Morning Digest: ಉಗ್ರರು ಅರೆಸ್ಟ್, ರಾಜ್ಯದಲ್ಲಿ ಮಳೆ ಅಬ್ಬರ, ಚಿನ್ನ ಬಲು ದುಬಾರಿ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Karnataka Weather Report: ಹಂತ ಹಂತವಾಗಿ ಕಡಿಮೆ ಆಗಲಿದೆ ಮಳೆ; ನಿಮ್ಮ ಜಿಲ್ಲೆಯ ಹವಾಮಾನ ವರದಿ ಇಲ್ಲಿದೆ

ಇಂದಿನಿಂದ ರಾಜ್ಯದಲ್ಲಿ ಹಂತ ಹಂತವಾಗಿ ಮಳೆ (Rainfall) ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಂಗಳವಾರದಿಂದಲೇ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದು, ಸಂಜೆ ವೇಳೆಗೆ ತುಂತುರು ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಮಂಗಳವಾರ ಮಧ್ಯಾಹ್ನ ಶಾಂತಿ ನಗರ, ವಿಧಾನಸೌಧ, ಜಯನಗರ ಭಾಗದಲ್ಲಿ ಜೋರು ಮಳೆ ಹೊರತುಪಡಿಸಿ ಬಹುತೇಕ ಕಡೆ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿತ್ತು.

2.Independence Day: ಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ಪ್ಲಾನ್ ಮಾಡಿದ್ದ ಉಗ್ರ ಅರೆಸ್ಟ್

ಭಾರತ ಈ ವರ್ಷ 75ನೇ ವರ್ಷದ ಸ್ವಾತಂತ್ರ್ಯೋತ್ಸವ (Independence Day) ಸಂಭ್ರಮದಲ್ಲಿದೆ. ಪೂರ್ವಜರ ತ್ಯಾಗಗಳೂ, ನಂತರದಲ್ಲಿ ದೇಶದ ಅಭಿವೃದ್ಧಿಯೂ, ಭಾರತ ಪ್ರಪಂಚದ ಪ್ರಮುಖ ಸನಾತನ ಸಂಸ್ಕೃತಿಯ ದೇಶವಾಗಿ ಗಮನ ಸೆಳೆಯುತ್ತಿರುವ ಈ ಕಾಲಘಟ್ಟದ ವರೆಗಿನ ಎಲ್ಲ ಅಭಿವೃದ್ಧಿಯನ್ನು ದೇಶದ ಜನರು ಆಚರಿಸಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಭಯೋತ್ಪಾದಕ ದಾಳಿ (Terrorist Attack) ನಡೆಸಲು ಯೋಜಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್ ನಂಟು ಹೊಂದಿರುವ ಶಂಕಿತ ಉಗ್ರರನ್ನು (Suspected Terrorists) ಉತ್ತರ ಪ್ರದೇಶ ಪೊಲೀಸರು (UP Police) ಮಂಗಳವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3.Kerala: ವಿಮಾನ ದುರಂತದಲ್ಲಿ ತಮ್ಮನ್ನು ಕಾಪಾಡಿದ ಸ್ಥಳೀಯರಿಗಾಗಿ ಆಸ್ಪತ್ರೆ ಕಟ್ಟುತ್ತಿದ್ದಾರೆ ಸಂತ್ರಸ್ತರು

ಎರಡು ವರ್ಷಗಳ ಹಿಂದೆ ಕಾರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನ ಅಪಘಾತದಲ್ಲಿ (Flight Crash) ಬದುಕುಳಿದಿರುವವರು ಮತ್ತು ಮೃತರ ಕುಟುಂಬಗಳು 50 ಲಕ್ಷ ರೂಪಾಯಿ ಮೊತ್ತವನ್ನು ಸಂಗ್ರಹಿಸಿ ಸ್ಥಳೀಯರಿಗೆ ಆಸ್ಪತ್ರೆ (Hospital) ಕಟ್ಟಡ ನಿರ್ಮಿಸಿ, ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ವಿಮಾನ ದುರಂತವಾದಾಗ ಎಲ್ಲರಿಗಿಂತ ಮೊದಲು ಸಹಾಯಕ್ಕೆ ಸಿಗುವುದು ಸ್ಥಳೀಯ ಜನರು (Local Poeple). ಅಪಘಾತದ ಸ್ಥಳದ ಸಮೀಪವಿರುವ ಏಕೈಕ ಸರ್ಕಾರಿ ಆರೋಗ್ಯ ಸೌಲಭ್ಯವಾದ ಸಾರ್ವಜನಿಕ ಆರೋಗ್ಯ ಕೇಂದ್ರ (PHC) ಗಾಗಿ ಕಟ್ಟಡವನ್ನು ನಿರ್ಮಿಸಲಾಗುವುದು. ಆ ಘಟನಾತ್ಮಕ ರಾತ್ರಿಯಲ್ಲಿ ಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆ ನಡೆಸಿದವರಿಗೆ ಕೃತಜ್ಞತೆ ಸಲ್ಲಿಸಲು ಅವರು ಪಿಎಚ್‌ಸಿಗೆ ಕಟ್ಟಡವನ್ನು ನಿರ್ಮಿಸಲು ಪಡೆದ ಪರಿಹಾರದಿಂದ ಹಣವನ್ನು ಸಂಗ್ರಹಿಸಿದ್ದಾರೆ.

4.Malashri: ಸ್ಯಾಂಡಲ್​ವುಡ್​ನ 'ಕನಸಿನ ರಾಣಿ'ಗೆ ಹುಟ್ಟುಹಬ್ಬದ ಸಡಗರ; ಮಾಲಾಶ್ರೀ ಸಿನಿ ಜರ್ನಿ

ಸ್ಯಾಂಡಲ್​ವುಡ್​ ಕನಸಿನ ರಾಣಿ ಮಾಲಾಶ್ರೀ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 49ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಕನ್ನಡದಲ್ಲಿ ಮಿಂಚಿದ ಮಾಲಾಶ್ರೀ ಸಿನಿ ಜರ್ನಿ ಕುರಿತ ಮಾಹಿತಿ ಇಲ್ಲಿದೆ. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿದ ಮಾಲಾಶ್ರೀ ಸ್ಯಾಂಡಲ್ವುಡ್ನಲ್ಲಿ ಭಾರೀ ಯಶಸ್ಸು ಕಂಡು ನಟಿ ಎಂದ್ರೆ ತಪ್ಪಾಗೋದಿಲ್ಲ. ಮಾಲಾಶ್ರೀಯವರು ತಮ್ಮ ಅಭಿನಯದಿಂದ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಭಾವಾನ್ಮಾತಕ ಚಿತ್ರಗಳ ಮೂಲಕ ಜನರನ್ನ ಅಳಿಸಿದ್ದು ಮಾತ್ರವಲ್ಲ. ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲೂ ಜನ ಮೆಚ್ಚಗೆ ಗಳಿಸಿದ ನಟಿ ಅಂದ್ರೆ ಅವರು ಮಾಲಾಶ್ರೀ.

4.Gold Price Today: ಏರಿಕೆ ಆಯ್ತು ಬಂಗಾರದ ಬೆಲೆ, ಇಂದಿನ ಬೆಳ್ಳಿ ದರ ಹೀಗಿದೆ

ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,755 ಇದ್ದದ್ದು, ಇಂದು ಬೆಲೆಯಲ್ಲಿ ಏರಿಕೆಯಾಗಿದ್ದು, ಒಂದು ಗ್ರಾಂ ಚಿನ್ನದ ಬೆಲೆ 4,795 ರೂ ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ 400 ರೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 48,000 ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,00 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 49,000 ರೂ. 47,950, ರೂ. 47,950 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,100 ರೂ. ಆಗಿದೆ. ಒಂದು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,795 ಇದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,231, ಹಾಗೂ ಎಂಟು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,360, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,848 ಇದೆ.

5.Bihar Politics: ಬಿಜೆಪಿಯಿಂದ ನಿತೀಶ್ ದೂರಾ ದೂರ, ವೈರಲ್ ಆಯ್ತು ಲಾಲೂ ಯಾದವ್ 5 ವರ್ಷ ಹಳೇ ಟ್ವೀಟ್​!

ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ಈಗ ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದು, ಈಗ ಮಹಾಮೈತ್ರಿಕೂಟಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯಪಾಲ ಫಗು ಚೌಹಾಣ್ ಅವರಿಗೆ ರಾಜೀನಾಮೆ ಸಲ್ಲಿಸುವ ಮೂಲಕ 164 ಶಾಸಕರ ಬೆಂಬಲ ಪತ್ರವನ್ನೂ ನೀಡಿದ್ದಾರೆ. ಇದರ ಬೆನ್ನಲ್ಲೇ ನೂತನ ಸರ್ಕಾರ ರಚಿಸುವ ಅವಕಾಶವೂ ಸಿಕ್ಕಿದೆ. ಏತನ್ಮಧ್ಯೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ (Lalu Prasad Yadav) ಅವರ ಟ್ವೀಟ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ. ವಾಸ್ತವವಾಗಿ, ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟವನ್ನು ತೊರೆದು ಜುಲೈ 27, 2017 ರಂದು ಬಿಜೆಪಿ (BJP) ಜೊತೆ ಕೈ ಜೋಡಿಸಿದ್ದರು, ನಂತರ ಲಾಲು ಯಾದವ್ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದರು.
Published by:Mahmadrafik K
First published: