Morning Digest: ಬಿಜೆಪಿ ನಾಯಕರ ಕ್ರೆಡಿಟ್ ವಾರ್, ಸಾವರ್ಕರ್ ವಿವಾದಕ್ಕೆ ಟ್ವಿಸ್ಟ್, ನಟಿಗೆ ಅವಮಾನ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Veer Savarkar: ಸಾವರ್ಕರ್ ವಿವಾದಕ್ಕೆ ಬಿಗ್ ಟ್ವಿಸ್ಟ್; ಈ ಸುದ್ದಿಯಿಂದ ಕಾಂಗ್ರೆಸ್ಗೆ ತೀವ್ರ ಮುಖಭಂಗ

ಕಳೆದ ಐದು ದಿನಗಳಿಂದ ರಾಜ್ಯದಲ್ಲಿ ವೀರ್ ಸಾವರ್ಕರ್ (Veer Savarkar) ವಿವಾದ ಮುನ್ನೆಲೆಗೆ ಬಂದಿದೆ. ಆಡಳಿತರೂಢ ಬಿಜೆಪಿ ಸರ್ಕಾರ (BJP Government) ಮತ್ತು ಹಿಂದೂ ಸಂಘಟನೆಗಳು (Hindu Organizations) ವೀರ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿವೆ. ಇತ್ತ ಕಾಂಗ್ರೆಸ್ (Congress) ವೀರ್ ಸಾವರ್ಕರ್ ವಿರುದ್ಧ ಹೇಳಿಕೆಯನ್ನು ನೀಡುತ್ತಿದೆ. ಇಷ್ಟು ದಿನ ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವಂತಹ ಸುದ್ದಿ ಇದಾಗಿದೆ. ತುಮಕೂರಿನಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ವೀರ ಸಾವರ್ಕರ್ ಹೆಸರಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ತುಮಕೂರು ನಗರದ ಸೋಮೇಶ್ವರಪುರಂ ಬಡಾವಣೆಯ ಉದ್ಯಾನವನಕ್ಕೆ ಸಾವರ್ಕರ್ ಎಂದು ಹೆಸರಿಡಲಾಗಿದೆ.

2. Siddaramaiah: ಧರ್ಮ ಒಡೆದ ಬಗ್ಗೆ ಸಿದ್ದರಾಮಯ್ಯ ಪಶ್ಚಾತಾಪ ? ರಂಭಾಪುರೀ ಶ್ರೀಗಳ ಹೇಳಿಕೆ, ರಾಜಕೀಯದಲ್ಲಿ ಸಂಚಲನ

ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaaih) ಅವರು ಶೃಂಗೇರಿ ಶಾರದಾಂಭೆ (Sringeri Temple) ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭೇಟಿ ಆಶೀರ್ವಾದ ಪಡೆದರು. ಅಲ್ಲಿಂದ ರಂಭಾಪುರೀ ಪೀಠಕ್ಕೆ ತೆರಳಿ ಶ್ರೀ ಪ್ರಸನ್ನರೇಣುಕಾ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರನ್ನು (Rambhapuri Swamiji) ಭೇಟಿ ಮಾಡಿ ಆಶೀರ್ವಾದ ಪಡೆದು ಕೊಂಡರು. ಧರ್ಮ ಒಡೆಯುವುದು ನನ್ನ ಉದ್ದೇಶವಾಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಇನ್ಯಾವತ್ತು ಧರ್ಮದ ವಿಷಯಕ್ಕೆ ಹೋಗುವುದಿಲ್ಲ ಎಂದು ಸಿದ್ಧರಾಮಯ್ಯ ಅವರು ಪಶ್ವಾತಾಪ ವ್ಯಕ್ತಪಡಿಸಿದರು ಎಂದು ರಂಭಾಪುರೀ ಶ್ರೀ ಪ್ರಸನ್ನರೇಣುಕಾ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದರು. ರಾಜ್ಯ, ಜನರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆಂದು ಸ್ವಾಮೀಜಿ ಹೇಳಿದರು.

3.Hira Mani: ಪಾಕ್​ನ ಖ್ಯಾತ​ ನಟಿಗೆ ವೇದಿಕೆಯಲ್ಲೇ ಅವಮಾನ, ಅಭಿಮಾನಿಗಳಿಂದ ಇದೆಂತಹಾ ವರ್ತನೆ!

ಪಾಕಿಸ್ತಾನಿ (Pakistan) ಟಿವಿ ನಟಿ ಹೀರಾ ಮಣಿ (Hira Mani) 'ಪ್ರೀತ್ ನಾ ಕರಿಯೋ ಕೋಯಿ', 'ದೋ ಬೋಲ್' ಮತ್ತು 'ಕಾಶ್ಫ್' ನಂತಹ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. ಅನೇಕ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವುದರ ಜೊತೆಗೆ, ಹೀರಾ ಓರ್ವ ಗಾಯಕಿ (Singer) ಕೂಡಾ. ಆದರೆ ಇತ್ತೀಚೆಗೆ ಅವರ ಸಂಗೀತ ಕಛೇರಿಯೊಂದರಲ್ಲಿ ಸಂಭವಿಸಿದ ಘಟನೆಯಿಂದ ಅವರು ಅವರು ಭಾರೀ ಮುಜುಗರಕ್ಕೊಳಗಾಗಿದ್ದಾರೆ. ಹೀರಾಗೆ ತಾನೊಬ್ಬ ನಟಿ (Actress) ಹಾಗೂ ಗಾಯಕಿ ಎಂದು ಬಹಳಷ್ಟು ಹೆಮ್ಮೆ ಇದೆ. ಆದರೆ ಈ ಗೋಷ್ಠಿಯಲ್ಲಿ ಅವರ ಹಾಡಿಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ ರೀತಿ ತುಂಬಾ ಆಘಾತಕಾರಿಯಾಗಿದೆ. ಸಂಗೀತ ಕಚೇರಿಯ ವಿಡಿಯೋ ವೈರಲ್ ಆಗಿದ್ದು, ಹಾಡುವುದನ್ನು ನಿಲ್ಲಿಸಿ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಹಂತಕ್ಕೆ ತಲುಪಿದ್ದಾರೆ.

4.Actress Namita: ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅವಳಿ ಗಂಡು ಮಕ್ಕಳಿಗೆ ತಾಯಿಯಾದ ನಟಿ ನಮಿತಾ

ಬಹುಭಾಷಾ ನಟಿ ನಮಿತಾ ಅವರು ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಘಳಿಗೆಯಲ್ಲಿ ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನವೇ ನಟಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಟಿ ಶುಕ್ರವಾರ ಆಗಸ್ಟ್ 19 ರಂದು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹರೇ ಕೃಷ್ಣ! ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ನಾವು ಅವಳಿ ಗಂಡುಮಕ್ಕಳನ್ನು ಸ್ವಾಗತಿಸಿದ್ದೇವೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಯಾವಾಗಲೂ ಅವರೊಂದಿಗೆ ಇರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

5.Belagavi Politics: ಖಾನಾಪುರ ಕ್ಷೇತ್ರದಲ್ಲಿ ಕಮಲ ಕಲಿಗಳ ಮಧ್ಯೆ ಕ್ರೆಡಿಟ್ ವಾರ್; ಬೆಳಗಾವಿ ಬಿಜೆಪಿಯಲ್ಲಿ ಕಿಚ್ಚು ಹಚ್ಚಿದ ಮಾಜಿ ಶಾಸಕನ ಆಡಿಯೋ

ಬೆಳಗಾವಿ ಜಿಲ್ಲೆಯ ಖಾನಾಪುರ (Khanapura, Belagavi) ಮರಾಠಿ ಭಾಷಿಕರ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಪಡಿತರ ವಿತರಣೆ ವಿಚಾರವಾಗಿ ಇಲ್ಲಿ ಕಮಲ ನಾಯಕರ (BJP Leaders) ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಮಲ‌ ನಾಯಕರ ಪ್ರತಿಷ್ಠೆಯ ಫೈಟ್‌ಗೆ ಕಾಡಂಚಿನ ಗ್ರಾಮಸ್ಥರು ಹೈರಾಣಾಗಿದ್ದಾರೆ. ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವಿನ ತಿಕ್ಕಾಟ ಬಹಿರಂಗಗೊಂಡಿದೆ‌. ಮಾಜಿ ಶಾಸಕ ಅರವಿಂದ್ ಪಾಟೀಲ್ (Former MLA Aravind Patil), ಸೋನಾಲಿ ಸರ್ನೋಬತ್ (BJP Ticket Aspirants Sonali Sarnobath) ನಡುವೆ ಸಮರ ಶುರುವಾಗಿದೆ.
Published by:Mahmadrafik K
First published: