Top 5 News: ಬಿಗ್​ ಬಾಸ್ ಸ್ಪರ್ಧಿ ಮೇಲೆ ಚಿಕ್ಕಪ್ಪನಿಂದ ಅತ್ಯಾಚಾರ, ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ!

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1: Neeraj Chopra: ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ, ಗೋಲ್ಡನ್ ಬಾಯ್ ಐತಿಹಾಸಿಕ ದಾಖಲೆ

  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ (Neeraj Chopra) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡುವ ಮೂಲಕ  ಜ್ಯೂರಿಚ್​ನಲ್ಲಿ ನಡೆದ  ಡೈಮಂಡ್ ಲೀಗ್  (Diamond League)  ಕೂಟದಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿಯನ್ನು  ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದರು. ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಗೆದ್ದಿದ್ದಾರೆ. ಜ್ಯೂರಿಚ್‌ನಲ್ಲಿ ನಡೆದ ಫೈನಲ್‌ನಲ್ಲಿ ನೀರಜ್ 88.44 ಮೀಟರ್‌ ದೂರ ಎಸೆದು ಪದಕಕ್ಕೆ ಮುತ್ತಿಕ್ಕಿದರು.

  2. ಈತನ ಮೇಲೆ ಚಿಕ್ಕಪ್ಪನೇ ನಡೆಸಿದ್ದನಂತೆ ಅತ್ಯಾಚಾರ! ಸ್ಫೋಟಕ ವಿಚಾರ ಬಾಯ್ಬಿಟ್ಟ ಬಿಗ್ ಬಾಸ್ ಸ್ಪರ್ಧಿ

  ಆತ ಖ್ಯಾತ ಉದ್ಯಮಿ (Industrialist), ಖ್ಯಾತ ಫ್ಯಾಶನ್ ಡಿಸೈನರ್ (Fashion Designer).. ಅವುಗಳಿಗಿಂತ ಹೆಚ್ಚಾಗಿ ಬಿಗ್ ಬಾಸ್ ಶೋನಿಂದಲೇ (Bigg Boss Show) ಜನಪ್ರಿಯನಾಗಿದ್ದವರು. ಅವರೀಗ ತಮ್ಮ ಬಾಲ್ಯದ ದಿನಗಳನ್ನು (Childhood Days) ನೆನೆದಿದ್ದಾರೆ. ಬಾಲ್ಯದಲ್ಲಿ ಆದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಘಾತಕಾರಿ ವಿಚಾರವನ್ನು ಹೊರಹಾಕಿದ್ದಾರೆ. ಅಂದಹಾಗೆ ಬಾಲ್ಯದಲ್ಲಿ ಅವರ ಮೇಲೆ ಅತ್ಯಾಚಾರ ನಡೆದಿತ್ತಂತೆ. ಅದೂ ಸ್ವಂತ ಚಿಕ್ಕಪ್ಪನಿಂದಲೇ (Uncle) ಆ ಬಾಲಕ (Boy) ಅತ್ಯಾಚಾರಕ್ಕೆ ಒಳಗಾಗಿದ್ದನಂತೆ. ಇಂಥದ್ದೊಂದು ಸ್ಫೋಟಕ ವಿಚಾರ ಹೊರಹಾಕಿದ್ದು ಬಿಗ್ ಬಾಸ್ ಹಿಂದಿ (Hindi) ಶೋನ ಸ್ಪರ್ಧಿ, ಬಾಲಿವುಡ್‌ನ ಖ್ಯಾತ ಫ್ಯಾಶನ್ ಡಿಸೈನರ್, ಉದ್ಯಮಿ ರೋಹಿತ್ ವರ್ಮಾ (Rohit Verma). ಡಿಸೈನರ್ ಆರ್‌ಜೆ ಸಿದ್ಧಾರ್ಥ್ ಕಾನನ್ ಅವರ ಚಾಟ್ ಶೋ (Chat Show) ಒಂದರಲ್ಲಿ ಭಾಗಿಯಾಗಿದ್ದ ರೋಹಿತ್ ವರ್ಮಾ, ಈ ಕಹಿ ಘಟನೆ ಬಗ್ಗೆ ಹೇಳಿ ಕೊಂಡಿದ್ದಾರೆ.

  3. Queen Elizabeth-II ಮರಣದ ನಂತರ ಸ್ಕಾಟ್ಲೆಂಡ್‌ನಲ್ಲಿ ಆಪರೇಷನ್ ಯುನಿಕಾರ್ನ್ ಜಾರಿ: ಹೀಗಂದ್ರೆ ಏನು?

  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II (Queen Elizabeth II of Britain) ಅವರು ನಿನ್ನೆ (ಗುರುವಾರ) ರಾತ್ರಿ ನಿಧನರಾಗಿದ್ದಾರೆ. ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ಇದ್ದ 96 ವರ್ಷದ ರಾಣಿ ಎಲಿಜಬೆತ್- II ಅವರು ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲಾ ಅಗಲಿದ್ದಾರೆ. ಬಕಿಂಗ್ಹ್ಯಾಮ್ ಅರಮನೆಯು (Buckingham Palace) ಈ ಕುರಿತು ಹೇಳಿಕೆ ಪ್ರಕಟಿಸಿದ್ದು, 10 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. "ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್‌ನಲ್ಲಿ (Balmoral) ನೆಮ್ಮದಿಯೊಂದಿಗೆ ಅಸ್ತಂಗತರಾದರು" ಎಂದು ಬಕಿಂಗ್‌ಹ್ಯಾಮ್‌ ಅರಮನೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ರಾಜ ಮತ್ತು ರಾಣಿ ಪತ್ನಿ ಇಂದು ಸಂಜೆ ಬಾಲ್ಮೋರಲ್‌ನಲ್ಲಿ ಉಳಿಯುತ್ತಾರೆ ಮತ್ತು ನಾಳೆ ಲಂಡನ್‌ಗೆ (London) ಹಿಂತಿರುಗುತ್ತಾರೆ" ಎಂದು ಅರಮನೆ ತಿಳಿಸಿದೆ.

  4. ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಬದಲಿಗೆ!

  ಜೀ ಕನ್ನಡದಲ್ಲಿ  (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್‍ಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ (Anirudh) ಧಾರಾವಾಹಿಯಿಂದ ಔಟ್  ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿತ್ತು. ಇನ್ನು ಆರ್ಯವರ್ಧನ್ ಸಹೋದರ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಪಾತ್ರಕ್ಕೆ, ಮುಖ ಬದಲಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಆರೂರ್ ಜಗದೀಶ್ .

  5. Gold-Silver Price Today: ಇಂದು ಮತ್ತೆ ಏರಿಕೆ ಕಂಡ ಬೆಳ್ಳಿ-ಬಂಗಾರ: ಇಂದಿನ ದರ ವಿವರ ಹೀಗಿದೆ

  ಕಳೆದ ಮೂರ್ನಾಲ್ಕು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ಬೆಲೆ ನಿನ್ನೆ ಕೊಂಚ ಇಳಿಕೆ ಕಂಡಿತ್ತು. ಚಿನ್ನ ಇಳಿಕೆ ಕಂಡಿದೆ ಎಂದು ಖರೀದಿಗೆ ಪ್ಲ್ಯಾನ್‌ ಮಾಡುತ್ತಿರುವವರಿಗೆ ಇಂದು ಮತ್ತೆ ಶಾಕ್‌ ಆಗಿದೆ. ಇಂದು ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,640 ರೂ ಇದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,665 ರೂಗೆ ಏರಿಕೆ ಕಂಡಿದೆ.
  Published by:Precilla Olivia Dias
  First published: