Morning Digest: ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ, ಕೆಜಿಎಫ್ ಬಾಬುಗೆ ನೋಟಿಸ್, ಗುಡುಗಿದ ಝೆಲೆನ್ಸ್ಕಿ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.KGF Babu: 350 ಕೋಟಿ ಹಂಚಲು ಮುಂದಾಗಿದ್ದ KGF ಬಾಬುಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ನೋಟಿಸ್!

ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು (KGF Babu) ಅವರಿಗೆ ಕೆಪಿಸಿಸಿ ನೋಟಿಸ್ (KPCC Notice) ನೀಡಿದೆ. ಚಿಕ್ಕಪೇಟೆ ಕ್ಷೇತ್ರದಿಂದ (Chickper Assembly Constituency) ಸ್ಪರ್ಧೆ ಮಾಡುತ್ತೇನೆ ಎಂದು ಕೆಜಿಎಫ್ ಬಾಬು ಹೇಳಿಕೆ ನೀಡಿದ್ದರು. ಇದರ ಜೊತೆಗೆ ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ (350 Crore) ರೂಪಿಸುವ ಕರೆ ನೀಡಿದ್ದರು. ಇದರಿಂದ ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ ರಹಮಾನ್ ಖಾನ್ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ (Congress Party) ಟಿಕೆಟ್‌ ನೀಡಲಿ, ಬಿಡಲಿ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿರುತ್ತೀರಿ. ಇದು ಪಕ್ಷಕ್ಕೆ ಸವಾಲು ಹಾಕಿರುವಂತಿದೆ. ನಿಮ್ಮ ಈ ಬೇಜವಾಬ್ದಾರಿ ನಡವಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಈ ಬಗ್ಗೆ ತಮ್ಮ ವಿವರಣೆಯನ್ನು ಪತ್ರ ತಲುಪಿದ 7 ದಿನಗಳೊಳಗಾಗಿ ನೀಡಬೇಕು ಅಂತ ಕೆಪಿಸಿಸಿ ಶಿಸ್ತು ‌ಸಮಿತಿಯಿಂದ ಕೆಜಿಎಫ್ ಬಾಬು ಅವರಿಗೆ ಸೂಚಿಸಿದೆ.

2.Hubballli: ಅಪ್ಕೊಂಡು ಫೋಟೋ ಕ್ಲಿಕ್ ಮಾಡ್ಕೊಂಡ, ಬೆದರಿಕೆ ಹಾಕಿ ಐದಾರು ಸಲ ರೇಪ್ ಮಾಡಿದ್ದ ಯುವಕ ಅರೆಸ್ಟ್

ಪ್ರೀತಿಯ (Love) ನಾಟಕವಾಡಿ ಅಪ್ರಾಪ್ತೆಗೆ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ಬೆಳಕಿಗೆ ಬಂದಿದೆ. ಪ್ರೀತಿಯ ನಾಟಕವಾಡಿ ಅಪ್ರಾಪ್ತೆಯನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ (Rape Allegation) ಮೇಲೆ ಕಾರವಾರ ಮೂಲದ 21 ವರ್ಷದ ಯುವಕನನ್ನು ಹುಬ್ಬಳ್ಳಿ ಪೊಲೀಸರು (Hubballi Police) ಬಂಧಿಸಿದ್ದಾರೆ. ಆರೋಪಿ ವಿರುದ್ಧ ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ (Gokul Road Police Station) ಪ್ರಕರಣ ದಾಖಲಾಗಿತ್ತು. 17 ವರ್ಷದ ಅಪ್ರಾಪ್ತೆ ಜೊತೆ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿದ್ದ. ಪುಸಲಾಯಿಸಿ ಆಕೆ ಜತೆಗೆ ಆಲಿಂಗನದ ಫೋಟೋ (Photo) ತೆಗೆದುಕೊಂಡಿದ್ದ. ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ (Photo Blackmail) ಅತ್ಯಾಚಾರ ಎಸಗಿದ್ದ.

3.Tumakuru Accident: ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 9 ಜನ ಸಾವು, 14 ಮಂದಿ ಗಂಭೀರ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲಿಯೇ 9 ಜನರು ಸಾವನ್ನಪ್ಪಿದ್ದರೆ, 14 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು ಇಬ್ಬರು ಮಕ್ಕಳು ಸೇರಿದ್ದಾರೆ. ಮೃತರೆಲ್ಲರೂ ರಾಯಚೂರಿನಿಂದ ಕೂಲಿ‌‌ ಕೆಲಸಕ್ಕೆ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಬೆಳಗಿನ ಜಾವ ಸುಮಾರು 4 ಗಂಟೆಗೆ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಬಂದ ಲಾರಿಯೊಂದು ಕ್ರೂಸರ್​ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

4.Russia-Ukraine War: ಸ್ವಾತಂತ್ರ್ಯ ದಿನದಂದು ರಷ್ಯಾದ ಕ್ಷಿಪಣಿ ದಾಳಿ, 22 ಮಂದಿ ಬಲಿ: ಗುಡುಗಿದ ಝೆಲೆನ್ಸ್ಕಿ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukraine President Volodymyr Zelenskyy) ಬುಧವಾರ ದೇಶದ ಸ್ವಾತಂತ್ರ್ಯ ದಿನದಂದು (Independence Day) ರೈಲು ನಿಲ್ದಾಣದ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ, ಆದರೆ ಉಕ್ರೇನ್ ಕೊನೆಯವರೆಗೂ ಹೋರಾಡುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ "ನಿಮ್ಮಲ್ಲಿ ಎಷ್ಟು ಸೈನ್ಯವಿದ್ದರೂ ಎಂದಿಗೂ ನಾವು ಹೆದರುವುದಿಲ್ಲ, ನಾವು ನಮ್ಮ ಭೂಮಿಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಅದಕ್ಕಾಗಿ ಕೊನೆಯವರೆಗೂ ಹೋರಾಟ ಮಾಡುತ್ತೇವೆ ಎಂದು ಝೆಲೆನ್ಸ್ಕಿ ಗುಡುಗಿದ್ದಾರೆ. ಇದೇ ವೇಳೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ (Russia) ಜನಾಭಿಪ್ರಾಯ ಸಂಗ್ರಹಿಸಲು ತಯಾರಿ ನಡೆಸುತ್ತಿದೆ ಎಂದು ಯುಎಸ್ ಎಚ್ಚರಿಸಿದೆ. ಈ ಮೂಲಕ ರಷ್ಯಾ ತನ್ನ ನಿಯಂತ್ರಣವನ್ನು ಔಪಚಾರಿಕಗೊಳಿಸಲು ಪ್ರಯತ್ನಿಸುತ್ತದೆ ಎಂದು ಆರೋಪಿಸಿದೆ.

5.Today Gold and Silver Price: ಏಕಾಏಕಿ ಬದಲಾಯ್ತು ಚಿನ್ನದ ಬೆಲೆ, ಖರೀದಿಗೂ ಮುನ್ನ ಇಂದಿನ ದರವನ್ನೊಮ್ಮೆ ತಪ್ಪದೇ ನೋಡಿ

Gold and Silver Price on August 25, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ನಿನ್ನೆ ಆಭರಣ ಪ್ರಿಯರಿಗೆ ಶುಭ ಸುದ್ದಿಯಾಗಿತ್ತು. ಆದರೆ ಇಂದು ಚಿನ್ನ ಇಂದು ಮತ್ತೆ ನನ್ನ ದರ ಹೆಚ್ಚಿಸಿಕೊಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,700 ಇದ್ದದ್ದು, ಇಂದು 4,725ಕ್ಕೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ, ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,725 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,155 ಆಗಿದೆ. ಅತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,800 ಆಗಿದ್ದು. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,240 ಆಗಿದೆ.
Published by:Mahmadrafik K
First published: