Morning Digest: ಕೋಡಿಮಠ ಶ್ರೀಗಳ ಭವಿಷ್ಯ, ಮಸೀದಿಯಲ್ಲಿ ಸ್ಫೋಟ, ಕಾಮುಕ ಕಾವಲುಗಾರ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

 • Share this:
  1.Kodi Mutt Sri: ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು; ಕೋಡಿಮಠ ಶ್ರೀಗಳ ಭವಿಷ್ಯ

  ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಕಾರ್ತಿಕ ಮಾಸದ ಭವಿಷ್ಯ ನುಡಿದಿದ್ದು, ಪ್ರಕೃತಿಯ ವಿಕೋಪದ ಎಚ್ಚರಿಕೆ ನೀಡಿದ್ದಾರೆ. ಕೋಡಿಮಠದ ಶ್ರೀಗಳು ಮುಂಬರುವ ಕಾರ್ತಿಕ ಮಾಸದಲ್ಲಿ ಕೆಡುಕುಗಳ ನಡೆಯಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು ಎಂದು ಭವಿಷ್ಯ ನುಡಿದಿದ್ದು, ರಾಜ್ಯದ ಜನರಲ್ಲಿ ಆತಂಕ ಹೆಚ್ಚಳ ಮಾಡಿದೆ. ಕಳೆದ ಕೆಲವು ದಿನಗಳದಿಂದ ದೇಶದಲ್ಲಿ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಇದಕ್ಕೆ ಕಾರಣ ಜ್ಞಾನದ ಕೊರತೆ. ಈ ಜ್ಞಾನದ ಕೊರತೆಯಿಂದಾಗಿ ದೇಶದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದರು.

  2.Afghanistan: ಕಾಬೂಲ್‌ನ ಮಸೀದಿಯಲ್ಲಿ ಸ್ಫೋಟ, 20 ಸಾವು, 50 ಮಂದಿಗೆ ಗಾಯ!

  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ (Afghanistan Capital Kabul) ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ (Mosque Explosion in Kabul) ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಕಾಬೂಲ್‌ನ ಪಿಡಿ 17 ರಲ್ಲಿ ಇಂದು ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ ಭದ್ರತಾ ಇಲಾಖೆಯ ವಕ್ತಾರ ಖಾಲಿದ್ ಜದ್ರಾನ್ ದೃಢಪಡಿಸಿದ್ದಾರೆ. ಉತ್ತರ ಕಾಬೂಲ್‌ನ ನೆರೆಹೊರೆಯಲ್ಲಿ ಸ್ಫೋಟಗಳು (Blasts) ಕೇಳಿ ಬಂದವು, ಹತ್ತಿರದ ಕಟ್ಟಡಗಳ ಕಿಟಕಿಗಳು ಒಡೆದುಹೋಗಿವೆ, ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಾರಂಭಿಸಿತು ಎಂದು ಸ್ಫೋಟದ ಸಮಯದಲ್ಲಿ ಅಲ್ಲಿದ್ದ ಜನರು ರಾಯಿಟರ್ಸ್‌ಗೆ ತಿಳಿಸಿದರು.

  3.Bengaluru: ಬೆಂಗಳೂರಲ್ಲಿ ಮಾಜಿ ಸಂಸದ ಶಿವರಾಮೇಗೌಡರ ಅಳಿಯನ ಪುಂಡಾಟ; ಹುಲಿಹೈದರ ಗುಂಪು ಘರ್ಷಣೆಗೆ ಟ್ವಿಸ್ಟ್

  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (Former MP LR Shivaramegowda) ಅಳಿಯ ಪುಂಡಾಟ ಮೆರೆದಿದ್ದಾನೆ. ಸ್ಯಾಂಡಲ್‌ವುಡ್ ನಟನೂ (Sandalwood Actor) ಆಗಿರುವ ರಾಜೀವ್ ರಾಥೋಡ್ (Rajeev Rathod)‌ ಬೆಂಗಳೂರಿನ ವಿಜಯನಗರದಲ್ಲಿ (Vijayanagara) ಆಡಿ ಕಾರಿಗೆ ಆ್ಯಂಬುಲೆನ್ಸ್ ಸೈರನ್ (Ambulance Siren) ಹಾಕೊಂಡು ನ್ಯೂಸೆನ್ಸ್ ಮಾಡಿದ್ದಾರೆ. ಆ್ಯಂಬುನೆಲ್ಸ್‌ ಸೈರನ್ ಹಾಕಿಕೊಂಡು ತನ್ನ ಆಡಿ ಕಾರಿನಲ್ಲಿ (Car) ಇಷ್ಟ ಬಂದ ಹಾಗೆ ಓಡಾಡಿದ್ದಾನೆ. ಸಂಚಾರ ನಿಯಮ ಉಲ್ಲಂಘನೆ (Traffic Rules) ಹಿನ್ನೆಲೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು ಕೇಸ್ ದಾಖಲಿಸಿ, ದಂಡ ಹಾಕಿದ್ದಾರೆ.

  4.Hubballi: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳ ಪಟ್ಟು; ಅಂದು ಉಮಾ ಭಾರತಿ ಸಿಎಂ ಸ್ಥಾನ ಕಳೆದುಕೊಂಡಿದ್ದು ಹೇಗೆ?

  ಹುಬ್ಬಳ್ಳಿ ಈದ್ಗಾ ವಿವಾದ (Hubballi Idgah Maidana) ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ (Chamrajpet Idgah Maidana) ವಿವಾದ ಭುಗಿಲೆದ್ದ ನಂತರ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವೂ ಮುನ್ನಲೆಗೆ ಬಂದಿದೆ. ರಾಷ್ಟ್ರಧ್ವಜ ಹಾರಾಟಕ್ಕೆ (National Flag) ಸಂಬಂಧಿಸಿದಂತೆ ಈ ಹಿಂದೆ ವಿವಾದ ಭುಗಿಲೆದ್ದಿತ್ತು. ಇದೀಗ ಗಣೇಶ ಪ್ರತಿಷ್ಠಾಪನೆಗಾಗಿ ವಿವಾದ ಸೃಷ್ಟಿಯಾಗಿದೆ. ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ರಾಣಿ ಚನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿಯನ್ನು ಹಿಂದೂಪರ ಸಂಘಟನೆಗಳು (Hindu Organizations) ಅಸ್ತಿತ್ವಕ್ಕೆ ತಂದಿವೆ.

  5.Karol Bagh: ಕುಡಿದ ಮತ್ತಿನಲ್ಲಿ ಯುವತಿಯನ್ನ ಎಳೆದಾಡಿದ ಕಾಮುಕ ಕಾವಲುಗಾರ, CCTVಯಲ್ಲಿ ದೃಶ್ಯ ಸೆರೆ!

  ದೆಹಲಿಯ ಕರೋಲ್ ಬಾಗ್ (Delhi's Karol Bagh) ಪ್ರದೇಶದಲ್ಲಿರುವ ಯುವತಿಯರ ಪಿಜಿ (Ladies PG) ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್ ಕುಡಿದ ಅಮಲಿನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ದೌರ್ಜನ್ಯದ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಪಿಜಿಯ ಭದ್ರತಾ ಸಿಬ್ಬಂದಿ ಪಿಜಿಯಲ್ಲಿ ವಾಸಿಸುವ ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
  Published by:Mahmadrafik K
  First published: