Morning Digest: ಮುರುಘಾ ಶ್ರೀಗಳ ಕೇಸ್ ಅಪ್​ಡೇಟ್, ಇಳಿಕೆಯಾಯ್ತು ಚಿನ್ನದ ಬೆಲೆ, ಬೆಂಗಳೂರು ಮಳೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Murugha Shri: ಮೈಸೂರಿನಿಂದ ಚಿತ್ರದುರ್ಗಕ್ಕೆ ಮಕ್ಕಳು; ಇಂದು ಶರಣರನ್ನ ಪೊಲೀಸರು ವಶಕ್ಕೆ ಪಡೆಯೋ ಸಾಧ್ಯತೆ

ಮುರುಘಾ ಶ್ರೀಗಳ (Murugha Seer Shivamurthy Murugha Sharanaru) ವಿರುದ್ದ ಅತ್ಯಾಚಾರ, ಫೋಕ್ಸೋ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರನ್ನು (Victims) ಮೈಸೂರಿನಿಂದ (Mysuru) ಚಿತ್ರದುರ್ಗಕ್ಕೆ (Chitradurga) ಕರೆದುಕೊಂಡು ಬರಲಾಗಿದೆ. ಬೆಳಗಿನ ಜಾವ ಸುಮಾರು 3.45ಕ್ಕೆ CWC ಅವರ ವಶಕ್ಕೆ ಮಕ್ಕಳನ್ನು ನೀಡಲಾಗಿದೆ. ಸದ್ಯ ಬಾಲಕಿಯರಿಬ್ಬರು ಬಾಲ ಮಂದಿರದಲ್ಲಿಯೇ ವಾಸವಾಗಿದ್ದಾರೆ. ತಡರಾತ್ರಿ ಮೈಸೂರಿಂದ ಬಿಗಿ ಭದ್ರತೆಯಲ್ಲಿ ಇಬ್ಬರು ಬಾಲಕಿಯರನ್ನು ಅಧಿಕಾರಿಗಳು ಕರೆತಂದಿದ್ದಾರೆ. ಬಾಲಕಿಯರ ಜೊತೆ ಮೈಸೂರು ಒಡನಾಡಿ ಸಂಸ್ಥೆಯ (Odanadi Organization) ಇಬ್ಬರೂ ಪ್ರತಿನಿಧಿಗಳಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 10 ಗಂಟೆ ಬಳಿಕ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರ ಮುಂದೆ ಬಾಲಕಿಯರನ್ನು ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

2.Karnataka Weather Report: ಬೆಂಗಳೂರಿಗೆ ಯೆಲ್ಲೋ ಅಲರ್ಟ್, 22 ವರ್ಷದ ಬಳಿಕ ಕೋಡಿ ಬಿದ್ದ ಕೆರೆ

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ (Bengaluru Rains) ಇಂದಿನಿಂದ ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ (Yellow Alert)​ ಪ್ರಕಟಿಸಲಾಗಿದೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ವ್ಯಾಪಾರವಿಲ್ಲದೇ ರಸ್ತೆ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಕೆಲಸಕ್ಕೆ ತೆರಳುವ ಮತ್ತು ಹಿಂದಿರುಗುವ ವೇಳೆ ಟ್ರಾಫಿಕ್​ನಲ್ಲಿ (Bengaluru Traffic) ಸಿಲುಕುತ್ತಿದ್ದಾರೆ. ಇನ್ನುಳಿದಂತೆ ಬೀದರ್, ರಾಯಚೂರು, ಗದಗ, ಬೆಳಗಾವಿಯಲ್ಲಿಂದು ಮಳೆಯಾಗಲಿದೆ. ದಕ್ಷಿಣ ಒಳನಾಡು, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಇಂದು ಬೆಂಗಳೂರಿನಲ್ಲಿ (Bengalurun Weather) ಗರಿಷ್ಠ 27 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ದಾಖಲಾಗಲಿದೆ.

3.Gold Rate Today: ಅಬ್ಬಬ್ಬಾ ಲಾಟ್ರಿ! ಒಂದೇ ಸಲ ಇಷ್ಟು ಕಡಿಮೆಯಾದ ಚಿನ್ನ, ಬೆಳ್ಳಿ ಬೆಲೆ

ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ.47, 735 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,735 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,165 ಆಗಿದೆ. ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37, 880 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41, 320 ಆಗಿದೆ.

4.Chandan Kumar: ನಟ ಚಂದನ್ ದೊನ್ನೆ ಬಿರಿಯಾನಿ ಹೋಟೆಲ್​​ನಲ್ಲಿ ಕಳ್ಳತನ

Chandan Kumar: ಇತ್ತೀಚೆಗಷ್ಟೇ ವಿವಾದದಲ್ಲಿ ಸಿಲುಕಿಕೊಂಡಿದ್ದ ನಟ ಚಂದನ್ ಕುಮಾರ್ ಅವರ ಹೋಟೆಲ್​​ನಲ್ಲಿ ಕಳ್ಳತನ ನಡೆದಿದೆ. ನಟನ ದೊನ್ನೆ ಬಿರಿಯಾನಿ ಅರಮನೆ ಹೋಟೆಲ್​ನಲ್ಲಿ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಿರುತೆರೆ ಮತ್ತು ಸ್ಯಾಂಡಲ್‌ವುಡ್‌ ನಟ ಚಂದನ್ ಕುಮಾರ್ ಅವರು ಇತ್ತೀಚೆಗಷ್ಟೇ ವಿವಾದಕ್ಕೆ ಗುರಿಯಾಗಿದ್ದರು. ಆ ಘಟನೆ ನಂತರ ಕನ್ನಡ ಕಿರುತೆರೆ ನಟ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟ ಚಂದನ್ ಅವರ ಬಿರಿಯಾನಿ ಹೋಟೆಲ್‌ನಲ್ಲಿ ಕಳ್ಳತನವಾಗಿದೆ. ಚಂದನ್ ಕುಮಾರ್ ನಟನೆಯ ಜೊತೆ ಹೋಟೆಲ್ ಉದ್ಯಮದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹೋಟೆಲ್​ನಲ್ಲಿ ಸ್ಯಾಂಡಲ್​ವುಡ್ ನಟರಿಂದ ತೊಡಗಿ ರಾಜಕೀಯ ಮುಖಂಡರೂ ಬಿರಿಯಾನಿ ಸವಿದಿದ್ದಾರೆ.

5.IND vs PAK Asia Cup 2022: ಇಂದು ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್​, ಹೇಗಿದೆ ಉಭಯ ತಂಡಗಳ ಬಲಾಬಲ

ಏಷ್ಯಾ ಕಪ್ 2022 (Asia Cup 2022) ಟೂರ್ನಿಗೆ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಕೊರೋನಾ ಹಿನ್ನಲೆ 2 ವರ್ಷಗಳ ನಂತರ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ. ಅದರಲ್ಲಿಯೂ ಈ ಬಾರಿ ನಿರೀಕ್ಷೆಯಂತೆ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿ ಆಗುತ್ತಿವೆ. ಇಂದು ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂಡೋ ಮತ್ತು ಪಾಕ್​ ಕದನ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಲೋಕವೇ ಕಾತುರದಿಂದ ಕಾದು ಕುಳಿತಿದೆ ಎಂದರೂ ತಪ್ಪಾಗಲಾರದು.
Published by:Mahmadrafik K
First published: