Morning Digest: ಉದ್ಯಮಿ ರಾಕೇಶ್ ಜುಂಜುನ್ವಾಲಾ ಇನ್ನಿಲ್ಲ, ಮಳೆ ಮುಗಿದರೂ ನಿಲ್ಲದ ಸಂಕಷ್ಟ! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೂಡಿಕೆ ದಿಗ್ಗಜ ರಾಕೇಶ್ ಜುಂಜುನ್ವಾಲಾ ಇನ್ನಿಲ್ಲ

ದಿಗ್ಗಜ ಹೂಡಿಕೆದಾರ ರಾಕೇಶ್​ ಜುಂಜುನ್ವಾಲಾ (Rakesh Jujanwala) ಕೊನೆಯುಸಿರೆಳೆದಿದ್ದಾರೆ. ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ 62ನೇ ವಯಸ್ಸಿಗೆ ತಮ್ಮ ಜೀವನದ ಆಟ ಮುಗಿಸಿದ್ದಾರೆ. ಷೇರು ಮಾರುಕಟ್ಟೆ (Share Mareker) ಯಲ್ಲಿ ತಮ್ಮ ಹೆಸರನ್ನು ಟ್ರೆಂಡ್​ ಮಾಡಿಕೊಂಡಿದ್ದರು ರಾಕೇಶ್​ ಜುಂಜುನ್ವಾಲಾ, ಷೇರುಪೇಟೆಯಲ್ಲಿ ಕಿಂಗ್ (Stock Market King)​ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಷೇರು ಪೇಟೆಯಲ್ಲಿ ಹೂಡಿಕೆ ಮಾಡಿ, ಸಾಕಷ್ಟು ಹಣ, ಖ್ಯಾತಿ ಗಳಿಸಿದ್ದರು. ಭಾರತದ 36 ನೇ ಶ್ರೀಮಂತ ವ್ಯಕ್ತಿ  ಈ ರಾಕೇಶ್​ ಜುಂಜನ್ವಾಲಾ.  ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಿಡಾಸ್ ಟಚ್ ಹೊಂದಿರುವ ಹೂಡಿಕೆದಾರರನ್ನು "ಭಾರತದ ವಾರೆನ್ ಬಫೆಟ್" ಎಂದು ಕರೆಯಲಾಗುತ್ತಿತ್ತು.

ಮಳೆ ನಿಂತರೂ ಮಲೆನಾಡಲ್ಲಿ ನಿಂತಿಲ್ಲ ಅವಾಂತರ

Heavy Rain: ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯಾದ್ಯಂತ ನಿನ್ನೆಯಿಂದ ಶೇಕಡ 80ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯಾದ್ಯಂತ ನಿನ್ನೆಯಿಂದ ಶೇಕಡ 80ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಬೆಟ್ಟ-ಗುಡ್ಡ ಕುಸಿಯುವುದು, ರಸ್ತೆ ಕಟ್ ಆಗುವುದು, ತೋಟಗಳ ಮಣ್ಣು ಜರಿಯುವುದು ಮಾತ್ರ ನಿಂತಿಲ್ಲ. ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರುಣದೇವ ತಕ್ಕಮಟ್ಟಿಗೆ ಶಾಂತನಾಗಿದ್ದರೂ ಸುಮಾರು 20 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ನಡೆದಿದೆ.

ಇದನ್ನೂ ಓದಿ: Rain Effect: ಮಳೆ ನಿಂತರೂ ಮಲೆನಾಡಲ್ಲಿ ನಿಂತಿಲ್ಲ ಅವಾಂತರ, ಮನೆ ಗೋಡೆ ಕುಸಿದು ಜನರ ಪರದಾಟ

ನಾಳೆ ಈದ್ಗಾ ಮೈದಾನದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ!

ಕೊನೆಗೂ ಚಾಮರಾಜಪೇಟೆ (Chamarajapete) ಈದ್ಗಾ ಮೈದಾನದಲ್ಲಿ ( Eidgah Maidan) ತ್ರಿವರ್ಣ ಧ್ವಜ (Flag) ಹಾರಾಡಲು ಕ್ಷಣಗಣನೆ ಶುರುವಾಗಿದೆ. ವಿವಾದದ ಉತ್ತುಂಗದಲ್ಲಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಈಗ ಕಂದಾಯ ಇಲಾಖೆಯ ತೆಕ್ಕೆಯಲ್ಲಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಇಲ್ಲಿ ಸರ್ಕಾರದಿಂದಲೇ (Government)  ಧ್ವಜಾರೋಹಣ ನಡೆಯುತ್ತಿದ್ದು,  ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ (R Ashok) ಭದ್ರತಾ ಪರಿಶೀಲನೆ ನಡೆಸಿದ್ದಾರೆ.

ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಶಾಕ್! 

Gold and Silver price on August 14, 2022: ನಾಳೆ ಸ್ವಾತಂತ್ರ್ಯೋತ್ಸವ. ಅದರಲ್ಲೂ 75ನೇ ವರ್ಷದ ಅಮೃತ ಮಹೋತ್ಸವ. ಈ ಹೊತ್ತಲ್ಲೇ ಸ್ವಲ್ವ ಬೆಳ್ಳಿ, ಬಂಗಾರ ಖರೀದಿ ಮಾಡ್ಬೇಕು, ಇಂದು ಪರ್ಚೇಸ್ ಮಾಡಿ, ನಾಳೆ ಧರಿಸಿಕೊಂಡು ಹೋಗ್ಬೇಕು ಅಂತ ಪ್ಲಾನ್ ಮಾಡಿದ್ರಾ? ಆದರೆ ಇಂದು ಬೆಲೆ ಏರಿಕೆ ಆಗಿದೆ. ಇಂದು ಭಾರತೀಯ ಚೀನಿವಾರ ಪೇಟೆಯಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ ₹ 5,253 ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರಕ್ಕೆ ₹ 5,258 ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ ₹ 48,200 ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 52,580 ರೂಪಾಯಿ ದಾಖಲಾಗಿದೆ.

ಇದನ್ನೂ ಓದಿ: Gold and Silver Price: ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಶಾಕ್! ಇಂದು ಚಿನ್ನದ ಬೆಲೆ ಏರಿಕೆ

PV Sindhu: ವಿಶ್ವ ಚಾಂಪಿಯನ್‌ಶಿಪ್​ನಿಂದ ಚಿನ್ನದ ಹುಡುಗಿ ಪಿವಿ ಸಿಂಧು ಔಟ್​

ಇತ್ತೀಚಿಗೆ ಮುಗಿದ ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ (CWG 2o22) ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu)  ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 2014ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಗೆದ್ದಿದ್ದ ಪಿವಿ ಸಿಂಧು ಈ ಬಾರಿ ಚಿನ್ನ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿದ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದರು. ಇವರ ಈ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ. ಅಲ್ಲದೇ ಈ ರೀತಿ ಅನೇಕ ಚಿನ್ನದ ಪದಕವನ್ನು ಗೆಲ್ಲುವಂತಾಗಿ ಎಂದು ಅದೆಷ್ಟೋ ಜನ ಹಾರೈಸಿದ್ದಾರೆ. ಆದರೆ ಚಿನ್ನ ಗೆಲ್ಲುವ ಪ್ರಯತ್ನದಲ್ಲಿ, ಗಾಯಗೊಂಡಿದ್ದು,  ಈ ಗಾಯವು ಗಂಭೀರವಾಗಿದೆ ಎಮದು ತಿಳಿದುಬಂದಿದೆ. ಈ ಕಾರಣದಿಂದಾಗಿ ಅವರು ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.
Published by:Annappa Achari
First published: