Morning Digest: ಹುಬ್ಬಳ್ಳಿಗೆ ವ್ಯಾಪಿಸಿದ ಈದ್ಗಾ ವಿವಾದ, ನಾಲ್ವರ ಕೊಲೆ, ಹೆಚ್​ಡಿಕೆ ಕಿಡಿ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

  • Share this:
1.Belagavi: ಜಿಲ್ಲೆಯಲ್ಲಿ ಚಿರತೆಗಳ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ; ಫಲ ನೀಡದ 7 ದಿನಗಳ ಕಾರ್ಯಾಚರಣೆ

ಬೆಳಗಾವಿ ಜಿಲ್ಲೆಯ (Belagavi District) ನಿರಂತರ ಮಳೆ (Rain) ಅಷ್ಟೇ ಅಲ್ಲದೇ ಜನರಿಗೆ ಚಿರತೆಗಳ (Leopard) ಹಾವಳಿ ಸಹ ದೊಡ್ಡ ಸಂಕಟವನ್ನು ತಂದೊಡ್ಡಿದೆ. ಜಿಲ್ಲೆಯಲ್ಲಿ ಮೂರು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಿಗೆ ಭಯ ಹುಟ್ಟಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ (Forest Department Staff) ಎಷ್ಟೇ ಪ್ರಯತ್ನ ಮಾಡಿದರೂ ಪತ್ತೆ ಆಗಿಲ್ಲ. ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದ 25 ಶಾಲೆಗಳಿಗೆ ಜಿಲ್ಲಾಡಳಿತ ರಜೆ (School Holiday) ಘೋಷಣೆ ಮಾಡಿದೆ. ನೂರಾರು ಸಿಬ್ಬಂದಿ, 20ಕ್ಕೂ ಹೆಚ್ಚು ಬೋನ್, ಟ್ರ್ಯಾಪ್ ಕ್ಯಾಮೆರಾ ಸೇರಿ ಅನೇಕ ರೀತಿಯಲ್ಲಿ ಪ್ರಯತ್ನ ಮಾಡಿದ್ರು ಚಿರತೆಗಳು ಮಾತ್ರ ಸಿಗುತ್ತಿಲ್ಲ. ಅರಣ್ಯ ಸಚಿವರ ಜಿಲ್ಲೆಯಲ್ಲಿ ಚಿರತೆಗಳು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನುಸುತ್ತಿರೋದು ಪ್ರಾಣ ಸಂಕಟ ತಂದೊಡ್ಡಿದೆ.

2. HD Kumaraswamy: ಸ್ವಾಭಿಮಾನದಿಂದ ಬದುಕಿದವನು ನಾನು, ಇವರ ಮದ ಇಳಿಸೋದು ಹೇಗೆ ಅಂತ ಗೊತ್ತು; ಹೆಚ್​ಡಿಕೆ

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (Former CM HD Kumaraswamy) ಅಶ್ವಥ್ ನಾರಾಯಣ (Minister Ashwath Narayan) ವಿರುದ್ಧ ವಾಗ್ದಾಳಿ ನಡೆಸಿದರು. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಾರಸ್ವಾಮಿ, ಪಂಚತಾರ ಹೋಟೆಲ್​ನಲ್ಲಿ (Five Star Hotel) ಉಳಿದುಕೊಳ್ಳುತ್ತಾರೆ ಅಂತಾರೆ. ಈಗ ದೆಹಲಿಯಿಂದ ಬರುವ ಅಮಿಶ್ ಶಾ (Amit Shah), ಜೆಪಿ ನಡ್ಡಾ (JP Nadda), ಅರುಣ್ ಸಿಂಗ್ (Arun Singh) ಎಲ್ಲಿ ಉಳಿದುಕೊಳ್ಳುತ್ತಾರೆ. ಹಾಗಾದ್ರೆ ಅವರು ಹೋಟೆಲ್​ಗೆ ಹೋಗಬಹುದಾ? ಕುಮಾರಸ್ವಾಮಿ ಹೋದರೆ ತಪ್ಪಾ ಎಂದು ಪ್ರಶ್ನೆ ಮಾಡಿದರು. ನಾನು ಗುಡಿಸಲಿನಲ್ಲಿಯೂ, ಪಂಚತಾರಾ ಹೋಟೆಲ್​ನಲ್ಲಿಯೂ ಮಲಗಿದ್ದೇನೆ.‌ ನಾನು ಇವರಿಂದ ಕಲಿಯ ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

3.Property Issue: ಆಸ್ತಿಗಾಗಿ ಮರ್ಡರ್ ಪ್ಲಾನ್! ಗಂಡ-ಹೆಂಡ್ತಿ ಸೇರಿ ಕುಟುಂಬದ ನಾಲ್ವರನ್ನು ಕೊಂದೇ ಬಿಟ್ರು

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಆಸ್ತಿಗಾಗಿ ಮಹಿಳೆ ಮತ್ತು ಆಕೆಯ ಪತಿ ತಮ್ಮ ಕುಟುಂಬದ ನಾಲ್ವರನ್ನು ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಹೌರಾ ಪೊಲೀಸ್ ಠಾಣೆ ವ್ಯಾಪ್ತಿಯ ಎಂಸಿ ಘೋಷ್ ಲೇನ್‌ನಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿ ಪಲ್ಲವಿ ಘೋಷ್ ಅವರನ್ನು ಬಂಧಿಸಲಾಗಿದ್ದು, ಆಕೆಯ ಪತಿ ದೇಬ್ ರಾಜ್ ಘೋಷ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

4.UK PM Race: ಸೋಲುವ ಮಾತುಗಳನ್ನಾಡಿದ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್, ಕಾರಣವೇನು?

ಆರ್ಥಿಕ ಬಿಕ್ಕಟ್ಟನ್ನು (Economic Crisis) ಎದುರಿಸುವ ತನ್ನ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಗೆಲ್ಲುವ ಬದಲು ಸೋಲಲು ಆದ್ಯತೆ ನೀಡುವುದಾಗಿ ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ (Rishi Sunak) ಹೇಳಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಯುಕೆ ಹಣಕಾಸು ಸಚಿವರು ದುರ್ಬಲ ಕುಟುಂಬಗಳ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ ಎಂದು ಹೇಳಿದರು. ಸುನಕ್ ಮತ್ತು ಅವರ ಪ್ರತಿಸ್ಪರ್ಧಿ ಯುಕೆ ವಿದೇಶಾಂಗ ಸಚಿವ ಲಿಜ್ ಟ್ರಸ್ (Liz Truss) ಈ ವಿಷಯದ ಬಗ್ಗೆ ಮುಖಾಮುಖಿಯಾಗಿದ್ದಾರೆ. ಟ್ರಸ್ ತೆರಿಗೆ ಕಡಿತದ ಭರವಸೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ್ದ ಮಾಜಿ ಹಣಕಾಸು ಸಚಿವ ಸುನಕ್ ಶ್ರೀಮಂತ ಕುಟುಂಬಗಳಿಗೆ ಮಾತ್ರ ಇದರಿಂದ ಪ್ರಯೋಜನ ಆಗುತ್ತದೆ, ಹೆಚ್ಚು ಅಗತ್ಯವಿರುವವರಿಗೆ ಅಲ್ಲ ಎಂದು ಹೇಳಿಕೊಂಡಿದ್ದಾರೆ.

5.Hubballi: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಆಗ್ರಹ; ಮತ್ತೆ ವಿವಾದ ಮುನ್ನೆಲೆಗೆ ಸಾಧ್ಯತೆ!

ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ (Hubballi Idgah Maidana) ಒಂದೊಮ್ಮೆ ದೇಶದ ಗಮನ ಸೆಳೆದಿತ್ತು. ಪ್ರಕರಣ ಸುಖಾಂತ್ಯಗೊಂಡು ಇಷ್ಟು ದಿನ ತಣ್ಣಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ ಮುನ್ನಲೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.‌ ಬೆಂಗಳೂರಿನ (Bengaluru) ಚಾಮರಾಜಪೇಟೆಯ ಈದ್ಗಾ ಮೈದಾನದ (Chamarajpet Idgah Maidana) ವಿವಾದದ‌ ಬಳಿಕ ಹುಬ್ಬಳ್ಳಿಯಲ್ಲೂ ವಿವಾದ (Hubballi Row) ಹುಟ್ಟಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು (Ganeshotsava Celebration) ಅವಕಾಶ ಕೊರಿ ಗಜಾನನ ಮಂಡಳಿಯೊಂದು (Gajanana Committee) ಮನವಿ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ‌.
Published by:Mahmadrafik K
First published: