Morning Digest: ಟ್ರಂಪ್ ಮೊದಲ ಪತ್ನಿ ನಿಧನ, ಮಳೆಯ ಆರ್ಭಟ, ಅಬ್ಬಾ ಏರಿಕೆಯಾಯ್ತು ಚಿನ್ನ; ಬೆಳಗಿನ ಟಾಪ್ ನ್ಯೂಸ್

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ.

ಈವರೆಗಿನ ಟಾಪ್ ನ್ಯೂಸ್‌ಗಳು

ಈವರೆಗಿನ ಟಾಪ್ ನ್ಯೂಸ್‌ಗಳು

  • Share this:
1.Donald Trump: ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ

ಡೊನಾಲ್ಡ್ ಟ್ರಂಪ್ (Donald Trump) ಅವರ ಮೊದಲ ಪತ್ನಿ ಮತ್ತು ಅವರ ಮೂವರು ಹಿರಿಯ ಮಕ್ಕಳ ತಾಯಿ ಇವಾನಾ ಟ್ರಂಪ್ (Ivana Trump) ಅವರು 73 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಮಾಜಿ ಅಧ್ಯಕ್ಷರು ಗುರುವಾರ ಸೋಷಿಯಲ್ ಮೀಡಿಯಾ (Social Media) ಮೂಲಕ ತಿಳಿಸಿದ್ದಾರೆ. ಇವಾನಾ ಟ್ರಂಪ್ ನ್ಯೂಯಾರ್ಕ್ (New York) ನಗರದ ತನ್ನ ಮನೆಯಲ್ಲಿ ನಿಧನರಾದರು ಎಂದು ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್‌ನಲ್ಲಿ ತಿಳಿಸಿದ್ದಾರೆ. ಸಾವಿನ ಕಾರಣವನ್ನು ತಿಳಿಸಿಲ್ಲ. ಅವರು ಸುಂದರ ಮತ್ತು ಅದ್ಭುತ ಮಹಿಳೆ. ಅವರು ಉತ್ತಮ ಮತ್ತು ಸ್ಪೂರ್ತಿದಾಯಕ ಜೀವನವನ್ನು ನಡೆಸಿದರು ಎಂದು 76 ವರ್ಷದ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

2.Chikkamagaluru Rains: ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ, ಅಲ್ಲಲ್ಲಿ ಭೂ ಕುಸಿತ, ಮನೆಗಳು ನೆಲಸಮ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟದಲ್ಲಿ ಹರಿ ಯುತ್ತಿವೆ. ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಧೆರೆಕುಸಿತ ಉಂಟಾಗಿದೆ. ಚಾರ್ಮಾಡಿಘಾಟಿ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕುಸಿತ ಉಂಟಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದೆ.

3.ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ; ಪ್ರವಾಹದ ಆತಂಕದಲ್ಲಿ ಕೊಡಗಿನ ಜನರು

ಕೊಡಗು ಜಿಲ್ಲೆಯಲ್ಲಿ (Kodagu) ಎರಡು ದಿನಗಳ ಕಾಲ ಸ್ವಲ್ಪ ತಗ್ಗಿದ ಮಳೆ (Rain) ಮಂಗಳವಾರ ಸಂಜೆಯಿಂದ ಮತ್ತೆ ಅಬ್ಬರಿಸುತ್ತಿದೆ. ಪರಿಣಾಮ ಜಿಲ್ಲೆಯ ಜೀವನದಿ ಕಾವೇರಿ (Cauvery) ಮತ್ತೆ ಉಗ್ರರೂಪ ತಾಳುತ್ತಿದ್ದು, ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಮಡಿಕೇರಿ (Madikeri) ತಾಲ್ಲೂಕಿನ ಕಣ್ವಬಲಮುರಿಯಲ್ಲಿ ಕಾವೇರಿ ನದಿ ಬೋರ್ಗರೆದು ಹರಿಯುತ್ತಿದೆ. ಬಲುಮುರಿಯ ಕೆಳಸೇತುವೆ (Under Bridge) ಮುಳುಗಡೆಯಾಗಿದ್ದು, ಸೇತುವೆ ಮೇಲೆ ಆರೇಳು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಬಲಮುರಿ, ಪಾರಾಣೆ ಮತ್ತು ಕೂಡುಪರಂಬು ಪೈಸಾರಿಗಳ ಸಂಪರ್ಕ ಕಡಿತಗೊಂಡಿದೆ. ಈ ಭಾಗದ ಮೂರ್ನಾಲ್ಕು ಗ್ರಾಮಗಳ ಜನರು ಸಂಚಾರಕ್ಕೆ ಮೇಲ್ಸೇತುವೆಯನ್ನೇ ಅವಲಂಬಿಸಿದ್ದು, ಒಂದೇ ಕಿಲೋ ಮೀಟರ್ ನಲ್ಲಿ ಊರು ತಲುಪುತ್ತಿದ್ದ ಜನರು ಈಗ ಐದು ಕಿಲೋಮೀಟರ್ ಸುತ್ತಿ ಬಳಸಿ ಊರು ಸೇರುವಂತಾಗಿದೆ.

4.Gold-Silver Price: ಅಬ್ಬಬ್ಬಾ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 200 ರೂ. ಏರಿಕೆ! ಈಗ ದರ ಎಷ್ಟಾಗಿದೆ ನೋಡಿ

ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ (Gold Price) 4,670 ಇದ್ದದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,690 ರೂಪಾಯಿ ಆಗಿದೆ. ನಿನ್ನೆಯ ಬೆಲೆಗೆ ಹೊಲಿಕೆ ಮಾಡಿದರೆ 10 ಗ್ರಾಂ ಇನ್ನದ ಮೇಲೆ 200. ರೂ ಹೆಚ್ಚಳವಾಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46.950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 46,760, ರೂ. 46,900, ರೂ. 46,900 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,760 ರೂ. ಆಗಿದೆ.

5. ಸಾಹಿತಿ ಬಿಎಲ್ ವೇಣುಗೆ ಎರಡನೇ ಬೆದರಿಕೆ ಪತ್ರ! ಅನಾಮಧೇಯ ವ್ಯಕ್ತಿಗಳ ವಿರುದ್ಧ FIR

ಖ್ಯಾತ ಕಾದಂಬರಿಕಾರ B.L ವೇಣು (BL Venu) ಅವರಿಗೆ ಯಾರೋ ಅನಾಮಧೇಯರಿಂದ ಬೆದರಿಕೆ ಪತ್ರ (Threat Letter) ಬಂದ ಹಿನ್ನೆಲೆ, ಚಿತ್ರದುರ್ಗ (Chitradurga) ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ (Police) ದೂರು ನೀಡಲಾಗಿದೆ. ಅಪರಿಚಿತ ವ್ಯಕ್ತಿಗಳ ಮೇಲೆ FIR ದಾಖಲಿಸಿರುವ ಪೊಲೀಸರು (Police), ಆರೋಪಿಗಳ ಪತ್ತೆಗೆ ಬಲೆ ಬೀಸಿ ತನಿಖೆ (Inquiry) ಪ್ರಾರಂಭ ಮಾಡಿದ್ದಾರೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೆಮ್ಮೆಯ ಸಾಹಿತಿ, ಬಿ.ಎಲ್. ವೇಣು ಕಳೆದ ಎರಡು ಮೂರು ತಿಂಗಳುಗಳ ಹಿಂದೆಯಷ್ಠೆ ಶಾಲೆಗಳ (School) ಪಠ್ಯ ಪುಸ್ತಕ (Text Book) ಪರಿಷ್ಕರಣೆಯಲ್ಲಿ ಆಗಿದ್ದ ಲೋಪ, ಬದಲಾವಣೆ ಹಾಗೂ ವೀರ ಸಾವರ್ಕರ್ ಕುರಿತು, ವಿರುದ್ದವಾದ ಭಾಷಣ (Speech) ಮಾಡಿದ್ದರು ಎನ್ನಲಾಗಿದೆ.
Published by:Mahmadrafik K
First published: