Morning Digest: ಸಹಜ ಸ್ಥಿತಿಯತ್ತ ಶಿವಮೊಗ್ಗ, ಗುಲಾಂ ನಬೀ ಆಜಾದ್​ ರಾಜೀನಾಮೆ, ಬಂಗಾಳದಲ್ಲಿ ED ರೈಡ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Shivamogga: ಸಹಜ ಸ್ಥಿತಿಯತ್ತ ಶಿವಮೊಗ್ಗ, ಭದ್ರಾವತಿಯಲ್ಲಿ ಕಾರ್​ಗೆ ಬೆಂಕಿ; ಜಬೀವುಲ್ಲಾ ಪತ್ನಿ ಹೇಳಿಕೆ

ಶಿವಮೊಗ್ಗ ನಗರ (Shivamogga City) ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಕಳೆದೆರೆಡು ದಿನಗಳಿಂದ ವಿಧಿಸಲಾಗಿರುವ 144 ಸೆಕ್ಷನ್ (Section 144) ನಿಷೇಧಾಜ್ಞೆ ಮುಂದುವರಿಸಲಾಗಿದೆ. ಇಂದಿನಿಂದ ಶಾಲಾ-ಕಾಲೇಜುಗಳು (School And Colleges) ಆರಂಭಿಸಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ (DC Dr.Selvamani) ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿ (Shivamogga And Bhadravati) ಅವಳಿ ನಗರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ (Police) ಬಂದೋಬಸ್ತ್ ಮಾಡಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಶಿವಮೊಗ್ಗದಲ್ಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನಿಗಾ ಇರಿಸಿದ್ದಾರೆ. ಇಂದು ಸಹ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಆರ್​ಎಎಫ್ ತುಕಡಿ ರೂಟ್ ಮಾರ್ಚ್ (RAF Route March) ನಡೆಯಲಿದೆ.

2. Manekshaw Parade Ground: ದ್ವಾರದ ಮೇಲಿದ್ದ ಟಿಪ್ಪು, ರಾಣಿ ಚೆನ್ನಮ್ಮ ಹೆಸರಿಗೆ ಸುಣ್ಣ ಬಳಿದ ಸರ್ಕಾರ

ಟಿಪ್ಪು ಸುಲ್ತಾನ್ ವರ್ಸಸ್ ವೀರ ಸಾವರ್ಕರ್ ಫೋಟೋ (Tipu Sultan Vs Veer Savarkar) ವಿವಾದ ರಾಜ್ಯದಲ್ಲಿ ಹುಟ್ಟಿಕೊಂಡಿದೆ. ಇದರ ಮಧ್ಯೆ ಸಿಎಂ ಬೊಮ್ಮಾಯಿ (CM Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ (BJP Government) ಮತ್ತೊಂದು ಎಡವಟ್ಟು ಮಾಡಿದೆ. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsava) ಅದ್ಧೂರಿಯಾಗಿ ಆಚರಿಸಲು ಸಿದ್ಧ ಮಾಡಿದ್ದ ಮಾಣೆಕ್ ಷಾ ಪರೇಡ್ ನಲ್ಲಿದ್ದ (Manik Shaw Parade Ground) ಇಬ್ಬರು ಹೋರಾಟಗಾರರ ಹೆಸರಿಗೆ ಸುಣ್ಣ ಬಳಿದಿದೆ. ಸೋಮವಾರ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಸರ್ಕಾರ ಆಚರಿಸಿದೆ. ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ನಂತರ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆದಿತ್ತು.‌ ಹಾಡು ಕುಣಿತ ಜೊತೆಗೆ ರಾಷ್ಟ್ರ ಗೀತೆ ಹಾಡಿ ದೇಶ ಭಕ್ತಿಯನ್ನೂ ಮೆರೆಯಲಾಯಿತು. ಈ ವೇಳೆ ಮಾಣೆಕ್ ಷಾ ಮೈದಾನದಲ್ಲಿರುವ ಗೋಡೆ ಮೇಲಿದ್ದ ಇಬ್ಬರು ಹೋರಾಟಗಾರರ ಹೆಸರನ್ನು ಕಿತ್ತು ಹಾಕಿದ ಸರ್ಕಾರದ ನಡೆ ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

3.Himachal Pradesh: ಬಿಜೆಪಿ ಸೇರುವ ವದಂತಿ ಮಧ್ಯೆ ತನ್ನ ಕಾರ್ಯಾಧ್ಯಕ್ಷನ ಕೆಳಗಿಳಿಸಿದ ಕಾಂಗ್ರೆಸ್!

ಸದ್ಯ ಹಿಮಾಚಲ ಪ್ರದೇಶದಲ್ಲಿ (Himachal Pradesh) ರಾಜಕೀಯ ಅಬ್ಬರ ನಡೆಯುತ್ತಿದೆ. ನಾಯಕರೆಲ್ಲರೂ ರಾಜಕೀಯ ಕೆಸರೆರಚಾಟದಲ್ಲಿ ತಲ್ಲೀನರಾಗಿದ್ದಾರೆ. ಏತನ್ಮಧ್ಯೆ, ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಲಿದ್ದು, ಕಾಂಗ್ರೆಸ್ ಈ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದೆ. ಹೀಗಿದ್ದರೂ ಕಾಂಗ್ರಾದ ಕಾಂಗ್ರೆಸ್ ಶಾಸಕ ಪವನ್ ಕಾಜಲ್ (Pawan Kajal) ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಭಾರೀ ಸದ್ದು ಮಾಡಲಾರಂಭಿಸಿದೆ. ಅವರು ಬಿಜೆಪಿ (BJP) ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದೆ.

4.Ghulam Nabi Azad: ಕಾಂಗ್ರೆಸ್​ನಲ್ಲಿ ಬೆಂಕಿ ಬಿರುಗಾಳಿ! ಪ್ರಮುಖ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ

ಕಾಂಗ್ರೆಸ್​ನಲ್ಲಿ ಬಂಡಾಯದ ಬಿರುಗಾಳಿ ಬೀಸಿದೆ. ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ತಮಗೆ ವಹಿಸಿದ್ದ ಜಮ್ಮು ಕಾಶ್ಮೀರ ಕಾಂಗ್ರೆಸ್ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (Ghulam Nabi Azad Resigned) ನೀಡಿದ್ದಾರೆ. ದೀರ್ಘಕಾಲದಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದ ಗುಲಾಂ ನಬಿ ಆಜಾದ್ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ (Jammu Kashmir Congress) ಪಕ್ಷದ ಪ್ರಮುಖ ಸಮಿತಿಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಅವರು ಸ್ಥಾನದಿಂದ ಕೆಳಗಿಳಿದಂತಾಗಿದೆ. ಅಷ್ಟೇ ಅಲ್ಲದೇ ಅವರು ಪಕ್ಷದ ಜಮ್ಮು ಮತ್ತು ಕಾಶ್ಮೀರ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

5.Ola New Electric Car: ಸಿಂಗಲ್​ ಚಾರ್ಜ್​ನಲ್ಲಿ 500km ಕ್ರಮಿಸುತ್ತೆ! 4 ಸೆಕೆಂಡ್​ಗಳಲ್ಲಿ 100km ವೇಗದಲ್ಲಿ ಸಾಗುತ್ತೆ ಈ ಕಾರು!

ಎಲೆಕ್ಟ್ರಿಕ್​ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೇ ನಿಟ್ಟಿನಲ್ಲಿ ಹಲವಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದರಂತೆ ಓಲಾ ಕೂಡ ಅಧಿಕ ಮೈಲೇಜ್​ ನೀಡುವ ಕಾರೊಂದನ್ನುಪರಿಚಯಿಸಿದೆ. ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಓಲಾ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರನ್ನು ಘೋಷಿಸಿದೆ. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಂಪನಿಯು ಈ ಕಾರನ್ನು ಘೋಷಿಸಿದೆ. ಕಂಪನಿಯು ಈ ಕಾರಿಗೆ ಸಂಬಂಧಿಸಿದ ಹಲವಾರು ವೈಶಿಷ್ಟ್ಯಗಳನ್ನು ಸಹ ಪ್ರಕಟಿಸಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒಲಾ ಸೆನ್ಸೇಷನಲ್​ ಎಲೆಕ್ಟ್ರಿಕ್​ ಕಾರನ್ನು ಪರಿಚಯಿಸಿದೆ. ಈ ಕಾರು ಬಹು ವಿಶೇಷತೆಯನ್ನು ಹೊಂದಿದ್ದು, ಅಧಿಕ ಮೈಲೇಜ್​ ಕೂಡ ನೀಡುತ್ತಿದೆ.

6.ED Raids: ಸಿಎಂ ಮಮತಾ ಬ್ಯಾನರ್ಜಿಗೆ ಆಪ್ತವಾಗಿರುವ ಚಾನೆಲ್​​ಗಳಿಗೆ ಇಡಿ ರೈಡ್

ಪಶ್ಚಿಮ ಬಂಗಾಳದಲ್ಲಿ ಸದ್ಯ ರೈಡ್, ದಾಳಿ, ಹಗರಣಗಳ ಸುದ್ದಿ ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳದ ಎಸ್​​ಎಸ್​ಸಿ ಹಗರಣ ಇತ್ತೀಚೆಗಷ್ಟೇ ಭಾರೀ ಚರ್ಚೆಯಾಗಿತ್ತು. ಇದೀಗ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ (IT) ಯ ಎರಡು ತಂಡಗಳು ಪ್ರಸಿದ್ಧ ಟಿವಿ ಚಾನೆಲ್​ಗಳ (TV Channel) ಕಚೇರಿಗೆ ರೈಡ್ ಮಾಡಿವೆ. ಕೋಲ್ಕತ್ತಾ ಮೂಲದ ಉದ್ಯಮಿ ಮತ್ತು ಜನಪ್ರಿಯ ಬಂಗಾಳಿ ಸುದ್ದಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೌಸ್ತವ್ ರಾಯ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಏಕಕಾಲದಲ್ಲಿ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆದಿದೆ. ಚಾನೆಲ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿಕಟ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ಇಡಿ ಮೂಲವು ದಾಳಿಯನ್ನು ದೃಢಪಡಿಸಿದೆ. ಆದರೆ ಈ ಬೆಳವಣಿಗೆಗೆ ಕಾರಣವನ್ನು ಉಲ್ಲೇಖಿಸಲು ನಿರಾಕರಿಸಿದೆ.
Published by:Mahmadrafik K
First published: