1.KM Shivalinge Gowda: ನನಗೆ ರಾಜಕೀಯವಾಗಿ ಶಕ್ತಿ ತುಂಬಿ ಅಂತೇಳಿ ದಳಪತಿಗಳಿಗೆ ಶಾಕ್ ಕೊಟ್ರು ಶಾಸಕ ಶಿವಲಿಂಗೇಗೌಡರು
ಅರಸೀಕೆರೆ ಜೆಡಿಎಸ್ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (JDS KM Shivalingegowda) ಪಕ್ಷ ತೊರೆಯುವ ವದಂತಿ ರಾಜ್ಯ ರಾಜಕಾರಣದಲ್ಲಿ (Karnataka politics) ಸಂಚಲನ ಸೃಷ್ಟಿಸಿದೆ. ಭಾನುವಾರ ಜೆಡಿಎಸ್ ವಾಟ್ಸಪ್ ಗ್ರೂಪ್ (JDS Whatsapp Group) ಗಳಿಂದ ಹೊರ ಬಂದ ಹಿನ್ನೆಲೆ ಪಕ್ಷ ತೊರೆಯುವ ಚರ್ಚೆಗಳು ಮುನ್ನಲೆಗೆ ಬಂದಿದ್ದವು. ಇಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗೇಶಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಶಿವಲಿಂಗೇಗೌಡರು, ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವು ನೀಡಿದರು. ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ (NR Santosh) ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
2.Rape Case: ದಲಿತ ಯುವತಿ ಮೇಲೆ ಅತ್ಯಾಚಾರ, ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ರೇಪ್ ಕೇಸ್
ಜೂನ್ 25 ರಂದು ಮಾಧವನ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿ ಪಿಪಿ ಮಾಧವನ್ (71) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂನ್ 25 ರಂದು ಮಾಧವನ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿ ಪಿಪಿ ಮಾಧವನ್ (71) ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಪಿಪಿ ಮಾಧವನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
3.Chitradurga: ಅಪ್ರಾಪ್ತೆ ಪತ್ನಿಯ ಮೇಲೆ ಪತಿ ಸ್ನೇಹಿತರಿಂದಲೇ ಗ್ಯಾಂಗ್ರೇಪ್; ಮೂವರ ಬಂಧನ, ಓರ್ವ ಎಸ್ಕೇಪ್
ಅಪ್ರಾಪ್ತ ಬಾಲಕಿಯನ್ನ (Minor Girl) ಹೆದರಿಸಿ ಮದುವೆಯಾಗಿದ್ದ ಪತಿಯೇ (Husband) ಆತನ ಸ್ನೇಹಿತರ ಜೊತೆಗೂಡಿ ಗ್ಯಾಂಗ್ರೇಪ್ (Gang rape) ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ (Chitradurga) ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಬಾಲಕಿ ತಾಯಿ ದೂರು ನೀಡಿದ್ದು, FIR ದಾಖಲಾಗಿದೆ. ಕೆಲ ದಿನಗಳ ಹಿಂದೆ ಪತಿಯ ಸಹಾಯದಿಂದಲೇ ಆತನ ನಾಲ್ವರು ಗೆಳೆಯರು ಸಂತ್ರಸ್ತೆಯನ್ನು ನಿರ್ಮಾಣ ಹಂತದ ಕಟ್ಟಡದೊಳಗೆ ಕರೆದೊಯ್ದು ಸಾಮೂಹಿಕ ಆತ್ಯಾಚಾರಗೈದಿರುವ ಆರೋಪಗಳು ಕೇಳಿ ಬಂದಿವೆ. ಅತ್ಯಾಚಾರದ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ರೆ ಕೊಲೆ ಮಾಡುವ ಬೆದರಿಕೆ ಸಹ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
4.Andhra Pradesh: ಕಾಣೆಯಾಗಿದ್ದ ನೂರಾರು ಬೈಕ್ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್
ಕದ್ದ ಬೈಕ್ಗಳನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಒಂದೋ ಎರಡೋ ಅಲ್ಲ ನೂರಾರು ಕದ್ದ ಬೈಕ್ಗಳನ್ನು ಸೀಝ್ ಮಾಡಲಾಗಿದೆ. ಮಹಾನಗರಗಳಲ್ಲಿ ಬೈಕ್ ಕಳತನದ ಹಾವಳಿ ಹೆಚ್ಚುತ್ತಲೇ ಇದೆ. ಬಹಳಷ್ಟು ಜನರ ಕನಸಿನ ವಾಹನವನ್ನು ಕಳ್ಳರು ದಿಢೀರ್ ಕದ್ದುಬಿಡುತ್ತಾರೆ. ಇದನ್ನು ಮತ್ತೆ ಪಡೆಯುವುದು ಬಿಡಿ ಅದನ್ನು ಪತ್ತೆ ಮಾಡುವುದು ಸಹ ಅದರ ಮಾಲೀಕನಿಗೆ ಸಾಧ್ಯವಿಲ್ಲ. ಅಷ್ಟು ದೊಡ್ಡ ಬೈಕ್ ಕಳ್ಳರ ಜಾಲವಿದೆ. ಆಂಧ್ರಪ್ರದೇಶ ಪೊಲೀಸರು ಕಾಕಿನಾಡದಲ್ಲಿ ₹ 23 ಲಕ್ಷ ಮೌಲ್ಯದ 107 ಕದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,755 ರೂಪಾಯಿ ಇದ್ದದ್ದು, ಇಂದು 4, 765 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (Global Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,700 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ 47,700ರೂ. , 47,650 ರೂ. , 47,650 ರೂ. ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,650 ರೂ. ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ