Morning Digest: ಮೊಟ್ಟೆ ಎಸೆದ ಸಂಪತ್ ಯಾರು?, ರವಿಚಂದ್ರನ್ ಪುತ್ರನ ಕಲ್ಯಾಣ, ಸಾವರ್ಕರ್ ಬ್ಯಾನರ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿ

ಈವರೆಗಿನ ಪ್ರಮುಖ ಸುದ್ದಿ

  • Share this:
1.Kodagu: ಗಣವೇಷಧಾರಿಯಾಗಿ ರಂಜನ್ ಜೊತೆಗೆ ತರಬೇತಿ ಪಡೆದಿರುವ ಸಂಪತ್ ಯಾವ ಪಕ್ಷ?

ಮಳೆಹಾನಿ ಪರಿಶೀಲನೆ ನಡೆಸಲು ಕೊಡಗಿಗೆ (Kodagu) ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ಕಾರಿಗೆ ಮೊಟ್ಟೆ (Egg) ಹೊಡೆದ ಯುವಕ ನಿಜವಾಗಲೂ ಯಾವ ಪಕ್ಷದವನ್ನು ಎನ್ನುವ ವಿಚಾರ ಎರಡು ಪಕ್ಷಗಳ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದರೆ, ಶನಿವಾರ ಬಂಧನಕ್ಕೆ ಒಳಗಾಗಿರುವ ಆರೋಪಿ ಸಂಪತ್ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೇ (Congress Activist) ಎಂದು ಹೇಳುವ ಮೂಲಕ ಮತ್ತಷ್ಟು ಗೊಂದಲ ಮೂಡಿಸಿದ್ದಾನೆ.

2.Savarkar: ಮನೆ ಮುಂದೆ ಬ್ಯಾನರ್ ಹಾಕಿದ ಶಾಸಕ ರೇಣುಕಾಚಾರ್ಯ

ವೀರ ಸಾವರ್ಕರ್ ಓರ್ವ ಸ್ವಾತಂತ್ರ್ಯ ಹೋರಾಟಗಾರ ಹೌದು ಅಥವಾ ಅಲ್ಲವಾ ಎಂಬುದರ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರವೇ ಏರ್ಪಟ್ಟಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ನಿವಾಸದ ಮುಂದೆ ಸಾವರ್ಕರ್ ಬ್ಯಾನರ್ ಹಾಕಿಸಿದ್ದಾರೆ. ಸಾರ್ವಕರ್ ಯಾರು ಅನ್ನೋದನ್ನ ತಿಳಿಸಲು ಮನೆ ಮುಂದೆ ಬ್ಯಾನರ್ ಹಾಕಿರೋದಾಗಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಸಾರ್ವಕರ್ ಎಂದರೆ ಕ್ರಾಂತಿ, ಕಿಡಿ, ಕಿಚ್ಚು, ಸ್ಪೂರ್ತಿ, ರಾಷ್ಟ್ರಭಕ್ತಿ, ತ್ಯಾಗ, ಸಮರ್ಪಣೆ, ಪ್ರೇರಣೆ, ತೇಜಸ್ಸು, ತರ್ಕ, ತೇಜ, ತತ್ವ, ತೀಕ್ಷ್ಣ, ತಾರುಣ್ಯ, ನೇತೃತ್ವ, ಸಾಧನೆ, ಸಂವೇದನೆ, ಸ್ವಾಭಿಮಾನ, ಬಲಿದಾನ, ಆತ್ಮಾಭಿಮಾನ, ಶಕ್ತಿ ಎಂದು ಬರೆಯಲಾಗಿದೆ.

3.Tomato Fever: ಎಚ್ಚರ, ಕಟ್ಟೆಚ್ಚರ! ಕರ್ನಾಟಕಕ್ಕೆ ಟೊಮೆಟೊ ಜ್ವರದ ಎಚ್ಚರಿಕೆ ನೀಡಿದ ಪ್ರಮುಖ ಮೆಡಿಕಲ್ ಜರ್ನಲ್

ತ್ತ ಕೊರೊನಾ ವೈರಸ್ (Covid-19) ಅತ್ತ ಮಂಕಿಪಾಕ್ಸ್ (Monkepox). ಈ ಎರಡರ ಆತಂಕದ ನಡುವೆಯೇ ಆಗಾಗ ಸುದ್ದಿಯಾಗುತ್ತಲೇ ಇರುವ ಟೊಮೆಟೊ ಜ್ವರ. ಸದ್ಯ ಈ ಟೊಮೆಟೊ ಜ್ವರವೂ (Tomato Fever) ಭಾರತದಲ್ಲಿ ಹೆಚ್ಚುತ್ತಿರುವ ಕುರಿತು ವರದಿಯಾಗಿದೆ. ಇದುವರೆಗೆ ಭಾರತದಲ್ಲಿ 82 ವೈರಲ್ ಸೋಂಕಿನ ಪ್ರಕರಣಗಳನ್ನು ದಾಖಲಾಗಿವೆ. ದಿ ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್‌ನ ವರದಿಯ ಪ್ರಕಾರ ಕೇರಳದ ಕೊಲ್ಲಂನಲ್ಲಿ (Tomato Fever In Kerala) ಮೇ 6 ರಂದು ಐದು ವರ್ಷದೊಳಗಿನ ಮಕ್ಕಳಲ್ಲಿ ವರದಿಯಾಗಿದೆ. ಹೀಗಾಗಿ ಕೇರಳದ ಅಕ್ಕಪಕ್ಕದ ರಾಜ್ಯಗಳಾದ ಕರ್ನಾಟಕ (Tomato Fever In Karnataka) ಮತ್ತು ತಮಿಳುನಾಡಿಗೆ ಲ್ಯಾನ್ಸೆಟ್ ವರದಿಯು ತೀವ್ರ ನಿಗಾ ವಹಿಸುವಂತೆ ಸಲಹೆ ನೀಡಿದೆ.

4.Manoranjan Ravichandran Marriage: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮನು ರವಿಚಂದ್ರನ್! ಇಂದು ಮಾಂಗಲ್ಯಧಾರಣೆ

ಸ್ಯಾಂಡಲ್​ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ (V Ravichandran) ಅವರ ಮನೆಯಲ್ಲಿ ಮದುವೆ (Marriage) ಸಂಭ್ರಮ ತುಂಬಿದೆ. ಅವರ ಪುತ್ರ ಮನೋರಂಜನ್ ರವಿಚಂದ್ರನ್ (Manoranjan Ravichandran) ಅವರು ಸಂಗೀತ (Sangeetha) ಎನ್ನುವ ಯುವತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಗೀತ ಎಂಬ ಯುವತಿ ಜೊತೆ ವಿವಾಹವಾಗುತ್ತಿರುವ ಮನು ರವಿಚಂದ್ರನ್ ಅವರ ವಿವಾಹ ಇಂದು ನಡೆಯಲಿದ್ದು, ಮಾಂಗಲ್ಯಧಾರಣೆ ನೆರವೇರಲಿದೆ. ಶನಿವಾರ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ (Palace Ground) ಅದ್ದೂರಿಯಾಗಿ ಮನು- ಸಂಗೀತ ಆರತಕ್ಷತೆ (Reception) ಕಾರ್ಯಕ್ರಮ ನೆರವೇರಿದ್ದು ರವಿಚಂದ್ರನ್ ಅವರ ಆಪ್ತರು ಮತ್ತು ಕುಟುಂಬದವರಿಗಷ್ಟೇ ಅವಕಾಶವಿತ್ತು. ಕ್ರೇಜಿಸ್ಟಾರ್ ಪುತ್ರನ ರಿಸೆಪ್ಷನ್ ಗೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva rajkumar) ದಂಪತಿ ಕೂಡಾ ಹೊಸ ಜೋಡಿಗೆ ಆಶೀರ್ವಾದ ಮಾಡಿದ್ದರು. ಹಂಸಲೇಖ ದಂಪತಿ, ಖುಷ್ಬು ಹಾಗೂ ಸ್ಯಾಂಡಲ್ ವುಡ್​ನ (Sandalwood) ನಟ ನಟಿಯರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

5.Supreme Court: ಬಳ್ಳಾರಿಯ ಬಾಲಕಿಗೆ 53 ಲಕ್ಷ ಪರಿಹಾರ; ಸುಪ್ರೀಂ ಆದೇಶ

ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯವಾಗಿದ್ದ ಕರ್ನಾಟಕದ ಬಾಲಕಿಗೆ ಬರೋಬ್ಬರಿ 10 ವರ್ಷಗಳ ನಂತರ 53.07 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ (Supreme Court) ಆದೇಶ ಪ್ರಕಟಿಸಿದೆ. 10 ವರ್ಷಗಳ ಹಿಂದೆ ಬಳ್ಳಾರಿಯ (Ballari) ಕುಡಿತಿನಿಯಲ್ಲಿ ನಡೆದ ಅಪಘಾತದಲ್ಲಿ 6 ವರ್ಷದ ಬಾಲಕಿಯೊಬ್ಬಳಿಗೆ ಲಾರಿ ಡಿಕ್ಕಿ ಹೊಡೆದು ಕಾಲು ಕಳೆದುಕೊಂಡಿದ್ದಳು. ಅಲ್ಲದೇ ಗಂಭೀರ ಗಾಯಗಳಾಗಿ ಶಾಶ್ವತ ಅಂಗವೈಕಲ್ಯ ಅನುಭವಿಸುವಂತಾಗಿತ್ತು.ಭವಿಷ್ಯದ ಹಣಕಾಸು (Futre Finance) ಗಳಿಕೆ ಮತ್ತು ಮದುವೆ ನಿರೀಕ್ಷೆಗಳ ಕನಸುಗಳನ್ನು ಬಾಲಕಿ ಕೈಬಿಡುವಂತಾಗಿತ್ತು. ಅಲ್ಲದೇ ವೈದ್ಯಕೀಯ ವೆಚ್ಚ, ನೋವು ಮತ್ತು ಸಂಕಟದಿಂದಾಗಿ ದಿನಕಳೆಯುವಂತಾಗಿತ್ತು.
Published by:Mahmadrafik K
First published: