• Home
  • »
  • News
  • »
  • state
  • »
  • Top 5 News: ರೆಪೊ ದರ ಮತ್ತೆ ಹೆಚ್ಚಳ, ರಾಗಾಗೆ ಸಿದ್ದರಾಮಯ್ಯ ಸ್ವಾಗತ: ಬೆಳಗಿನ ಟಾಪ್ ನ್ಯೂಸ್​ಗಳು

Top 5 News: ರೆಪೊ ದರ ಮತ್ತೆ ಹೆಚ್ಚಳ, ರಾಗಾಗೆ ಸಿದ್ದರಾಮಯ್ಯ ಸ್ವಾಗತ: ಬೆಳಗಿನ ಟಾಪ್ ನ್ಯೂಸ್​ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

morning digest important kannada news of the day 30 September 2022 Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:


  1. Actor Yash: ಉಕ್ಕಿ ಹರಿಯಿತು ಯಶ್ ದಂಪತಿ ಅಭಿವೃದ್ಧಿಪಡಿಸಿದ ತಲ್ಲೂರು ಕೆರೆ!


ಸ್ಯಾಂಡಲ್​ವುಡ್ ರಾಕಿಂಗ್​ ಸ್ಟಾರ್ ನಟ ಯಶ್ (Rocking Star Yash) ಅಭಿವೃದ್ಧಿ ಪಡಿಸಿದ ಕೆರೆ ಕೋಡಿ ಬಿದ್ದಿದೆ. ಅಧಿಕ ಮಳೆಯ (Heavy Rain) ಪರಿಣಾಮವಾಗಿ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ (Thalluru lake) ಭರ್ತಿಯಾಗಿದ್ದು ಕೆರೆ ತುಂಬಿ ಉಕ್ಕಿ ಹರಿದಿದೆ. 2016ರಲ್ಲಿ ಯಶೋಮಾರ್ಗ ಫೌಂಡೇಶನ್ ನಿಂದ ನಟ ಯಶ್ (Actor Yash) ಅಭಿವೃದ್ದಿಸಿದ್ದ ಕೆರೆ ಅಭಿವೃದ್ದಿ ಪಡಿಸಿದ ನಂತರ ಇದೇ ಮೊದಲು ಕೋಡಿ ಬಿದ್ದಿದೆ. 2008 ರಲ್ಲಿ ತಲ್ಲೂರು ಕೆರೆ ಕೋಡಿ ಬಿದ್ದು ನೀರು (Water) ಹರಿದಿತ್ತು. ಈಗ ಮತ್ತೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದಕ್ಕೆ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ. ಸತತ ಮೂರ್ನಾಲ್ಕು ವರ್ಷಗಳ ಬರದಿಂದ ಸಂಪೂರ್ಣವಾಗಿ 96 ಎಕರೆ ವಿಸ್ತೀರ್ಣದ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಸಂಪೂರ್ಣವಾಗಿ ಹೂಳು ತುಂಬಿಕೊಂಡಿತ್ತು. ಕೆರೆಯ ಹೂಳು ತಗೆಯುವ ಕೆಲಸಕ್ಕೆ 2017 ಫೆಬ್ರವರಿ ತಿಂಗಳಲ್ಲಿ ಯಶ್ ದಂಪತಿ ಚಾಲನೆ ನೀಡಿದ್ದರು. ಅಂದು ಮಾಡಿದ್ದ ಕೆಲಸಕ್ಕೆ ಇಂದು ಫಲ ಸಿಕ್ಕಿದೆ. ಇದರಿಂದ ಸುಮಾರು 10 ಕ್ಕೂ ಹೆಚ್ಚು ಗ್ರಾಮದ ರೈತರಿಗೆ ಅನುಕೂಲವಾಗಿದೆ.


2. ಕಾಂಗ್ರೆಸ್ ಬಣ ರಾಜಕೀಯ, ಡಿಕೆಶಿಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯ


ಕರ್ನಾಟಕಕ್ಕೆ ಗುಂಡ್ಲುಪೇಟೆ ಮೂಲಕ ಪ್ರವೇಶ ಮಾಡಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೋ ಯಾತ್ರೆಗೆ ಬಿಗಿ ಭದ್ರತೆಗಾಗಿ ಒದಗಿಸಲಾಗುತ್ತಿದೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಪೊಲೀಸ್ ಪಥ ಸಂಚಲನ ಮಾಡಿದ್ದು, ಎಸ್​ಪಿ ಶಿವಕುಮಾರ್, ಎಎಸ್​ಪಿ ಸುಂದರ್ ರಾಜ್, ಡಿವೈಎಸ್​​ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಉಪಸ್ಥಿತರಿದ್ದರು.


3. ರೆಪೊ ದರ ಮತ್ತೆ ಶೇ 0.50ರಷ್ಟು ಹೆಚ್ಚಳ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ ಗೃಹ ಸಾಲ!


ಭಾರತೀಯ ರಿಸರ್ವ್ ಬ್ಯಾಂಕ್(RBI)  ಜನಸಾಮಾನ್ಯರಿಗೆ ಶಾಕ್ (Shock) ನೀಡಿದೆ. ಆರ್‌ಬಿಐ ಹಣಕಾಸು ನೀತಿ ಸಮಿತಿ (RBI Monetary Policy Committee) ಯ ಪರಿಶೀಲನಾ ಸಭೆಯಲ್ಲಿ ಬಡ್ಡಿದರಗಳ ಮೇಲೆಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರೆಪೊ ದರ (Repo Rate) ಇನ್ನೂ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಇದರೊಂದಿಗೆ ರೆಪೊ ದರ ಶೇ.5.90ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳಲ್ಲೂ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್ (Repo Rate Basis Points) ಗಳಷ್ಟು ಏರಿಕೆ ಕಂಡಿರುವುದು ಗೊತ್ತೇ ಇದೆ. ಈಗಲೂ ಬಡ್ಡಿ ದರ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. 100 ಮೂಲ ಅಂಕಗಳು 1 ಪ್ರತಿಶತಕ್ಕೆ ಸಮನಾಗಿರುತ್ತದೆ. ಅಂದರೆ ಈಗಿನ ಬಡ್ಡಿ ಶೇಕಡಾ ಅರ್ಧದಷ್ಟು ಹೆಚ್ಚಾಗಿದೆ. ಈ ಕಾರಣದಿಂದಾಗಿ, EMI ಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿವೆ.


4. ಮಗಳ ಹೆರಿಗೆ ಇದೆ ಬಳ್ಳಾರಿಗೆ ಹೋಗಲು ಅವಕಾಶ ಕೊಡಿ, ಸುಪ್ರೀಂ ಮೆಟ್ಟಿಲೇರಿದ ಗಣಿಧಣಿ


ಅಕ್ರಮ ಗಣಿ ಹಗರಣ (Illegal Mining Case) ಪ್ರಕರಣವನ್ನೆದುರಿಸುತ್ತಿರುವ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhana Reddy) ತನಗೆ ಬಳ್ಳಾರಿಗೆ ಹೋಗಲು ಅವಕಾಶ ನೀಡುವಂತೆ ಕೋರಿ ಮತ್ತೆ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಕೆಲ ದಿನಗಳಲ್ಲೇ ತನ್ನ ಮಗಳಿಗೆ ಹೆರಿಗೆಯಾಗಲಿದೆ (Delivery). ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಒಂದು ತಿಂಗಳಾದರೂ ತನಗೆ ಬಳ್ಳಾರಿಗೆ ಎಂಟ್ರಿಯಾಗಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಸಿಬಿಐ ಎರಡು ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ನ್ಯಾ. ಎಂಆರ್.ಶಾ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಶುಕ್ರವಾರ ವಿಚಾರಣೆ ನಡೆಸಲಿದೆ.


5. ಕಾಂತಾರ ಸಿನಿಮಾ ಬಗ್ಗೆ ರಮ್ಯಾ ಮಾತು! ಆ ದೈವ ರೂಪ ಕಂಡು ನಟಿ ರಮ್ಯಾ ಹೇಳಿದ್ದೇನು?


ಸ್ಯಾಂಡಲ್​​ವುಡ್​ನಲ್ಲಿ (Kantara) ಕಾಂತಾರ ಸಿನಿಮಾ ತನ್ನದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ಪೊನ್ನಿಯಿನ್ ಸೆಲ್ವನ್ (Pooniyin Selvan) ನಂತಹ ದೊಡ್ಡ ಚಿತ್ರ ಬರ್ತಾಯಿದ್ರೂ ಜಗ್ಗುತ್ತಿಲ್ಲ. ತನ್ನದೇ ರೀತಿಯಲ್ಲಿಯೇ ಮುನ್ನುಗ್ಗಲು ರೆಡಿ ಆಗಿದೆ. ಚಿತ್ರದ ಪ್ರಚಾರದಲ್ಲೂ (Promotion) ಆ ನುಗ್ಗುವಿಕೆ ಕಾಣಿಸುತ್ತಿದೆ. ಯಾರೇ ಬಂದ್ರೂ ಅಷ್ಟೆ, ಇನ್ನಾರೇ ಹೋದ್ರು ಅಷ್ಟೆ. ಕಾಂತಾರ ಚೆನ್ನಾಗಿಯೇ ಹೋಗುತ್ತದೆ ಅನ್ನೋ ನಂಬಿಕೆ ಇಡೀ ಸಿನಿಮಾ ತಂಡಕ್ಕಿದೆ. ಇಂತಹ ಇದೇ ಭರವಸೆಯಲ್ಲಿಯೇ ಚಿತ್ರದ ನಿರ್ದೇಶಕರು ಈ ಚಿತ್ರದ ಒಂದು ವಿಷಯವನ್ನ ರಿವೀಲ್ (Reveal) ಮಾಡಿದ್ದಾರೆ.

Published by:Precilla Olivia Dias
First published: