Morning Digest: ಗವಿಮಠ ಶ್ರೀಗಳ ಕಣ್ಣೀರು, ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ, ಅತಿ ಉದ್ದದ ನದಿ ಪ್ರಯಾಣ: ಬೆಳಗಿನ ಟಾಪ್ ನ್ಯೂಸ್‌ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Gavi Mutt: ಜನರ ಪ್ರೀತಿ ನೆನೆದು ಶ್ರೀಗಳು ಕಣ್ಣೀರು, ಗವಿಮಠದ ನೆರವಿಗೆ ನಿಂತ ಭಕ್ತರು

ತುಮಕೂರಿನ (Tumkur) ಸಿದ್ದಗಂಗಾ ಮಠದಂತೆ (Siddaganga Mutt) ಬಡ ವಿದ್ಯಾರ್ಥಿಗಳಿಗಾಗಿ (Students) ಕೊಪ್ಪಳದಲ್ಲಿ (Koppala) ಬಡವಿದ್ಯಾರ್ಥಿಗಳಿಗಾಗಿ ಗವಿ ಮಠ (Gavi Mutt) ಶ್ರಮಿಸುತ್ತಿದೆ. ಇಲ್ಲಿ 5 ಸಾವಿರ ವಿದ್ಯಾರ್ಥಿಗಳ ವಾಸ್ತವ್ಯಕ್ಕಾಗಿ ವಸತಿ ನಿಲಯಕ್ಕೆ (Hostel) ಮೊನ್ನೆ ಶಂಕು ಸ್ಥಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗವಿಮಠದ ಸ್ವಾಮೀಜಿಗಳು (SWamiji) ಭಾವುಕರಾಗಿ ಕಣ್ಣೀರು ಹಾಕಿದ್ದರು. ಸ್ವಾಮೀಜಿಗಳ ಕಣ್ಣೀರಿನಿಂದಾಗಿ ಮಠದ ಭಕ್ತರು (Devotees) ಈಗ ಅಭಿಯಾನ (Campaign) ಮಾದರಿಯಲ್ಲಿ ಸ್ವಾಮಿಗಳ ಕಾರ್ಯಕ್ಕೆ ಹಣ (Donation) ನೀಡಲು ಮುಂದಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಅಭಿಯಾನ ನಡೆಯುತ್ತಿದೆ.

2.Vijayapura: ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ಎಚ್ಚರಿಕೆ; DMC ಹೆಸರು ಕೇಳುತ್ತಿದ್ದಂತೆ SP ಕೆಂಡಾಮಂಡಲ

ಇಂದು ಬೆಳಗ್ಗೆ ಭೀಮಾ ತೀರದ ಹಂತಕರ ಗ್ಯಾಂಗ್​ಗಳಿಗೆ ವಿಜಯಪುರದ SP ಆನಂದಕುಮಾರ್ ಖಡಕ್ ಎಚ್ಚರಿಕೆ ನೀಡಿದರು. ಆನಂದಕುಮಾರ್ ಅವರ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಲಾಯ್ತು. ಪೋಲೀಸರ ಸೂಚನೆ ಹಿನ್ನೆಲೆ ಕಂಟ್ರಿ ಪಿಸ್ತೂಲ್, ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಎಲ್ಲರೂ ಪೊಲೀಸ್ ಪರೇಡ್ ಮೈದಾನಕ್ಕೆ ಆಗಮಿಸಿದ್ದರು. ಖುದ್ದು ಆನಂದಕುಮಾರ್ ಅವರೇ ಪ್ರತಿಯೊಬ್ಬರನ್ನ ಸಾಲಾಗಿ ಕರೆಸಿ ವಿಚಾರಣೆ ನಡೆಸಿದ್ದರು. ನಿಮ್ಮ ಮೇಲೆ ಯಾವ ಪ್ರಕರಣ ಇದೆ? ಸದ್ಯ ಎಲ್ಲಿರೋದು? ಯಾವ ಕೆಲಸ ಮಾಡ್ತಿರೋದು ಎಂಬಿತ್ಯಾದಿ ಪ್ರಶ್ನೆಗಳನ್ನ ಕೇಳಿದರು.

3.Lightening: ಸಿಡಿಲು ಬಡಿದು ಮೂವರು ಬಾಲಕಿಯರು ಸಾವು, 12 ಜನಕ್ಕೆ ಗಾಯ

ಮಧ್ಯಪ್ರದೇಶದಲ್ಲಿ ಸಿಡಿಲು ಬಡಿದು ಮೂವರು ಬಾಲಕಿಯರು ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಐದು ಸ್ಥಳಗಳಲ್ಲಿ ಶನಿವಾರ ಸಿಡಿಲು ಬಡಿದು ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದ್ದು, ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ರೇವಾ ಜಿಲ್ಲೆಯಿಂದ ಸುಮಾರು 65 ಕಿಮೀ ದೂರದಲ್ಲಿರುವ ಮೌಗಂಜ್ ತೆಹಸಿಲ್‌ನಲ್ಲಿ ಐದು ವಿಭಿನ್ನ ಸ್ಥಳಗಳಲ್ಲಿ ಸಿಡಿಲು ಬಡಿದು ಮೂವರು ಹದಿಹರೆಯದ ಹುಡುಗಿಯರು ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

4.River Journey: ವಿಶ್ವದ ಅತಿ ಉದ್ದದ ನದಿ ಪ್ರಯಾಣಕ್ಕೆ ಭಾರತ ಸಜ್ಜು!

ಪ್ರವಾಸ ಸಂದರ್ಭದಲ್ಲಿ ಕೆಲವೆಡೆ ಬೋಟಿಂಗ್ (Boating), ದೋಣಿ ವಿಹಾರಗಳಿಗೆ ಹೋದಾಗ ಸಾಮಾನ್ಯವಾಗಿ ಸ್ವಲ್ಪೇ ಸ್ವಲ್ಪ ದೂರ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಿಡುತ್ತಾರೆ. ಅಯ್ಯೋ ಇನ್ನೂ ಸ್ವಲ್ಪ ದೂರ ಹೋಗಿದ್ರೆ ಚೆನ್ನಾಗಿರುತ್ತಿತ್ತು ಅಂತಾ ಕೆಲವರು ಮನಸ್ಸಲ್ಲಿಯೇ ಅಂದುಕೊಂಡಿರುತ್ತಾರೆ. ಹೀಗೆ ನದಿಯಲ್ಲಿ (River) ಸುದೀರ್ಘವಾದ ಪ್ರಯಾಣ ಮಾಡಲು ಬಯಸುವವರಿಗೆ ಸುವರ್ಣಾವಕಾಶವೊಂದು ಲಭಿಸಲಿದೆ. ಹೇಗೆ ಅಂತೀರಾ ಮುಂದೆ ಓದಿ. ಹೌದು, ಭಾರತದ ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್ ಇದೇ ಡಿಸೆಂಬರ್ 2022ರಲ್ಲಿ ದೀರ್ಘವಾದ ನದಿ ಪ್ರಯಾಣ (Travel) ಮಾಡಲು ಸಜ್ಜಾಗಿದೆ. ಇನ್ನು ಈ ಪ್ರಯಾಣವನ್ನು ವಿಶ್ವದಲ್ಲಿಯೇ ಅತಿ ಉದ್ದದ ನದಿ (longest river in the world) ಪ್ರಯಾಣ ಎಂದು ಕರೆಯಲಾಗುತ್ತದೆ.

5.Johnny Depp: ಜಾನಿ ಡೆಪ್​ಗೆ 2,355 ಕೋಟಿಯ ಕ್ಷಮಾಪಣೆ ಪತ್ರ!

ನೀವು ಕಾಸ್ಟ್ಲಿಯಾಗಿರೋ ಕ್ಷಮಾಪಣಾ ಪತ್ರದ ಬಗ್ಗೆ ಕೇಳಿದ್ದಿರಾ? ಇಲ್ಲಿದೆ 2355 ಕೋಟಿ ರೂಪಾಯಿಯ ಕ್ಷಮಾಪಣೆ! ಸ್ಸಾರಿ ಅನ್ನೋದು ಸುಲಭ, ಆದ್ರೆ ಈ ರೀತಿಯ ದುಬಾರಿ ಕ್ಷಮೆ ಕೇಳೋದು ಕೂಡಾ ನಿಜಕ್ಕೂ ವಿಶೇಷ. ಅಭಿಮಾನಿಗಳ ಬಹು ಬೇಡಿಕೆಗಳ ನಂತರ, ಡಿಸ್ನಿ ಅಂತಿಮವಾಗಿ ನಟನಿಗೆ ಕ್ಷಮೆಯಾಚಿಸಿದೆಯಾ. ಪೈರೇಟ್ಸ್ ಆಫ್ ದಿ ಕೆರಿಬಿಯನ್ ಫ್ರ್ಯಾಂಚೈಸ್‌ಗೆ ಮರಳಲು ವಿನಂತಿಸಿದೆಯೇ? ಹೀಗೊಂದು ಸುದ್ದಿ ಕೇಳಿ ಬಂದಿದೆ. ಅಂಬರ್ ಹರ್ಡ್ ಮಾಡಿದ ಆರೋಪಗಳಿಂದಾಗಿ, ಜಾನಿ ತನ್ನ ವೃತ್ತಿಜೀವನದಲ್ಲಿ ಭಾರಿ ಕುಸಿತವನ್ನು ಕಂಡರು. ಅವರು ಚಲನಚಿತ್ರ ನಿರ್ಮಾಪಕರಿಂದ ಆಫರ್‌ಗಳನ್ನು ಪಡೆಯುವುದನ್ನು ನಿಲ್ಲಿಸಲಿಲ್ಲ, ಆದರೆ ಅವರನ್ನು ಫೆಂಟಾಸ್ಟಿಕ್ ಬೀಸ್ಟ್ಸ್ 3 ಮತ್ತು ಪೈರೇಟ್ಸ್ ಆಫ್ ದಿ ಕೆರಿಬಿಯನ್‌ನಿಂದ ಹೊರಹಾಕಲಾಯಿತು.
Published by:Mahmadrafik K
First published: