Morning Digest: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ, ವೀಣಾ ಅಪ್ಪಚ್ಚು ಸ್ಪಷ್ಟನೆ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Vijayapura: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿ ಮುಖಂಡ; ಯತ್ನಾಳ್​ ಸವಾಲು ಹಾಕಿದ್ದು ಯಾರಿಗೆ?

ವಿಜಯಪುರದಲ್ಲಿ (Vijayapura)‌ ಸಾವರ್ಕರ್ ಫೋಟೋ (Savarkar Photo) ವಿವಾದ ತಾರಕಕ್ಕೇರಿದೆ. ತಡರಾತ್ರಿ ಕಾಂಗ್ರೆಸ್ ಕಚೇರಿಗೆ (Congress Office) ಸಾವರ್ಕರ್ ಫೋಟೋ ಅಂಟಿಸಲಾಗಿದೆ. ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲಿಗೆ ಹತ್ತಕ್ಕೂ ಅಧಿಕ ಸಾವರ್ಕರ್ ಫೋಟೋಗಳನ್ನು ಅಂಟಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಲನಗರ ಠಾಣೆ ಪೊಲೀಸರಿಂದ ಫೋಟೋಗಳನ್ನು ತೆರವು ಮಾಡಿದ್ದಾರೆ. ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸದ್ಯ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಫೋಟೋ ಅಂಟಿಸಿದ ಕಿಡಿಗೇಡಿಗಳ ಪತ್ತೆಕಾರ್ಯ ನಡೆಯುತ್ತಿದೆ. ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಕಾಂಗ್ರೆಸ್ ನಾಯಕರು (Congress Leaders) ಆಗ್ರಹಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಮುಂಭಾಗ ಫೋಟೋ ಅಂಟಿಸಿದ ಕಾರಣ ಮತ್ತಷ್ಟು ವಿವಾದ ಭುಗಿಲೆದ್ದಿದೆ.

2.Siddaramaiah ಅಂದು ತಿಂದಿದ್ದು ಕಣಿಲೆ ಅಕ್ಕಿ ರೊಟ್ಟಿ, ಮಾಂಸಾಹಾರ ಅಲ್ಲ: ವೀಣಾ ಅಚ್ಚಯ್ಯ

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಕಾಂಗ್ರೆಸಿನವರಿಗೆ ಯಾವ ಸಂಸ್ಕೃತಿಯೂ ಇಲ್ಲ. ದೇವಸ್ಥಾನ ಸಂಸ್ಕೃತಿಯಂತೂ ಇಲ್ಲವೇ ಇಲ್ಲ. ಈ ಹಿಂದೆ ಧರ್ಮಸ್ಥಳಕ್ಕೆ ಮೀನು ಮಾಂಸ ತಿಂದು ಹೋಗಿದ್ದರು. ಈಗ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ. ಇವರಿಗೆ ದೇವರ ಮೇಲೆ ಭಕ್ತಿ ಇದೆಯಾ? ಭಕ್ತಿ ಇಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಏಕೆ ಹೋಗುವುದು ಎಂದು ಅಪ್ಪಚ್ಚು ರಂಜನ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಅಂದು ಮಾಂಸಹಾರವನ್ನು ಸೇವಿಸಲೇ ಇಲ್ಲ ಎಂದು ಕಾಂಗ್ರೆಸ್‍ನ ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ ಸ್ಪಷ್ಟನೆ ನೀಡಿದ್ದಾರೆ. ಅಂದು ಸಿದ್ದರಾಮಯ್ಯ ಅವರಿಗೆ ಕೊಡಗಿನ ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ ಅವರ ಮನೆಯಿಂದ ನಾಟಿಕೋಳಿ ಸಾರು, ಮಟನ್ ಫ್ರೈ, ಅಕ್ಕಿ ರೊಟ್ಟಿ, ಬಿದಿರು ಕಣಿಲೆ ಗೊಜ್ಜು ಸೇರಿದಂತೆ ವಿವಿಧ ಆಹಾರಗಳು ಮಾಡಿ ಮಡಿಕೇರಿಯ ಸುದರ್ಶನ್ ಗೆಸ್ಟ್ ಹೌಸ್​ಗೆ ಪೂರೈಸಲಾಗಿತ್ತು.

3.Anti Terrorism: ಪಾಕ್​ ಮಾಜಿ ಪ್ರಧಾನಿಗೆ ಇಮ್ರಾನ್ ಖಾನ್​ಗೆ ಕಂಟಕ, ಯಾವುದೇ ಕ್ಷಣದಲ್ಲೂ ಬಂಧನದ ಆತಂಕ!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Pakistan Former PM Imran Khan) ಅವರನ್ನು ಯಾವುದೇ ಕ್ಷಣದಲ್ಲಾದರೂ ಬಂಧಿಸಬಹುದು. ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ((Anti Terror Act) ಇಮ್ರಾನ್ ಖಾನ್ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಲಾಗಿದೆ. ಆಗಸ್ಟ್ 20 ರಂದು ಇಮ್ರಾನ್ ಖಾನ್ ಐಜಿ ಮತ್ತು ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದರು, ನಂತರ ಇಮ್ರಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತಡರಾತ್ರಿ, ಇಸ್ಲಾಮಾಬಾದ್‌ನ (Islamabad) ಐಜಿ ಅವರು ಬಂಧನ ವಾರಂಟ್ ಹೊರಡಿಸುವ ಮಾಹಿತಿ ನೀಡಿದ್ದಾರೆ. ಶಹಬಾಜ್ ಗಿಲ್ ಬಂಧನದ ವಿರುದ್ಧ ಇಮ್ರಾನ್ ಖಾನ್ ಆಗಸ್ಟ್ 20 ರಂದು ಇಸ್ಲಾಮಾಬಾದ್‌ನಲ್ಲಿ ರ್ಯಾಲಿ ನಡೆಸಿದರು. ಈ ರ್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ರ್ಯಾಲಿಯನ್ನು ಎಲ್ಲಾ ಟಿವಿ ನ್ಯೂಸ್ ಚಾನೆಲ್‌ಗಳು ಪ್ರಸಾರ ಮಾಡಿದ್ದವು.

4. Delh HC: ತಾಯ್ತನದ ಅವಧಿಯಲ್ಲಿ ಪ್ರತಿಯೊಬ್ಬ ಗರ್ಭಿಣಿ ಮಹಿಳೆ ಗೌರವಕ್ಕೆ ಅರ್ಹಳು: ಹೈಕೋರ್ಟ್

ತಾಯ್ತನದ ಅವಧಿಯಲ್ಲಿ ಸಂವಿಧಾನ ಖಾತ್ರಿಪಡಿಸಿರುವ ಘನತೆಗೆ ಪ್ರತಿ ಗರ್ಭಿಣಿ ಮಹಿಳೆಯೂ ಅರ್ಹಳು ಎಂದು ಹೇಳುವ ಮೂಲಕ ಅಪಹರಣ ಮತ್ತು ಕೊಲೆ ಯತ್ನದ ಆರೋಪಿ ಗರ್ಭಿಣಿ ಮಹಿಳೆಗೆ ದೆಹಲಿ ಹೈಕೋರ್ಟ್ (Delhi High VCourt)ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಕಸ್ಟಡಿಯಲ್ಲಿ ಮಗುವಿಗೆ ಜನ್ಮ ನೀಡುವುದು ತಾಯಿಗೆ ನೋವು ಉಂಟು ಮಾಡುವುದು ಮಾತ್ರವಲ್ಲ, ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಹೇಳಿದರು. ನ್ಯಾಯಾಲಯವು ಆಗಸ್ಟ್ 18 ರಂದು ತನ್ನ ಆದೇಶದಲ್ಲಿ, "ಮಹಿಳೆ ಗರ್ಭಿಣಿಯಾಗುವುದು ವಿಶೇಷ ಸಂದರ್ಭವಾಗಿದೆ ಮತ್ತು ಕಸ್ಟಡಿಯಲ್ಲಿ ಮಗುವಿನ ಜನನವು ತಾಯಿಗೆ ನೋವಿನಿಂದ ಕೂಡಿದೆ, ಆದರೆ ಶಾಶ್ವತವಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆ.

5.Gold-Silver Price Today: ಬಂಗಾರ-ಬೆಳ್ಳಿ ಖರೀದಿಸುವವರಿಗಿಲ್ಲ ಚಿಂತೆ: ಹೀಗಿದೆ ಇಂದಿನ ಬೆಲೆ

ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದೇ ಇದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಕೊಳ್ಳಬಯಸುವವರಿಗೆ ಪರ್ಫೆಕ್ಟ್ ಟೈಮ್ ಮುಂದುವರೆದಿದೆ ಅಂತಾನೇ ಹೇಳಬಹುದು, ಏಕೆಂದರೆ, ನಿನ್ನೆ ಇದ್ದ ಚಿನ್ನದ ಬೆಲೆಯೇ ಇಂದು ಸಹ ಮುಂದುವರೆದಿದೆ. ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸಗಳಿಲ್ಲದೇ ಒಂದು ಗ್ರಾಂ ಚಿನ್ನದ ಬೆಲೆ 4,780 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,780 ಇದ್ದದ್ದು, ಇಂದು ಸಹ ಅದೇ ಬೆಲೆಯಲ್ಲಿ ಮುಂದುವರೆದಿದೆ. ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸಗಳಿಲ್ಲದೇ ಒಂದು ಗ್ರಾಂ ಚಿನ್ನದ ಬೆಲೆ 4,780 ರೂ. ಆಗಿದೆ.
Published by:Mahmadrafik K
First published: