• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Morning Digest: ಗಣೇಶ ಚತುರ್ಥಿ ಸಂಭ್ರಮ, ತುಮಕೂರಿನಲ್ಲಿ ಅಮಾನವೀಯ ಕೃತ್ಯ, ಇಬ್ಬರಿಗೂ ಒಬ್ಬಳೇ ಬೇಕು; ಬೆಳಗಿನ ಟಾಪ್ ನ್ಯೂಸ್

Morning Digest: ಗಣೇಶ ಚತುರ್ಥಿ ಸಂಭ್ರಮ, ತುಮಕೂರಿನಲ್ಲಿ ಅಮಾನವೀಯ ಕೃತ್ಯ, ಇಬ್ಬರಿಗೂ ಒಬ್ಬಳೇ ಬೇಕು; ಬೆಳಗಿನ ಟಾಪ್ ನ್ಯೂಸ್

ಈವರೆಗಿನ ಪ್ರಮುಖ ಸುದ್ದಿ

ಈವರೆಗಿನ ಪ್ರಮುಖ ಸುದ್ದಿ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Ganesh Chaturthi 2022: ಗಣಪತಿಯ ದಂತಕಥೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ವಿನಾಯಕ ಏಕದಂತನಾದ ಕಥೆ!


ಹಿಂದೂಗಳು (Hindu) ಯಾವುದಾದರೊಂದು ಮಂಗಳಕರ ಕೆಲಸಗಳನ್ನು ಮಾಡುವಾಗ, ಮೊದಲ ಪೂಜೆಯನ್ನು(First puja) ಗಣೇಶನಿಗೆ (Ganesh) ಅರ್ಪಿಸುತ್ತರೆ. ಜಾನಪದದ ಪ್ರಕಾರ, ಪ್ರತಿ ಧಾರ್ಮಿಕ ಮೆರವಣಿಗೆ ಅಥವಾ ಆಚರಣೆಯ ಸಮಯದಲ್ಲಿ ಪೂಜಿಸುವ ಮೊದಲ ದೇವತೆ ಗಣೇಶ ಎಂದು ಭಾವಿಸಲಾಗಿದೆ. ಇಷ್ಟು ಹೇಳಿದ ಮೇಲೆ ಗಣೇಶ ಚತುರ್ಥಿ ಕ್ರೇಜ್ ನಮ್ಮ ಬದುಕನ್ನು ಹೇಗೆ ಆವರಿಸಿದೆ ಎಂಬುದು ನಮಗೆ ಅರಿವಾಗುತ್ತದೆ. ಇಂದು ಗಣೇಶ ಚತುರ್ಥಿ (Ganesh Festival). ಅಡೆತಡೆಗಳ ನಾಶಕನ ಗೌರವಾರ್ಥವಾಗಿ ನಾವು ಮೋದಕಗಳನ್ನು ರೆಡಿ ಮಾಡುತ್ತೇವೆ. ಆರತಿ ಬೆಳಗಿ, ಮಂತ್ರ ಪಠಿಸುತ್ತೇವೆ. ಈ ಸಂದರ್ಭದಲ್ಲಿ ಭಗವಂತನ ಬಗ್ಗೆ ನಿಮಗೆ ತಿಳಿದಿರದ ಕೆಲವು ವಿಷಯಗಳು ಇಲ್ಲಿವೆ. ಗಣಪತಿಯ ದಂತಕಥೆಗಳ (Legends) ಬಗ್ಗೆ ಇಲ್ಲಿದೆ ಮಾಹಿತಿ.


2.Tumakuru: ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಬಾಲಕನ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಶಿಕ್ಷಕಿ!


ತುಮಕೂರು‌ ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೂರು ವರ್ಷ ಬಾಲಕ ಚಡ್ಡಿಯಲ್ಲಿಯೇ ಪದೇ ಪದೇ ಮೂತ್ರ ಮಾಡಿಕೊಳ್ಳುತ್ತಿದ್ದನು. ಇದರಿಂದ ಶಿಕ್ಷಕಿ ಬಾಲಕನ ಖಾಸಗಿ ಭಾಗಕ್ಕೆ ಬೆಂಕಿ ಇಟ್ಟಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ನನಗೂ ಮಕ್ಕಳಿದ್ದಾರೆ. ನಾನು ಈ ರೀತಿ ಮಾಡುವಳಲ್ಲ. ಮಗು ಮತ್ತೊಮ್ಮೆ ಚಡ್ಡಿಯಲ್ಲಿ ಮೂತ್ರ ಮಾಡದಿರಲಿ ಎಂದು ಈ ರೀತಿ ಮಾಡಲು ಹೋದೆ ಎಂದು ಹೇಳಿ ಬಾಲಕನ ಪೋಷಕರ ಬಳಿ ಶಿಕ್ಷಕಿ ಕ್ಷಮೆ ಕೇಳಿದ್ದಾರಂತೆ.


3. Chikkamagaluru: ಒಬ್ಬಳನ್ನೇ ಮದುವೆಯಾದ ಇಬ್ಬರು, ಪತ್ನಿಗಾಗಿ ಗಂಡಂದಿರ ಫೈಟ್, ಕಿಡ್ನಾಪ್ ವೇಳೆ ತಗ್ಲಾಕೊಂಡ 2ನೇ ಪತಿ!


ಆಕೆಗೆ ಒಂದೇ ವರ್ಷಕ್ಕೆ ಗಂಡ ಬೇಡಾದ. ಆಕೆಗೆ ಎರಡನೇ ಗಂಡನೇ ಮೇಲೆ ಮೋಹ. ಮೊದಲನೇ ಗಂಡನಿಗೆ ಆಕೆಯ ಮೇಲೆ ವ್ಯಾಮೋಹ. ಆಕೆ ಎರಡನೇ ಗಂಡನನ್ನ ಬಿಡಂಗಿಲ್ಲ. ಮೊದಲ ಗಂಡ ಆಕೆಯನ್ನ ಬಿಡುತ್ತಿಲ್ಲ. ಎರಡನೇ ಗಂಡ ಮೊದಲ ಗಂಡನಿಗೆ ಪಿಂಡ ಇಡಲು ಮುಂದಾಗಿ ಲಾಕ್ ಆದ. ಕಡೂರಿನ ಈ ಟ್ರಯಾಂಗಲ್ ಲವ್ ಸ್ಟೋರೀಲಿ ಪಾಪ ಅಮಾಯಕ ಗಂಡ ಕೂದಲೆಳೆ ಅಂತರದಲ್ಲಿ ಸಾವಿನ ಮನೆ ಕದ ಬಡಿದು ಬಂದಿದ್ದಾನೆ. ಕಡೂರು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದ ಹಿನ್ನೆಲೆ ಅಮಾಯಕನ ಜೀವ ಉಳಿಸಿದಂತಾಗಿದೆ. ಪೊಲೀಸರ ಈ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.


4. Vijay: ಹೊಸ ಮನೆ ಖರೀದಿಸಿದ್ದಾರಂತೆ ದಳಪತಿ ವಿಜಯ್​! ಈ ದುಡ್ಡಲ್ಲಿ ಬೆಂಗ್ಳೂರಲ್ಲಿ 5 ಮನೆ ಕಟ್ಬಹುದು


ವಿಜಯ್ ಕಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಿಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಗಳವಾಡುತ್ತಿದ್ದಾರೆ. ಆದರೆ, ವಿಜಯ್ ಇತ್ತೀಚೆಗಷ್ಟೇ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇವರು ಹೊಸದಾಗಿ ಖರೀದಿಸಿದ ಮನೆಯ ಬೆಲೆ ತಿಳಿದರೆ ಶಾಕ್ ಆಗುತ್ತೀರಿ. ವಿಜಯ್ ಅವರು ಚೆನ್ನೈನ ದುಬಾರಿ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಒಟ್ಟು ಮೌಲ್ಯ ರೂ. 35 ಕೋಟಿ ಎಂದು ಗೊತ್ತಾಗಿದೆ. ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆಯಲು ಹಾಗೂ ಪ್ರಶಾಂತ ಪ್ರದೇಶಕ್ಕಾಗಿ ಹೊಸ ಮನೆಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ


5.Online Food: ಜಾಸ್ತಿ ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇದನ್ನು ಒಮ್ಮೆ ಓದಿ, ಇನ್ಮುಂದೆ ಆ ಯೋಚನೆ ಕೂಡ ಬರಲ್ಲ​


ಒಂದು ಸಮೀಕ್ಷೆಯ ಪ್ರಕಾರ, ಸ್ವಿಗ್ಗಿ ಮತ್ತು ಝೊಮಾಟೋದಂತಹ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ರೆಸ್ಟೋರೆಂಟ್‌ನಿಂದ ನೇರವಾಗಿ ಖರೀದಿಸುವುದಕ್ಕಿಂತ 10 ರಿಂದ 60 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಜೆಫರೀಸ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಇದು ದೇಶಾದ್ಯಂತ 8 ನಗರಗಳಲ್ಲಿ 80 ರೆಸ್ಟೋರೆಂಟ್‌ಗಳನ್ನು ಒಳಗೊಂಡಿದೆ. ಜೆಫರೀಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಹೆಚ್ಚಿನ ರೆಸ್ಟೋರೆಂಟ್‌ಗಳು ಮತ್ತು ಆನ್‌ಲೈನ್ ನಡುವೆ ಬೆಲೆಗಳಲ್ಲಿ ಗಣನೀಯ ವ್ಯತ್ಯಾಸವಿದೆ. ರೆಸ್ಟೋರೆಂಟ್‌ನಲ್ಲಿ 100 ರೂ.ಗೆ ತಿನ್ನಬಹುದಾದ ಖಾದ್ಯಕ್ಕೆ, ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ನೀವು 110 ರಿಂದ 160 ರೂಪಾಯಿ ಕೊಡಬೇಕು. ಒಂದು ಕ್ಲಿಕ್‌ನಲ್ಲಿ ಆಹಾರದ ಆರ್ಡರ್ ಅನ್ನು ಬುಕ್ ಮಾಡಲು ನಿಮ್ಮ ಪಾಕೆಟ್‌ಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಇದರೊಂದಿಗೆ ನೀವು ಅರ್ಥಮಾಡಿಕೊಳ್ಳಬಹುದು.

First published: