Morning Digest: ಮಧ್ಯರಾತ್ರಿ ಸಿಎಂ ಸುದ್ದಿಗೋಷ್ಠಿ, ಚಿನ್ನದ ದರ ಇಳಿಕೆ, ವಿಕ್ರಾಂತ್ ರೋಣ ರಿಲೀಸ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Praveen Murder: ಮಧ್ಯರಾತ್ರಿ 12.15ಕ್ಕೆ ಸಿಎಂ ಸುದ್ದಿಗೋಷ್ಠಿ; PFI ಬ್ಯಾನ್ ಆಗುತ್ತಾ?

ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಬುಧವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ 12.15ಕ್ಕೆ ಸುದ್ದಿಗೋಷ್ಠಿ ಕರೆಯುವ ಸಂದೇಶ ರವಾನಿಸಿದ್ದರು. ಅಂತೆಯೆ ರಾತ್ರಿ ಸುಮಾರು 12 ಗಂಟೆಯ ನಂತರ ತಮ್ಮ ಆರ್.ಟಿ.ನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದದರು. ಆರಂಭದಲ್ಲಿಯೇ ತಡರಾತ್ರಿ ಸುದ್ದಿಗೋಷ್ಠಿಗೆ ಕರೆದಿರೋದಕ್ಕೆ ಕ್ಷಮೆಯಾಚಿಸಿದರು. ನನಗೆ ನಿನ್ನೆ ರಾತ್ರಿಯಿಂದ ಪ್ರವೀಣ್ ನೆಟ್ಟಾರ್ (Praveen Nettar) ಹತ್ಯೆ ಸುದ್ದಿ ಬಂದಮೇಲೆ ಬಹಳ ನೋವು ಕಳವಳವಾಗಿದೆ. ಪೊಲೀಸ್ (Police) ಅಧಿಕಾರಿಗಳಿಗೆ ತನಿಖೆ ನಡೆಸುವಂಇತೆ ಸೂಚನೆ ನೀಡಿದ್ದೇನೆ. ಅತ್ಯಂತ ಅಮಾಯಕ ಯುವಕನನ್ನ ಸಂಚಿನಿಂದ ಕೊಲೆ ಆಗಿರೋದು ಅಮಾನವೀಯ ಖಂಡನೀಯ ಎಂದು ಪ್ರವೀಣ್ ನೆಟ್ಟಾರು ಹತ್ಯೆಗೆ ಆಕ್ರೋಶ ಹೊರಹಾಕಿದರು.

2.Belagavi Politics: ಕಾಂಗ್ರೆಸ್ ಪ್ರತಿಷ್ಠೆಯ ಕಿತ್ತಾಟ; ಚುನಾವಣೆಗೆ 9 ತಿಂಗಳು ಮೊದಲ ಬಣ ರಾಜಕೀಯ

ರಾಜ್ಯದಲ್ಲಿ ಇನ್ನೂ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ (Assembly Election) 9 ತಿಂಗಳು ಬಾಕಿ ಉಳಿದಿದೆ. ಈಗಾಗಲೇ ಕಾಂಗ್ರೆಸ್ (Congress) ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಅನೇಕ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivakumar) ನಡುವೆ ಟಾಕ್ ವಾರ್ ನಡೆದಿತ್ತು. ಹುಟ್ಟುಹಬ್ಬ ಆಚರಣೆ ಮೂಲಕ ಪಕ್ಷದಲ್ಲಿ ತಮ್ಮ ಹಿಡಿತ ಸಾಬೀತು ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ (Karnataka Congress) ಗೊಂದಲ ನಡುವೆ ಕಿತ್ತೂರು (kittur) ಕಾಂಗ್ರೆಸ್ ನಲ್ಲಿಯೂ ಎಲ್ಲವು ಸರಿ ಇಲ್ಲ ಎಂಬುದು ಬಹಿರಂಗವಾಗಿದೆ. ಕಿತ್ತಾಟಕ್ಕೆ ಮುಲಾಮು ಹಚ್ಚುವ ಜವಾಬ್ದಾರಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ (Former Minister Vinay Kulakarni) ನೀಡಲಾಗಿದ್ದು, ಇನ್ನೂ ಯಾವುದೇ ಸಂಧಾನ ಸಭೆ ನಡೆದಿಲ್ಲ.

3.Dulquer Salmaan Birthday: ಮಾಲಿವುಡ್​ನ ರೊಮ್ಯಾಂಟಿಕ್ ಹೀರೋಗೆ ಬರ್ತ್​ ಡೇ ಸಂಭ್ರಮ

ದುಲ್ಕರ್ ಮಲಯಾಳಂನಲ್ಲಿ ಮಾತ್ರವಲ್ಲ ಕಾಲಿವುಡ್, ಬಾಲಿವುಡ್ ಅಂಗಳದಲ್ಲಿ ಅಭಿನಯ ಮಾಡಿದ್ದಾರೆ. ಅಪ್ಪ ಮಮ್ಮುಟ್ಟಿಯಂತೆ ಸಿನಿ ಉದ್ಯಮದಲ್ಲಿ ಭಾರೀ ವೇಗವಾಗಿ ಬೆಳೆಯುತ್ತಿದ್ದಾರೆ. ಅವರ ಅಭಿನಯದ ಕೆಲ ಟಾಪ್ ಸಿನಿಮಾಗಳ ಲಿಸ್ಟ್​ ಇಲ್ಲಿದೆ. ಚಾರ್ಲಿ: ಈ ಸಿನಿಮಾ ಬಗ್ಗೆ ನಿಜಕ್ಕೂ ಯಾರಿಗೂ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಈ ಅದ್ಭುತ ಸಿನಿಮಾವನ್ನು ಸಿನಿ ಪ್ರಿಯರು ಈಗಲೂ ಇಷ್ಟಪಡುತ್ತಾರೆ. ಪದೇ ಪದೇ ನೋಡಬೇಕು ಎನಿಸುವ ಸಿನಿಮಾ ಇದು. ಬೆಂಗಳೂರ್ ಡೇಸ್: ಈ ಸಿನಿಮಾದಲ್ಲಿ ಅರ್ಜುನ್ ಪಾತ್ರಕ್ಕೆ ದುಲ್ಕರ್ ನ್ಯಾಯ ಸಲ್ಲಿಸಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಾಲೆಯಿಂದ ಹೊರಗುಳಿದ ಮತ್ತು ವಿಚ್ಛೇದಿತ ಪೋಷಕರ ಮಗನಾಗಿ ಮಾಡಿದ ಅವರ ಪಾತ್ರವೂ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ.

4.Gold Silver Price: ಗಮನಿಸಿ, ಇದು ಚಿನ್ನದಂಥಾ ಸುದ್ದಿ; ಎರಡನೇ ದಿನವೂ ಇಳಿಕೆಯಾದ ದರ

ನಿನ್ನೆ ಒಂದು ಒಂದು ಗ್ರಾಂ ಚಿನ್ನದ ಬೆಲೆ 4,658 ರೂಪಾಯಿಗೆ ಇಳಿಕೆ ಆಗಿತ್ತು. ಇಂದು ಸಹ ಇಳಿಕೆಯಾಗಿರುವ ಬಂಗಾರದ ಬೆಲೆ ಒಂದು ಗ್ರಾಂಗೆ 4,645 ರೂಪಾಯಿ ಆಗಿದೆ. ಭಾರತವು ಚಿನ್ನದ ಮೇಲಿನ ಆಮದು ಸುಂಕ (Import Tax) ಹೆಚ್ಚಿಸುತ್ತಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,500 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,350 ರೂ. 46,450, ರೂ. 46,450 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,450 ರೂ. ಆಗಿದೆ. ಬೆಂಗಳೂರಿನಲ್ಲೂ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

5.Vikrant Rona Release: ರಿಲೀಸ್​ ಆಯ್ತು ವಿಕ್ರಾಂತ್ ರೋಣ, ಫ್ಯಾಂಟಮ್​ ಲೋಕದಲ್ಲಿ ಕಿಚ್ಚನ ಮೋಡಿ

ಸ್ಯಾಂಡಲ್​ವುಡ್​ನ (Sandalwood) ಬಹು ನಿರೀಕ್ಷಿತ ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ತೆರೆಗೆ ಬಂದಿದ್ದು, ಎಲ್ಲೆಡೆ ಅಭಿಮಾನಿಗಳು (Fans) ಸಂಭ್ರಮ ಆಚರಿಸಿದ್ದಾರೆ. ಏಳು ಗಂಟೆಗೆ ಊರ್ವಶಿ ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗಿದ್ದು, ಥಿಯೇಟರ್ ಸುತ್ತ ಸುದೀಪ್ ಕಟೌಟ್​ಗಳು ರಾರಾಜಿಸುತ್ತಿವೆ. ಥಿಯೇಟರ್ ಬಳಿ ಸುದೀಪ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ವಿಆರ್ ಫ್ಲಾಗ್ ಹಿಡಿದು ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾವನ್ನು ಸ್ವಾಗತಿಸಿದ್ದಾರೆ.
Published by:Mahmadrafik K
First published: