Morning Digest: ಸಿಎಂ ಬೊಮ್ಮಾಯಿಗೆ ಕೊರೊನ, ಬಾಲಿವುಡ್ ಸಿನಿಮಾ ಮೀರಿಸಿದ ವಿಕ್ರಾಂತ್ ರೋಣ! ಈ ಹೊತ್ತಿನ ಟಾಪ್ ನ್ಯೂಸ್ ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

  • Share this:
 ಸಿಎಂ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ  ಕೊರೊನಾ ದೃಢಪಟ್ಟಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೊರೊನಾ ಪಾಸಿಟಿವ್ (CM Basavarj Bommai Tested Covid 19 Positive) ಆಗಿರುವುದನ್ನು ಖಚಿತಪಡಿಸಿದ್ದಾರೆ. ಕೊವಿಡ್ ಖಚಿತಪಟ್ಟ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ದೆಹಲಿ ಪ್ರಯಾಣವನ್ನು ರದ್ದುಪಡಿಸಿದ್ದಾರೆ.
ಬಾಲಿವುಡ್​ ಸಿನಿಮಾಗಳನ್ನು ಹಿಂದಿಕ್ಕಿದ ವಿಕ್ರಾಂತ್ ರೋಣ

ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ (Box Office) 150 ಕೋಟಿ ರೂ.ಗಳತ್ತ ಸಾಗುತ್ತಿದೆ.  ಚಿತ್ರದಲ್ಲಿ ಸುದೀಪ್ ಜೊತೆಗೆ ಜಾಕ್ಲೀನ್​ ಫರ್ನಾಂಡೀಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಎಲ್ಲರಿಗೂ ಬಹಳ ಇಷ್ಟವಾಗಿದೆ. ಏಳನೇ ದಿನ ವಿಕ್ರಾಂತ್ ರೋಣ 5.5 ರಿಂದ 6 ಕೋಟಿ ಕಲೆಕ್ಷನ್ ಮಾಡಿದ್ದು, ಹಿಡಿತ ಸಾಧಿಸಿದೆ ಎಂದು ಅಂದಾಜಿಸಲಾಗಿದೆ. ಎರಡನೇ ವಾರದ ಪ್ರದರ್ಶನದಲ್ಲಿ ವಿಕ್ರಾಂತ್ ರೋಣ ದಕ್ಷಿಣ ಸಿನಿಮಾ ರಂಗದಿಂದ ಮತ್ತೊಂದು ಸೂಪರ್ ಹಿಟ್​ ಸಿನಿಮಾಗಳ ಲಿಸ್ಟ್​ಗೆ ಸೇರುತ್ತದೆ.

ಇದನ್ನೂ ಓದಿ: Vikrant Rona Collection Day 7: ಬಾಲಿವುಡ್​ ಸಿನಿಮಾಗಳನ್ನು ಹಿಂದಿಕ್ಕಿದ ವಿಕ್ರಾಂತ್ ರೋಣ, ಏಳನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಿ!

ಬೆಂಗಳೂರಿಗರೇ, ಇನ್ನೂ ನಾಲ್ಕು ದಿನ ಮನೆಯಲ್ಲೇ ಇರಿ! 

ಬೆಂಗಳೂರು (ಆಗಸ್ಟ್​ 06): ರಾಜ್ಯದಲ್ಲಿ ಮಳೆಯಬ್ಬರ ತಗ್ಗುತ್ತಿಲ್ಲ. ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಡೀ ಕರ್ನಾಟಕ ತೋಯ್ದು ತೊಪ್ಪೆಯಾಗಿದೆ. ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಬೆಳಗ್ಗಿನ ವೇಳೆ ಕೊಂಚ ಸೂರ್ಯ ಇಣುಕಿದರೂ ಸಂಜೆ ವೇಳೆಗೆ ಧೋ ಅಂತಾ ಮಳೆಯಾಗ್ತಿದೆ. ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಯಲ್ಲೂ ಜಡಿಮಳೆಯಾಗ್ತಿದ್ದು ಜನ ಹಿಡಿಶಾಪ ಹಾಕ್ತಿದ್ದಾರೆ. ವರುಣಾರ್ಭಟಕ್ಕೆ ಅವಾಂತರಗಳು ಮುಂದುವರಿದಿದೆ. ಕೊಡಗಿನಲ್ಲಿ  ಜಲಸ್ಫೋಟದ ಬಳಿಕ ಭೂಕುಸಿತದ ಆತಂಕ ಹೆಚ್ಚಾಗಿದೆ. ಇದರ ನಡುವೆ ಇಂದೂ ಕೂಡ ರಾಜ್ಯದೆಲ್ಲೆಡೆ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲೂ ಇನ್ನೂ ನಾಲ್ಕು ದಿನ ಮಳೆಯಾಗಲಿದೆ.

ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! 

ಬೆಂಗಳೂರು: ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಬೆಚ್ಚಿ ಬಿದ್ದಿತ್ತು. ಕಾರಣ ಮಹಿಳೆಯೊಬ್ಬಳು (Lady) ತನ್ನ ಮಗುವಿನ (Child) ವಿಚಾರದಲ್ಲೇ ಅಕ್ಷರಶಃ ರಾಕ್ಷಸಿಯಂತೆ ವರ್ತಿಸಿದ್ದಳು. ಬುದ್ಧಿಮಾಂಧ್ಯತೆಯಿಂದ ಬಳಲುತ್ತಿದ್ದ 4 ವರ್ಷದ ಮಗುವನ್ನು ತಾಯಿಯೇ ನಾಲ್ಕನೇ ಮಹಡಿಯಿಂದ (4th Floor) ಎಸೆದು ಭೀಕರವಾಗಿ ಕೊಲೆ (Murder) ಮಾಡಿದ್ದಳು. ಇದಾದ ಬಳಿಕ ತಾನೂ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತೇನೆ ಅಂತ ಹೈಡ್ರಾಮಾ (High Drama) ಮಾಡಿದ್ದಳು. ಆರೋಪಿಯನ್ನು ಬಂಧಿಸಿರುವ ಪೊಲೀಸರು (Police), ಆಕೆಯ ಮೇಲೆ ಕೇಸ್ (Case) ದಾಖಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಈ ಹಿಂದೆಯೂ ಆಕೆ ಮಗುವನ್ನು ಕೊಲ್ಲಲು ಯತ್ನ ನಡೆಸಿರುವ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Crime News: ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! ಪಾಪಿ ತಾಯಿಯ ಪಾಪದ ಕೃತ್ಯ ಬೆಳಕಿಗೆ

ವರಮಹಾಲಕ್ಷ್ಮಿಗೆ ಸಿಟ್ಟು ಬಂತಾ? ಹೆಚ್ಚಾಯ್ತು ಚಿನ್ನದ ದರ!

Gold Silver Rates Today: ರೂಪಾಯಿ ಮೌಲ್ಯ ಕುಸಿತ, ಅಂತಾರಾಷ್ಟ್ರೀಯ ಪರಿಸ್ಥಿತಿಗಳು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ. ಕೇಂದ್ರವು ಆಮದು ಮೇಲಿನ ಸುಂಕವನ್ನು ಹೆಚ್ಚಿಸಿದ ನಂತರ ಬೆಲೆಗಳು ಭಾರಿ ಏರಿಳಿತಗೊಳ್ಳುತ್ತಿವೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ (10 ಗ್ರಾಂ) ರೂ.150ರಷ್ಟು ಏರಿಕೆಯಾಗಿ ರೂ.47,650ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.47,700 ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,040 ರೂ. ಆಗಿದೆ.
Published by:Annappa Achari
First published: