Morning Digest: ಮಳೆ ಕೊರತೆ, ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಶಿಂಧೆ ಸರ್ಕಾರಕ್ಕೆ ಪರೀಕ್ಷೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
1.Government School: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ

ಗ್ರಾಮೀಣ ಭಾಗದ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾದ್ರೆ, ಅವರು ಸಾರಿಗೆ ಅಥವಾ ಖಾಸಗಿ ವಾಹನ ಬಳಸಬೇಕು. ಆದರೆ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿರುವ ಊರುಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸುತ್ತವೆ. ಇದರಿಂದ ಬಸ್ ಅನುಕೂಲಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗ ಸೇರಿಸಲು ಮುಂದಾಗುತ್ತಿದ್ರು. ಈ ಹಿನ್ನೆಲೆ ಸರ್ಕಾರಿ ಶಾಲೆಯ ಮಕ್ಕಳಿಗೂ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಇದೀಗ ರಾಜ್ಯ ಸರ್ಕಾರ ಶಾಲಾ ವಾಹನ ಖರೀದಿಗೆ ಅನುಮತಿ ನೀಡಿದೆ. ಸರ್ಕಾರಿ ಶಾಲೆಗಳ ಶಾಲಾ ಮಕ್ಕಳನ್ನು ದೂರದ ಊರುಗಳಿಂದ ಕರೆದುಕೊಂಡು ಬರುವುದಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅವರಿಂದ ಆದೇಶ ಹೊರ ಬಂದಿದೆ.

2.Monsoon Rains: ದೇಶದಲ್ಲಿ ಶೇ 8 ರಷ್ಟು ಮಳೆ ಕೊರತೆ; 18 ರಾಜ್ಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ವರುಣ

ಮೇನಲ್ಲಿ ಮಾನ್ಸೂನ ಮಾರುತುಗಳ ಕೇರಳದ ಕಡಲ ತೀರವನ್ನು ತಲುಪಿದ್ದವು. ಆದರೆ ಮಳೆಯ ಪ್ರಮಾಣ ಮಾತ್ರ ದೇಶದಲ್ಲಿ ಕುಸಿದಿರುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಕಳೆದ 2 ವರ್ಷ ಜೂನ್ ತಿಂಗಳಲ್ಲಿ ಮಳೆ ಹೆಚ್ಚಾಗಿತ್ತು ಈ ವರ್ಷ ದೇಶದಲ್ಲಿ ಕಳೆದ ತಿಂಗಳು ಶೇ8 ರಷ್ಟು ಮಳೆ ಇಳಿಮುಖವಾಗಿದೆ. ಈ ವರ್ಷದ ಜೂನ್‌ನಲ್ಲಿ ದೇಶದಲ್ಲಿ ಸರಾಸರಿ 15.23 ಸೆಂ.ಮೀ. ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತಲೂ ಕಡಿಮೆಯಾಗಿದೆ.

3.Eknath Shinde: ಜುಲೈ 4ರಂದು ಶಿಂಧೆ ಸರ್ಕಾರಕ್ಕೆ ಮಹಾ ಪರೀಕ್ಷೆ! 12ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಜುಲೈ 4 ಅಂದರೆ ಇದೇ ಬರುವ ಸೋಮವಾರದಂದು ಏಕನಾಥ್ ಶಿಂಧೆ ತಮ್ಮ ಸರ್ಕಾರದ ಬಹುಮತ ಸಾಬೀತು (Majority Prove) ಮಾಡಬೇಕಿದೆ. ಶಿವಸೇನೆ (Shiv Sena), ಎನ್‌ಸಿಪಿ (NCP) ಹಾಗೂ ಕಾಂಗ್ರೆಸ್ (Congress) ಮೈತ್ರಿ ಸರ್ಕಾರವನ್ನು (Alliance Government) ಬೀಳಿಸಿದ್ದ ಶಿವಸೇನೆ ಬಂಡಾಯ ಶಾಸಕರು (Rebel MLA’s) ಬಿಜೆಪಿ (BJP) ಜೊತೆ ಸೇರಿ ಮತ್ತೊಂದು ಹೊಸ ಮೈತ್ರಿ ಸರ್ಕಾರ ರಚಿಸಿದ್ದರು. ಶಿವಸೇನೆಯ ರೆಬೆಲ್ ಶಾಸಕರ ಬಣದ ನಾಯಕ ಏಕನಾಥ್ ಶಿಂಧೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಉಪ ಮುಖ್ಯಮಂತ್ರಿಯಾಗಿ (DCM) ಜೂನ್ 30ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಏಕನಾಥ್ ಶಿಂಧೆ ಬಹುಮತ ಸಾಬೀತುಪಡಿಸಬೇಕಿದ್ದು, ಇಂದು ಮತ್ತು ನಾಳೆ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ (Assembly session) ನಿಗದಿಯಾಗಿತ್ತು. ಆದರೆ ಇಂದು ನೂತನ ಸ್ಪೀಕರ್ (Speaker) ಹುದ್ದೆಗೆ ನಾಮಪತ್ರ (Nomination) ಸಲ್ಲಿಕೆಯಾಗಲಿದ್ದು, ಸ್ಪೀಕರ್ ಆಯ್ಕೆಯ ಬಳಿಕ ನಾಳೆ, ನಾಡಿದ್ದು ವಿಶೇಷ ಅಧಿವೇಶನ ನಡೆಯಲಿದೆ.

4.Vikrant Rona: ವಿಕ್ರಾಂತ್ ರೋಣ ಸಿನಿಮಾದ ಹೊಸ ಸಾಂಗ್ ಇಂದು ಬಿಡುಗಡೆ, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್ (Poster), ಟೀಸರ್(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಜನರಿಗೆ ಫುಲ್ ಮಾಡಿದೆ. ಎಲ್ಲೆಡೆ ಇದೇ ಹಾಡು ಕೇಳಿ ಬರುತ್ತಿದೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದ್ದು, ಇಂದು ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್​ ಆಗಲಿದೆ.

5.Hubballi: ಹೆತ್ತ ಮಕ್ಕಳಿಂದಲೇ ಅಪ್ಪನ ಕೊಲೆ! ಆಸ್ತಿಗಾಗಿ ಮರ್ಡರ್ ಸ್ಕೆಚ್ ಹಾಕಿದ ಮಗಳು

ಕೆ.ಎಸ್.ಆರ್.ಪಿ. ಡಿ ಗ್ರೂಪ್ ನೌಕರನ ಅನುಮಾನಾಸ್ಪದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮಕ್ಕಳಿಂದಲೇ ತಂದೆಯ ಕೊಲೆ (Murder) ನಡೆದಿರೋ ಅಂಶ ಬಹಿರಂಗಗೊಂಡಿದೆ. ಇಸ್ಮಾಯಿಲ್ ಸಾಬ್ ಕಿಲ್ಲೇದಾರ್ ಕೊಲೆಯಾದ ಕೆ.ಎಸ್.ಆರ್.ಪಿ. ನೌಕರನಾಗಿದ್ದಾನೆ. ಕೆಸಿಸಿ ಬ್ಯಾಂಕ್ ಕಾಲೋನಿಯ ನಿವಾಸಿಯಾಗಿದ್ದ ಇಸ್ಮಾಯಿಲ್, ಜೂನ್ 28 ರಂದು ಶವವಾಗಿ (Dead body) ಪತ್ತೆಯಾಗಿದ್ದ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಂದ (Police) ಸತ್ಯ ಬಯಲಾಗಿದೆ. ಹೆತ್ತ ಮಕ್ಕಳೇ ಪಾಪಿ ಕೃತ್ಯ ಎಸಗಿರೋದು ಬಹಿರಂಗಗೊಂಡಿದೆ.
Published by:Mahmadrafik K
First published: