Morning Digest: ಸಿದ್ದರಾಮೋತ್ಸವ ಸಂಭ್ರಮ, ರಾಜ್ಯಕ್ಕೆ ಅಮಿತ್ ಶಾ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Siddaramotsava: 8 ಲಕ್ಷ ವೆಚ್ಚದಲ್ಲಿ 3 ಕಿಲೋ ಮೀಟರ್ ಉದ್ದದ ಸಿದ್ದರಾಮಯ್ಯ ಫೋಟೋ

ದಾವಣಗೆರೆಯಲ್ಲಿ ಇಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನದ ಸಂದರ್ಭದಲ್ಲಿ ಪ್ರದರ್ಶಿಸಲು ಬೆಳಗಾವಿಯಲ್ಲಿ (Belagavi) 3,000 ಮೀಟರ್ (3 ಕಿಮೀ) ಉದ್ದದ ಫೋಟೋ ಬಯೋಗ್ರಫಿ (Photo Biography) ಸಿದ್ಧವಾಗಿದೆ. ಸವದತ್ತಿಯ ಕಾಂಗ್ರೆಸ್ ಮುಖಂಡ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ, ಆನಂದ್ ಚೋಪ್ರಾ ಅಭಿಮಾನಿ ಬಳಗ ಸಿದ್ದರಾಮಯ್ಯನವರ ರಾಜಕೀಯ ಜೀವನದ (Siddaramaiah Political Life) ಫೋಟೋಗಳನ್ನು ಬಳಸಿ ಈ ಫೋಟೋ ಬಯೋಗ್ರಫಿ ತಯಾರಿಸಿದೆ. ಸುಮಾರು 500 ಫೋಟೋಗಳನ್ನು ಬಳಸಿ ಈ ಫೋಟೋ ಬಯೋಗ್ರಫಿ ತಯಾರಿಸಲಾಗಿದೆ. ಇದಕ್ಕಾಗಿ 3 ಸಾವಿರ ಮೀಟರ್ ಉದ್ದದ ಬಟ್ಟೆ ಬಳಸಲಾಗಿದೆ.

2.CET Result: ಪಿಯುಸಿ ರಿಪೀಟರ್ಸ್​ಗೆ ಬ್ಯಾಡ್ ನ್ಯೂಸ್; KEA ತೀರ್ಮಾನಕ್ಕೆ ಸರ್ಕಾರ ಬದ್ಧ ಅಂದ್ರು ಸಚಿವ ಅಶ್ವಥ್ ನಾರಾಯಣ್

ಪಿಯುಸಿ ರಿಪೀಟರ್ಸ್ (PUC Repeaters_ ಅನ್ಯಾಯವಾಗಿದೆ ಎಂದು ಕೆಇಎ ಕಚೇರಿ (KEA Office) ಮುಂದೆ ಪ್ರತಿಭಟನೆ ನಡೆಸಿ ಹೋರಾಟ ಮಾಡಿದ್ದರು. ಆದರೆ ಇದಕ್ಕೆ ಶಾಕ್ ಕೊಡುವ ರೀತಿ ಉತ್ತರ ಬಂದಿದೆ ಉನ್ನತ ಶಿಕ್ಷಣ ಸಚಿವರಿಂದ. 24 ಸಾವಿರ ವಿದ್ಯಾರ್ಥಿಗಳ ಮಾತು ಕೇಳಿದರೆ ಮೂರು ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ (Minister CN Ashwath Narayan) ತಿಳಿಸಿದ್ದಾರೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ (Second PUC) ತೇರ್ಗಡೆ ಹೊಂದಿ ಈ ವರ್ಷವೂ ಪುನಃ ಸಿಇಟಿ (CET) ಬರೆದಿರುವ 24 ಸಾವಿರ ವಿದ್ಯಾರ್ಥಿಗಳಿಗೆ ಪಿಯುಸಿ ಅಂಕಗಳನ್ನು (PUC Marks) ಪರಿಗಣಿಸುವುದು ಸಾಧ್ಯವಿಲ್ಲ. ಈ ವಿಷಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಅವರು ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದರು.

3.Amit Shah: ಸಿದ್ದರಾಮೋತ್ಸವ ಬೆನ್ನಲ್ಲೇ ರಾಜ್ಯಕ್ಕೆ ಅಮಿತ್ ಶಾ ಆಗಮನ; ಇದರ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?

ಇಂದು ಕಾಂಗ್ರೆಸ್ ಶಾಸಕಾಂಗ ನಾಯಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaih) ಅವರ 75ನೇ ಜನ್ಮದಿನವನ್ನು ದಾವಣೆಗೆರೆಯಲ್ಲಿ (Davanagere) ಸಿದ್ದರಾಮೋತ್ಸವ (Siddaramotsava) ಹೆಸರಿನಲ್ಲಿ ಆಚರಣೆ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ (Congress) ವಿಧಾನಸಭಾ ಚುನಾವಣೆಗೂ (Assembly Election) ಮುನ್ನ ದೊಡ್ಡಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದೀಗ ಸಿದ್ದರಾಮೋತ್ಸವ ಬೆನ್ನಲ್ಲೇ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಸಹ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಬಿಜೆಪಿ (Karnataka BJP) ಮತ್ತು ಬೊಮ್ಮಾಯಿ ಸರ್ಕಾರದ (CM Bommai Government) ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸಿದ್ದರಾಮೋತ್ಸವ ನೆಪದಲ್ಲಿ ಮತಗಳ ಕ್ರೂಢೀಕರಣಕ್ಕೆ ಮುಂದಾಗಿದೆ. ಇದು ಒಂದು ರೀತಿ ಬಿಜೆಪಿಗೆ (BJP) ದೊಡ್ಡ ತಲೆನೋವಾಗಿ ಪರಿಣಮಿಸಿದೆ.

4.Gold Price: ಮುಂದುವರೆದ ಚಿನ್ನ-ಬೆಳ್ಳಿ ದರದ ಕಣ್ಣಾಮುಚ್ಚಾಲೆ ಆಟ! ಇಂದು ಬಂಗಾರದ ಬೆಲೆಯಲ್ಲಿ ಏರಿಕೆ

ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,735 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,400 ಆಗಿದೆ. ಇನ್ನು ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 58,000 ರೂ. ಆಗಿದೆ. ಇಂದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,735 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,400 ಆಗಿದೆ. ಒಂದು ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,735 ಹಾಗೂ 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,165 ರೂಪಾಯಿ ಆಗಿದೆ. ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,400 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,200, ರೂ. 47,350, ರೂ. 47,350 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,500 ರೂ. ಆಗಿದೆ.

5.Anand Mahindra: 10 ವರ್ಷ ಕಷ್ಟಪಟ್ಟು ದುಡಿದು SUV ಕಾರ್ ಖರೀದಿಸಿದ ವ್ಯಕ್ತಿ! ಆನಂದ್ ಮಹೀಂದ್ರ ರಿಯಾಕ್ಷನ್ ಹೀಗಿತ್ತು

ಅಶೋಕ್‌ಕುಮಾರ್ (ಅವರ ಟ್ವಿಟರ್ ಹ್ಯಾಂಡಲ್‌ನಲ್ಲಿರುವ ಹೆಸರು) ಇತ್ತೀಚೆಗೆ ಮಹೀಂದ್ರಾ ಎಸ್‌ಯುವಿಯನ್ನು ಖರೀದಿಸಿದರು. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರಿಂದ ಆಶೀರ್ವಾದ ಕೋರಿದರು. ಅವರು ಬಯಸಿದಂತೆಯೇ ಅವರ ಆಸೆ ನೆರವೇರಿತು. ತಮ್ಮ ಹೊಚ್ಚಹೊಸ ಬಿಳಿ ಎಸ್‌ಯುವಿಯನ್ನು ಹಾರದಿಂದ ಅಲಂಕರಿಸಿ ಅದರ ಪಕ್ಕ ನಿಂತು ಕ್ಲಿಕ್ಕಿಸಿಕೊಂಡ ಫೋಟೋವನ್ನು ಹಂಚಿಕೊಂಡ ಅಶೋಕ್‌ಕುಮಾರ್ ಅವರು ತಮ್ಮ ಟ್ವೀಟ್‌ನಲ್ಲಿ, 10 ವರ್ಷಗಳ ಕಠಿಣ ಪರಿಶ್ರಮದ ನಂತರ ಹೊಸ ಮಹೀಂದ್ರಾ ಎಕ್ಸ್‌ಯುವಿ 700 ಖರೀದಿಸಿದೆ, ಸರ್ ನಿಮ್ಮ ಆಶೀರ್ವಾದ ಬೇಕು ಎಂದು ಶ್ರೀ ಮಹೀಂದ್ರ ಅವರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ.
Published by:Mahmadrafik K
First published: