• Home
  • »
  • News
  • »
  • state
  • »
  • Top 5 News: ಬಾಲಿವುಡ್​ಗೂ ಕಾಲಿಟ್ಟ ಕಾಂತಾರ, ಮತ್ತೆ ಹೆಚ್ಚಾಗ್ತಿದೆ ಕೊರೋನಾ!

Top 5 News: ಬಾಲಿವುಡ್​ಗೂ ಕಾಲಿಟ್ಟ ಕಾಂತಾರ, ಮತ್ತೆ ಹೆಚ್ಚಾಗ್ತಿದೆ ಕೊರೋನಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1. COVID Symptom: ಮತ್ತೆ ಹೆಚ್ಚಾಗ್ತಿದೆ ಕೊರೋನಾ! ಬದಲಾಗಿದೆ ಕೋವಿಡ್​ ರೋಗಲಕ್ಷಣ!


ಸುಮಾರು ಎರಡೂವರೆ ವರ್ಷಗಳಿಂದ ಇಡೀ ಜಗತ್ತಿನ ಜನರನ್ನು ಬೆಂಬಿಡದೆ ಕಾಡುತ್ತಿರುವ ಕೋವಿಡ್-19 (Covid 19) ಸಾಂಕ್ರಾಮಿಕ ರೋಗವು ಇನ್ನೂ ಪೂರ್ತಿಯಾಗಿ ಕಡಿಮೆ ಆಗುವ ಸೂಚನೆಯನ್ನು ನೀಡುತ್ತಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಏಕೆಂದರೆ ಚಳಿಗಾಲದ (Winter) ಆರಂಭದೊಂದಿಗೆ, ಯುನೈಟೆಡ್ ಕಿಂಗ್ಡಮ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಕೋವಿಡ್ ಪ್ರಕರಣಗಳು (Covid Case) ಇದೀಗ ಮತ್ತೆ ದಿನೇ ದಿನೇ ಹೆಚ್ಚುತ್ತಿವೆ ಅಂತ ಹೇಳಬಹುದು. ಇದು ಮುಂಬರುವ ದಿನಗಳಲ್ಲಿ ಸೋಂಕಿನ ಹೊಸ ಅಲೆಯ ಬಗ್ಗೆ ಸುಳಿವು ನೀಡುತ್ತಿದೆ ಅಂತ ಹೇಳಬಹುದು. ಒಂದು ವಾರದಲ್ಲಿ ಸೋಂಕುಗಳು 14 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶ ಅಧಿಕಾರಿ ಮಾಹಿತಿ ನೀಡಿದ್ದಾರೆ, ಆದಾಗ್ಯೂ, ಈ ಉಲ್ಬಣಕ್ಕೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ ಎಂದು ಸಹ ಹೇಳಿದ್ದಾರೆ.


ಭಾರತ್ ಜೋಡೋ (BHarat Jodo) ಯಾತ್ರೆ ಅಭಿಯಾನದಡಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ 150 ದಿನಗಳ ಸುದೀರ್ಘ ಕಾಂಗ್ರೆಸ್ ಅಭಿಯಾನವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಸದ್ಯ ಭಾರತ ಜೋಡೋ ಯಾತ್ರೆಯಡಿ ತಮಿಳುನಾಡು ಮತ್ತು ಕೇರಳ ಮೂಲಕ ರಾಹುಲ್ ಗಾಂಧಿ ಕರ್ನಾಟಕ ತಲುಪಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ರಾಜಕೀಯ ಹಿತಾಸಕ್ತಿಯನ್ನು ಬದಿಗಿರಿಸಿ ಮರಿಯಾನೆಯೊಂದರ ರಕ್ಷಣೆಗೆ ಮುಂದಾಗಿದ್ದಾರೆ. ಒಂದೊಳ್ಳೆ ಕಾರಣಕ್ಕಾಗಿ ರಾಜಕೀಯವಾಗಿ ಬದ್ಧ ವೈರಿಗಳಂತಿರುವ ನಾಯಕರು ಮಾನವೀಯತೆಗಾಗಿ ಕೈ ಮಿಲಾಯಿಸಿದ್ದಾರೆ.


3. Bidar: ಮಸೀದಿಗೆ ನುಗ್ಗಿ ದಸರಾ ಪೂಜೆ! 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲು


ಮಹ್ಮದ್ ಗವಾನ್ ಮದರಸಾ ಮತ್ತು ಮಸೀದಿಯ ಮೈದಾನಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿ, ಬಲವಂತವಾಗಿ ಪೂಜೆ ಸಲ್ಲಿಸಿದ ಆರೋಪದಲ್ಲಿ ಒಂಬತ್ತು ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಆದರೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಬೀದರ್‌ನ ಪುರಾತನ ಮಸೀದಿ ಮಹ್ಮದ್ ಗವಾನ್ ಮದರಸಾದಲ್ಲಿ (Mosque In Bidar) ಹಿಂದೂಗಳ ಗುಂಪೊಂದು ಬಲವಂತವಾಗಿ ಪೂಜೆ ಸಲ್ಲಿಸಿದೆ. ದಸರಾ ಹಬ್ಬದ (Dasara Festival) ಸಂದರ್ಭದಲ್ಲಿ ದೇವಿ ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ನೂರಾರು ಭಕ್ತರು ನೆರೆದಿದ್ದರು. ಈ ವೇಳೆ ಬೀದರ್‌ನ (Bidar News) ಪುರಾತನ ಮಸೀದಿಗೆ ನುಗ್ಗಿದ ಹಿಂದೂಗಳು ಬೀಗ ಒಡೆದು ಪೂಜೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


4. Arun Bali Passes away: ರಶ್ಮಿಕಾ ಜೊತೆ ಗುಡ್​​ ಬೈನಲ್ಲಿ ನಟಿಸಿದ್ದ ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇನ್ನಿಲ್ಲ


ಸ್ವಾಭಿಮಾನ್ ಚಿತ್ರದಲ್ಲಿ ಕುನ್ವರ್ ಸಿಂಗ್ ಪಾತ್ರ ಮಾಡಿ ಖ್ಯಾತಿ ಗಳಿಸಿ ಹೆಸರುವಾಸಿಯಾಗಿದ್ದ ಹಿರಿಯ ನಟ ಅರುಣ್ ಬಾಲಿ (Arun Bali) ಶುಕ್ರವಾರ 79 ನೇ ವಯಸ್ಸಿನಲ್ಲಿ ನಿಧನರಾದರು. ಸುದ್ದಿ ಸಂಸ್ಥೆ ANI ಪ್ರಕಾರ, ನಟ ಮುಂಬೈನಲ್ಲಿ  (Mumbai) ನಿಧನರಾದರು. ಅವರ ಕೊನೆಯ ಚಿತ್ರ ಗುಡ್ ಬೈ (Good Bye) ಅಕ್ಟೋಬರ್ 7 ರಂದು (ಇಂದು) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅವರ ನಿಧನದ ಸುದ್ದಿ ತಿಳಿದ ಅಭಿಮಾನಿಗಳು ಟ್ವಿಟರ್‌ನಲ್ಲಿ (Twitter) ನಿಧನರಾದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ. ಪ್ರತಿ ಪಾತ್ರದಲ್ಲೂ ತುಂಬಾ ಚೆನ್ನಾಗಿ ಅವರು ಕಾಣಿಸಿಕೊಂಡಿದ್ದರು ಎಂದು ಅಭಿಮಾನಿಯೊಬ್ಬರು ಟ್ವೀಟ್ (Tweet) ಮಾಡಿದ್ದಾರೆ. ಅವರು ಅಂತಹ ಸಹಜ ನಟ. RIP ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅವರು ಜೀವನ್ಮರಣದ ಹೋರಾಟವನ್ನು ನೋಡಿದರು. ರೀಲ್‌ನಲ್ಲಿ ಬದುಕುಳಿದರು, ಆದರೆ ಸಿನಿಮಾ ಬಿಡುಗಡೆಯ ದಿನದಂದು ಅವರು ನಮಗೆ ವಿದಾಯ ಹೇಳಿದರು ಎಂದು ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.


5. Kantara Hindi Trailer: ಬಾಲಿವುಡ್​ಗೂ ಕಾಲಿಟ್ಟ ಕನ್ನಡದ ಕಾಂತಾರ! ರಿಲೀಸ್ ಯಾವಾಗ?


ಕನ್ನಡದ ಕಾಂತಾರ ಸಿನಿಮಾ ಚೆನ್ನಾಗಿ ಓಡ್ತಿದೆ. ಸಿಂಗಲ್ (Single Theatres) ಥಿಯೇಟರ್ ನಲ್ಲೂ ಚಿತ್ರ ವೀಕ್ಷಿಸಲು ಜನ ಮುಗಿ ಬೀಳುತ್ತಿದ್ದಾರೆ. ಮಲ್ಟಿಪ್ಲೆಕ್ಸ್​ಗಳಲ್ಲೂ (Multiplex)  ಕನ್ನಡದ ಕಾಂತಾರ (Kantara Film) ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಹಬ್ಬದ ರಜಾ ಬೇರೆ, ಅದಕ್ಕೇನೆ ಜನ ಥಿಯೇಟರ್​ಗೆ ಹೋಗಿಯೇ ಸಿನಿಮಾ ನೋಡುತ್ತಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಕುರಿತು ಅತಿ ಹೆಚ್ಚು ಮಾತನಾಡುತ್ತಿದ್ದಾರೆ. ಕನ್ನಡದ ಈ ಸಿನಿಮಾದ ಕ್ರೇಜ್ ಈಗ ಬೇರೆ ಭಾಷೆ ಸಿನಿಮಾ ಪ್ರೇಮಿಗಳಿಗೂ ಪಸರಿಸಿದೆ. ಈ ಚಿತ್ರವನ್ನ ಆಯಾ ಭಾಷೆಯಲ್ಲಿ ತೋರಿಸಬೇಕು ಅಂತಲೇ ವಿತರಕರೂ ರೆಡಿ ಆಗಿದ್ದಾರೆ. ಅದರ ಫಲವೇ ಕಾಂತಾರ ಬಾಲಿವುಡ್​ ಅಂಗಳಕ್ಕೂ (Kantara Bollywood Remake) ಈಗ ಕಾಲಿಟ್ಟಿದೆ. ಇದೇ ತಿಂಗಳು 09 ರಂದು ವಿಶೇಷ ನಡೆಯಲಿದೆ.

Published by:Precilla Olivia Dias
First published: