• Home
  • »
  • News
  • »
  • state
  • »
  • Top 5 News: ಭಾರತ್ ಜೋಡೋ ಯಾತ್ರೆ 2ನೇ ದಿನ, ಗೆಹ್ಲೋಟ್ ವರಸೆ ಬದಲು, ಇಂದು ಚಿನ್ನ ಖರೀದಿಸಿ; ಬೆಳಗಿನ ಟಾಪ್ ನ್ಯೂಸ್​

Top 5 News: ಭಾರತ್ ಜೋಡೋ ಯಾತ್ರೆ 2ನೇ ದಿನ, ಗೆಹ್ಲೋಟ್ ವರಸೆ ಬದಲು, ಇಂದು ಚಿನ್ನ ಖರೀದಿಸಿ; ಬೆಳಗಿನ ಟಾಪ್ ನ್ಯೂಸ್​

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Congress Presidential Election: ಹುದ್ದೆ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ: ಸೋನಿಯಾ ಅಸಮಾಧಾನಕ್ಕೆ ನಡುಗಿದ ಗೆಹ್ಲೋಟ್​


ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ (Congress Presidential Election) ಈ ಬಾರಿ ರಾಜಕೀಯದ ದೊಡ್ಡ ಅಖಾಡವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ಹೊರತಾಗಿ ಹಲವು ನಾಯಕರು ಹಕ್ಕು ಚಲಾಯಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿದೆ. ಆದರೆ ಇದಕ್ಕೂ ಮುನ್ನ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ (Sonia Gandhi) ಕೂಡ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಯ ರಾಜಕೀಯ ಗದ್ದಲ ಮತ್ತು ಹಗ್ಗಜಗ್ಗಾಟದ ವಿಚಾರದಲ್ಲಿ ತೀವ್ರ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan Chief Minister Ashok Gehlot) ಅವರು ಕಾಂಗ್ರೆಸ್ ಶಾಸಕರ ಬಂಡಾಯಕ್ಕೆ ಸ್ಪೀಕರ್ ಸಿಪಿ ಜೋಶಿ ಮತ್ತು ರಾಜ್ಯ ನಗರಾಭಿವೃದ್ಧಿ ಸಚಿವ ಶಾಂತಿ ಧರಿವಾಲ್ ಕಾರಣ ಎಂದು ಆರೋಪಿಸಿದ್ದಾರೆ.


morning digest important kannada news of the day 1st october 2022 mrq
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್


2.Bharat Jodo Yatra: ಗುಂಡ್ಲುಪೇಟೆಯಿಂದ ಮೈಸೂರಿಗೆ ಭಾರತ್ ಜೋಡೋ; 2ನೇ ದಿನದ ಪಾದಯಾತ್ರೆ ಡೀಟೈಲ್ಸ್ ಇಲ್ಲಿದೆ


ಜಿಟ ಜಿಟಿ ಮಳೆ (Rains) ನಡುವೆಯೇ ಕರ್ನಾಟಕದಲ್ಲಿ 2ನೇ ದಿನ ಭಾರತ್ ಜೋಡೋ ಱಲಿ (Bharat Jodo Rally) ಆರಂಭಗೊಂಡಿದೆ. ಶುಕ್ರವಾರ ಗುಂಡ್ಲುಪೇಟೆಯಲ್ಲಿ (Gundlupet, Chamarajanagara) ಪಾದಯಾತ್ರೆ ಅದ್ಧೂರಿ ಸಕ್ಸಸ್ ಬೆನ್ನಲ್ಲೇ ಕಾಂಗ್ರೆಸ್ ಪಾಳಯ ಇದೇ ಖುಷಿಯಲ್ಲಿ ಮಳೆಯ ಸಿಂಚನದ ನಡುವೆ ಹೆಜ್ಜೆ ಹಾಕುತ್ತಿದೆ. ಇಂದು ಬೇಗೂರಿನಿಂದ ತಾಂಡವಪುರಕ್ಕೆ (Beguru To Tandavapura) ಪಾದಯಾತ್ರೆ ನಡೆಯಲಿದ್ದು, ಮಳೆಯಿಂದಾಗಿ ಮೂರು ಕಿಲೋ ಮೀಟರ್ ಪಾದಯಾತ್ರೆ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.


morning digest important kannada news of the day 1st october 2022 mrq
ಭಾರತ್ ಜೋಡೋ ಯಾತ್ರೆ


3.Karnataka Weather Report: ರಾಜ್ಯದ ಹಲವೆಡೆ ಮತ್ತೆ ವರುಣನ ಆಟ ಶುರು; ಬೆಂಗಳೂರಲ್ಲಿ ರಾತ್ರಿಯಿಡೀ ಜಿಟಿಜಿಟಿ ಮಳೆ


ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ (North Karnataka Rains) ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಸಹ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಮಳೆಯಾಗುವ ನಿರೀಕ್ಷೆಗಳಿವೆ. ಇತ್ತ ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur) , ಬೆಂಗಳೂರು ವ್ಯಾಪ್ತಿಯಲ್ಲಿಯೂ ಸಣ್ಣ ಮಳೆಯಾದ್ರೆ, ಕರಾವಳಿ ಮತ್ತು ಮಲೆನಾಡು ಪರಿಸರದಲ್ಲಿ ಮಳೆಯ ಪ್ರಮಾಣ ಕೊಂಚ ಏರಿಕೆಯಾಗಿದೆ. ಬೆಂಗಳೂರಲ್ಲಿ (Bengaluru Rains) ರಾತ್ರಿ ಆರಂಭವಾದ ಜಿಟಿ ಜಿಟಿ ಮಳೆ, ಮುಂಜಾನೆ ತನಕ ಸುರಿದಿದೆ. ಮೆಜಸ್ಟಿಕ್, ಕಾರ್ಪೋರೇಷನ್, ವಿಧಾನಸೌಧ, ಚಂದ್ರಾಲೇಔಟ್, ಆರ್ ಟಿ ನಗರ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ರಾತ್ರಿ ಮನೆಗೆ ಹೋಗಲು ಜನ ಪರದಾಡಿದರು.


morning digest important kannada news of the day 1st october 2022 mrq
ಸಾಂದರ್ಭಿಕ ಚಿತ್ರ


4.Gold-Silver Price Today: ಬಂಗಾರ ಖರೀದಿಗೆಷ್ಟು ಸೂಕ್ತ ಇಂದಿನ ದಿನ, ಹೀಗಿದೆ ನೋಡಿ ರೇಟ್!


ಚಿನ್ನದ ದರ ಏರಿಕೆ- ಇಳಿಕೆಯಾಟ ಚಿನ್ನ ಖರೀದಿಗೆ ಸಿದ್ಧತೆ ನಡೆಸಿದವರನ್ನು ಬಹಳಷ್ಟು ಗೊಂದಕ್ಕೆ ದೂಡಿದೆ. ಸದ್ಯ ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ದರದಲ್ಲಿ ನೂರು ರೂಪಾಯಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,655 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,078 ಆಗಿದೆ.


morning digest important kannada news of the day 1st october 2022 mrq
ಚಿನ್ನಾಭರಣ


ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,240 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,624 ಆಗಿದೆ. ಅದೇ ರೀತಿ ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,550 ಆದರೆ 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,780 ನೂರು ಗ್ರಾಂ (100GM) ಆಗಿದೆ. ಅಂತೆಯೇ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,65,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ 5,07,800 ಆಗಿದೆ.


morning digest important kannada news of the day 1st october 2022 mrq
ಸಾಂದರ್ಭಿಕ ಚಿತ್ರ


5.RBI: ಇಂದಿನಿಂದ ಕ್ರೆಡಿಟ್ ಕಾರ್ಡ್​ನ 3 ನಿಯಮಗಳು ಬದಲು,


ಈ ವರ್ಷದ ಏಪ್ರಿಲ್‌ನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ (Debit Card) ವಿತರಣೆಗೆ ಹೊಸ ನಿಯಮಗಳನ್ನು ಹೊರಡಿಸಿತ್ತು. ಈ ಹೊಸ ನಿಯಮಗಳು ಕ್ರೆಡಿಟ್ ಕಾರ್ಡ್ ರದ್ದತಿ, ಬಿಲ್ಲಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ಹೊಸ ನಿರ್ಬಂಧಗಳನ್ನು ಒಳಗೊಂಡಿವೆ. ಇದು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಟೋಕನೈಸೇಶನ್ ನಡೆಸುವ ನಿಯಮಗಳನ್ನು ಸಹ ಒಳಗೊಂಡಿದೆ. ಈ ಮೊದಲು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ (Credit Card) ಸಂಬಂಧಿಸಿದ ಹೊಸ ನಿಯಮಗಳನ್ನು ಜುಲೈ 1 ರಿಂದ ಜಾರಿಗೆ ತರಬೇಕಿತ್ತು, ಆದರೆ ಈಗ ಟೋಕನೈಸೇಶನ್‌ಗೆ ಕೊನೆಯ ದಿನಾಂಕವನ್ನು 30 ಸೆಪ್ಟೆಂಬರ್ 2022 ಮಾಡಲಾಗಿದೆ.

Published by:Mahmadrafik K
First published: