• Home
  • »
  • News
  • »
  • state
  • »
  • Morning Digest: ಬೆಂಗಳೂರು ಮಳೆ, ಕಾಂಗ್ರೆಸ್ ಪ್ರತಿಭಟನೆ, ನಾಳೆ ಗುಡ್ ನ್ಯೂಸ್ ಎಂದ ಸಿಎಂ: ಬೆಳಗಿನ ಟಾಪ್ ನ್ಯೂಸ್ ಗಳು

Morning Digest: ಬೆಂಗಳೂರು ಮಳೆ, ಕಾಂಗ್ರೆಸ್ ಪ್ರತಿಭಟನೆ, ನಾಳೆ ಗುಡ್ ನ್ಯೂಸ್ ಎಂದ ಸಿಎಂ: ಬೆಳಗಿನ ಟಾಪ್ ನ್ಯೂಸ್ ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.ನಾಳೆ ಗುಡ್ ನ್ಯೂಸ್ ನೀಡುವುದಾಗಿ ತಿಳಿಸಿದ ಪಂಜಾಬ್ ಸಿಎಂ


ಆಮ್ ಆದ್ಮಿ ಪಕ್ಷದ (AAP) ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಪಂಜಾಬ್‌ನ ಐಎಎಸ್ ಅಧಿಕಾರಿ(IAS Officers)ಗಳ ಜೊತೆ ಸಭೆ ನಡೆಸಿದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು 'ಕೇಜ್ರಿವಾಲ್ ಯಾವ ಉದ್ದೇಶದಿಂದ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ? ಎಂಬುದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. 'ತಾವು ಅಧಿಕಾರಿಗಳನ್ನು ದೆಹಲಿಗೆ ಏಕೆ ಕಳುಹಿಸಿದ್ದೆ ಎಂದು ತಿಳಿಯಲು ಏಪ್ರಿಲ್ 16ರವರೆಗೆ ಕಾಯಿರಿ. ಅಂದು ಜನರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಹೇಳಿದ್ದಾರೆ.


2.CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ


ಈಶ್ವರಪ್ಪ ವಿರುದ್ಧ ಮುಖ್ಯಮಂತ್ರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಸೂಚಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಶ್ವರಪ್ಪ ತಪ್ಪು ಮಾಡಿಲ್ಲ ಎಂದಿದ್ದಾರೆ. ಹೀಗೆ ಸಿಎಂ ಹೇಳಿದ ಮೇಲೆ ಯಾವ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಾರೆ ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು. ಬಿಜೆಪಿ ಬಿಜೆಪಿ, ಮೋದಿ ಮೋದಿ ಎನ್ನುತ್ತಲೇ ಪ್ರಾಣ ಬಿಡಬೇಕಾದ ಪರಿಸ್ಥಿತಿ ಸಂತೋಷ್'ಗೆ ಬಂದಿದೆ. ಮಂಚದ ಕೇಸ್ ನಲ್ಲಿ ಯಾಕೆ ಎಸ್ ಐ ಟಿ ಮಾಡಿದ್ರು? ಯಾರು ನ್ಯಾಯವನ್ನು ಕೊಡಬೇಕಾಗಿತ್ತೊ? ಅಂತಹ ಸಿಎಂ ಅವರಿಂದಲೇ ಅನ್ಯಾಯ ಆಗುತ್ತಿದೆ. ಈಶ್ವರಪ್ಪ ಬಂಧಿಸಿ ಪ್ರಕರಣದ ತನಿಖೆ ನಡೆಸಬೇಕು ಎಂಬುದು ಸಂತೋಷ್ ಕುಟುಂಬದ ಬೇಡಿಕೆಯಿದೆ ಎಂದರು.ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನನಗೆ ಬಹಳಷ್ಟು ಗೌರವವಿದೆ. ಆದರೆ ಸಿಎಂ ಬೊಮ್ಮಾಯಿ ಕಪ್ಪು ಚುಕ್ಕೆ. ಕೆಂಪಣ್ಣ ಕೊಟ್ಟಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆದಿದ್ದರೆ ಇಂತಹ ಪರಿಸ್ಥಿತಿ ಬರ್ತಿರಲಿಲ್ಲ.


3.ವಸತಿ ಪ್ರದೇಶಗಳಿಗೆ ನುಗ್ಗಿದ ಮಳೆ ನೀರು; BBMP ವಿರುದ್ಧ ಜನರ ಆಕ್ರೋಶ


ಗುರುವಾರ ಸಂಜೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ಜನರು ಹೈರಾಣು ಆಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ರಾತ್ರಿಯೆಲ್ಲ ಜಾಗರಣೆ ಮಾಡಿದ್ದಾರೆ. ಕಾಮಾಕ್ಯ ಲೇಔಟ್ ನಲ್ಲಿರುವ ಸುಮಾರು 30 ರಿಂದ 40 ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆ ತುಂಬಾ ನಾಲ್ಕು ಅಡಿಯಷ್ಟು ನೀರು ನಿಂತಿರುವ ಪರಿಣಾಮ ಎಲ್ಲ ವಸ್ತುಗಳು ನೀರು ಪಾಲಾಗಿವೆ. ವಿದ್ಯಾಪೀಠದಲ್ಲಿ ಅತ್ಯಧಿಕ 7.3 ಸೆಂ.ಮೀ. ಮಳೆಯಾಗಿದೆ. ಸಂಪಂಗಿರಾಮ ನಗರ 4.9 ಸೆಂ.ಮೀ, ವಿ.ವಿ.ಪುರ 4.5 ಸೆಂ.ಮೀ, ಬೊಮ್ಮನಹಳ್ಳಿ 4.2 ಸೆಂ.ಮೀ, ಬೆಳ್ಳಂದೂರು 4 ಸೆಂ.ಮೀ, ಅಂಜನಾಪುರ 3.6 ಸೆಂ.ಮೀ, ಗಾಳಿ ಆಂಜನೇಯ ದೇವಸ್ಥಾನ 3.7 ಸೆಂ.ಮೀ, ಆರ್.ಆರ್.ನಗರ ಮತ್ತು ಕೋರಮಂಗಲ ತಲಾ 3.4 ಸೆಂ.ಮೀ, ಬಿಇಎಂಎಲ್ ಬಡಾವಣೆ 3.1 ಸೆಂ.ಮೀ ಮಳೆಯಾಗಿದೆ.


4.ಏರುತ್ತಲೇ ಇದೆ ಹಳದಿ ಲೋಹದ ಬೆಲೆ - ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಹೀಗಿದೆ


ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,350 ರೂ. ಇತ್ತು. ಇಂದು 200 ರೂ. ಏರಿಕೆಯಾಗಿ 49,550 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 53,840 ರೂ. ಇತ್ತು. ಇಂದು 220 ರೂ. ಹೆಚ್ಚಾಗಿ 54,060 ರೂ. ಆಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 53,840 ರೂ. ಇತ್ತು. ಇಂದು 220 ರೂ. ಹೆಚ್ಚಾಗಿ 54,060 ರೂ. ಆಗಿದೆ. ಅದೇ ರೀತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,350 ರೂ. ಇತ್ತು. ಇಂದು 200 ರೂ. ಏರಿಕೆಯಾಗಿ 49,550 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ. ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಏರಿಕೆಯಾದಂತೆ ಬೆಳ್ಳಿ ದರ (Silver Rate) ದಲ್ಲೂ ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 69,300 ರೂ. ಇತ್ತು. ಇಂದು 700 ರೂ. ಹೆಚ್ಚಾಗಿ 70,000 ರೂ. ಆಗಿದೆ.


5.ಎಸಿ ಕಂಪ್ರೆಸರ್ ಸ್ಫೋಟ ಐವರಿಗೆ ಗಾಯ,


ಗುರುವಾರ ಆಗ್ನೇಯ ದೆಹಲಿಯ (Delhi) ಜಾಮಿಯಾ ನಗರದಲ್ಲಿನ (Jamia Nagar) ಉಪಾಹಾರ ಗೃಹದಲ್ಲಿ (eatery) ಹವಾನಿಯಂತ್ರಣದ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿರುವ (died) ಮತ್ತು ಐವರು ಗಾಯಗೊಂಡಿರುವ ಘಟನೆ ನಡೆದಿದೆ. ಎರಡು ಅಂತಸ್ತಿನ ಕಟ್ಟಡದ ಗ್ರೌಂಡ್​ ಫ್ಲೋರ್​ನಲ್ಲಿರುವ ಈ ಉಪಾಹಾರ ಗೃಹದಲ್ಲಿ ಎಸಿ (AC) ಹಾಳಾಗಿದ್ದ ಕಾರಣ, ಅದನ್ನು ಸರಿಪಡಿಸಲು ನದೀಮ್ ಮತ್ತು ಶಾನ್ ಎಂಬುವವರನ್ನು ಕರೆಸಲಾಗಿತ್ತು, ಎಸಿಯನ್ನು ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published by:Mahmadrafik K
First published: