Morning Digest: ಸೋನಿಯಾ ಗಾಂಧಿ ವಿಚಾರಣೆ, ಪ್ರವೀಣ್ ಹತ್ಯೆ-ಕರಾವಳಿಯಲ್ಲಿ ಹೈ ಅಲರ್ಟ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
1.National Herald Case: ಇಂದು ಮತ್ತೆ ಸೋನಿಯಾ ಗಾಂಧಿ ವಿಚಾರಣೆ, ಇಂದಿಗೆ ಮುಗಿಯುತ್ತಾ?

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (National Herald Money Laundering Case) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress President Sonia Gandhi) ಅವರನ್ನು ನಿನ್ನೆ (ಜುಲೈ 26ರಂದು) 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮತ್ತೆ ಇಂದು ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಜುಲೈ 21ರಂದು ಕೂಡ 3 ಗಂಟೆಗಳ ಕಾಲ‌ ವಿಚಾರಣೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ಸೋನಿಯಾ ಗಾಂಧಿ ಅವರು ಇಡಿ ಕಚೇರಿಗೆ ತೆರಳಲಿದ್ದು ವಿಚಾರಣೆ ಎದುರಿಸಲಿದ್ದಾರೆ. ಆದರೆ ಇಂದಾದರೂ ಅವರ ವಿಚಾರಣೆ ಕೊನೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

2.Praveen Murder: ಪ್ರವೀಣ್ ಮರಣೋತ್ತರ ಪರೀಕ್ಷೆ ಮುಕ್ತಾಯ, ಅಂತಿಮಯಾತ್ರೆಗೆ ಸಿದ್ಧತೆ; ಕರಾವಳಿಯಲ್ಲಿ ಹೈಅಲರ್ಟ್

ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ (Murder) ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಬಿಜೆಪಿ ಕಾರ್ಯಕರ್ತ (BJP Worker) ಪ್ರವೀಣ್ ನೆಟ್ಟಾರು (Praveen Nettaru) ಮೃತದೇಹದ (Dead body) ಮರಣೋತ್ತರ (Postpartum) ಪರೀಕ್ಷೆ ಮುಕ್ತಾಯವಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಮರಣೋತ್ತರ ಪರೀಕ್ಷೆ ನಡೆದಿದ್ದು, ಸದ್ಯ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಪ್ರವೀಣ್ ಮೃತದೇಹ ಇಡಲಾಗಿದೆ. ಮೆರವಣಿಗೆ ಮೂಲಕ ಮೃತದೇಹ ಸಾಗಿಸಲು ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.

3.Suicide: 6 ವರ್ಷ ಹಿಂದೆ ತಂದೆ ಸೂಸೈಡ್, ಈಗ ತಾಯಿ ಮಗಳು ಆತ್ಮಹತ್ಯೆ! ಪರೀಕ್ಷೆ ಫೇಲ್ ಆಗಿದ್ದಕ್ಕೆ ದುಡುಕಿನ ನಿರ್ಧಾರ

ತಿರುಪ್ಪೂರ್ ದಲ್ಲಿ (Tiruppur) ಮಹಿಳೆಯೊಬ್ಬರು (Women) ತನ್ನ 10 ವರ್ಷದ ಮಗಳೊಂದಿಗೆ (Daughter) ನೇಣು ಹಾಕಿಕೊಂಡು (Hanging) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ತಿರುಪ್ಪೂರ್ ಜಿಲ್ಲೆಯ ಧರ್ಮಪುರಂ (Dharmapuram) ಬಳಿಯ ಅಲಂಗಿಯಂ ಕಾಮರಾಜರ್ ಪಟ್ಟಣದಲ್ಲಿ ಘಟನೆ ನಡೆದಿದೆ. 28 ವರ್ಷದ ಪೂಂಗೋಡಿ ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ 5ನೇ ತರಗತಿಯಲ್ಲಿ (5th Class) ಓದುತ್ತಿದ್ದ ತನ್ನ ಪುಟ್ಟ ಮಗಳೊಂದಿಗೆ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೊದಲು ಪುಟ್ಟ ಮಗಳ ಕೊರಳಿಗೆ ನೇಣು ಬಿಗಿದು, ಅವಳನ್ನು ಕೊಂದಿದ್ದಾಳೆ. ಬಳಿಕ ತಾನೂ ಕೂಡ ಕೊರಳಿಗೆ ಸೀರೆ ಸುತ್ತುಕೊಂಡು, ನೇಣು ಹಾಕಿಕೊಂಡಿದ್ದಾಳೆ ಅಂತ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

4.BJP ಪಕ್ಷಕ್ಕೆ ದೇಣಿಗೆ ಕೊಡುವರಿಗೆ ಶಕ್ತಿ ತುಂಬಿದೆ, ಇಬ್ಬರ ಭೇಟಿ ಒಳ್ಳೆಯದು ಅಲ್ಲವೇ? HD Kumaraswamy

ಒಕ್ಕಲಿಗ (Vokkaliga) ವಿಚಾರವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Congress MLA Zameer Ahmed Khan) ಹೇಳಿಕೆ ವಿಚಾರವಾಗಿ ರಾಮನಗರದಲ್ಲಿ (Ramanagar) ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.‌ ಖಾಸಗಿ ಕಾರ್ಯಕ್ರಮ ಹಿನ್ನೆಲೆ ರಾಮನಗರಕ್ಕೆ ಬಂದಿದ್ದ ಕುಮಾರಸ್ವಾಮಿ ಅದು ಬಿಟ್ಟಾಕಿ ಅವರ ಬಗ್ಗೆ ಚರ್ಚೆ ಬೇಡ, ತಲೆಕೆಡಿಸಿಕೊಳ್ಳಬೇಡಿ ಜನ ತೀರ್ಮಾನ ಮಾಡುತ್ತಾರೆ.‌ ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.

5.ದುಲ್ಕರ್ ಸಲ್ಮಾನ್, ಸಡನ್​ ಆಗಿ ಸ್ಟಾರ್ ನಟ ಈ ನಿರ್ಧಾರ ಮಾಡಿದ್ದೇಕೆ?

ಮಲಯಾಳಂ (Malayalam) ಸಿನಿಮಾ ರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan) ಅಪಾರ ಅಭಿಮಾನಿ (Fans) ಬಳಗವನ್ನು ಹೊಂದಿದ್ದಾರೆ. ಅವರ ಸಿನಿಮಾ (Film) ಎಂದರೆ ಯಾವಾಗಲೂ ವಿಭಿನ್ನತೆಯಿಂದ ಕೂಡಿರುತ್ತದೆ. ಇದುವರೆಗೂ ಅವರು ಮಾಡಿದ ಸಿನಿಮಾಗಳು ಸೂಪರ್ ಹಿಟ್​ ಆಗಿವೆ. ಅವರು ಮಲಯಾಳಂ ಸ್ಟಾರ್​ ನಟನಾಗಿ ಗುರುತಿಸಿಕೊಂಡಿದ್ದರೂ ಸಹ ದಕ್ಷಿಣ ಸಿನಿಮಾ ರಂಗದಲ್ಲಿ ಎಲ್ಲಾ ಭಾಷೆಯ ಪ್ರೇಕ್ಷಕರಿಂದ ಉತ್ತಮ ಹೆಸರುಗಳಿಸಿದ್ದಾರೆ. ಸದ್ಯ ಅವರ ಅಭಿನಯದ ರೊಮ್ಯಾಂಟಿಕ್ ಸಿನಿಮಾ (Romantic Film) ಸೀತಾ ರಾಮಂ (Sita Ramam ) ರಿಲೀಸ್​ಗೆ ಸಿದ್ದವಾಗಿದೆ.
Published by:Mahmadrafik K
First published: