Top-5 News: ಆರ್ ಶಂಕರ್ ಆಕ್ರೋಶ, ಮೋದಿ ಸರ್ಕಾರದ ಬಿಗ್ ಪ್ಲ್ಯಾನ್, ಮದ್ಯ ಬ್ಯಾನ್ ಆಗುತ್ತಾ? ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿ

ಈವರೆಗಿನ ಪ್ರಮುಖ ಸುದ್ದಿ

  • Share this:
1.Karnataka BJP: ಮಂತ್ರಿ ಮಾಡ್ತೀನಿ ಅಂತ ಮಾತು ತಪ್ಪಿದ್ರಿ, ಆರ್ ಶಂಕರ್ ಆಕ್ರೋಶ; ಇತ್ತ ಸಿಎಂ ಕಿವಿಮಾತು!

ಬಿಜೆಪಿ (Karnataka BJP) ಮಂಗಳವಾರ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಸಭೆಯಲ್ಲಿ ಕಾಂಗ್ರೆಸ್ (Congress) ತಂತ್ರಗಳಿಗೆ ಮರುತಂತ್ರಗಳ ಚರ್ಚೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ (Cabinet Expansion) ಆಗದ ವಿಚಾರದಲ್ಲಿ ಬಿಜೆಪಿ ನಾಯಕರ (BJP Leaders) ಮೇಲೆ ಮಾಜಿ ಸಚಿವ ಆರ್.ಶಂಕರ್ (Former Minister R Shankar) ಸಿಟ್ಟು ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ (BJP CLP Meeting) ಏರುಧ್ವನಿಯಲ್ಲಿ ಆರ್.ಶಂಕರ್ ಮಾತನಾಡಿದ್ದಾರೆ ಎನ್ನಲಾಗಿದೆ.

2.Transgender Reservations: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ಆರಗ ಜ್ಞಾನೇಂದ್ರ

ಮಂಗಳವಾರ ಕರ್ನಾಟಕ ಸರ್ಕಾರ (Karnataka Government) ಪೊಲೀಸ್ ನೇಮಕಾತಿಯ (Police Constable Recruitment) ಅಧಿಸೂಚನೆ ಪ್ರಕಟಿಸಿದೆ. ಈ ಬಾರಿ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ (Male Transgenders) ಮೀಸಲಾತಿಯನ್ನು ಸಹ ಪ್ರಕಟಿಸಿದೆ. ಕರ್ನಾಟಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಪ್ರಕಟಿಸಿದ ಮೊದಲ ರಾಜ್ಯವಾಗಿದೆ.

morning digest important kannada news of the day 14 September 2022 mrq
ಆರಗ ಜ್ಞಾನೇಂದ್ರ


ಈ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra), ಒಟ್ಟು 3,484 ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ. ಇದರಲ್ಲಿ 79 ಸ್ಥಾನಗಳನ್ನು ಪುರುಷ ತೃತೀಯ ಲಿಂಗಿಗಳಿಗಾಗಿ ಮೀಸಲಿರಿಸಲಾಗಿದೆ. ಆರಂಭದಲ್ಲಿ ಈ ಮೀಸಲಾತಿ ಹಲವರಿಗೆ ಗೊಂದಲವುನ್ನುಂಟು ಮಾಡಿತ್ತು ಎಂದು ಸಚಿವರು ಹೇಳಿದರು.

3.Gold-Silver Price Today: ಬಂಗಾರ ದರ ಕುಸಿತ, ಚೇತರಿಸಿಕೊಂಡ ಕಂಡ ಬೆಳ್ಳಿ: ಹೀಗಿದೆ ಇಂದಿನ ಗೋಲ್ಡ್​, ಸಿಲ್ವರ್ ರೇಟ್​!

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,673 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,098 ಆಗಿದೆ. ಇನ್ನು ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,384 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,784 ಆಗಿದೆ.

morning digest important kannada news of the day 14 September 2022 mrq
ಚಿನ್ನ


ಇತ್ತ ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,730 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,980 ಆಗಿದೆ. ಅದೇ ರೀತಿ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,67,300 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,09,800 ಆಗಿದೆ.

4.No Alcohol Ban: ಮದ್ಯ ನಿಷೇಧಿಸಬೇಕು ಅಂತ ಸುಪ್ರೀಂಕೋರ್ಟ್‌ಗೆ ಅರ್ಜಿ! ನ್ಯಾಯಪೀಠ ಹೇಳಿದ್ದೇನು ಗೊತ್ತಾ?

ದೇಶಾದ್ಯಂತ ಮದ್ಯವನ್ನು ನಿಷೇಧಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ದೇಶಾದ್ಯಂತ ಮದ್ಯಪಾನ ನಿಷೇಧಿಸಬೇಕು ಎಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಯುಇ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎಸ್ ರವೀಂದ್ರ ಭಟ್ ಅವರ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಗುಜರಾತ್ ಮತ್ತು ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ.

ಸಾಂದರ್ಭಿಕ ಚಿತ್ರ


ರಾಷ್ಟ್ರವ್ಯಾಪಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಪ್ರತಿ ರಾಜ್ಯವು ಈ ವಿಷಯದಲ್ಲಿ ತನ್ನದೇ ಆದ ನೀತಿಗಳು ಮತ್ತು ಕಾನೂನುಗಳನ್ನು ಹೊಂದಿದೆ ಎಂದು ಹೇಳಿದೆ. ಇದು ಫೆಡರಲ್ ಸಮಸ್ಯೆ. ಈ ನಿಟ್ಟಿನಲ್ಲಿ ಕಾನೂನುಗಳನ್ನು ಹೇರಲು ಸಾಧ್ಯವಿಲ್ಲ ಅಂತ ಅಭಿಪ್ರಾಯಪಟ್ಟಿದೆ.

5.Hindi Diwas: ವಿದೇಶದಲ್ಲೂ ಹಿಂದಿ ಬಳಕೆ, ಮೋದಿ ಸರ್ಕಾರದ ಬಿಗ್ ಪ್ಲಾನ್​!

ನ್ಮುಂದೆ ಹಿಂದಿ ಭಾಷೆ (Hindi Language) ವಿದೇಶಗಳಲ್ಲಿ ಸದ್ದು ಮಾಡಲಿದೆ. ಈ ನಿಟ್ಟಿನಲ್ಲಿ ಮೋದಿ ಸರ್ಕಾರ (Narendra Modi Govt) ಇದಕ್ಕಾಗಿ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಮೋದಿ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ವಿದೇಶದಲ್ಲಿರುವ ಭಾರತೀಯ ಕಚೇರಿಗಳಲ್ಲಿ (Indian Offices) ಸಮಿತಿಯನ್ನು ರಚಿಸಲಾಗುತ್ತದೆ.

morning digest important kannada news of the day 14 September 2022 mrq
ಸಾಂದರ್ಭಿಕ ಚಿತ್ರ


ಈ ಸಮಿತಿಗಳ ಕೆಲಸ ಅಧಿಕೃತ ಪತ್ರ ವ್ಯವಹಾರದಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವುದು ಮತ್ತು ಅಧಿಕೃತ ಭಾಷಾ ಕಾಯ್ದೆಯ ಅನುಷ್ಠಾನವನ್ನು ಪರಿಶೀಲಿಸುವುದು. ಹಿಂದಿಯ ಬಳಕೆಯನ್ನು ಉತ್ತೇಜಿಸಲು ಹಿಂದಿ ದಿವಸ್ (Hindi Diwas) ಮತ್ತು ಸೆಮಿನಾರ್‌ಗಳಂತಹ ಸ್ಪರ್ಧೆಗಳು ಮತ್ತು ಆಚರಣೆಗಳನ್ನು ಆಯೋಜಿಸಲು ವಿದೇಶದಲ್ಲಿರುವ ಭಾರತೀಯ ಕಚೇರಿಗಳನ್ನು ಪ್ರೋತ್ಸಾಹಿಸಲಾಗುತ್ತದೆ.
Published by:Mahmadrafik K
First published: