Morning Digest: ಹೆಚ್ಚಾಯ್ತು ವೈರಲ್ ಸೋಂಕು, ತನ್ನದೇ ಮದ್ವೆಯಲ್ಲಿ ವಧು ಭಾಗಿ, ಮಳೆ ಅಬ್ಬರ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಇಂದಿನ ಟಾಪ್ ಸುದ್ದಿಗಳು

ಇಂದಿನ ಟಾಪ್ ಸುದ್ದಿಗಳು

  • Share this:
1.Bengaluru: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ವೈರಲ್ ಸೋಂಕುಗಳು: ವೈದ್ಯರು ಹೇಳುವುದೇನು ನೋಡಿ

ಶಾಲೆಗಳು (School) ಎಂದಿನಂತೆ ಪ್ರಾರಂಭವಾಗಿ ಕೆಲವು ತಿಂಗಳುಗಳೆ ಕಳೆದಿವೆ ಮತ್ತು ಈಗ ಬೆಂಗಳೂರಿನಲ್ಲಿ (Bengaluru) ಶಾಲೆಗೆ ಹೋಗುತ್ತಿರುವ ಮಕ್ಕಳಲ್ಲಿ (Children) ಎಂದರೆ ಅದರಲ್ಲೂ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ವೈರಲ್ ಜ್ವರ ಮತ್ತು ಶ್ವಾಸನಾಳದ ಸೋಂಕುಗಳ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಬೆಂಗಳೂರಿನ ವೈದ್ಯರು (Doctors) ಗಮನಿಸಿದ್ದಾರೆ. ಒಂದು ತರಗತಿಯಲ್ಲಿ ಕನಿಷ್ಠ 15 ರಿಂದ 20 ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅನೇಕ ಪ್ರಾಥಮಿಕ ಶಾಲಾ ಶಿಕ್ಷಕರು ಹೇಳಿದರೆ, ಮಕ್ಕಳ ತಜ್ಞರು (Pediatrician) ಕಳೆದ ಮೂರು ವಾರಗಳಿಂದ ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬರು ವೈರಲ್ ಜ್ವರದಂತಹ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

2.Karnataka Weather Today; ವರುಣನ ಅಬ್ಬರಕ್ಕೆ ಜನರು ತತ್ತರ; ಭೂಕುಸಿತ, ಪ್ರವಾಹದ ಆತಂಕ

ಇಂದು ಅಥವಾ ನಾಳೆ ಮಳೆ (Rainfall) ಕಡಿಮೆ ಆಗುತ್ತೆ ಎಂದು ಜನರು ಎದುರು ನೋಡುತ್ತಿದ್ದಾರೆ. ಆದ್ರೆ ಅಕಾಶಕ್ಕೆ ರಂಧ್ರ ಬಿದ್ದಂತೆ ಮಳೆರಾಯ ಮಾತ್ರ ಅಬ್ಬರಿಸುತ್ತಿದ್ದಾನೆ. ನಿರಂತರ ಮಳೆಯಿಂದಾಗಿ ಸಮಸ್ಯೆಗಳು (Rain Effect) ಸಹ ಸೃಷ್ಟಿಯಾಗ್ತಿವೆ. ಪ್ರವಾಹ (Flood) ಆತಂಕ, ಭೂಮಿ ಕುಸಿಯುತ್ತಾ (Landslide) ಅನ್ನೋ ಭಯ ಮಲೆನಾಡು ಮತ್ತು ನದಿತೀರದ ವಾಸಿಗಳಲ್ಲಿ ಮನೆ ಮಾಡಿದೆ. ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಕಡಿಮೆ ಆಗಲಿ ಎಂದು ಜನರು ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ಮತ್ತು ನಾಳೆ ಸಹ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಸಂಪೂರ್ಣ ಮೋಡ ಮುಸುಕಿದ ವಾತಾವರಣ (Cloudy Weather) ಇರಲಿದ್ದು, ಮಳೆ ಆಗಲಿದೆ. ಉತ್ತರ ಒಳನಾಡು ಭಾಗದಲ್ಲಿ ವರುಣದೇವ ಅಬ್ಬರಿಸುತ್ತಿದ್ದಾನೆ.

3.Muslim Bride: ಮಸೀದಿಯಲ್ಲಿ ತನ್ನದೇ ಮದುವೆಯಲ್ಲಿ ಭಾಗಿಯಾದ ಮುಸ್ಲಿಂ ವಧು! ಹೊಸ ವಿವಾದ

ಭಾರತದಲ್ಲಿ ಮಹಿಳೆಯರು (Woman) ಈಗ ಸಾಂಪ್ರದಾಯಿಕ ಚಿಂತನೆಯನ್ನು ಮುರಿಯುತ್ತಿದ್ದಾರೆ. ಅವರು ಹೆಚ್ಚು ಇಷ್ಟಪಡುವದನ್ನು ಮಾಡಲು ಹೊರಬರುತ್ತಿದ್ದಾರೆ. ಆದರೆ ಈ ಬಾರಿ ಮುಸ್ಲಿಂ ಮಹಿಳೆಯೊಬ್ಬರು (Muslim Bride) ನಿಜಕ್ಕೂ ಅಪೂರ್ವ ಸಾಧನೆ ಮಾಡಿದ್ದಾರೆ. ಅದಕ್ಕೆ ಅವರ ತಂದೆಯ ಸಂಪೂರ್ಣ ಬೆಂಬಲ ಸಿಕ್ಕಿರುವುದು ಎಲ್ಲರೂ ಗಮನಿಸಬೇಕಾದ ಚಂದದ ವಿಚಾರ. ಮೊದಲ ಬಾರಿಗೆ, ಕೇರಳದ ಮುಸ್ಲಿಂ ವಧು ತನ್ನ ಮದುವೆಯಲ್ಲಿ ವರ, ಅವಳ ತಂದೆ ಮತ್ತು ಎರಡೂ ಕುಟುಂಬಗಳ ಇತರ ಪುರುಷರೊಂದಿಗೆ ಮಸೀದಿಯಲ್ಲಿ (Masjid) ಭಾಗವಹಿಸಿದ್ದು, ಸಮುದಾಯದಲ್ಲಿ (Community) ಹೊಸ ಟ್ರೆಂಡ್ (Trend) ಅನ್ನು ಸ್ಥಾಪಿಸಿದ್ದಾರೆ. ಮುಸ್ಲಿಂ ವಿವಾಹಗಳಲ್ಲಿ (Muslim Marriage), ವಧುವಿನ ತಂದೆ ಮತ್ತು ವರನ ನಡುವಿನ ಒಪ್ಪಂದವಾಗಿರುವುದರಿಂದ ವಧುಗಳು (Bride) ಮದುವೆ ಕಾರ್ಯಕ್ಕೆ ಅಷ್ಟೇನೂ ಹಾಜರಾಗುವುದಿಲ್ಲ.

4.HBD Mahesh Babu: 16 ವರ್ಷವಾದರೂ ಕಡಿಮೆಯಾಗದ ಪೋಕಿರಿ ಪವರ್! ಮಹೇಶ್ ಬಾಬು ಸಿನಿಮಾ ಸೂಪರೋ ಸೂಪರ್

ಮೊದಲೆಲ್ಲ ಸಿನಿಮಾಗಳು ರಿಲೀಸ್ ಆಗಿ 100 ದಿನ ಓಡಿದ್ರೆ ಗ್ರೇಟ್ ಎನ್ನುವಂತಾಗಿತ್ತು. ಕೆಲವು ಸಿನಿಮಾಗಳು ರಿಪೀಟ್ ರನ್ನಲ್ಲಿ 100 ದಿನಗಳಿಗಿಂತ ಹೆಚ್ಚು ಓಡಿದ ಉದಾಹರಮೆಯೂ ಇದೆ. ಆದರೆ ಇತ್ತೀಚೆಗೆ ಸಿನಿಮಾವೊಂದು ಬಿಡುಗಡೆಯಾಗಿ ಒಂದು ತಿಂಗಳಾದರೂ ಥಿಯೇಟರ್‌ನಲ್ಲಿ ನಿಲ್ಲುತ್ತಿಲ್ಲ. ಹೀಗಿರುವಾಗ ಮಹೇಶ್ ಬಾಬು ಅವರ ಸಾರ್ವಕಾಲಿಕ ಹಿಟ್ ಚಿತ್ರ ಪೋಕಿರಿ ಮಹೇಶ್ ಬಾಬು ಹುಟ್ಟುಹಬ್ಬವಾದ ಇಂದು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ಸರ್ಕಾರು ವಾರಿ ಪಾಟ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಸಖತ್ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ಸರಾಸರಿ ಹಿಟ್ ಆಯಿತು. ಇದೀಗ ಅವರು ತಮ್ಮ ಮುಂದಿನ ಚಿತ್ರವನ್ನು ತ್ರಿವಿಕ್ರಮ್ ಅವರೊಂದಿಗೆ ಮಾಡಲಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಅಂದಹಾಗೆ, ಮಹೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂದು ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪೋಕಿರಿ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ.

5.Parrot Case: ಗಿಣಿಗಾಗಿ ಪೊಲೀಸ್ ಠಾಣೆ ಮಟ್ಟಿಲೇರಿದ ಕುಟುಂಬಗಳು! ಅಷ್ಟಕ್ಕೂ ಆಗಿದ್ದೇನು?

ನೆರೆಹೊರೆಯಲ್ಲಿ ಅನೇಕರು ತಮ್ಮ ಅಕ್ಕಪಕ್ಕದ (Neigbours) ಮನೆಮಂದಿ ಜೊತೆ ಘರ್ಷಣೆಯನ್ನು ಹೊಂದಿರುತ್ತಾರೆ. ಬೇಲಿ ವಿಚಾರಕ್ಕೋ (Fence), ರಸ್ತೆ ವಿಚಾರಕ್ಕೋ, ಒಳ್ಳೆಯ ನಡತೆ ಹೊಂದಿರದ್ದಕ್ಕೊ ಜಗಳಗಳಾಗುತ್ತವೆ. ಯಾವುದೇ ತೊಂದರೆಯನ್ನು ಉಂಟುಮಾಡದ ನೆರೆಹೊರೆಯವರು ಸಿಕ್ಕಿದರೆ ಅದು ಅದೃಷ್ಟ. ತಮ್ಮ ನೆರೆಹೊರೆಯವರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಿದರೆ, ಅವರಲ್ಲಿ ಕೆಲವರು ಪೊಲೀಸ್ ಠಾಣೆಯನ್ನು (Police Station) ಸಹ ಸಂಪರ್ಕಿಸುತ್ತಾರೆ. ಶಿವಾಜಿನಗರದ (Shivaji Nagar) ನಿವಾಸಿಯೊಬ್ಬರು ತಮ್ಮ ನೆರೆಮನೆಯ ಸಾಕು ಗಿಣಿಯ ನಿರಂತರ ಶಿಳ್ಳೆ ಮತ್ತು ಕಿರುಚಾಟದಿಂದ ಸಿಟ್ಟಿಗೆದ್ದಿದ್ದು, ಗುರುವಾರ ರಾತ್ರಿ ಹಕ್ಕಿಯ ಮಾಲೀಕರ ವಿರುದ್ಧ ಖಡ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಿರಿಯ ನಾಗರಿಕರಿಂದ ದೂರನ್ನು ಸ್ವೀಕರಿಸಿದ ಮೇಲೆ ಪೊಲೀಸರು ಅರಿಯಲಾಗದ ಅಪರಾಧವನ್ನು ದಾಖಲಿಸಿದ್ದಾರೆ.
Published by:Mahmadrafik K
First published: