Top 5 News: ತಹಶೀಲ್ದಾರ್ ಅವಾಜ್, ಅಬ್ಬಬ್ಬಾ ರಾಶಿ ರಾಶಿ ಮೀನುಗಳು, ನೋ-ಬ್ಯಾಗ್ ಡೇ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

 • Share this:
  1.HD Kote Tahshildar: ನಡೀರಿ ಆಚೆಗೆ, ಯಾವಾಗ್ಲೂ ಇದೇ ಆಯ್ತು: ದೂರು ನೀಡಲು ಬಂದವರಿಗೆ ತಹಶೀಲ್ದಾರ್ ಫುಲ್ ಆವಾಜ್

  ದೂರು ನೀಡಲು ಬಂದವರಿಗೆ ಮೈಸೂರು (Mysuru) ಜಿಲ್ಲೆಯ ಹೆಚ್.ಡಿ.ಕೋಟೆಯ ತಹಶೀಲ್ದಾರ್ (HD Kote Tahshiladar) ರತ್ನಾಂಬಿಕಾ ಅವಾಜ್ ಹಾಕಿರುವ ಘಟನೆ ವಿನಿ ವಿಧಾನಸೌಧದಲ್ಲಿ ನಡೆದಿದೆ. ಅವಾಜ್ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಇರೋದು. ಅವರೇ ಹೀಗೆ ಮಾಡಿದ್ರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ರೈತ ಸಂಘದ ಮುಖಂಡ ಶಿವಕುಮಾರ್ ಎಂಬವರು ದೂರು ಸಲ್ಲಿಸಲು ಹೋದ ವೇಳೆ ಘಟನೆ ನಡೆದಿದೆ. ಸ್ಥಳೀಯ ಕಂದಾಯ ಅಧಿಕಾರಿ (Revenue Inspector) ಮತ್ತು ಗ್ರಾಮ ಲೆಕ್ಕಾಧಿಕಾರಿಗಳು (Village Accountant) ಲಂಚ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಲು ಶಿವಕುಮಾರ್ ತೆರಳಿದ್ದರು. ಈ ವೇಳೆ ಗರಂ ಆದ ತಹಶೀಲ್ದಾರ್ ಟೇಬಲ್ ಮೇಲಿದ್ದ ದಾಖಲೆಗಳನ್ನ ಎಸೆದು ಕೂಗಾಡಿದ್ದಾರೆ.

  morning digest important kannada news of the day 20 september 2022 mrq
  ತಹಶೀಲ್ದಾರ್


  2.Bihar Government: 'ನೋ-ಬ್ಯಾಗ್ ಡೇ' ಮತ್ತು ಕಡ್ಡಾಯ ಸ್ಪೋರ್ಟ್‌ ಪೀರಿಯಡ್‌ ಪರಿಚಯಿಸಲು ಸಜ್ಜಾಗ್ತಿದೆ ಬಿಹಾರ ಸರ್ಕಾರ

  ವಿದ್ಯಾರ್ಥಿಗಳ (Students) ಮೇಲಿನ ಭಾರದ ಹೊರೆಯನ್ನು ಕಡಿಮೆ ಮಾಡಲು ಬಿಹಾರ ಸರ್ಕಾರವು ಶಾಲೆಗಳಲ್ಲಿ 'ನೋ ಬ್ಯಾಗ್ ಡೇ' (No Bag Day) ನಿಯಮವನ್ನು ಮತ್ತು ವಾರಕ್ಕೊಮ್ಮೆ ಕ್ರೀಡೆಗಳಿಗೆ ಅವಧಿಯನ್ನು ಕಡ್ಡಾಯವಾಗಿ ಮೀಸಲಿರಿಸಲು ಸಜ್ಜಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

  morning digest important kannada news of the day 20 september 2022 mrq
  ಸಾಂದರ್ಭಿಕ ಚಿತ್ರ


  ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ದೀಪಕ್ ಕುಮಾರ್ ಸಿಂಗ್ (Dipak Kumar Singh) ಬ್ಯಾಗ್‌ ಬದಲಿಗೆ ವಾರಕ್ಕೊಮ್ಮೆಯಾದರೂ ವಿದ್ಯಾರ್ಥಿಗಳು ಊಟದ ಡಬ್ಬಿಯೊಂದಿಗೆ ಮಾತ್ರ ಶಾಲೆಗಳಿಗೆ ಬರುತ್ತಾರೆ, ಪುಸ್ತಕಗಳನ್ನು (Book) ಕೊಂಡೊಯ್ಯುವ ಅಗತ್ಯವಿಲ್ಲ, ಪ್ರಾಯೋಗಿಕ ಮತ್ತು ಪ್ರಾಯೋಗಿಕ ಕಲಿಕೆಗೆ ದಿನವನ್ನು ಮೀಸಲಿಡಲಾಗುವುದು ಎಂದು ತಿಳಿಸಿದರು.

  3.Samantha-Naga Chaitanya: ಸಮಂತಾ-ನಾಗ್ ಮಧ್ಯೆ ಬಂದರಾ ಹ್ಯಾಂಡ್ಸಂ ಮಹೇಶ್ ಬಾಬು? ಡಿವೋರ್ಸ್​ಗೆ ಅಸಲಿ ಕಾರಣ ಏನು?

  Samantha- Naga Chaitanya: ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನೆಗೆ ಏನು ಕಾರಣ ಎನ್ನುವುದು ಇನ್ನೂ ಕೂಡಅ ರಿವೀಲ್ ಆಗಿಲ್ಲ. ಆದರೆ ಈಗ ನಟ ಮಹೇಶ್ ಬಾಬು ಇವರಿಬ್ಬರ ಮಧ್ಯೆ ಬಂದರು ಎನ್ನುವ ಮಾತು ಕೇಳಿ ಬರುತ್ತಿದೆ. ಅಸಲಿಗೆ ಆಗಿದ್ದೇನು? ಟಾಲಿವಡ್​ನ ಮುದ್ದಾದ ಜೋಡಿ ನಾಗ ಚೈತನ್ಯ- ಸಮಂತಾ ವಿಚ್ಛೇದನೆ ಎಲ್ಲರಿಗೂ ಶಾಕ್ ನೀಡಿದೆ.

  morning digest important kannada news of the day 20 september 2022 mrq
  ಸಮಂತಾ, ನಾಗಚೈತನ್ಯ ಮತ್ತು ಮಹೇಶ್ ಬಾಬು


  ಇವರಿಬ್ಬರ ವಿಚ್ಛೇದನ ಎನೌನ್ಸ್ ಹೊರಬಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರಿಗೆ ಸಂಬಂಧಿಸಿದ ಸುದ್ದಿಗಳೇ ಹೈಲೈಟ್ ಆಗಿದ್ದವು. ಸಮಂತಾಳನ್ನು ಪ್ರೀತಿಸಿದ ನಾಗ ಚೈತನ್ಯ ನಾಲ್ಕು ವರ್ಷಗಳ ಕಾಲ ಅವರೊಂದಿಗೆ ವೈವಾಹಿಕ ಸಂಬಂಧವನ್ನು ಮುಂದುವರೆಸಿದ್ದರು. ಆದರೆ ಕೆಲವು ವೈಯುಕ್ತಿಕ ಕಾರಣಗಳಿಂದ ಇವರಿಬ್ಬರ ಸಂಬಂಧ ಹಾಳಾಗಿತ್ತು. ಚಾಯ್-ಸ್ಯಾಮ್ ವಿಚ್ಛೇದನ ಜನರಲ್ಲಿ ಹಾಟ್ ಟಾಪಿಕ್ ಆಯಿತು.

  4.Fish: ನೋಡ ನೋಡುತ್ತಿದ್ದಂತೆ ಬೀಚ್ ತುಂಬಾ ಮೀನುಗಳದ್ದೇ ರಾಶಿ! ಬೂತಾಯಿ ಮನೆಗೊಯ್ಯಲು ಮುಗಿಬಿದ್ದ ಜನ

  ಮಲ್ಪೆ (Malpe) ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ (Beach) ಜನಸಾಗರವೇ ಸೇರಿತ್ತು. ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು (Fish) ತುಂಬಿ ಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಅಷ್ಟಕ್ಕೂ ಅಲ್ಲಿ ಮೀನಿನ ಜಾತ್ರೆಯೇ ಶುರುವಾಗಿತ್ತು. ಯಾರಿಗೆ ಯಾರೂ ಕೇಳುವಂತಿಲ್ಲ, ಯಾವ ಮೀನಿಗೂ ದುಡ್ಡು ಕೊಡುವಂತಿಲ್ಲ.

  morning digest important kannada news of the day 20 september 2022 mrq
  ಸಾಂದರ್ಭಿಕ ಚಿತ್ರ


  ಹೀಗಾಗಿ ಜನ ಪುಕ್ಸಟ್ಟೆ ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಬೇಕಾದಷ್ಟು ಬೂತಾಯಿ ಮೀನುಗಳನ್ನು (Bhoothai fish, Sardine fish) ತುಂಬಿಕೊಂಡು ಮನೆಗೆ ಹೋದ್ರು. ಅಂದಹಾಗೆ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ನಿನ್ನೆ ರಾಶಿ ರಾಶಿ ಮೀನುಗಳು ಬಂದು, ದಡದ ಮೇಲೆ ಬಿದ್ದಿದ್ದವು.

  5.Gold and Silver Price: ಇಂದು ಮತ್ತಷ್ಟು ಇಳಿಕೆಯಾದ ಬಂಗಾರ, ಬೆಂಗಳೂರಲ್ಲಿ ಬೆಳ್ಳಿ ಕೊಂಚ ಭಾರ!

  ಇನ್ನೇನು ಸಾಲು ಸಾಲು ಹಬ್ಬಗಳ ಸೀಸನ್‌ ಶುರುವಾಗುತ್ತಿದೆ. ಮಹಿಳೆಯರು ಹಬ್ಬಕ್ಕೆ ಬಟ್ಟೆ-ಬಂಗಾರ ಅಂತಾ ಖರೀದಿಗೆ ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಕಳೆದ ಕೆಲ ದಿನಗಳಿಂದ ಏನೋ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ, ಆದರೆ ಹಬ್ಬದ ಸೀಸನ್‌ ನಲ್ಲಿ ಬೆಲೆ ಏರಿಕೆಯ ಸಾಧ್ಯತೆಗಳಿವೆ. ಆದರೆ ಇಂದು ಚಿನ್ನದ ಬೆಲೆ ಕಡಿಮೆಯಾಗಿದೆ. ಆದ್ರೆ ಬೆಂಗಳೂರಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ.

  morning digest important kannada news of the day 20 september 2022 mrq
  ಚಿನ್ನ


  ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ 4,585 ರೂ ಆಗಿದ್ದು ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಬಂಗಾರದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,620 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 45,900 ಆಗಿದೆ.
  Published by:Mahmadrafik K
  First published: