• Home
  • »
  • News
  • »
  • state
  • »
  • Morning Digest: ರಾಜ್ಯದಲ್ಲಿ ಮಳೆ ಅಬ್ಬರ, ಆದಿತ್ಯಾ ಠಾಕ್ರೆ ವಿಡಿಯೋ, ಅರ್ಪಿತಾ ಅಮ್ಮನ ಮನೆ; ಬೆಳಗಿನ ಟಾಪ್ ನ್ಯೂಸ್

Morning Digest: ರಾಜ್ಯದಲ್ಲಿ ಮಳೆ ಅಬ್ಬರ, ಆದಿತ್ಯಾ ಠಾಕ್ರೆ ವಿಡಿಯೋ, ಅರ್ಪಿತಾ ಅಮ್ಮನ ಮನೆ; ಬೆಳಗಿನ ಟಾಪ್ ನ್ಯೂಸ್

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Heavy Rain: ರಾಜ್ಯಾದ್ಯಂತ ಭಾರೀ ಮಳೆ ಅಬ್ಬರ, ಜನ ತತ್ತರ! ವಿದ್ಯುತ್‌ ಶಾಕ್‌ಗೆ ವೃದ್ಧ ಬಲಿ


ರಾಜ್ಯಾದ್ಯಂತ ನಿನ್ನೆ ಮಳೆ ರಾಯ ಅಬ್ಬರಿಸಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರು (Bengaluru), ತುಮಕೂರು, ಕಲಬುರಗಿ, ಕೋಲಾರ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಚಾಮರಾಜನಗರ ಸೇರಿದಂತೆ ಹಲವೆಡೆ ನಿನ್ನೆ ಸಂಜೆಯಿಂದ (Evening) ತಡರಾತ್ರಿವರೆಗೂ (Late Night) ಸುರಿದ ಭಾರೀ ಮಳೆಯಿಂದಾಗಿ (Heavy Rain) ಜನಜೀವನವೇ ಅಸ್ತವ್ಯಸ್ತವಾಗಿದೆ. ತುಮಕೂರಲ್ಲಿ (Tumkur) ಮನೆಗಳಿಗೆ ನೀರು ನುಗ್ಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೆ (Electrical short circuit) ವೃದ್ಧನೊಬ್ಬ (Old Man) ಬಲಿಯಾಗಿದ್ದಾನೆ. ಕಲಬುರಗಿಯಲ್ಲಂತೂ (Kalaburagi) ನದಿ ಉಕ್ಕಿ ಹರಿದು, ಹಲವು ಗ್ರಾಮಗಳ ಸಂಪರ್ಕವೇ ಕಡಿತವಾಗಿತ್ತು.


2.Bengaluru Rains: ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿದ ಮಳೆ; ಮನೆ, ಅಂಗಡಿಗಳಿಗೆ ನುಗ್ಗಿದ ನೀರು


ಶನಿವಾರ ತಡರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ಜನರು ಫುಲ್ ಹೈರಾಣು ಆಗಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಕುಮಾರಸ್ವಾಮಿ ಲೇಔಟ್ ತಗ್ಗು ಪ್ರದೇಶದ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಪರಿಣಾಮ ಮನೆಗಳು, ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಇಷ್ಟೆಲ್ಲಾ ಅವಾಂತರ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬಿಬಿಎಂಪಿ ಮತ್ತು ಸ್ಥಳೀಯ ಅಧಿಕಾರಿಗಳು ಮನೆಯೊಳಗಿನ ನೀರು ಹೊರ ಹಾಕುವ ಕಾರ್ಯಚರಣೆಗೆ ಮುಂದಾದರು. ಇತ್ತ ಮತ್ತಿಕೆರೆಯ ಜೆಪಿ ಪಾರ್ಕ್ ಬಳಿಯಲ್ಲಿ ಚರಂಡಿಯ ನೀರು ಮನೆಗಳಿಗೆ ನುಗ್ಗಿದೆ. ಇಡೀ ರಾತ್ರಿ ಜಾಗರಣೆ ಮಾಡಿರುವ ಜನರು ಮಳೆ ನೀರನ್ನು ಹೊರ ಹಾಕುತ್ತಿದ್ದಾರೆ.


3.SSC Scam: ಮಗಳ ಫ್ಲ್ಯಾಟ್​​ನಲ್ಲಿ ಸಿಕ್ತು 50 ಕೋಟಿ! ಆದರೆ ಅರ್ಪಿತಾ ಅಮ್ಮನ ಮನೆಯ ಅವಸ್ಥೆ ಒಮ್ಮೆ ನೋಡಿ!


ಜಾರಿ ನಿರ್ದೇಶನಾಲಯ (ED) ಅರ್ಪಿತಾ ಮುಖರ್ಜಿ (Arpita Mukharjee) ಅವರಿಗೆ ಸೇರಿದ ಐಷಾರಾಮಿ ಮನೆಗಳ ಮೇಲೆ ದಾಳಿ (Raid) ನಡೆಸಿದಾಗಲೂ, ಉತ್ತರ 24 ಪರಗಣದಲ್ಲಿರುವ ಅವರ ಪೂರ್ವಜರ ಮನೆ ಮುಖ್ಯಾಂಶಗಳಿಂದ ಹೊರಗುಳಿದಿದೆ. ಅವಳು ಕಳೆದ ವಾರ ಇಲ್ಲಿದ್ದಳು. ಅವಳು ಎಂದಿಗೂ ಇಲ್ಲಿ ಹೆಚ್ಚು ಸಮಯ ಕಳೆಯುವುದಿಲ್ಲ. ಅವಳು ಹೆಚ್ಚಾಗಿ ತನ್ನ ಮನೆಯಲ್ಲಿಯೇ ಇದ್ದಳು ಎಂದು ಅರ್ಪಿತಾ ಅವರ ತಾಯಿ ಮಿನಾತಿ ಮುಖರ್ಜಿ ಅವರು ತಮ್ಮ ಮಗಳು ಕೋಲ್ಕತ್ತಾದ ಬೆಲ್ಗೋರಿಯಾದಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. 50 ವರ್ಷಗಳ ಹಿಂದೆ ನಿರ್ಮಿಸಲಾದ ಈ ಪಾಳುಬಿದ್ದ ಮನೆಯಲ್ಲಿ ಮಿನಾತಿ ಮುಖರ್ಜಿ ಒಬ್ಬರೇ ಇದ್ದಾರೆ.


4.Aaditya Thackeray: ಮಸೀದಿಯಲ್ಲಿ ಆಝಾನ್ ಸಂದರ್ಭ ಭಾಷಣ ನಿಲ್ಲಿಸಿದ ಆದಿತ್ಯ ಠಾಕ್ರೆ!


ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬದಲಾವಣೆ ನಂತರವೂ ಉದ್ಧವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ (Aaditya Thackeray) ಹಿಂದಿನಂತೆಯೇ ಮುಂದುವರಿಯುತ್ತಿದ್ದಾರೆ. ತಮ್ಮದೇ ಪಕ್ಷದ ಪಕ್ಷ ನಿಷ್ಠರಿಂದಲೇ ವಂಚಿಸಲ್ಪಟ್ಟ ನಂತರವೂ ಅವರು ಸದೃಢವಾಗಿ ನಿಂತಿರುವುದನ್ನು ಕಾಣಬಹುದು. ಏಕನಾಥ್​ ಶಿಂಧೆ (Eknath Shindhe) ಸರ್ಕಾರ ರಚಿಸಿದ ನಂತರ ತಂದೆ ಹಾಗೂ ಮಗ ಸೈಡ್​ಲೈನ್ ಆದರೂ ಇನ್ನೂ ಅವರನ್ನು ಬೆಂಬಲಿಸುವ ಒಂದಷ್ಟು ಜನ ಅವರ ಸಾಥ್ ಬಿಟ್ಟುಕೊಟ್ಟಿಲ್ಲ. ಮಹಾರಾಷ್ಟ್ರದ (Maharastra) ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಆಝಾನ್ ಸಮಯದಲ್ಲಿ ತಮ್ಮ ಭಾಷಣವನ್ನು (Speech) ಕೆಲವು ನಿಮಿಷಗಳ ಕಾಲ ವಿರಾಮಗೊಳಿಸಿದ ವೀಡಿಯೊ (Video) ಸಾಮಾಜಿಕ ಮಾಧ್ಯಮದಲ್ಲಿ (Social Media) ಹೊರಹೊಮ್ಮಿದೆ ಮತ್ತು ವೈರಲ್ (Viral) ಆಗುತ್ತಿದೆ.


5.Kitturu ಅರಮನೆ ಮರುಸೃಷ್ಟಿ ಜಾಗ ಗುರುತು; ಜಿಲ್ಲಾಡಳಿತದ ನಿರ್ಧಾರ ವಿರುದ್ಧ ಆಗಸ್ಟ್ 2ರಂದು ಕಿತ್ತೂರು ಬಂದ್


ಕಿತ್ತೂರಲ್ಲಿರುವ ಕೋಟೆ (Kittur Fort) ಪಕ್ಕವೇ ಅರಮನೆ (Palace) ಮರುಸೃಷ್ಟಿ ನಿರ್ಮಾಣದ ಬೇಡಿಕೆ ಇದೆ. ಆದರೆ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ (Bachchnakeri Village) ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಧಾರಿಸಿದೆ. ಇದು ಈ ಭಾಗದ ಸ್ವಾಮೀಜಿಗಳು (Swamiji) ಹಾಗೂ ಚನ್ನಮ್ಮಾ ಅಭಿಮಾನಿಗಳ (Channammaji Fans) ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಬೆಳಗಾವಿ (Belagavi) ಜಿಲ್ಲಾಡಳಿತದ ನಿರ್ಧಾರ ಖಂಡಿಸಿ ಆಗಸ್ಟ್ 2 ರಂದು ಕಿತ್ತೂರು ಬಂದ್‍ಗೆ (kittur Bandh) ಕರೆ ನೀಡಲಾಗಿದೆ.

Published by:Mahmadrafik K
First published: