Morning Digest: ಉದ್ಯಮಿ ಪುತ್ರನ ಅಪಹರಣ, ಬಿಗ್​ಬಿಗೆ ಕೊರೊನಾ, ಪಪ್ಪನ್ ಸಿಂಗ್ ಆತ್ಮಹತ್ಯೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Kidnap Case: 4 ಕೋಟಿ ಕೊಡು, ಇಲ್ಲಾಂದ್ರೆ ರೇಪ್ ಕೇಸ್ ಹಾಕ್ತೀನಿ; ಉದ್ಯಮಿ ಮಗನನ್ನ ಅಪಹರಿಸಿದ ಲೇಡಿ ಗ್ಯಾಂಗ್

ಮಹಿಳಾ ಗ್ಯಾಂಗ್ ಉದ್ಯಮಿ ಮಗನನ್ನು ಅಪಹರಿಸಿ (Kidnap Case) ಹಣಕ್ಕೆ (Money) ಬೇಡಿಕೆ ಇರಿಸಿದ್ದ ಘಟನೆ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರವಿ ಇಂಡಸ್ಟ್ರೀಯಲ್ ಸಪ್ಲೈ ಮಾಲೀಕರಾಗಿರುವ ರವಿ ಅವರ ಪುತ್ರ ಸೂರಜ್ ಎಂಬವರನ್ನು ಪುಷ್ಪಲತಾ ಗ್ಯಾಂಗ್ ಅಪಹರಣ ಮಾಡಿತ್ತು. ಅಪಹರಣಕ್ಕೂ ಮೊದಲು ಸರ್ಕಾರಿ ಟೆಂಡರ್ ಕೊಡಿಸೋದಾಗಿ ಹೇಳಿ ಸೂರಜ್ ಅವರನ್ನು ಪುಷ್ಪಲತಾ ಭೇಟಿಯಾಗಿದ್ದಳು. ಸರ್ಕಾರಿ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ಸೂರಜ್​ನನ್ನು ಪುಷ್ಪಲತಾ ಭೇಟಿಯಾಗಿದ್ದಳು. ಪುಷ್ಪಲತಾ ಶ್ರೀ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್​​ನ ಅಧ್ಯಕ್ಷೆಯಾಗಿದ್ದಾಳೆ.

2.Amithabh Bachchan: ಬಾಲಿವುಡ್ ನಟ ಅಮಿತಾಭ್ ಬಚ್ಚನ್​ಗೆ ಕೊರೋನಾ ಪಾಸಿಟಿವ್

Amitabh Bachchan: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಎರಡನೇ ಬಾರಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಟ್ವಿಟರ್‌ನಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಮಿತಾಭ್ ಅವರಿಗೆ 79 ವರ್ಷ ವಯಸ್ಸಾಗಿದ್ದು ಈ ಹಿಂದೆಯೂ ಕೊರೋನಾ ಪಾಸಿಟಿವ್ ಆಗಿತ್ತು. ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ತಕ್ಷಣವೇ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ನಟ ಒತ್ತಾಯಿಸಿದ್ದಾರೆ.
ನನಗೆ ಈಗಷ್ಟೇ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನನ್ನ ಸುತ್ತಮುತ್ತಲಿನ ಮತ್ತು ನನ್ನ ಜೊತೆಗಿದ್ದ ಎಲ್ಲರೂ ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ನಟ ಪೋಸ್ಟ್​​ನಲ್ಲಿ ಬರೆದಿದ್ದಾರೆ.

3.Lockdown ವೇಳೆ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ್ದ ಪಪ್ಪನ್ ಸಿಂಗ್ ಆತ್ಮಹತ್ಯೆ!

ಕೊರೋನಾ ವೈರಸ್ (Covid 19) ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಲಾಕ್‌ಡೌನ್ ಸಮಯದಲ್ಲಿ ತನ್ನ ಕೃಷಿ ಕಾರ್ಮಿಕರನ್ನು (Migrants) ವಿಮಾನದ ಮೂಲಕ ಬಿಹಾರಕ್ಕೆ (Bihar) ಕಳುಹಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ರೈತ ಪಪ್ಪನ್ ಸಿಂಗ್ ಗೆಹ್ಲೋಟ್ (Pappan Singh Gehlot) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ (Delhi bPolice) ಅಧಿಕಾರಿಗಳು, ಪಪ್ಪನ್ ಅವರ ಮನೆಯ ಮುಂಭಾಗದಲ್ಲಿರುವ ದೇವಸ್ಥಾನದ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರಿಗೆ ಡೆತ್​ನೋಟ್​ ಕೂಡಾ ಲಭ್ಯವಾಗಿದೆ. ಹೀಗಿರುವಾಗ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

4.KPTCL ಕಿರಿಯ ಸಹಾಯಕ ಪರೀಕ್ಷೆ ಗೋಲ್ಮಾಲ್: 9 ಜನ ಅರೆಸ್ಟ್, ತೋಟದ ಮನೆಯಲ್ಲಿ ನಡೆದಿತ್ತು ಪ್ಲ್ಯಾನ್

ರಾಜ್ಯದಲ್ಲಿ ಪಿಎಸ್​ಐ ಪರೀಕ್ಷೆ ಗೋಲ್​​ಮಾಲ್ (PSI Exams Scam) ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ ಮತ್ತೊಂದು ಅಕ್ರಮ ಬಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದಿರೋ ಪರೀಕ್ಷಾ ಅಕ್ರಮಕ್ಕೆ ಗದಗ (Gadag), ಉತ್ತರ ಕನ್ನಡ (Uttara Kannada) ಜಿಲ್ಲೆಗಳ ನಂಟು ಇರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಗಸ್ಟ್ 7ರಂದು ರಾಜ್ಯದಲ್ಲಿ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆಯನ್ನು (KPTCL Recruitment) ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ (Gokak, Belagavi) ಅಭ್ಯರ್ಥಿ ಓರ್ವ ಸ್ಮಾರ್ಟ್ ವಾಚ್ (Smartwatch) ಮೂಲಕ ಫೋಟೋ ತೆಗೆದಿರೋದು ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣ ಬೆನ್ನತ್ತಿದ್ದ ಬೆಳಗಾವಿ ಪೊಲೀಸರಿಗೆ (Belagavi Police) ಅನೇಕ ಮಹತ್ವದ ವಿಚಾರಗಳು ಕಂಡು ಬಂದಿವೆ. ಜತೆಗೆ ಪ್ರಕರಣ ಸಂಬಂಧ ಈಗಾಗಲೇ 9 ಜನರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಅನೇಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

5.Today Gold and Silver Price: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿಯೂ ಅಗ್ಗ, ಹೀಗಿದೆ ಇಂದಿನ ದರ!

ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ.47,050 ಇದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,700 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,123 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,600 ಆಗಿದ್ದರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,984 ಆಗಿದೆ. ಇನ್ನು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,000 ಆಗಿದ್ದರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,230 ಆಗಿದೆ. ಹೀಗಿರುವಾಗ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,70,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,12,300 ಆಗಿದೆ.
Published by:Mahmadrafik K
First published: