗಿ ಮದುವೆಯಾಗಿದ್ದ (Marriage) ಆರೋಪಿಗೆ 20 ವರ್ಷ ಕಠಿಣ ಸಜೆ ಹಾಗು ಮೂವತೈದು ಸಾವಿರ ರೂಪಾಯಿ ವಿಧಿಸಿ ಚಾಮರಾಜನಗರ (Chamarajanagar) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.  ಚಾಮರಾಜನಗರ ತಾಲ್ಲೂಕು ಹೊನ್ನಳ್ಳಿ ಗ್ರಾಮದ 28 ವರ್ಷ ವಯಸ್ಸಿನ ಮಹೇಶ್ ಅಲಿಯಾಸ್ ಮಾಯ ಎಂಬಾತ ಶಿಕ್ಷೆಗೆ ಗುರಿಯಾಗಿದ್ದು ನೊಂದ ಬಾಲಕಿಗೆ ಕಾನೂನಿ ಸೇವೆಗಳ ಪ್ರಾಧಿಕಾರದಿಂದ ಒಂದು ತಿಂಗಳ ಒಳಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪ್ರಧಾನ  ಜಿಲ್ಲಾ ಮತ್ತು ಸತ್ರಿಯಾ ನ್ಯಾಯಾಧೀಶೆ ಬಿ.ಎಸ್.ಭಾರತಿ ಆದೇಶ ನೀಡಿದ್ದಾರೆ.


ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ


ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ವಾಸವಿದ್ದ 34 ವರ್ಷ ವಯಸ್ಸಿನ ಮಹಿಳೆ ವನಜಾಕ್ಷಿ ಎಂಬುವರು ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವನಜಾಕ್ಷಿ ಖಾಸಗಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಯ ಪತಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಇನ್ನು ಮೂರು ದಿನದಿಂದ ಆಕೆಯ ಪತಿಯೂ ಕಾಣಿಸುತ್ತಿಲ್ಲ ಎನ್ನಲಾಗಿದೆ. ಆತನೆ ಕೊಲೆ ಮಾಡಿ, ಸದ್ಯ ಮನೆ ಬಿಟ್ಟು ಎಸ್ಕೇಪ್‌ ಆಗಿದ್ದಾನೆ ಎನ್ನಲಾಗುತ್ತಿದೆ.


ವನಜಾಕ್ಷಿ ಮೂರು ದಿನಗಳ ಹಿಂದೆಯೆ ಕೊಲೆಯಾಗಿರ ಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮೂರು ದಿನಗಳ ಬಳಿಕ ಈಕೆ ಮನೆಯಿಂದ ಕೆಟ್ಟ ವಾಸನೆ ಬರತೊಡಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು, ಪರಿಶೀಲನೆ ಮಾಡಿದಾಗ ವನಜಾಕ್ಷಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಇದನ್ನೂ ಓದಿ: Crime News: ಅಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆ ಶವ; ಇಲ್ಲಿ ಬಿದ್ದಿತ್ತು ಅಪರಿಚಿತನ ಡೆಡ್ ಬಾಡಿ!


RTE Admission: ರುಪ್ಸಾ-ಸರ್ಕಾರದ ನಡುವೆ ಹಗ್ಗಜಗ್ಗಾಟ! ಬಡ ವಿದ್ಯಾರ್ಥಿಗಳ RTE ಸೀಟ್‌ಗೆ ಬೀಳುತ್ತಾ ಕತ್ತರಿ?

ಬಡ ವಿದ್ಯಾರ್ಥಿಗಳ (Poor Students) ಶಿಕ್ಷಣಕ್ಕೆ (Education) ಆರ್‌ಟಿಇ (RTE) ಯೋಜನೆ ಬಹು ದೊಡ್ಡ ವರದಾನವಾಗಿದೆ. ಆದರೆ ಈ ಯೋಜನೆಗೆ ಈ ವರುಷ ಬ್ರೇಕ್ (Btreak) ಹಾಕಲು ಖಾಸಗಿ ಶಾಲೆಗಳು (Privet Schools) ಮುಂದಾಗಿವೆ. ಯಾಕೆಂದರೆ ಖಾಸಗಿ ಶಾಲೆಗಳಿಗೆ ಬರಬೇಕಾದ ಬಾಕಿ ಮೊತ್ತವನ್ನು ಸರ್ಕಾರ (Government) ನೀಡುತ್ತಿಲ್ಲ. ಇದರಿಂದ ರುಪ್ಸಾ (RUPSA) ವ್ಯಾಪ್ತಿಯ ಖಾಸಗಿ ಶಾಲೆಗಳು ಸರ್ಕಾರಕ್ಕೆ ಸೆಡ್ಡು ಹೊಡೆದಿವೆ. ಮೇಲಿಂದ ಮೇಲೆ ಬೆಲೆ ಏರಿಕೆಯಾಗುತ್ತಿದೆ. ಇಂಥ ಬೆಲೆ ಏರಿಕೆ (Price Hike) ನಡುವೆ ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದುವ (Free Education) ಸರಕಾರದ ಪ್ರಮುಖ ಆರ್ ಟಿ ಇ ಯೋಜನೆಗೆ ಇದೀಗ ಸಂಕಷ್ಟ ಎದುರಾಗಿದೆ.


Viral Story: ವಿಶ್ವದ ನಂ.1 ಶ್ರೀಮಂತ ಈತ, ಆದ್ರೆ ಸ್ವಂತ ಮನೆ ಇಲ್ಲ! ಪ್ರತಿ ರಾತ್ರಿ ಇಲ್ಲಿ ಹೋಗಿ ಮಲಗ್ತಾರಂತೆ


 ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ(Worlds Richest Man) ಜನರ ಸಾಲಿನಲ್ಲಿ ಒಬ್ಬರಾದ ಮತ್ತು ಟೆಸ್ಲಾ(Tesla)ದ ಮಾಲೀಕರಾದ ಎಲೋನ್​ ಮಸ್ಕ್(Elon Musk) ಅವರು ಫೋರ್ಬ್ಸ್ ಪ್ರಕಾರ, 269.5 ಬಿಲಿಯನ್ ಡಾಲರ್(Billion Dollar) ನಿವ್ವಳ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಸದ್ಯಕ್ಕೆ ಅವರು ಸುದ್ದಿಯಲ್ಲಿರುವುದು ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್(Website) ಆದ ಟ್ವಿಟ್ಟರ್(Twitter) ಅನ್ನು ಖರೀದಿಸುವ ಪ್ರಸ್ತಾಪಕ್ಕಾಗಿ. ಇಲ್ಲಿ ಇನ್ನೊಂದು ವಿಷಯವನ್ನು ಅವರೇ ಬಹಿರಂಗ ಪಡಿಸಿಕೊಂಡಿದ್ದಾರೆ ನೋಡಿ.


ಇಷ್ಟೊಂದು ದುಡ್ಡು ಇದ್ದರೂ ಸಹ ಅವರಿಗೆ ಒಂದು ಸ್ವಂತ ಮನೆ ಇಲ್ವಂತೆ ಮತ್ತು ಅವರು ತಮ್ಮ ಸ್ನೇಹಿತರ ಮನೆಯಲ್ಲಿ ಇರುವ ಹೆಚ್ಚುವರಿ ಮಲಗುವ ಕೋಣೆಯಲ್ಲಿ ಮಲಗುತ್ತಾರೆ ಎಂದು ಖುದ್ದು ಅವರೇ ಹೇಳಿದ್ದಾರೆ ನೋಡಿ.


ಇದನ್ನೂ ಓದಿ: Kidnap: ಅಪ್ರಾಪ್ತೆಯನ್ನು ಅಪಹರಿಸಿ ಮದುವೆ, ಬೆಂಗಳೂರಿನ ಮನೆಯಲ್ಲಿಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಿದವ ಅರೆಸ್ಟ್


Gold Price: ಆಭರಣ ಪ್ರಿಯರಿಗೆ ಗುರುವಾರವೇ ಗುಡ್‌ ನ್ಯೂಸ್! ಇಂದು ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ


Gold And Silver Price On April 21, 2022: ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದ್ದು ಬಂಗಾರ ಖರೀದಿಸಬಯಸುವವರು ಆ ಕಾರ್ಯವನ್ನು ಮಾಡಬಹುದು. ನಿನ್ನೆ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,985 ಇದ್ದದ್ದು ಇಂದು ಕುಸಿದು ರೂ. 4,915ಕ್ಕೆ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಸ್ವಲ್ಪ ಮಟ್ಟಿಗಿನ ಸ್ಥಿರತೆ ಕಂಡುಬಂದಿತ್ತಾದರೂ ಇಂದು ಚಿನ್ನದ ಬೆಲೆ ಮತ್ತೆ ಕುಸಿದಿದೆ. ಪ್ರಸಕ್ತ ನಡೆಯುತ್ತಿರುವ ಯುದ್ಧದ ಸನ್ನಿವೇಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ.

Published by:Annappa Achari
First published: