Morning Digest: ಕಾಂಗ್ರೆಸ್​ MLAಗೆ ಸಿಎಂ ಟಾಂಗ್, ಬೆಂಗಳೂರಿನಲ್ಲಿ ರಣ ಮಳೆ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.CM Bommai: ನನ್ನ ಹೊಗಳಿದ್ರೆ, ನಿನ್ನ ಶಿಷ್ಯರನ್ನು ಬಿಡ್ತೇನೆ ಅಂದ್ಕೋಬೇಡ: ಕಾಂಗ್ರೆಸ್ ಶಾಸಕನಿಗೆ ಸಿಎಂ ಟಾಂಗ್

ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಗೆ (MLA Prasad Abbaiah) ಸಿಎಂ ಟಾಂಗ್ ಕೊಟ್ಟಿದ್ದಾರೆ. ‍ನೀನು ಮೈಕ್​​ನಲ್ಲಿ ನನ್ನನ್ನು ಹೊಗಳಿದರೆ ನಿನ್ನ ಶಿಷ್ಯರು ಯಾರನ್ನೂ ಬಿಡಲ್ಲ. ನೀನು ಆ ನಿರೀಕ್ಷೆ ಇಟ್ಟುಕೊಂಡು ಹೊಗಳಬೇಡ. ನಿನ್ನ ಆಲೋಚನೆ ನನಗೂ ಸ್ವಲ್ಪ ತಿಳಿಯುತ್ತೆ. ನಿನ್ನ ಶಿಷ್ಯರು ಅಪರಾಧ ಕೃತ್ಯ ಮಾಡಿದ್ರೆ ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ ಅಂತ ಪರೋಕ್ಷ ಎಚ್ಚರಿಕೆ ನೀಡಿದರು. ನಿಮ್ಮ ಸರ್ಕಾರವಿದ್ದಾಗ ನಾವೂ ಹೀಗೆಯೇ ವೇದಿಕೆ ಮೇಲೆ ಕೇಳುತ್ತಿದ್ದೆವು. ನಮ್ಮ ಯಾವ ಮನವಿಯನ್ನೂ ನಿಮ್ಮ ಸರ್ಕಾರ ಲೆಕ್ಕಕ್ಕಿಡುತ್ತಿದ್ದಿಲ್ಲ. ಆದರೆ ಕನಿಷ್ಟ ನೀವು ಮಾಡೋ ಮನವಿಗೆ ಸ್ಪಂದಿಸೋ ಸರ್ಕಾರ ಈಗ ಬಂದಿದೆ ಎಂದು ಹೇಳಿದರು.

2.Bengaluru Rains: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ; ತಗ್ಗು ಪ್ರದೇಶಗಳು ಜಲಾವೃತ, ಜನರ ಪರದಾಟ; ಕೆರೆಯಂತಾದ ಮೆಜೆಸ್ಟಿಕ್ ಬಸ್ ನಿಲ್ದಾಣ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಆರಂಭವಾದ ಮಳೆ ಇಂದು ಬೆಳಗಿನ ಜಾವದವರೆಗೂ ಸುರಿದಿದೆ. ಭಾರೀ ಮಳೆಗೆ ತಗ್ಗು ಪ್ರದೇಶಗಳ ಜಲಾವೃತಗೊಂಡಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಸಂಪೂರ್ಣ ಕೆರೆಯಂತಾಗಿದೆ. ರಾತ್ರಿ 10 ಗಂಟೆಯಿಂದಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಹಲವು ಬಡಾವಣೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರೆ, ಹಲಸೂರು, ಜೀವನ್‌ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರ ಕ್ರಾಸ್ ಜಲಾವೃತಗೊಂಡಿದೆ. ಮಹಾಲಕ್ಷ್ಮೀ ಲೇಔಟ್​​ನ ತರಕಾರಿ ಮಾರ್ಕೆಟ್​​ ಬಳಿ ಎರಡು ಬೃಹತ್ ಮರಗಳು ಕಾರ್ ಮೇಲೆ ಬಿದ್ದಿವೆ. ಎರಡು ಕಾರ್​​ಗಳು ಸಂಪೂರ್ಣ ಜಖಂ ಆಗಿದ್ದು, BBMP ಅರಣ್ಯ ಸಿಬ್ಬಂದಿ ರಾತ್ರಿಯೇ ತೆರವು ಮಾಡಿದ್ದಾರೆ.

3.Gold-Silver Price Today: ಚಿನ್ನ ಖರೀದಿಸೋರಿಗಿಲ್ಲ ಟೆನ್ಶನ್, ಹೀಗಿದೆ ಇಂದಿನ ಬೆಳ್ಳಿ-ಬಂಗಾರ ದರ!

Gold and Silver Price on September 05, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ಹಬ್ಬದ ಸಮಯದಲ್ಲಾದರೂ ಚಿನ್ನ ಇಳಿಕೆ ಕಾಣಬಹುದಿತ್ತು ಎಂದು ನಿರೀಕ್ಷೆ ಮಾಡುತ್ತಿದ್ದ ಗ್ರಾಹಕರಿಗೆ ಅಷ್ಟರಮಟ್ಟಿಗೆ ಚಿನ್ನದ ಬೆಲೆಯ ಏರಿಳಿಕೆ ಖುಷಿ ನೀಡಲಿಲ್ಲ. ಇಂದು ಒಂದು ಗ್ರಾಂ ಚಿನ್ನದ ಬೆಲೆ 4,665 ಇದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ, ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,665 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,089 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,320 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,712 ಆಗಿದೆ.

4.Bigg Boss Kannada OTT: ಇಲ್ಲಿರೋಕೆ ಆಗ್ತಿಲ್ಲ, ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

ಬಿಗ್​ಬಾಸ್ ಒಟಿಟಿ ಕನ್ನಡ (Bigg boss ott) ತುಂಬಾ ಇಂಟ್ರೆಸ್ಟಿಂಗ್ ರೀತಿಯಲ್ಲಿ ಸಾಗುತ್ತಾ ಬಂದಿದೆ. ಮೇಲಿಂದ ಮೇಲೆ ಡಿಫರೆಂಟ್ ಟ್ವಿಸ್ಟ್, ಹೊಸ ಹೊಸ ಟಾಸ್ಕ್, ಸ್ಪಧಿಗಳ ಜಗಳ, ತಮಾಷೆ, ಹಬ್ಬದ ಸಂಭ್ರಮ ಹೀಗೆ ಪ್ರೇಕ್ಷಕರನ್ನು ಕುತೂಹಲದಿಂದ ವೀಕ್ಷಿಸುವಂತೆ ಮಾಡುತ್ತಿದೆ. ಇತ್ತೀಚೆಗಷ್ಟೇ ಇಬ್ಬರು ಒಟ್ಟಿಗೆ ಎಲಿಮಿನೇಟ್ (Eliminate) ಕೂಡಾ ಆಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ (Bigg Boss House) ಎರಡೆರಡು ಎಲಿಮಿನೇಷನ್ ಆಗಿದೆ. ಮನೆಯಲ್ಲಿ ಇರುವವರಿಗೆ ಹೀಗೂ ಆಗುತ್ತೆ ಎನ್ನುವುದು ಶಾಕ್ ನೀಡಿದೆ. ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಈ ವಾರ ಮನೆಯಿಂದ ಹೊರನಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಜಯಶ್ರೀ ಆರಾಧ್ಯಗೆ (Jayashree Aradhya) ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. 'ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಆಗ್ತಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.

5.Murugha Shri Case: 37 ವಿದ್ಯಾರ್ಥಿಗಳನ್ನು ವಸತಿ ಶಾಲೆಗಳಿಗೆ ಸ್ಥಳಾಂತರ

ಮುರುಘಾ ಮಠದ (Murugha Mutt) ಶಿವಮೂರ್ತಿ ಸ್ವಾಮೀಜಿ (Shivamurthy Swamiji) ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಮುರುಘಾ ಮಠದ ಶಿಕ್ಷಣ ಸಂಸ್ಥೆಗಳ ಮೇಲೆ ಕರಿನೆರಳು ಬಿದ್ದಿದೆ. ಇದೀಗ ಚಿತ್ರದುರ್ಗ ಮಠದ (Chitradurga Mutt) ಎರಡು ಹಾಸ್ಟೆಲ್​ಗಳಲ್ಲಿದ್ದ 37 ಬಾಲಕಿಯರನ್ನು ಸಮೀಪದ ಸರ್ಕಾರಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಶ್ರೀಗಳ ಬಂಧನವಾಗಿದ್ದರೆ, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಠದಿಂದ ಬಸವ ಮತ್ತು ಅಕ್ಕಮಹಾದೇವಿ ಹೆಸರಿನಲ್ಲಿ ಎರಡು ಹಾಸ್ಟೆಲ್​ (Hostel) ಗಳನ್ನು ನಡೆಸಲಾಗುತ್ತಿದೆ. ಪ್ರಕರಣದ ಬೆನ್ನಲ್ಲೇ ಚಿತ್ರದುರ್ಗದ ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿತ್ತು.
Published by:Mahmadrafik K
First published: