Morning Digest: ಫಾಜಿಲ್ ಕೊಲೆ ಕೇಸ್ ಸ್ಪೋಟಕ ಸುಳಿವು, ಅರ್ಪಿತಾ ಮನೆಯಲ್ಲೇನಿದೆ, ಚಂದನ್​ ಮೇಲೆ ಹಲ್ಲೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Arpita Mukherjee: ನಟಿ ಅರ್ಪಿತಾ ಮನೆಯಲ್ಲಿ ದುಬಾರಿ ಕಾರು! ಇವೆಲ್ಲವೂ ಪಾರ್ಥ ಚಟರ್ಜಿ ಕೊಟ್ಟ ಗಿಫ್ಟ್ ಅಂತೆ!

ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ (Teachers Recruitment Scam) ತನಿಖೆ (Enquiry) ಚುರುಕುಗೊಂಡಿದೆ. ಈಗಾಗಲೇ ಇಡಿ (ED) ಬಲೆಗೆ ಬಿದ್ದಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಹಾಗೂ ನಟಿ ಅರ್ಪಿತಾ ಮುಖರ್ಜಿ (Arpita Mukherjee) ವಿಚಾರಣೆ ಮುಂದುವರೆದಿದೆ. ಈ ವೇಳೆ ಬಗೆದಷ್ಟು ಹಗರಣದ ರಹಸ್ಯಗಳು ಹೊರ ಬರುತ್ತಲೇ ಇವೆ. ಅರ್ಪಿತಾ ಪ್ಲಾಟ್‌ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅರ್ಪಿತಾ ಮುಖರ್ಜಿಗೆ ಪಾರ್ಥ ಚಟರ್ಜಿ ದುಬಾರಿ ಕಾರುಗಳನ್ನು ಗಿಫ್ಟ್ (Costly Car Gift) ಮಾಡಿರೋ ವಿಚಾರ ಕೂಡ ಬೆಳಕಿಗೆ ಬಂದಿದೆ.

2.Surathkal Murder: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು; ಕೃತ್ಯ ನಡೆಸಿದ ನಾಲ್ವರ ಮಾಹಿತಿ ಲಭ್ಯ

ಮಂಗಳೂರಿನ ಸುರತ್ಕಲ್ ನಲ್ಲಿ (Surathkal Murder) ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಗೆ (Fazil Murder) ಸಂಬಂಧಿಸಿದಂತೆ ಪೊಲೀಸರಿಗೆ (Mangaluru Police) ಸ್ಫೋಟಕ ಸುಳಿವು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರಿಂದ ಕೃತ್ಯ ನಡೆದಿರುವ ಮಾಹಿತಿ ಮಂಗಳೂರು ಪೊಲೀಸರಿಗೆ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಹೇಳಲಾಗುತ್ತಿದೆ. ಕೃತ್ಯ ನಡೆಸುವ ಸಂದರ್ಭ ಅಮಿತ್ ಎಂಬಾತ ಕಾರು ಚಾಲಕನಾಗಿದ್ದ (Car Driver) ಎಂದು ತಿಳಿದು ಬಂದಿದೆ. ಇಂದು ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸುವ ಸಾಧ್ಯತೆಗಳಿವೆ.

3.Belagavi Politics: ಕಾಂಗ್ರೆಸ್ ಬಣ ರಾಜಕೀಯ; ಜಾರಕಿಹೊಳಿ ಸಹೋದರರಿಗೆ ಫಿರೋಜ್ ಸೇಠ್ ಟಾಂಗ್

ರಾಜ್ಯದಲ್ಲಿ ಮುಂದಿನ ಚುನಾವಣೆಗೆ (Assembly Election 2023) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಭರ್ಜರಿ ತಯಾರಿಯನ್ನು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರೋ ಮಾಜಿ ಶಾಸಕರು, ಮುಖಂಡರು ಚುನಾವಣೆಗೆ ಸ್ಪರ್ಧೆಗೆ ಸಿದ್ದತೆಯನ್ನು ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ (Congress) ಪಕ್ಷಕ್ಕೆ ರಾಜ್ಯದ ಎಲ್ಲಾ ಜಿಲ್ಲೆ, ವಿಧಾನಸಭೆ ಕ್ಷೇತ್ರದಲ್ಲಿ ಬಣ ರಾಜಕೀಯ ತಲೆನೋವು ಆಗಿದೆ. ಇತ್ತೀಚಿಗೆ ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಸಭೆ ನಡೆಯಿತು. ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಪಾಲ್ಗೊಂಡಿದ್ದರು. ಆದರೆ ಸಭೆಗೆ ಸ್ಥಳೀಯ ಮಾಜಿ ಶಾಸಕ ಫಿರೋಜ್ ಸೇಠ್ (Firoz Saith) ಹಾಗೂ ನಗರ ಘಟಕದ ಅಧ್ಯಕ್ಷ ರಾಜು ಸೇಠ್ (Raju Saith) ಆಹ್ವಾನ ನೀಡಿರಲಿಲ್ಲ. ಇದು ನಗರ ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಸೇಠ್ ಬಣ ರಾಜಕೀಯ ಮತ್ತೊಮ್ಮೆ ಬಹಿರಂಗವಾಗಿತ್ತು.

4.Gold and Silver Price: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ-ಬೆಳ್ಳಿ! ಇಂದಿನ ಬೆಲೆ ಎಷ್ಟಿದೆ ತಿಳಿಯಿರಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆಯಲ್ಲಿ (Gold Rate) ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಪ್ರತಿ ಗ್ರಾಂ ಆಭರಣ (Jewellery) ಚಿನ್ನದ ಬೆಲೆ ರೂ. 4,720 ಆಗಿದೆ. ಈಗಾಗಲೇ ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗಲ್ಲ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,250 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,250 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,150, ರೂ. 47,200, ರೂ. 47,200 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,350 ರೂ. ಆಗಿದೆ.

5.Breaking News: ಕನ್ನಡ ಕಿರುತೆರೆ ನಟ ಚಂದನ್‌ಗೆ ಕಪಾಳಮೋಕ್ಷ! ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್

ಕನ್ನಡ ಕಿರುತೆರೆಯ (Kannada Serials) ಖ್ಯಾತ ನಟ (Actor) ಚಂದನ್ ಕುಮಾರ್ (Chandan Kumar) ಮೇಲೆ ಹಲ್ಲೆ (Attack) ನಡೆದಿದೆ. ಕನ್ನಡ ಕಿರುತೆರೆ ಜೊತೆಗೆ ಹಿರಿ ತೆರೆಯಲ್ಲೂ (Cinema) ಚಂದನ್ ಬ್ಯುಸಿ ಇದ್ದರು. ಅತ್ತ ತೆಲುಗು ಧಾರಾವಾಹಿಗಳಲ್ಲೂ (Telugu Serials) ನಟಿಸುತ್ತಾ ಆಂಧ್ರ ಪ್ರದೇಶ (Andhra Pradesh), ತೆಲಂಗಾಣ (Telangana) ಜನರ ಮನ ಗೆದ್ದಿದ್ದರು. ಇದೀಗ ತೆಲುಗು ಧಾರಾವಾಹಿಯೊಂದರ ಚಿತ್ರೀಕರಣದ (Shooting) ವೇಳೆ ಚಂದನ್ ಮೇಲೆ ಹಲ್ಲೆ ನಡೆಸಲಾಗಿದೆ.
Published by:Mahmadrafik K
First published: