Morning Digest: ನಾಳೆಯಿಂದ ಕೆಲ ಜಿಲ್ಲೆಗಳಲ್ಲಿ ಮಳೆ, ಸಂಸದೆ ಸುಮಲತಾ ಬಿಜೆಪಿಗೆ? ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

 • Share this:
  1. Karnataka Weather Report: ನಾಳೆಯಿಂದ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಇಂದಿನ ಹವಾಮಾನ ವರದಿ ಹೀಗಿದೆ

  ರಾಜ್ಯದಲ್ಲಿ (State) ಕೆಲವು ದಿನಗಳಿಂದ ಆರ್ಭಟಿಸಿದ್ದ ಮಳೆರಾಯ (rain) ಇದೀಗ ಸ್ವಲ್ಪ ತಣ್ಣಗಾಗಿದ್ದು, ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ ಬಿಡುವು ನೀಡಿದೆ. ಆದರೆ ಒಂದೆರಡು ಜಿಲ್ಲೆಗಳಲ್ಲಿ (District) ಮಾತ್ರ ಮಳೆ ಇದ್ದು, ಇನ್ನೂ ಕೆಲವು ದಿನ ಈ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮಲೆನಾಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗಲಿದೆ.

  2. Covid 19: ಮತ್ತೆ ಆವರಿಸಿದೆ ಕೊರೊನಾ ಭೀತಿ, WHOನಿಂದ ಆಘಾತಕಾರಿ ವರದಿ, ಏಷ್ಯಾಗಿದು ಎಚ್ಚರಿಕೆಯ ಕರೆಗಂಟೆ!

  ವಿಶ್ವ ಆರೋಗ್ಯ ಸಂಸ್ಥೆ (World Health Organization) ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕಳೆದ ವಾರ ಕೊರೊನಾ ವೈರಸ್ (Covid 19) ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಕಾಲು ಭಾಗದಷ್ಟು ಕಡಿಮೆಯಾಗಿದೆ. ಇತ್ತ ಸಾವಿನ ಸಂಖ್ಯೆ ಆರು ಪ್ರತಿಶತದಷ್ಟು ಕಡಿಮೆಯಾಗಿದೆಯಾದರೂ, ಏಷ್ಯಾದ ಕೆಲ ಭಾಗಗಳಲ್ಲಿ ಇದು ಬಹಳಷ್ಟು ಹೆಚ್ಚು ಇದೆ. ಕಳೆದ ವಾರ 5.4 ಮಿಲಿಯನ್ ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ WHO ಹೇಳಿದೆ, ಇದು ಹಿಂದಿನ ವಾರಕ್ಕಿಂತ 24 ಶೇಕಡಾ ಕಡಿಮೆಯಾಗಿದೆ. ಆಫ್ರಿಕಾ ಮತ್ತು ಯುರೋಪ್‌ನಲ್ಲಿ (Africa And Europe) ಪ್ರಕರಣಗಳು ಸುಮಾರು 40 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಆದರೆ ಪಶ್ಚಿಮ ಪೆಸಿಫಿಕ್ ಮತ್ತು ಆಗ್ನೇಯ ಏಷ್ಯಾದಲ್ಲಿ ಕೊರೊನಾ ವೈರಸ್ ಸಾವುಗಳು ಕ್ರಮವಾಗಿ ಶೇಕಡಾ. 31 ಮತ್ತು ಶೇಕಡಾ 12 ಹೆಚ್ಚಾಗಿವೆ.

  3. California Plane Crash: ಆಕಾಶದಲ್ಲೇ ಎರಡು ವಿಮಾನಗಳ ಡಿಕ್ಕಿ! ನಡೆದೇಹೋಯ್ತು ಮಹಾ ಅನಾಹುತ

  ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಭಾರೀ ಅಪಘಾತವೊಂದು ಸಂಭವಿಸಿದೆ. ಎರಡು ವಿಮಾನಗಳ ನಡುವೆ ಭಯಂಕರ ಅಪಘಾತವೊಂದು ಸಂಭವಿಸಿದೆ. ಗುರುವಾರ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವಾಗ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದಿವೆ. ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದ ಕನಿಷ್ಠ ಇಬ್ಬರು ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

  4. Yuzvendra Chahal: ವೈವಾಹಿಕ ಜೀವನದಲ್ಲಿ ಬಿರುಕು,​ ಊಹಾಪೋಹಗಳಿಗೆ ತೆರೆ ಎಳೆದ ಚಹಾಲ್

  ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜವೇಂದ್ರ ಚಹಲ್ (Yuzvendra Chahal) ಮತ್ತು  ಪತ್ನಿ ಧನಶ್ರೀ ವರ್ಮಾ (Dhanashree Verma) ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ (Social media) ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಜೊತೆಗೆ ಈ ಕುರಿತು ಎಲ್ಲಡೆ ಸಾಕಷ್ಟು ಊಹಾಪೋಹಗಳು ಮತ್ತು ವದಂತಿಗಳು ಹಬ್ಬಿದ್ದವು. ಇವೆಲ್ಲವನ್ನೂ ಗಮನಿಸಿದ ಚಹಾಲ್​ ಸ್ವತಃ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಈ ಸಂಬಂಧ ಚಹಾಲ್ ಇನ್ಸ್ಟಾಗ್ರಾಂ (Instagram) ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಈ ಎಲ್ಲಾ ವದಂತಿಗಳು ಹಬ್ಬಲು ಕಾರಣವಾಗಿದ್ದವು.

  5. Karnataka Politics: ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟ ಬೆಂಬಲಿಗ! 

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದಷ್ಟೇ ಅವರು ಬಿಜೆಪಿ ಸೇರುತ್ತಾರೆಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಬಳಿಕ ಆ ಮಾತು ಅಲ್ಲಿಗೇ ನಿಂತಿತ್ತಾದರೂ ಇದೀಗ ಮತ್ತೆ ಅದೇ ಚರ್ಚೆ ಮುನ್ನೆಲೆಗೆ ಬಂದಿದೆ. ಸುಮಲತಾ ಬೆಂಬಲಿಗನೊಬ್ಬ ಹೇಳಿಕೆ ಮತ್ತೆ ಇದೇ ಚರ್ಚೆಗೆ ಇಂಬು ನೀಡಿದೆ. ಹೌದು ಸಂಸದೆ ಸುಮಲತಾ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ಹೇಳಿಕೆ ಸದ್ಯ ಭಾರೀ ಚರ್ಚೆ ಹುಟ್ಟಿಸಿದೆ. ಸುಮಲತಾ ಬಿಜೆಪಿ ಸೇರುವ ಬಗ್ಗೆ ಮಾತನಾಡಿದ ಅವರು ನಾನು ಬಿಜೆಪಿ ಸಂಪರ್ಕದಲ್ಲಿ ಇರೋದು ನಿಜ, ನಾನು ಎಲ್ಲಿರ್ತೀನಿ ಅಲ್ಲಿ ಸುಮಲತಾ ಇರ್ತಾರೆ ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

  6. Ankita Lokhande: ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ ಅಂಕಿತಾ ಅಮ್ಮನಾಗ್ತಿದ್ದಾರಾ? ಫೊಟೋ ವೈರಲ್

  ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ನಂತರವೇ ಅಂಕಿತಾ ಲೋಖಂಡೆ (Ankita Lokhande) ಎನ್ನುವ ಹೆಸರು ಭಾರೀ ಫೇಮಸ್ ಆಗಿತ್ತು. ಹಿಂದಿ ಕಿರುತೆರೆಯಲ್ಲಿ (Hindi Small Screen) ಹೆಸರು ಗಳಿಸಿದ್ದ ನಟಿ ದಿಢೀರ್ ಎಲ್ಲರ ಬಾಯಲ್ಲಿ ಸುದ್ದಿಯಾದರು. ಕಾರಣ ಇವರು ಸುಶಾಂತ್ ಸಿಂಗ್ ಅವರ ಮಾಜಿ ಗೆಳತಿ. ಮೊದಲ ಪ್ರೇಯಸಿ. ಪವಿತ್ರ ರಿಶ್ತಾ ಎನ್ನುವ ಧಾರವಾಹಿಯ (Serial) ಮೂಲಕ ಹಿಂದಿ ಕಿರುತೆರೆಯಲ್ಲಿ ಭರ್ಜರಿಯಾಗಿ ಮಿಂಚಿದ ಜೋಡಿ. ಸೀರಿಯಲ್ ಹಾಗೂ ರಿಯಲ್ ಲೈಫ್ ಸಖತ್ತಾಗಿಯೇ ಇದ್ದರೂ ಇವರ ಪ್ರೀತಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸುಶಾಂತ್ ಸಿನಿಮಾ ಅವಕಾಶ ಪಡೆದು ಮೇಲೇರಿದರೆ ಅಂಕಿತಾ ಧಾರವಾಹಿಗಳಲ್ಲಿಯೇ ನಟಿಸಿಕೊಂಡಿದ್ದರು. ಸುಶಾಂತ್ ಸಾವಿನ ಸಂದರ್ಭ ರಿಯಾ ಚಕ್ರವರ್ತಿಯ ಹೆಸರು ಸುದ್ದಿಯಾದಷ್ಟೇ ಅಂಕಿತಾ ಹೆಸರೂ ಕೂಡಾ ಸುದ್ದಿಯಾಗಿತ್ತು. ಅಂತೂ ಅಂಕಿತಾ ಆತ್ಮೀಯ ಗೆಳೆಯನನ್ನು ಮದುವೆಯಾಗಿ ದಾಂಪತ್ಯ ಶುರು ಮಾಡಿದ್ದಾರೆ. ಈಗ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳೆತಿ ಗರ್ಭಿಣಿ (Pregnant) ಎನ್ನುವ ಸುದ್ದಿ ಹೊರಬಿದ್ದಿದೆ.
  Published by:Precilla Olivia Dias
  First published: