Morning Digest: ಶಿವಮೊಗ್ಗದಲ್ಲಿ ಸೆಕ್ಷನ್ 144, ಭಾರತಕ್ಕೆ ಫಿಫಾ ಶಾಕ್, ಬಿಹಾರ ಸಚಿವ ಸಂಪುಟ ವಿಸ್ತರಣೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Shivamogga: ಟಿಪ್ಪು V/s ಸಾವರ್ಕರ್ ಫೋಟೋ ಕಿಚ್ಚು; ಶಿವಮೊಗ್ಗದಲ್ಲಿ 144 ಸೆಕ್ಷನ್, ಶಾಲಾ-ಕಾಲೇಜುಗಳಿಗೆ ರಜೆ

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರ (Veer Savrkar Photo) ಇಡುವ ವಿಚಾರಕ್ಕೆ ಮತ್ತೆ ಘರ್ಷಣೆಯಾಗಿದೆ. ಅಮೀರ್ ಅಹಮದ್ ಸರ್ಕಲ್‌ನಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ನಡೆದಿತ್ತು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ (Tipu Sultan Photo) ಇಡಲು ಒಂದು ಗುಂಪು ಮುಂದಾಗಿತ್ತು. ಪೊಲೀಸರು (Police) ಇದಕ್ಕೆ ಅವಕಾಶ ಕೊಡಲಿಲ್ಲ. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆಯಿತು. ಘರ್ಷಣೆಯಲ್ಲಿ ಓರ್ವ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ 144 ನಿಷೇದಾಜ್ಞೆ (Section 144) ಜಾರಿಗೊಳಿಸಲಾಗಿದೆ.

2.Bihar Politics: ಬಿಹಾರದಲ್ಲಿಂದು ಸಚಿವ ಸಂಪುಟ ವಿಸ್ತರಣೆ, ನಿತೀಶ್-ತೇಜಸ್ವಿ ಸರ್ಕಾರಕ್ಕೆ RJD ಪ್ರಾಬಲ್ಯ!

ಬಿಹಾರದಲ್ಲಿ (Bihar) ಹೊಸ ಸರ್ಕಾರ ರಚನೆಯಾದ ನಂತರ ಮಂಗಳವಾರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ನಿತೀಶ್-ತೇಜಸ್ವಿ (Nitish-Tejashwi) ಸರ್ಕಾರದ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬ ಸಂಭಾವ್ಯ ಪಟ್ಟಿ ಸೋಮವಾರ ಬಹಿರಂಗವಾಗಿದೆ. ಬಿಹಾರ ಸರ್ಕಾರದಲ್ಲಿ (Bihar Govt) ಒಟ್ಟು 31 ಸಚಿವರು ಇರಲಿದ್ದಾರೆ. ಈ ಪಟ್ಟಿಯ ಪ್ರಕಾರ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಅವರ ಸಹೋದರ ತೇಜ್ ಪ್ರತಾಪ್ ಯಾದವ್ (Tej Pratap Yadav) ಕೂಡ ಸಂಪುಟದಲ್ಲಿರಲಿದ್ದಾರೆ.

3.FIFA suspends AIFF: ಭಾರತಕ್ಕೆ ಶಾಕ್ ಕೊಟ್ಟ ಫಿಫಾ, AIFF ಅಮಾನತು: ಮಹಿಳಾ ವಿಶ್ವಕಪ್‌ ಆತಿಥ್ಯಕ್ಕೂ ಕತ್ತರಿ!

ಫಿಫಾ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (All India Football Federation) ಅನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವವನ್ನು ಉಲ್ಲೇಖಿಸಿ ಫಿಫಾ ಫುಟ್ಬಾಲ್ ಫೆಡರೇಶನ್ ಆಫ್ ಇಂಡಿಯಾವನ್ನು ಅಮಾನತುಗೊಳಿಸಿದೆ. ಅಷ್ಟೇ ಅಲ್ಲ, ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ FIFA U-17 ಮಹಿಳಾ ವಿಶ್ವಕಪ್ 2022 ರ ಆತಿಥ್ಯವನ್ನೂ ಫೀಫಾ ಕಸಿದುಕೊಂಡಿದೆ.

4.Gold-Silver Price Today : ಚಿನ್ನ ಖರೀದಿಸೋರಿಗೆ ಕೊಂಚ ನಿರಾಳ, ಇಂದಿನ ರೇಟ್​ ಎಷ್ಟು ಅಂತೀರಾ? ಇಲ್ಲಿದೆ ದರ ಪಟ್ಟಿ

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದ ಆರಂಭದಿಂದಲೇ ಆಭರಣ ಚಿನ್ನದ ಬೆಲೆ (Gold Rate) ಪ್ರತಿ ಗ್ರಾಂಗೆ ನೂರು ರೂ.ಗಿಂತಲೂ ಹೆಚ್ಚಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,815 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,200 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 49,140, ರೂ. 48,150, ರೂ. 48,150 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,300 ರೂ. ಆಗಿದೆ.

5.Vijayapura: ಚಿಕನ್ ಲೆಗ್​ ಪೀಸ್​​ನಲ್ಲಿ ಗಾಂಜಾ ಇರಿಸಿ ಜೈಲಿನೊಳಗೆ ಸಾಗಿಸ್ತಿದ್ದ ವ್ಯಕ್ತಿ ಅರೆಸ್ಟ್

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದೊಳಗೆ ಗಾಂಜಾ ಸಾಗಿಸಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ಲಕ್ಷ್ಮಣ್ ಮಬರುಖಾನೆ ಬಂಧಿತ ಆರೋಪಿ. ಬಂಧಿತ ಪ್ರಜ್ವಲ್ ಜೈಲಿನಲ್ಲಿರೋ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಮುಂದಾಗಿದ್ದನು. ಕೈದಿಯೊಬ್ಬರಿಗೆ ಆಹಾರ ನೀಡುತ್ತೇನೆ ಎಂದು ಹೇಳಿ ಪ್ರಜ್ವಲ್ ಬಂದಿದ್ದನು. ಈ ವೇಳೆ ಪೊಲೀಸರು ಪ್ರಜ್ವಲ್ ತಂದಿರುವ ಆಹಾರ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಚಿಕನ್ ಲೆಗ್ ಪೀಸ್​ನಲ್ಲಿ ದಾರದ ಎಳೆ ಕಾಣಿಸಿಕೊಂಡಿದೆ. ಅನುಮಾನದ ಮೇಲೆ ಚಿಕನ್ ಲೆಗ್​ಪೀಸ್​ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ
Published by:Mahmadrafik K
First published: