Moring Digest: ಸಾನ್ಯ ಹಿಂದೆ ಬಿದ್ರಾ ರೂಪೇಶ್? ರಾಜ್ಯದ ಹಲವೆೆಡೆ ಮಳೆ ಅಬ್ಬರ; ಈವರೆಗಿನ ಟಾಪ್ ನ್ಯೂಸ್ ಇಲ್ಲಿವೆ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿ

ಈವರೆಗಿನ ಪ್ರಮುಖ ಸುದ್ದಿ

  • Share this:
ಬಿಗ್​ ಬಾಸ್ ಮನೆಗೆ ಹೋಗೋಕೆ ಕಾಫಿ ನಾಡು ಚಂದು ನಾನಾ ಕಸರತ್ತು! 

ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್. ಸೋಷಿಯಲ್​ ಮೀಡಿಯಾ (Social Media) ಓಪನ್​ ಮಾಡಿದರೆ ಸಾಕು ನಮಸ್ಕಾರ ನಾನು ಕಾಫಿ ನಾಡಿನ ಚಂದು (Coffee Nadu Chandu) ಎಂಬ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ದಿಲ್ಲಿಯಿಂದ ಹಳ್ಳಿವರೆಗೂ ಕಾಫಿನಾಡಿದ ಚಂದು ಹವಾ ಜೋರಾಗಿದೆ. ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಇವರು ಇನ್ನೇನು ಬಿಗ್​ಬಾಸ್ (Kannada Bigg Boss OTT)​ ಮನೆಗೆ ಹೋಗುತ್ತಾರೆ ಅಂತ ಹೇಳಲಾಗುತ್ತಿತ್ತು. ಆದರೆ, ಅದು ನೆರವೇರಲಿಲ್ಲ. ಚಂದು ಅವರನ್ನು ಬಿಗ್​ಬಾಸ್​ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಅದರೂ ಬಿಗ್​ ಬಾಸ್ ಮನೆ ಸೇರಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.

Bigg Boss OTT: ಹೋದಲ್ಲೆಲ್ಲಾ ಸಾನ್ಯಾ ಅಯ್ಯರ್ ಹಿಂದೆ ಬೀಳ್ತಿದ್ದಾರೆ ರೂಪೇಶ್

ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss) ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ತನ್ನ ಜೀವನಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಸಾನ್ಯ ಬಿಗ್​ ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಈ ಜೋಡಿ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಗುಸುಗುಸು ಶುರುವಾಗಿದೆ.

ಇದನ್ನೂ ಓದಿ: Bigg Boss OTT: ಹೋದಲ್ಲೆಲ್ಲಾ ಸಾನ್ಯಾ ಅಯ್ಯರ್ ಹಿಂದೆ ಬೀಳ್ತಿದ್ದಾರೆ ರೂಪೇಶ್; ಇದು ಸ್ನೇಹನಾ? ಪ್ರೀತಿನಾ?

ಗೋವಾದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು! ಪಂಚಾಯತ್ ಚುನಾವಣೆಯಲ್ಲಿ ದಾಖಲೆಯ ಜಯಭೇರಿ

ಪಣಜಿ: ಗೋವಾ ಪಂಚಾಯತ್ ಚುನಾವಣೆಯಲ್ಲಿ 186 ಸ್ಥಾನಗಳಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆದ್ದಿದೆ. ಗೋವಾದ 186 ಪಂಚಾಯತ್ ಸಂಸ್ಥೆಗಳಿಗೆ ಆಗಸ್ಟ್ 10 ರಂದು ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa Chief Minister Pramod Sawant) ಹೇಳಿದ್ದಾರೆ. ಗೋವಾದಲ್ಲಿ 186 ಪಂಚಾಯತ್ ಸಂಸ್ಥೆಗಳಿಗೆ ಆಗಸ್ಟ್ 10 ರಂದು ನಡೆಸಲಾಗಿದ್ದ ಚುನಾವಣೆಗಳ ಫಲಿತಾಂಶಗಳು ಪ್ರಕಟವಾಗಿವೆ. ನಾವು 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ವಿಧಾನಸಭೆ, ಲೋಕಸಭೆಯ ನಂತರ ಈಗ ನಾವು ಪಂಚಾಯತ್ ಚುನಾವಣೆಗಳನ್ನು ಸಹ ಗೆದ್ದಿದ್ದೇವೆ. ಈ ಚುನಾವಣಾ ಫಲಿತಾಂಶ (Goa Panchayat Polls Results) ನಮ್ಮ ಕೆಲಸವನ್ನು ತೋರಿಸುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

Kodagu Flood: ಜಲಪ್ರಳಯವಾದ ಊರಿನಲ್ಲಿ ಬದುಕು ಕಟ್ಟಿಕೊಳ್ಳುವುದೇ ದುಸ್ಥರ! 

ಮಡಿಕೇರಿ, ಕೊಡಗು: ಮಳೆ (Rain) ಕಡಿಮೆ ಆಗಿದೆ, ನೀವಿನ್ನು ಕಾಳಜಿ ಕೇಂದ್ರದಿಂದ ನಿಮ್ಮ ಊರುಗಳಿಗೆ (Village) ಹೋಗಬಹುದು ಎಂದು ಜಿಲ್ಲಾಡಳಿತ ಸಂತ್ರಸ್ಥರನ್ನು (victims) ಹೊರಗೆ ಕಳುಹಿಸಿತ್ತು. ಬಳಿಕ ನಾವೇನು ಕಳುಹಿಸಿಲ್ಲ ಜನರೇ ನಮ್ಮ ದನ ಕರುಗಳು, ಸಾಕು ಪ್ರಾಣಿಗಳು (Pet Animals) ಮನೆಯಲ್ಲಿವೆ, ಮಳೆಯೂ ಕಡಿಮೆ ಆಗಿದೆ ಅಂತ ಅವರೇ ಹೋಗಿದ್ದಾರೆ ಅಂತ ಜಿಲ್ಲಾಡಳಿತ ಸ್ಪಷ್ಟನೆಯನ್ನೂ ಕೊಟ್ಟಿತ್ತು. ಆದರೆ ಜನರು (People) ಮಾತ್ರ ಎಂತಹ ಅಪಾಯದ ಪರಿಸ್ಥಿತಿಯ ಊರಿನಲ್ಲಿ ಇದ್ದಾರೆ ಎನ್ನೋದನ್ನು ನೀವು ನೋಡಲೇ ಬೇಕು. ಮೇಲ್ಭಾಗದಿಂದ ಭೀಕರವಾಗಿ ಕುಸಿದು ಬಂದಿರುವ ಬೆಟ್ಟ (Hills). ಜಲಸ್ಫೋಟವಾದ ರಭಸಕ್ಕೆ ರಸ್ತೆ (Road), ಸೇತುವೆಗಳೇ (Bridge) ಮಾಯ. ಯಾವ ರಸ್ತೆಯಲ್ಲಿ ಹೋದರೂ ರಸ್ತೆಯ ಮೇಲೆ ಬಿದ್ದಿರುವ ಕುಸಿದ ಗುಡ್ಡದ ಮಣ್ಣಿನ ರಾಶಿ, ಸಂಪರ್ಕ ಕಡಿತ. ಇಂತಹ ಅಪಾಯ ಸ್ಥಿತಿ ಮಡಿಕೇರಿ (Madikeri) ತಾಲ್ಲೂಕಿನ ಎರಡನೇ ಮೊಣ್ಣಂಗೇರಿ ಮತ್ತು ರಾಮಕೊಲ್ಲಿ ಎಂಬ ಗ್ರಾಮಗಳಲ್ಲಿ ಇವೆ.

ಇದನ್ನೂ ಓದಿ: Kodagu Flood: ಜಲಪ್ರಳಯವಾದ ಊರಿನಲ್ಲಿ ಬದುಕು ಕಟ್ಟಿಕೊಳ್ಳುವುದೇ ದುಸ್ಥರ! ಆತಂಕದಲ್ಲಿದ್ದಾರೆ ಕೊಡಗಿನ ಜನ

Gold and Silver Price: ಶ್ರಾವಣ ಶನಿವಾರ ಆಭರಣ ಪ್ರಿಯರಿಗೆ ನಿರಾಸೆ

Gold and Silver price on August 13, 2022: ಶ್ರಾವಣ ಶನಿವಾರ ಆಭರಣ ಪ್ರಿಯರಿಗೆ ಶಾಕ್ ಎದುರಾಗಿದೆ. ಇಂದು ಚಿನ್ನ ಖರೀದಿ ಮಾಡ್ಬೇಕು ಅಂದುಕೊಂಡವರಿಗೆ ನಿರಾಸೆಯಾಗಿದೆ. ಯಾಕೆಂದ್ರೆ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ! ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನಿನ್ನೆ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,350 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,650 ರೂ. ಇದ್ದುದು 52,090 ರೂ. ಆಗಿದೆ.
Published by:Annappa Achari
First published: