• Home
  • »
  • News
  • »
  • state
  • »
  • Top 5 News: ದಲಿತ ಮನೆಯಲ್ಲಿ ಬ್ರ್ಯಾಂಡೆಡ್​ ಕಾಫಿ, ಮತ್ತೆ ಸಂಕಷ್ಟದಲ್ಲಿ ಮುರುಘಾ ಸ್ವಾಮೀಜಿ: ಬೆಳಗಿನ ಟಾಪ್ ನ್ಯೂಸ್​​ಗಳು

Top 5 News: ದಲಿತ ಮನೆಯಲ್ಲಿ ಬ್ರ್ಯಾಂಡೆಡ್​ ಕಾಫಿ, ಮತ್ತೆ ಸಂಕಷ್ಟದಲ್ಲಿ ಮುರುಘಾ ಸ್ವಾಮೀಜಿ: ಬೆಳಗಿನ ಟಾಪ್ ನ್ಯೂಸ್​​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1. ಸಿಎಂಗೆ 'ಬ್ರ್ಯಾಂಡೆಡ್ ಟೀ' ಮಾತ್ರ ಕೊಡಿ, ದಲಿತ ಕುಟುಂಬಕ್ಕೆ ಅಧಿಕಾರಿಗಳ ಸೂಚನೆ: ವಿಡಿಯೋ ವೈರಲ್!


ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Karnataka CM Basavaraj Bommai) ಮತ್ತು ಬಿಜೆಪಿ ಮುಖಂಡ ಬಿ. ಎಸ್. ಯಡಿಯೂರಪ್ಪ (BJP Leader BS Yediyurappa) ಅವರು ಹೊಸಪೇಟೆ ಸಮೀಪದ ಹಳ್ಳಿಯೊಂದರಲ್ಲಿ ದಲಿತ ವ್ಯಕ್ತಿಯೊಬ್ಬರ ಮನೆಯಲ್ಲಿ ಬುಧವಾರ ಉಪಹಾರ ಸೇವಿಸಿದರು. ಮಂಗಳವಾರ ಆರಂಭವಾದ ಆಡಳಿತ ಬಿಜೆಪಿಯ ‘ಜನಸಂಕಲ್ಪ ಯಾತ್ರೆ’ (Jana Sankalpa Yatra) ಅಂಗವಾಗಿ ಗ್ರಾಮಕ್ಕೆ ಭೇಟಿ ನೀಡಿದರು. ಆದರೆ, ಇದೀಗ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ವಿಡಿಯೋವನ್ನು ಕಾಂಗ್ರೆಸ್ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಇತರರಿಗೆ ಸಾಮಾನ್ಯ ಚಹಾದ ಬದಲಿಗೆ ಬ್ರ್ಯಾಂಡೆಡ್ ಮತ್ತು ಪ್ಯಾಕ್ ಮಾಡಿದ ಚಹಾ ಮಾತ್ರ ನೀಡುವಂತೆ ದಲಿತ ಕುಟುಂಬಕ್ಕೆ ಅಧಿಕಾರಿಗಳು ಸೂಚಿಸಿರುವುದು ಸ್ಪಷ್ಟವಾಗಿದೆ.


2. Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ದುಷ್ಕರ್ಮಿಗಳು!


ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja) ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ನಡೆದಿದೆ. ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 11.30ರ ವೇಳೆಗೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಆಗಮಿಸಿ ಬೆಳ್ತಂಗಡಿಗೆ ಶಾಸಕ ಹರೀಶ್ ಪೂಂಜಾ (Belthangady MLA Harish Poonja) ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಶಾಸಕರ ಕಾರಿಗೆ ಬೆದರಿಕೆ ಹಾಕಿದ್ದಾರೆ.


3. Kantara: ನನ್ನ ಲವರ್​ಗಿಂತ ನಿಮ್ಮನ್ನ ಜಾಸ್ತಿ ಪ್ರೀತಿಸ್ತೀನಿ, ರಿಷಬ್​ ಕಾಲಿಗೆ ಬಿದ್ದು ಹಿಂದಿ ಆ್ಯಂಕರ್​ ಭಾವುಕ!


ಇಡೀ ದೇಶದಲ್ಲಿ ಕೇಳಿ ಬರುತ್ತಿರುವ ಒಂದು ಪದ ಅಂದರೆ ಕಾಂತಾರ (Kantara) . ಎಲ್ಲಿ ನೋಡಿದರೂ ನಮ್ಮ ಕನ್ನಡ (Kannada) ಸಿನಿಮಾದ ಬಗ್ಗೆಯೆ ಮಾತನಾಡುತ್ತಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸೃಷ್ಟಿಸಿರುವ ಕ್ರೇಜ್ (Craze)​ ಇದೆಯಲ್ಲಾ ಅದು ನಾಳೆಗೆ ಮುಗಿಯುವಂತದಲ್ಲ. ಇತ್ತೀಚೆಗೆ ಕನ್ನಡ ಸಿನಿಮಾಗಳು ಯಾವ ಮಟ್ಟಕ್ಕೆ ಹೆಸರು ಮಾಡುತ್ತಿದೆ ಅಂದರೆ, ಎಲ್ಲ ರಾಜ್ಯದವರು ಸ್ಯಾಂಡಲ್​ವುಡ್​ (Sandalwood) ನತ್ತ ಒಮ್ಮೆ ತಿರುಗಿ ನೋಡುತ್ತಿದ್ದಾರೆ.  ಕೆಜಿಎಫ್ (KGF) ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ (Bollywood) , ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲ್ಮಸ್(Hombale Films) , ಕಾಂತಾರದ ಮೂಲಕ ಮತ್ತೊಂದು ಗೆಲುವು ಕಂಡಿದೆ.


4. ಮುರುಘಾ ಸ್ವಾಮೀಜಿಗೆ ತಪ್ಪದ ಸಂಕಷ್ಟ, ಪೋಕ್ಸೋ ಅಡಿ ಮತ್ತೊಂದು ಕೇಸ್​ ದಾಖಲು!


ಪೋಕ್ಸೋ ಪ್ರಕರಣದ ಅಡಿಯಲ್ಲಿ ಮುರುಘಾ ಮಠದ ಶಿವಮೂರ್ತಿಗಳ ಮೇಲೆ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಹೆಣ್ಣು ಮಕ್ಕಳ ಹೇಳಿಕೆ ಮತ್ತು ಪೂರಕ ಸಾಕ್ಷಾಧಾರಗಳ ಕಲೆ ಹಾಕಿದ ನಂತರ ಎಫ್ಐಆರ್ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


5. IND vs PAK: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯುತ್ತಾ? ಬಿಸಿಸಿಐ ಕೊಟ್ಟ ಉತ್ತರವೇನು?


ಸದ್ಯ ಕ್ರಿಕೆಟ್​ ಅಭಿಮಾನಿಗಳು ಟಿ20 ವಿಶ್ವಕಪ್​ಗಾಗಿ (T20 World Cup 2022) ಕಾತುರತೆಯಿಂದ ಕಾಯುತ್ತಿದ್ದಾರೆ. ಇನ್ನೇನು ಇದೇ ಅಕ್ಟೊಬರ್​ 16ರಿಂದ ಟಿ20 ವಿಶ್ವಕಪ್​ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಗಾಗಿ ಭಾರತ ತಂಡ (Team India) ಈಗಾಗಲೇ ಆಸೀಸ್​ಗೆ ತಲುಪಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಅಲ್ಲದೇ ಭಾರತ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ ಈ ಎರಡೂ ದೇಶಗಳ ನಡುವೆ ಅನೇಕ ವರ್ಷಗಳಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯಗಳು ನಡೆಯುತ್ತಿವೆ. ಆದರೆ ಭವಿಷ್ಯದದಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು 2023-2027ರ ವರೆಗೆ ದ್ವಿಪಕ್ಷೀಯ ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗುವುದಿಲ್ಲ.  ಈ ಕುರಿತುಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ರಾಜ್ಯಗಳ ಸಂಘಗಳಿಗೆ ಮಾಹಿತಿ ನೀಡಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು