Morning Digest: ರಾಮ ಮಂದಿರದ ಹೊಸ ಫೋಟೋ ನೋಡಿದ್ರಾ?, ಕರ್ನಾಟಕದಲ್ಲಿ ಮಳೆ ಅಬ್ಬರ, ಚಿನ್ನದ ಬೆಲೆ ಇಲ್ಲಿದೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿ

ಈವರೆಗಿನ ಪ್ರಮುಖ ಸುದ್ದಿ

  • Share this:
1.Karnataka Rains: ತಡರಾತ್ರಿ ಮಳೆಗೆ ಜನರು ಹೈರಾಣು, ಯಾದಗಿರಿಯಲ್ಲಿ ಲಾರಿ ಚಾಲಕನ ಹುಚ್ಚಾಟ

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು (Karnataka Rainfall), ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದು ಸಹ ರಾಜ್ಯದ ಬಹುತೇಕ ಭಾಗಗಳಲ್ಲಿ ವರುಣರಾಯ (Rainfall) ಅಬ್ಬರಿಸಲಿದ್ದಾನೆ. ಇನ್ನುಳಿದಂತೆ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಶುರುವಾಗಿದ್ದು, ಟ್ರಾಫಿಕ್ (Bengaluru Traffic) ಉಂಟಾಗುತ್ತಿದೆ. ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಮಂಡ್ಯ, ಹಾಸನ, ಕೊಡಗು, ಶಿವಮೊಗ್ಗ, ವಿಜಯಪುರದಲ್ಲಿ ಮಳೆಯಾಗುತ್ತಿರುವ ವರದಿಗಳು ಬರುತ್ತಿವೆ. ಬೆಂಗಳೂರಿನ ಲಾಲ್​ಬಾಗ್, ಸೌಂತ್ ಎಂಡ್ ಸರ್ಕಲ್, ಜೆ ಸಿ ರಸ್ತೆ, ಜಯನಗರ, ಶಾಂತಿನಗರ ಸುತ್ತಮುತ್ತ ವರುಣ ಅಬ್ಬರಿಸಿದ್ದಾನೆ. ಒಂದು ಗಂಟೆ ಸುರಿದ ಮಳೆಯಿಂದ ಕೆಲವು ಕಡೆ ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಅಡಿಗಳಷ್ಟು ನೀರು ಶೇಖರಣೆಗೊಂಡಿದೆ.

2.Anekal: ತಾಳ ತಪ್ಪಿದ ಸಂಸಾರ; ಪ್ರೀತಿಸಿ ಮದುವೆಯಾದ್ರೂ ಕಲಹ, ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಪತಿ

ಇಬ್ಬರು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು (Love Marriage). ಇವರ ಸಂಸಾರಕ್ಕೆ ಇಬ್ಬರು ಮುದ್ದಾದ ಗಂಡು ಮಕ್ಕಳು (Children) ಸಹ ಇದ್ರು. ಮದುವೆಯಾದ ನಾಲ್ಕೈದು ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಐದಾರು ವರ್ಷಗಳಿಂದ ಸಂಸಾರದ ತಾಳ ತಪ್ಪಿತ್ತು. ಪದೇ ಪದೇ ಮನೆಯಲ್ಲಿ ಪತಿ ಪತ್ನಿ (Husband Wife Clash) ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತ್ನಿ ಠಾಣೆಗೆ (Police Station) ದೂರು ನೀಡಲು ಹೋಗುತ್ತಿದ್ದಂತೆ ಹಿಂದೆಯೇ ಬಂದ ಪತಿ ಠಾಣೆಯ ಮುಂಭಾಗವೇ ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು (Suicide Attempt), ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.

3.Ayodhya: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ನಿರ್ಮಾಣದ ಲೇಟೆಸ್ಟ್​ ಫೊಟೋಸ್​ ವೈರಲ್!

Latest Pictures of Construction of Sanctum Sanctorum of Lord Ramlala temple:ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ದೇವಾಲಯದ ನಿರ್ಮಾಣದ ಜೊತೆಗೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಹ ಕಾಲಕಾಲಕ್ಕೆ ರಾಮಲಲ್ಲಾ ದೇವಾಲಯದ ನಿರ್ಮಾಣದ ಪ್ರಗತಿ ಕಾರ್ಯ ಎಲ್ಲಿಗೆ ತಲುಪಿದೆ ಎಂಬ ಮಾಹಿತಿ ಹಂಚಿಕೊಳ್ಳುತ್ತಿದೆ. ರಾಮಲಲ್ಲಾ ಮಂದಿರ ನಿರ್ಮಾಣದ ಪ್ರಗತಿಯ ಬಗ್ಗೆ ರಾಮ ಭಕ್ತರು ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ದೇವಾಲಯದ ನಿರ್ಮಾಣದ ಲೇಟೆಸ್ಟ್​ ಫೋಟೋ ಮತ್ತು ವೀಡಿಯೊಗಳನ್ನು ಟ್ರಸ್ಟ್ ಅಪ್‌ಲೋಡ್ ಮಾಡಿದೆ. ಭಗವಾನ್ ರಾಮಲಲ್ಲಾ ದೇವಾಲಯದ ಗರ್ಭಗುಡಿಯ ನಿರ್ಮಾಣದ ಇತ್ತೀಚಿನ ಚಿತ್ರಗಳು ರೋಮಾಂಚನಗೊಳಿಸುತ್ತವೆ. ಭಗವಾನ್ ರಾಮಲಲ್ಲಾ ದೇವಾಲಯದ ಗರ್ಭಗುಡಿಯ ನಿರ್ಮಾಣದ ಇತ್ತೀಚಿನ ಚಿತ್ರಗಳು ವೈರಲ್ ಆಗಿವೆ. ಭಗವಾನ್ ರಾಮಲಾಲ ದೇವಸ್ಥಾನದ ಪರಿಕ್ರಮದ ನಿರ್ಮಾಣ ಪಶ್ಚಿಮ ಭಾಗದಲ್ಲಿ ನಡೆಯುತ್ತಿದ್ದು, ಶ್ರೀರಾಮನ ದೇವಾಲಯದ ಗರ್ಭಗುಡಿಯಲ್ಲಿ 100 ಕ್ಕೂ ಅಧಿಕ ಕಲ್ಲುಗಳನ್ನು ಈವರೆಗೆ ಬಳಸಲಾಗಿದೆ.

4.Mouni Roy Saree Looks: ಬ್ಲೌಸ್ ಇಲ್ಲದೆ ಸೀರೆ ಉಟ್ಟ ಮೌನಿ ರಾಯ್! ಕೆಜಿಎಫ್ ಸುಂದರಿಯ ಫೋಟೋಸ್ ವೈರಲ್

Mouni Roy: ಮೌನಿ ರಾಯ್ ಎಂದರೆ ಸ್ಪೆಷಲ್ ಕ್ರೇಜ್ ಇದೆ. ಬೆಂಗಾಲಿ ಹುಡುಗಿ ಹಿಂದಿ ಕಿರುತೆರೆಯ ನಂತರ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಚಿಕ್ಕ ಚಿಕ್ಕ ರೋಲ್ ತೆಗೆದುಕೊಂಡರೂ ಮೌನಿ ಎಂದೂ ಸಿನಿ ರಸಿಕರನ್ನು ನಿರಾಸೆಗೊಳಿಸಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಈಗ ಕೆಜಿಎಫ್ ಚೆಲುವೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಫೋಟೋಸ್ ವೈರಲ್ ಆಗಿವೆ. ಬೆಂಗಾಲಿ ಚೆಲುವೆ ಮೌನಿ ರಾಯ್ ಬಾಲಿವುಡ್ ಅನ್ನು ಆಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಈಗ ಶ್ರೀಮತಿ. ದಿನದಿಂದ ದಿನಕ್ಕೆ ನಟಿ ಹೆಚ್ಚು ಆಕರ್ಷಕವಾಗುತ್ತಿದ್ದಾರೆ. ನಟಿ ಇತ್ತೀಚೆಗೆ ಬ್ಲೌಸ್​ ಇಲ್ಲದ ಸೀರೆ ಉಟ್ಟಿದ್ದರು.

5.Today Gold and Silver Price: ಚಿನ್ನ ಖರೀದಿ ಇಂದು ಸೂಕ್ತನಾ? ಹೇಗಿದೆ ಇಂದಿನ ದರ? ಇಲ್ಲಿದೆ ವಿವರ

Gold and Silver Price on August 27, 2022: ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಹಾಗೂ ಬೆಳ್ಳಿ ದರ ಗ್ರಾಹಕರ ಮುಖದಲ್ಲಿ ನಗು ಮೂಡುವಂತೆ ಮಾಡಿತ್ತು. ಆದರೀಗ ಕಳೆದ ಮೂರು ದಿನಗಳಿಂದ ಚಿನ್ನದ ದರ ಸತತ ಏರಿಕೆಯಾಗಿದ್ದು, ಚಿನ್ನ ಖರೀದಿಸಲು ಸಜ್ಜಾದವರ ಮುಖ ಬಾಡುವಂತೆ ಮಾಡಿದೆ. ಹೌದು ಚಿನ್ನದ ದರ ಭಾರೀ ಏರಿಕೆ ಕಂಡಿದ್ದು, ನಿನ್ನೆ 4,750 ರೂಪಾಯಿ ಇದ್ದ ಬಂಗಾರ ದರ ಇಂದು 4,770 ರೂಪಾಯಿ ಆಗಿದೆ. ಇನ್ನು ಇಂದು ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 47,700 ರೂಪಾಯಿ ಆಗಿದೆ. ಇನ್ನು ಇಂದು ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 47,700 ರೂಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,770 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,203 ಆಗಿದೆ. ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,160 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,624 ಆಗಿದೆ.
Published by:Mahmadrafik K
First published: