Morning Digest: ಮಳೆರಾಯನ ಬ್ರೇಕ್, ಬಾಬಾ ವಂಗಾ ಭವಿಷ್ಯ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
1.Baba Vanga: ಭಾರತಕ್ಕೆ ಕಾದಿದೆಯಾ ಮಹಾ ಗಂಡಾಂತರ? ವೈರಲ್ ಆಗ್ತಿದೆ ಬಾಬಾ ವಂಗಾ ನುಡಿದಿದ್ದ ಭವಿಷ್ಯ!

ಬಾಬಾ ವಂಗಾ (Baba Vanga) ನುಡಿದಿದ್ದರು ಎನ್ನಲಾದ ಮತ್ತೊಂದು ಭವಿಷ್ಯ (Prediction) ಇದೀಗ ವೈರಲ್ (Viral) ಆಗಿದೆ. ಬಲ್ಗೇರಿಯನ್ ಅತೀಂದ್ರಿಯ ಭವಿಷ್ಯಗಾರ್ತಿ (Bulgarian mystic diviner) ಹಾಗೂ ಗಿಡಮೂಲಿಕೆಗಾರ್ತಿಯೂ ಆಗಿದ್ದ ಬಾಬಾ ವಂಗ ನುಡಿದಿದ್ದ ಭವಿಷ್ಯಗಳೆಲ್ಲವೂ ಈ ಹಿಂದೆ ನಿಜವಾಗಿವೆ ಎನ್ನುವುದು ಬಹುತೇಕರು ಹೇಳುವ ಮಾತು. ಉಗ್ರರು (Terrorist) ಅಮೆರಿಕದ (America) ಮೇಲೆ ನಡೆಸಿದ 9/11ರ ದಾಳಿ, ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು… ಇಂಥ ಹತ್ತು ಹಲವು ಘಟನೆಗಳನ್ನು ಬಹಳ ಮುಂಚೆಯೇ ಬಾಬಾ ವಂಗಾ ನುಡಿದಿದ್ದರು. ಇದೀಗ ಕೊರೋನಾದಿಂದ (corona) ತತ್ತರಿಸಿ ಜಗತ್ತು ಸುಧಾರಿಸಿ ಕೊಳ್ಳುತ್ತಿದೆ. ಈ ಹೊತ್ತಲ್ಲೇ ಬಾಬಾ ವಂಗಾ ನುಡಿದಿದ್ದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ.

2. Election 2023: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ? ಏನಿದು ಬಿಸಿ ಬಿಸಿ ಚರ್ಚೆ

ಕೋಲಾರ ವಿಧಾನಸಭಾ ಕ್ಷೇತ್ರದಿಂದ (Kolar Assembly Constituency) 2023ರ ಚುನಾವಣೆಗೆ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯರಿಗೆ (Former CM Siddaramaiah), ಈಗಾಗಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರ (Kolar And Chikkaballapur) ಎರಡೂ ಜಿಲ್ಲೆಯ ಕೈ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರಿಂದ ಮನವಿ ಮಾಡಿದ್ದಾರೆ, ಮೊನ್ನೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಭೇಟಿಯಾಗಿ ಒಕ್ಕೂರಲ ಮನವಿ ಸಲ್ಲಿಸಿದ್ದಾರೆ.

3.Karnataka Weather Report: ಕೆಲ ಭಾಗಗಳಲ್ಲಿ ಕೊಂಚ ಬ್ರೇಕ್ ನೀಡಿದ ವರುಣ; ದೇವಸ್ಥಾನ, ಸೇತುವೆಗಳು ಜಲಾವೃತ

ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಮಳೆ (Karnataka Rains) ಇಂದು ಕೊಂಚ ಇಳಿಮುಖವಾಗುವ ಸಾಧ್ಯತೆಗಳಿವೆ. ನಿರಂತರ ಮಳೆಯಿಂದಾಗಿ (Heavy Rainfall) ಕರುನಾಡಿನ ಜನತೆಗೆ ಸೂರ್ಯದೇವನ (Sun) ದರ್ಶನವೇ ಸಿಗುತ್ತಿಲ್ಲ. ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗಲಿದೆ. ಇನ್ನುಳಿದಂತೆ ಕರಾವಳಿ, ಬೆಂಗಳೂರು, ಮೈಸೂರು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಮಳೆಯ ಜತೆ ಗಾಳಿಯ (Wind) ವೇಗ ಹೆಚ್ಚಾಗುತ್ತಿರುವ ಪರಿಣಾಮ ಚಳಿ ಪ್ರಮಾಣ (Cold Weather) ಸಹ ಕೊಂಚ ಏರಿಕೆಯಾದಂತೆ ಕಾಣಿಸುತ್ತಿದೆ.

4.Gold Price: ನಿನ್ನೆಯ ಬೆಲೆಯನ್ನೇ ಉಳಿಸಿಕೊಂಡ ಚಿನ್ನ, ಸ್ವಲ್ಪ ಏರಿಕೆ ಕಂಡ ಬೆಳ್ಳಿ! ಇಂದಿನ ದರ ವಿವರ ಹೀಗಿದೆ ನೋಡಿ

ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆಯಲ್ಲಿ (Gold Price) ಯಾವ ವ್ಯತ್ಯಾಸವೂ ಆಗಿಲ್ಲ. ಇಂದೂ ಸಹ ಪ್ರತಿ ಗ್ರಾಂ ಆಭರಣ (Jewellery) ಚಿನ್ನದ ಬೆಲೆ ರೂ. 4,619 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,290 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 46,880, ರೂ. 46,190, ರೂ. 46,190 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,190 ರೂ. ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಏರಿಕೆಯಾಗಿದೆ. ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 617, ರೂ. 6,170 ಹಾಗೂ ರೂ. 61,700 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,700 ಆಗಿದ್ದರೆ ದೆಹಲಿಯಲ್ಲಿ ರೂ. 56,000 ಮುಂಬೈನಲ್ಲಿ ರೂ. 56,000 ಹಾಗೂ ಕೊಲ್ಕತ್ತದಲ್ಲೂ ರೂ. 56,000 ಗಳಾಗಿದೆ.

5. 2 ರೂಪಾಯಿ, 6 ವರ್ಷ; 1.5 ಲಕ್ಷ ಮೌಲ್ಯದ ಬೈಕ್ ಖರೀದಿಸಿದ ವ್ಯಕ್ತಿ

ಪಶ್ಚಿಮ ಬಂಗಾಳದಲ್ಲಿ (West Bengal) ವ್ಯಕ್ತಿಯೊಬ್ಬರು ಆರು ವರ್ಷಗಳಿಂದ (Six Years) ಕೂಡಿಟ್ಟ ಎರಡು ರೂಪಾಯಿಗಳ (Two Rupees Coin) ಸಂಗ್ರಹದಿಂದ ಬೈಕ್ (Bike) ಖರೀದಿಸಿದ್ದಾರೆ. ಇದು ವ್ಯಕ್ತಿಯ ತಾಳ್ಮೆಯ ಜೊತೆಗೆ ಜಾಣ್ಮೆಯನ್ನು ಪ್ರತಿನಿಧಿಸುತ್ತದೆ. ಮತ್ತು ತಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗದೆ ಕುಗ್ಗಿ ಹೋದವರಿಗೆ ಪ್ರೇರಣೆಯಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 46 ವರ್ಷದ ಸುಬ್ರತಾ ಸರ್ಕಾರ್ ಎಂಬ ಬೀಡಿ ಕಾರ್ಮಿಕರೊಬ್ಬರು ಬೀಡಿಗಳನ್ನು ತಯಾರಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ಇವರು ಎರಡೂ ರೂಪಾಯಿ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ಬೈಕ್ ಖರೀದಿಸಿದ್ದಾರೆ.
Published by:Mahmadrafik K
First published: