Morning Digest: ದಾವಣಗೆರೆಯಲ್ಲಿ ಲೇಟ್​ನೈಟ್ ಪಾರ್ಟಿ, ಈದ್ಗಾ ಮೈದಾನ ಸರ್ಕಾರದ್ದು, ರೆಡ್ ಅಲರ್ಟ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Exclusive |Davanagere: ರಾತ್ರಿ 2ರವರೆಗೂ ಯುವಕ, ಯುವತಿಯರ ಲೇಟ್ ನೈಟ್ ಪಾರ್ಟಿ; ಇಲ್ಲಿ ಜೋಡಿಗಳಿಗೆ ಮಾತ್ರ ಎಂಟ್ರಿ

ತಡರಾತ್ರಿ ಎರಡು ಗಂಟೆವರೆಗೂ ಡಿಜೆ ಸೌಂಡ್ ಹಾಕಿ ಪಾರ್ಟಿ ಮಾಡುತ್ತಿದ್ದ ಹೋಟೆಲ್ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿದ್ದಾರೆ. ದಾವಣಗೆರೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸ್ಟೇಜ್ ಹೋಟೆಲ್ ಮೇಲೆ ದಾಳಿ ನಡೆದಿದೆ. ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ನಶೆಯಲ್ಲಿದ್ದ ಯುವಕ-ಯುವತಿಯರು ಹೋಟೆಲ್ನಿಂದ ಕಾಲ್ಕಿತ್ತಿದ್ದಾರೆ. ಮಧ್ಯರಾತ್ರಿ 2 ಗಂಟೆಯೆವರೆಗೂ ಜೋರಾಗಿ ಡಿಜೆ ಸೌಂಡ್ ಹಾಕಿ ಯುವಕ ಯುವತಿಯರು ಸೇರಿ ಕುಣಿದು ಕುಪ್ಪಳಿಸುತ್ತಾ ಪಾರ್ಟಿ ಮಾಡಿದ್ದಾರೆ. ಈ ಹೋಟೆಲ್ ದಾವಣಗೆರೆಯ ಕೂಗಳತೆ ದೂರದಲ್ಲಿರೋ ಮಿಟ್ಲಕಟ್ಟೆ ಗ್ರಾಮದಲ್ಲಿದೆ. ಹೋಟೆಲ್ ಹೆಸರು ದಿ ಸ್ಟೇಜ್. ಈ ಹೋಟೆಲ್ನಲ್ಲಿ ಪಾರ್ಟಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳೇ ಪೊಲೀಸರಿಗೆ ಮಾಹಿತಿ ನೀಡಿದ್ರು. ಮಾಹಿತಿ ಬೆನ್ನಲ್ಲೇ ಪೊಲೀಸರು ದಾಳಿ ನಡೆಸಿದ್ದಾರೆ.

2.Idgah Maidana: ವಕ್ಫ್ ಬೋರ್ಡ್ ಅರ್ಜಿ ವಜಾ; ಈದ್ಗಾ ಮೈದಾನ ಸರ್ಕಾರದ ಆಸ್ತಿ ಎಂದು ಆದೇಶ

ಈದ್ಗಾ ಮೈದಾನ (Idgah Maidan) ವಿವಾದದ ಕುರಿತಾಗಿ ವಕ್ಫ್ ಬೋರ್ಡ್ (Waqf Board) ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈದ್ಗಾ ಮೈದಾನ ಸರ್ಕಾರದ ಆಸ್ತಿ (Government Property) ಎಂದು ಘೋಷಣೆ ಮಾಡಲಾಗಿದೆ., ಚಾಮರಾಜಪೇಟೆ ಆಟದ ಮೈದಾನವನ್ನ ವರ್ಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಈ ಅರ್ಜಿ ವಜಾಗೊಂಡಿದೆ. ಬಿಬಿಎಂಪಿ (BBMP) ದಾಖಲೆಗಳಲ್ಲಿ ಈದ್ಗಾ ಮೈದಾನದ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ (Revenue Department) ಆಸ್ತಿಯೆಂದು ನಮೂದಿಸಲು ಸೂಚನೆ ನೀಡಲಾಗಿದೆ . ಈ ಬಗ್ಗೆ ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.

3.Defamation Case: ಜಾನಿ ಡೆಪ್​​ಗೆ 10 ಮಿಲಿಯನ್ ಡಾಲರ್ ಪಾವತಿಸಲು ತೀರ್ಪು ಬಂದ ನಂತರ ಅಂಬರ್ ಹಾರ್ಡ್ ಮಾಡಿದ್ದೇನು?

ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸರಣಿ ಖ್ಯಾತಿಯ ಜಾನಿ ಡೆಪ್ (Johnny Depp) ಮತ್ತು ಅವರ ಪತ್ನಿ ಅಂಬರ್ ಹರ್ಡ್ (Amber Hard) ಜೊತೆಗಿನ ವಿವಾಹ ಬಂಧನವನ್ನು ಕೊನೆಗೊಳಿಸಿ ಇತ್ತೀಚೆಗೆ ಮಾಜಿ ದಂಪತಿಗಳು ಭಾರಿ ಸುದ್ದಿಯಾಗಿದ್ದರು. ಅಂಬರ್ ಹರ್ಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ಹೂಡಿದ್ದ ಜಾನಿಗೆ ತೀರ್ಪು ಪರವಾಗಿ ಬರುವುದರ ಜೊತೆ ಮಿಲಿಯನ್ ಗಟ್ಟಲೇ ಹಣವನ್ನು ನೀಡುವಂತೆ ಪತ್ನಿ ಅಂಬರ್ ಗೆ ಕೋರ್ಟ್ (Court)ಆದೇಶ ಮಾಡಿತ್ತು. ಮಾಜಿ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ವಿಚಾರಣೆಯಲ್ಲಿ ಯುಸ್ ನ್ಯಾಯಾಲಯವು ಜಾನಿ ಡೆಪ್ ಪರವಾಗಿ ತನ್ನ ತೀರ್ಪನ್ನು ಪ್ರಕಟಿಸಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಅಂಬರ್ ಹರ್ಡ್, ಜಾನಿ ಡೆಪ್ ವಿರುದ್ದ ಸುಳ್ಳಾರೋಪ ಮಾಡಿದ್ದಾರೆ ಹೀಗಾಗಿ ಪರಿಹಾರವಾಗಿ ಡೆಪ್ ಅವರಿಗೆ $10.35 ಮಿಲಿಯನ್ ಪಾವತಿಸಲು ಕೋರ್ಟ್ ಸೂಚಿಸಿತ್ತು.

4.Karnataka Weather Report: ಇಂದು ರಾಜ್ಯದ ಕರಾವಳಿ ಭಾಗಕ್ಕೆ ರೆಡ್ ಅಲರ್ಟ್ ; ಮುಂದಿನ ನಾಲ್ಕು ದಿನ ಮಳೆ ಅಬ್ಬರ

ಇಂದು ಕರಾವಳಿ ಭಾಗಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಖಡಕ್ ಸೂಚನೆ ನೀಡಲಾಗಿದೆ. ಕರಾವಳಿಯ ಈ ಮೂರು‌ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ‌ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇರಲಿದೆ. ಜಿಲ್ಲೆಯ ಎಲ್ಲಾ ಪರಿಸರ ವ್ಯಾಪ್ತಿಯಲ್ಲಿ ಮಳೆಯಾಗುವ ಸುಳಿವು ನೀಡಲಾಗಿದೆ. ಅಲರ್ಟ್ ಬೆನ್ನಲ್ಲೇ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ರೆಡ್ ಅಲರ್ಟ್,ಮುಂದಿನ 4 ದಿನ ಆರೆಂಜ್ ಅಲರ್ಟ್ ಮತ್ತು ಕೊನೆಯ ಎರಡು ದಿನ ಯಲ್ಲೋ ಅಲರ್ಟ್ ಇರಲಿದೆ.

5. Criminals: ಡೇಂಜರಸ್ ಕ್ರಿಮಿನಲ್​ಗಳ ಪಟ್ಟಿ ಬಿಡುಗಡೆ ಮಾಡಿದ ಕೆನಡಾ ಪೊಲೀಸರು, 11 ಜನರಲ್ಲಿ 9 ಮಂದಿ ಭಾರತೀಯರು!

ಸಾರ್ವಜನಿಕರ ಹಿತದೃಷ್ಟಿ ಕಾಪಾಡುವ ಸಲುವಾಗಿ ಕೆನಡಾದ ಪೊಲೀಸರು (Police) ತೀವ್ರ ಹಿಂಸಾಚಾರಕ್ಕೆ ಸಂಬಂಧಿಸಿರುವ ದೇಶದ ಅತ್ಯಂತ ಅಪಾಯಕಾರಿ ಅಪರಾಧಿಗಳ ಪಟ್ಟಿಯನ್ನು (List of Criminals) ಬಿಡುಗಡೆ ಮಾಡಿದ್ದಾರೆ. ಕ್ರಿಮಿನಲ್ ಹಿಂಸಾಚಾರಕ್ಕೆ ಸಂಬಂಧಿಸಿದ ಗ್ಯಾಂಗ್‌ಗಳು ಮತ್ತು ಹಲವಾರು ಅಪರಾಧ ಪ್ರಕರಣಗಳಲ್ಲಿ 11 ಆರೋಪಿಗಳ ಬಗ್ಗೆ ಕೆನಡಾದ ಪೊಲೀಸರು (Canada Police) ಎಚ್ಚರಿಸಿದ್ದಾರೆ. ಅಚ್ಚರಿ ಎನ್ನುವಂತೆ ಕೆನಡಾ ಖಾಕಿಗಳು ಬಿಡುಗಡೆ ಮಾಡಿರುವ ಪಟ್ಟಿಯ 11 ಪುರುಷರಲ್ಲಿ ಒಂಬತ್ತು ಮಂದಿ ಭಾರತೀಯ (Indians) ಮೂಲದವರಾಗಿದ್ದಾರೆ
Published by:Mahmadrafik K
First published: