Top-5 News: ಇಂದೇ ಖರೀದಿಸಿ ಚಿನ್ನ, ಸಿಗ್ತಿಲ್ಲ ಸಾಣಿಕಟ್ಟಾ ಉಪ್ಪು, ಮೊಸಳೆ ಏಣಿ ಆಟ ಗೊತ್ತಾ?; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

  • Share this:
1.Sanikatta Salt: ಎಲ್ಲೂ ಸಿಗ್ತಿಲ್ಲ ಸಾಣಿಕಟ್ಟಾ ಉಪ್ಪು; ಉತ್ಪಾದನೆಯಲ್ಲಿ ಭಾರೀ ಕುಸಿತ, ಕಾರಣ ಏನು?

ಈ ಹಿಂದೆ ಕೊರೊನಾದಿಂದ (Corona) ದಿಕ್ಕೆಟ್ಟು ಹೋಗಿದ್ದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ (Gokarna, Uttara Kannada) ಸಾಣಿಕಟ್ಟಾ ಉಪ್ಪು (Sanikatta Salt) ಉದ್ಯಮ. ಈಗ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ‌ (Heavy Rainfall) ಉಂಟಾದ ಪ್ರವಾಹಕ್ಕೆ (Flood) ದಿಕ್ಕೆಟ್ಟು ಹೋಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಉತ್ಪಾದನೆ ಮಾಡುವ ಸ್ಥಳೀಯ ಸಾಣಿಕಟ್ಟಾ ಉಪ್ಪು (Sanikatta Salt Shortage) ಯಾವುದೇ ಅಂಗಡಿಯಲ್ಲಿ ಸಿಗುತ್ತಿಲ್ಲ. ನೆರೆ ಹಾವಳಿಯಲ್ಲಿ ಸಾಣಿಕಟ್ಟಾ ಉಪ್ಪು ಹಾಳಾಗಿದೆ. ಪರಿಣಾಮ ಜಿಲ್ಲೆಯ ಜನರಿಗೆ ಉಪ್ಪಿನ ಕೊರತೆ ಉಂಟಾಗಿದೆ. ಕಳೆದ ಮೂರು ತಿಂಗಳಿಂದ ಕಾರವಾರ (Karwar) ಸೇರಿದಂತೆ ಇತರ ಕಡೆಗಳ ಯಾವುದೇ ಅಂಗಡಿ ಸುತ್ತಾಡಿದರು ಗೋಕರ್ಣ ಸಾಣಿಕಟ್ಟಾ ಉಪ್ಪು ಸಿಗುತ್ತಿಲ್ಲ. ಸಾಣಿಕಟ್ಟಾ ಉಪ್ಪಿಗೆ ಯಾಕಿಷ್ಟು ಬೇಡಿಕೆ ಎಂದು ಕೇಳಿದ್ರೆ ದೇಶದಲ್ಲಿ ಕರ್ನಾಟಕದ ಅಂಕೋಲಾ-ಕುಮಟಾದಲ್ಲಿ (Ankola-Kumta) ತಯಾರಿಸುವ ಹರಳುಪ್ಪು ಇದಾಗಿದೆ

2.Chikkamagaluru: ಮುಂದುವರಿದ ಮಳೆಯ ಅಬ್ಬರ; ಬಯಲು ಸೀಮೆ ಭಾಗದಲ್ಲೂ ವರುಣನ ರೌದ್ರ ನರ್ತನ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ (Chikkamagaluru Rains) ಆರ್ಭಟ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ ಸುರಿದ ಮಳೆಗೆ 7 ಮನೆಗಳಿಗೆ (House) ಹಾನಿಯಾಗಿದೆ. ಜಮೀನುಗಳಿಗೆ ನೀರು ನುಗ್ಗಿದೆ. ಮನೆಗಳಿಗೆ ಮಳೆನೀರು ನುಗ್ಗಿ ಹಾನಿ ಸಂಭವಿಸಿದೆ. ಜಿಲ್ಲಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಜನರು ರೋಸಿ ಹೋಗಿದ್ದಾರೆ. ಭಾರೀ ಪ್ರಮಾಣದ ಮಳೆಯಿಂದ (Heavy Rain Fall) ಜನಜೀವನ ಅಸ್ತವ್ಯಗೊಂಡಿದೆ. ಬುಧವಾರ ಜಿಲ್ಲೆಯ ಕಳಸ, ಮೂಡಿಗೆರೆ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಜಮೀನುಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ.

3.Gold-Silver Price Today: ಚಿನ್ನ ಖರೀದಿಯ ಯೋಚನೆ ಇದ್ದರೆ ಇಂದೇ ಖರೀದಿಸಿ; ಮಾರುಕಟ್ಟೆಯಲ್ಲಿ ಬಂಗಾರ-ಬೆಳ್ಳಿ ಎರಡರ ದರವೂ ಇಳಿಕೆ

ಕಳೆದ ಮೂರ್ನಾಲ್ಕು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. ಚಿನ್ನ ಖರೀದಿ ಮಾಡಲು ಬಯಸುತ್ತಿರುವವರು ಚಿನ್ನದ ಬೆಲೆಯಲ್ಲಿ ಸ್ವಲ್ಪವಾದರೂ ಇಳಿಕೆಯಾಗುತ್ತದೆಯೇ ಎಂದು ಎದುರು ನೋಡುತ್ತಲೇ ಇರುತ್ತಾರೆ. ಗ್ರಾಹಕರಿಗೆ ಇಂದು ಖರೀದಿಗೆ ಉತ್ತಮ ಸಮಯವಾಗಿದ್ದು, ಇಂದು ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಳಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,690 ರೂ ಇದ್ದದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,640 ರೂಗೆ ಕುಸಿತ ಕಂಡಿದೆ. ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,400, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,620 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,64,000, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,06,200 ಇದೆ.

4.Gujarat: ಇಲ್ಲಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗುತ್ತದೆ ಜೀವಂತ ಮೊಸಳೆ ಏಣಿ ಆಟ; ಏನಿದರ ವಿಶೇಷತೆ?

ಕ್ಕಳಿಗೆ ಮೊಸಳೆ ಹಾಗೂ ಏಣಿಗಳ ಆಟದೊಂದಿಗೆ ಮೊಸಳೆಯ (Crocodile) ನಡಿಗೆ (ಮಗ್ಗರ್ ನಿ ಚಾಲ್) ಎಂಬ ವಿಶೇಷ ವಿನೋದಮಯ ಆಟವನ್ನು ಹಳ್ಳಿಗರು ಆಯೋಜಿಸುತ್ತಾರೆ ಎಂದರೆ ನೀವು ನಂಬಲೇಬೇಕು. ಚರೋಟ್‌ನ (Charotar) ಸುತ್ತಮುತ್ತಲಿನ ಹಳ್ಳಿಗಳ ಸರೋವರದಲ್ಲಿ ಸುಮಾರು 150 ಮೊಸಳೆಗಳು ವಾಸವಿದ್ದು ಇವುಗಳು ಹಳ್ಳಿಗಳಿಗೂ ಬರುತ್ತವೆ. ಆದರೆ ಈ ಮೊಸಳೆಗಳು ಯಾರಿಗೂ ಸಂಚಕಾರವನ್ನುಂಟು ಮಾಡಿಲ್ಲ ಎಂಬುದು ಅಲ್ಲಿನ ಹಳ್ಳಿಗರ ಹೇಳಿಕೆಯಾಗಿದೆ. ಮೊಸಳೆಗಳೊಂದಿಗೆ ಸ್ನೇಹಪರವಾಗಿ ಮಕ್ಕಳು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಹೇಳುವ ಸಲುವಾಗಿ ಈ ಆಟಗಳನ್ನು ಆಯೋಜಿಸಲಾಗುತ್ತದೆ ಎಂಬುದು ಹಳ್ಳಿಯ ಸರ್‌ಪಂಚ್‌ನ ಮಾತಾಗಿದೆ. ಚರೋಟರ್ ಮಾತ್ರವಲ್ಲದೆ ಸಮೀಪದ ಹಳ್ಳಿಗಳಿಗಳಲ್ಲೂ ಮೊಸಳೆಗಳಿವೆ ಮತ್ತು ಅಲ್ಲಿನ ಹಳ್ಳಿಗಳಿಗೂ ಮೊಸಳೆಗಳು ಭೇಟಿ ನೀಡುತ್ತವೆ ಎಂಬುದು ವಾಸ್ತವಿಕ ಸಂಗತಿಯಾಗಿದೆ.

5.Tree library: ಮಕ್ಕಳಿಗೆ ಪುಸ್ತಕಗಳ ಮೇಲಿನ ಆಸಕ್ತಿ ಹೆಚ್ಚಿಸಲು ಟ್ರೀ ಲೈಬ್ರರಿ!

ವಿದ್ಯಾರ್ಥಿಗಳಿಗೆ (Students) ಪುಸ್ತಕದ ಮೇಲಿನ ಪ್ರೀತಿ ಮತ್ತು ಆಸಕ್ತಿ ಹೆಚ್ಚಿಸಲು ಎನ್‌ಜಿಒ ಒಂದು ಹೊಸ ಪ್ರಯತ್ನವನ್ನು ಸಾಕಾರಗೊಳಿಸಿದೆ. ಶಾಲಾ ಮಕ್ಕಳಿಗೆ ಮರದಲ್ಲಿ ಗ್ರಂಥಾಲಯವನ್ನು (Library) ತೆರೆಯುವ ಮೂಲಕ 'ಟ್ರೀ ಲೈಬ್ರರಿ' ಎಂಬ ಹೊಸ ಕಲ್ಪನೆಯನ್ನು ಅಸ್ಸಾಂನ ಶಾಲೆಯೊಂದರಲ್ಲಿ ಪರಿಚಯಿಸಲಾಗಿದೆ. ʼಟ್ರೀ ಲೈಬ್ರರಿ' ಎಂಬ ಒಂದು ವಿಶಿಷ್ಟ ಉಪಕ್ರಮವನ್ನು ಎನ್‌ಜಿಒ ಒಂದು ಸೆಪ್ಟೆಂಬರ್‌ 3ರಂದು ಆರಂಭ ಮಾಡಿದೆ. ಅಸ್ಸಾಂನ ಜೋರ್ಹತ್ ಜಿಲ್ಲೆಯ ಮಹಿಳೆಯರ (Women's) ಗುಂಪು ಹೊಸ ಪೀಳಿಗೆಯು ಪುಸ್ತಕಗಳನ್ನು (Book) ಓದುವತ್ತ ಆಕರ್ಷಿಸಲು ಮರದ ಕೆಳಗೆ ತೆರೆದ ಗ್ರಂಥಾಲಯವನ್ನು ಸ್ಥಾಪಿಸಿದೆ. ಜೋರ್ಹತ್ ಜಿಲ್ಲೆಯ ಮರಿಯಾನಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಮರಗಳ ಕೆಳಗೆ ತೆರೆದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.
Published by:Mahmadrafik K
First published: