Top 5 News: ಇವತ್ತು 6ನೇ ದಿನದ ಸದನ-ಕದನ, ಯುವ ನಟಿ ಸಾವು, ಬ್ರಿಟನ್‌ ರಾಣಿ ಅಂತ್ಯಕ್ರಿಯೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

 • Share this:
  1.Session: ಸದನದಲ್ಲಿಂದು ಪ್ರತಿಧ್ವನಿಸಲಿದೆ PSI ಅಕ್ರಮ ಕೇಸ್​, 40 ಪರ್ಸೆಂಟ್​ ಪ್ರಸ್ತಾಪಿಸಿ ಬಿಜೆಪಿಗೆ ಕಾಂಗ್ರೆಸ್ ಡಿಚ್ಚಿ; ಭೂ ಹಗರಣ ಬಿಚ್ಚಿಡ್ತಾರಾ HDK?

  ಇಂದು ವಿಧಾನಮಂಡಲ ಅಧಿವೇಶನದ (Assembly Session) ಆರನೇ ದಿನ. ಇವತ್ತು ಸರ್ಕಾರವನ್ನು (Government) ಕಟ್ಟಿ ಹಾಕಲು ವಿಪಕ್ಷಗಳು (Opposition Party) ಸಿದ್ಧತೆ ನಡೆಸಿವೆ. ಇತ್ತ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲು ಸಚಿವ ಸಂಪುಟ ಸಿದ್ಧವಾಗಿದೆ. ಇಂದು ಸದನದಲ್ಲಿ ಪಿಎಸ್​ಐ ನೇಮಕಾತಿ (PSI Recruitment Scam) ವೇಳೆ ನಡೆದ ಅಕ್ರಮವನ್ನು ಪ್ರಸ್ತಾಪಿಸಲು ಕಾಂಗ್ರೆಸ್ (Congress) ಪ್ಲಾನ್ ಮಾಡಿಕೊಂಡಿದೆ. ಇತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡ್ತಾರಾ ಅನ್ನೋ ಕುತೂಹಲ ಸಹ ಮನೆ ಮಾಡಿದೆ. ಬಿಜೆಪಿಯ ಸಚಿವರು ಯಾರ ಪ್ರಶ್ನೆಗೆ ಯಾರು ಮತ್ತು ಹೇಗೆ ಉತ್ತರಿಸಬೇಕೆಂದು ಪೂರ್ವ ತಯಾರಿ ಸಹ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಈ ಹಿಂದೆ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ವಿಷಯವನ್ನು ಮುನ್ನಲೆಗೆ ತರಲು ಕಮಲ ಪಾಳಯ ಸಿದ್ಧತೆ ಮಾಡಿಕೊಂಡಿದೆ.

  2.Karnataka Politics: ಸಿದ್ದು 'ಕೈ' ಸೇರಿದ ‘40%’ ಅಸ್ತ್ರ; ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ಹೋರಾಟ

  ಬಿಜೆಪಿ ಸರ್ಕಾರಕ್ಕೆ (Karnataka BJP Government) 40% ಕಮಿಷನ್ (Commission Allegation) ಕಪ್ಪು ಚುಕ್ಕೆ ಅಂಟಿಕೊಂಡಿದ್ರೆ. ಮತ್ತೊಂದೆಡೆ ಇದನ್ನೇ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್ (Congress) ತಂತ್ರ ಹೆಣೆದಿದೆ. 2023ರ ಚುನಾವಣೆಗೆ (Assembly Election 2023) ಕಾಂಗ್ರೆಸ್‌ ಭಾರೀ ಸಿದ್ಧತೆ ಮಾಡಿಕೊಳ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ರಥಯಾತ್ರೆಗೆಂದೇ ಪ್ರತ್ಯೇಕ ಬಸ್​ ವ್ಯವಸ್ಥೆ ಮಾಡಲಾಗಿದೆ.

  morning digest important kannada news of the day 19 September 2022 mrq
  ಮಾಜಿ ಸಿಎಂ ಸಿದ್ದರಾಮಯ್ಯ


  40% ಕಮಿಷನ್​ ಆರೋಪ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹೋರಾಡಲಿದ್ದು, ನವೆಂಬರ್ ಅಂತ್ಯಕ್ಕೆ ಸಿದ್ದರಾಮಯ್ಯ ಅವರ ರಥಯಾತ್ರೆ (Siddaramaiah Rathayatre) ಶುರುವಾಗುತ್ತೆ ಎನ್ನಲಾಗ್ತಿದೆ. ಈ ಹೋರಾಟ ಕೃಷ್ಣ ಪಾಂಚಜನ್ಯ ಮಾದರಿಯಲ್ಲಿ ನಡೆಯಲಿದೆ ಎನ್ನಲಾಗ್ತಿದೆ.

  3.Elizabeth's Funeral: ಇಂದು ನಡೆಯಲಿದೆ ಬ್ರಿಟನ್‌ ರಾಣಿ ಅಂತ್ಯಕ್ರಿಯೆ, ರಾಷ್ಟ್ರಪತಿ ಮುರ್ಮು ಸೇರಿ ಹಲವು ಗಣ್ಯರಿಂದ ಅಂತಿಮ ನಮನ

  ಇಂಗ್ಲೆಂಡ್‌ (England) ರಾಜಮನೆತನದ ರಾಣಿ ಎಲಿಜಬೆತ್ II (Queen Elizabeth II) ಅವರ ಅಂತ್ಯ ಸಂಸ್ಕಾರ (Funeral) ಇಂದು ನಡೆಯಲಿದೆ. ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕ್ಯಾಸ್ಟಲ್ ಅರಮನೆಯಲ್ಲಿ (Balmoral Castle Palace in Scotland) ಇದೇ ಸೆಪ್ಟೆಂಬರ್‌ 8ರಂದು ರಾಣಿ ಎಲಿಜಬೆತ್ ನಿಧನರಾಗಿದ್ದರು. 10 ದಿನಗಳ ಶೋಕಾಚರಣೆ (mourning) ಬಳಿಕ ಇಂದು ಅವರ ಅಂತ್ಯಸಂಸ್ಕಾರವು ಲಂಡನ್ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ (London's Westminster Abbey) ನೆರವೇರಲಿದೆ.

  morning digest important kannada news of the day 19 September 2022 mrq
  ರಾಣಿಯ ಶವಪೆಟ್ಟಿಗೆ


  ಮಧ್ಯಾಹ್ನ 2 ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿ ಸಂಜೆ 7ಕ್ಕೆ ವೆಸ್ಟ್‌ಮಿನಿಸ್ಟರ್‌ ಅಬೆಗೆ ತಲುಪಲಿದೆ. ನಂತರ ರಾತ್ರಿ 12 ಗಂಟೆಗೆ ಪತಿ ಫಿಲಿಪ್‌ (Philip) ಪಕ್ಕದಲ್ಲೇ ಎಲಿಜಬೆತ್‌ ಸಮಾಧಿಯಾಗಲಿದೆ.

  5.Tamil Actress Deepa: ನಟಿ ದೀಪಾ ಮೃತದೇಹದ ಪಕ್ಕ ಇದ್ದ ಡೆತ್​ ನೋಟ್​ನಲ್ಲಿ ಏನಿತ್ತು?

  ಸೌತ್ ನಟಿ ದೀಪಾ ಸಾವಿನ ಕುರಿತು ಲೇಟೆಸ್ಟ್ ಅಪ್ಡೇಟ್ ಒಂದು ಬಂದಿದ್ದು ನಟಿ ಪ್ರೇಮ ವೈಫಲ್ಯದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಪೊಲೀಸರು ದೀಪಾ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಲವ್​ ಲೈಫ್ ಸಮಸ್ಯೆಗಳಿಂದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಿದ್ದಾರೆ.

  morning digest important kannada news of the day 19 September 2022 mrq
  ನಟಿ ದೀಪಿಕಾ


  ಸೌತ್ ಕಿರುತೆರೆ ಲೋಕದಲ್ಲಿ ಮತ್ತೊಮ್ಮೆ ನಟಿಯೊಬ್ಬರ ಸಾವು ದುಃಖದ ಛಾಯೆ ಮೂಡಿಸಿದೆ. ದೀಪಾ ತನ್ನದೇ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ರಿವೀಲ್ ಆಗಿದ್ದು ಶನಿವಾರದಿಂದ ನಟಿ ತನ್ನ ಪೋಷಕರ ಕರೆಗೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ. ಆ ಸಂದರ್ಭದಲ್ಲಿ ಅನುಮಾನ ಹೆಚ್ಚಾಗಿ ಸ್ನೇಹಿತೆ ದೀಪಾ ಅವರ ಫ್ಲಾಟ್‌ಗೆ ತಲುಪಿದಾಗ ಹೆಪ್ಪುಗಟ್ಟಿದ ಶವ ಪತ್ತೆಯಾಗಿದೆ.
  Published by:Mahmadrafik K
  First published: