Morning Digest: ಬೆಂಗಳೂರಿಗೂ ಕಾಲಿಟ್ಟಿತೇ ಮಂಕಿಪಾಕ್ಸ್?, ಯುವ ನಟನ ಸಾವು, ವಿಕ್ರಾಂತ್ ರೋಣನ ಕೆಲಕ್ಷನ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
1.Monkeypox: ಬೆಂಗಳೂರಿಗೂ ಕಾಲಿಟ್ಟಿತೇ ಮಂಕಿಪಾಕ್ಸ್? ಶಂಕಿತ ರೋಗ ಲಕ್ಷಣವಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು!

ಇಡೀ ವಿಶ್ವದಾದ್ಯಂತ ಮಂಕಿಪಾಕ್ಸ್ ಕಾಯಿಲೆಯ (Monkeypox disease) ಅಬ್ಬರ ಜೋರಾಗುತ್ತಿದೆ. ಇದುವರೆಗೂ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಮಂಕಿಪಾಕ್ಸ್ ಸೋಂಕಿಗೆ (Infection) ತುತ್ತಾಗಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ (World Health Organization) ವರದಿ (Report) ಹೇಳಿದೆ. ಅಮೆರಿಕಾ, ಆಫ್ರಿಕಾ, ಯುರೋಪ್, ಪೂರ್ವ ಮೆಡಿಟರೇನಿಯನ್ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳು ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯ 42 ಸದಸ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಭಾರತದಲ್ಲೂ (India) 4 ಮಂಕಿಪಾಕ್ಸ್ ಕೇಸ್‌ಗಳು ಪತ್ತೆಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಲ್ಲೂ (Bengaluru) ಈಗ ಮಂಕಿಪಾಕ್ಸ್ ಟೆನ್ಶನ್ ಶುರುವಾಗಿದೆ. ಬೆಂಗಳೂರಿನಲ್ಲಿದ್ದ ಆಫ್ರಿಕಾ (Africa) ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡು ಬಂದಿದೆ ಅಂತ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸದ್ಯ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವರದಿಗಾಗಿ ವೈದ್ಯರು ನಿರೀಕ್ಷೆ ಮಾಡುತ್ತಿದ್ದಾರೆ.

2.Yadagiriಯಲ್ಲಿ ಶೀಘ್ರವೇ ಮೆಡಿಕಲ್ ಕಾಲೇಜು ಆರಂಭ; 150 ಸೀಟುಗಳ ಪ್ರವೇಶಾತಿಗೆ ಅನುಮೋದನೆ

ಹಿಂದುಳಿದ ಜಿಲ್ಲೆ ಅಂತಾನೇ ಅಪಖ್ಯಾತಿ ಹೊಂದಿದ್ದ ಯಾದಗಿರಿ (Yadagiri) ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು (Medical College) ಆರಂಭದ ಕನಸು ಈಗ ನನಸಾಗಿದೆ. ಬಹು ವರ್ಷದ ಬೇಡಿಕೆಗೆ ಕೇಂದ್ರ ಸರಕಾರ (Central Government) ಗ್ರೀನ್ ಸಿಗ್ನಲ್ ನೀಡಿದ್ದು, ಶೈಕ್ಷಣಿಕ ವರ್ಷ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅನುಮತಿ ಸಿಕ್ಕಿದ್ದು, ದಶಕದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಯಾದಗಿರಿಯ ಮೆಡಿಕಲ್ ಕಾಲೇಜ್ (Yadagiri Medical College) ಆರಂಭಕ್ಕೆ ಈಗ ಕೇಂದ್ರ ಹಸಿರು ನಿಶಾನೆ ನೀಡಿದೆ. ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಕಾಲೇಜ್ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 2022-23 ನೇ ಸಾಲಿನಲ್ಲಿ 150 ಎಂ.ಬಿ.ಬಿ.ಎಸ್ ಸೀಟುಗಳಿಗೆ ನ್ಯಾಷನಲ್ ಮೆಡಿಕಲ್ ಕಮೀಷನ್ (ರಾಷ್ಟ್ರೀಯ ಆರೋಗ್ಯ ಆಯೋಗ National Medical Commission) ಅನುಮತಿ ನೀಡಿದೆ.

3..Actor Death: ಚಿತ್ರರಂಗಕ್ಕೆ ಮತ್ತೊಂದು ಶಾಕ್, 37ನೇ ವಯಸ್ಸಲ್ಲೇ ಯುವನಟ ಸಾವು! ಕಾರಣ ಮಾತ್ರ ನಿಗೂಢ

ಕಳೆದ 2 ವರ್ಷಗಳಿಂದ ಘಟಾನುಘಟಿ ಕಲಾವಿದರು, ಪ್ರತಿಭಾನ್ವಿತ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು, ನಟಿಯರು, ಕಲಾವಿದೆಯರನ್ನು ಕಳೆದುಕೊಂಡಿರುವ ಭಾರತೀಯ ಚಿತ್ರರಂಗಕ್ಕೆ (Indian film industry) ಮತ್ತೊಂದು ಆಘಾತ (Shock) ಎದುರಾಗಿದೆ. ಕೇರಳದ (Kerala) ಜನಪ್ರಿಯ ಯುವನಟ (popular young actor) ಶರತ್ ಚಂದ್ರನ್ (Sarath Chandran) ಸಾವನ್ನಪ್ಪಿದ್ದಾರೆ. ಮಲಯಾಳಂ ಚಿತ್ರರಂಗದ (Malayalam film industry) ಪ್ರತಿಭಾನ್ವಿತ ನಟ ಶರತ್ ಚಂದ್ರನ್ ಕೇವಲ 37ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

4.Har Ghar Tiranga: ಮನೆ ಮನೆಯಲ್ಲೂ ಹಾರಾಡಲಿದೆ ತಿರಂಗಾ, ಬಾಗಲಕೋಟೆಯಲ್ಲಿ ಭರ್ಜರಿ ಸಿದ್ಧತೆ

ಭಾರತದ 75 ನೇಯ ಸ್ವಾತಂತ್ರ್ಯ ದಿನೋತ್ಸವದ (75th Independence Day of India) ಅಂಗವಾಗಿ ಆಗಸ್ಟ್ 13 ರಿಂದ 15ರವರೆಗೆ ಉದ್ದೇಶಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ (Azadi Ka Amrit Mahotsav) ಬಾಗಲಕೋಟೆ (Bagalkot) ಜಿಲ್ಲೆ ಸಜ್ಜಾಗುತ್ತಿದೆ. ಹರ್ ಘರ್ ತಿರಂಗಾ (Har Ghar Tiranga) ಅಭಿಯಾನದಡಿ (Campaign) ಮನೆ ಮನೆಗೆ ರಾಷ್ಟ್ರೀಯ ಧ್ವಜ (National Flag) ಕಾರ್ಯಕ್ರಮಕ್ಕಾಗಿ ಜಿಲ್ಲಾ ಪಂಚಾಯತ (Zilla Panchayat) ಕಾರ್ಯೋನ್ಮುಖವಾಗಿದೆ ಅಂತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ZP CEO) ಟಿ. ಭೂಬಾಲನ್ ತಿಳಿಸಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿಗೆ 450 ರಾಷ್ಟ್ರ ಧ್ವಜಗಳನ್ನು ಖರೀದಿಸಿ ನೀಡಲು ಯೋಜನೆ ರೂಪಿಸಲಾಗಿದೆ.

5.Vikrant Rona Day 2 Collection: ಎರಡನೇ ದಿನ ಹೇಗಿದೆ ವಿಕ್ರಾಂತ್ ರೋಣ ಕಲೆಕ್ಷನ್? ದಾಖಲೆ ಮುರಿಯುತ್ತಾ ಕಿಚ್ಚನ ಸಿನಿಮಾ?

ಸ್ಯಾಂಡಲ್​ವುಡ್​ನ (Sandalwood) ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ (Pan Indian Film) ವಿಕ್ರಾಂತ್ ರೋಣ (Vikrant Rona) ಬಾಕ್ಸ್​ ಆಫೀಸ್​ನಲ್ಲಿ (Box Office) ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮೊದಲ ದಿನವೇ ಕಲೆಕ್ಷನ್ (Collection) ವಿಚಾರದಲ್ಲಿ ಸಹ ದಾಖಲೆಗಳನ್ನು ಮುರಿದಿದೆ. ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದಿರುವ ಈ ಸಿನಿಮಾ ಎರಡನೇ ದಿನ ಸಹ ಮೋಡಿ ಮಾಡಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಕಿಚ್ಚನ ಅಬ್ಬರ ಎರಡನೆ ದಿನ ಹೇಗಿತ್ತು? ಈ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು ಇಲ್ಲಿದೆ ಮಾಹಿತಿ.
Published by:Mahmadrafik K
First published: