Morning Digest: ಅಕ್ಟೋಬರ್ 16 ವರೆಗೆ ಭಾರೀ ಮಳೆ ನಿರೀಕ್ಷೆ, ಆಯುಧ ಪೂಜೆಗೆ ಬೆಲೆಯೇರಿಕೆ ಬಿಸಿ : ಬೆಳಗಿನ ಟಾಪ್​ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

  1. Karnataka Weather Today: ಅಕ್ಟೋಬರ್ 16ವರೆಗೆ ಮುಂದುವರೆಯಲಿದೆ ಮಳೆಯ ಆರ್ಭಟ- ಬೆಂಗಳೂರಿನ ಇಂದಿನ ಹವಾಮಾನ ಹೀಗಿದೆ.


Karnataka Rains Today ಬೆಂಗಳೂರು(ಅ.14):ನೈಋತ್ಯ ಮಾನ್ಸೂನ್ ಗೆ(Southwest Monsoon.) ಹೋಲಿಸಿದರೆ ಕರ್ನಾಟಕದಲ್ಲಿ ಈಶಾನ್ಯ ಮಾನ್ಸೂನ್( Northeast Monsoon) ಅವಧಿಯಲ್ಲಿ ಹೆಚ್ಚು ಮಳೆಯಾಗುತ್ತದೆ. ವಾಸ್ತವವಾಗಿ, ಈಶಾನ್ಯ ಮಾನ್ಸೂನ್ ಆರಂಭವಾಗುವ ಮುನ್ನವೇ ಕರ್ನಾಟಕದ(Karnataka) ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳ ಕರ್ನಾಟಕದ ಕೆಲವು ಕಡೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ(Rainfall). ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವ ಬೆಂಗಳೂರು(Bengaluru) ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ.ಉತ್ತರ ಒಳನಾಡಿನಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಮಳೆಯಾಗಲಿದೆ, ಆದರೂ ಕೆಲವೊಮ್ಮೆ ಅಧಿಕ ಮಳೆಯಾಗುವ ನಿರೀಕ್ಷೆಯನ್ನ  ತಳ್ಳಿಹಾಕುವಂತಿಲ್ಲ.

 2. Gold Price Today: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ-ಪ್ರಮುಖ ನಗರಗಳ ಇಂದಿನ ದರ ಹೀಗಿದೆ

Gold Rate on October 14 2021: ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆ(Gold Price) ನಿರಂತರವಾಗಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಿದೆ. ಭಾರತದಲ್ಲಿ ನಿನ್ನೆ 90 ರೂ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು 260 ರೂ ಏರಿಕೆ ಕಂಡಿದೆ. ಆದರೆ ಬೆಂಗಳೂರಿನಲ್ಲಿ(Bengaluru) ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು 10 ಗ್ರಾಂ ಚಿನ್ನಕ್ಕೆ 260 ರೂಪಾಯಿ ಹೆಚ್ಚಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,030 ರೂ. ಇತ್ತು. ಇಂದು ಅದೇ ಚಿನ್ನಕ್ಕೆ 46,290 ರೂಪಾಯಿ ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,030 ರೂ. ಇತ್ತು. ಇಂದು 47,290 ರೂಪಾಯಿಗೆ ಏರಿಕೆಯಾಗಿದೆ.

3. Petrol Price| ಬೆಂಗಳೂರಿನಲ್ಲಿ ತೈಲ ಬೆಲೆ ಸ್ಥಿರ, ಜಿಲ್ಲೆಗಳಲ್ಲಿ ಏರಿಳಿತ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ ವಿವರ!

ಬೆಂಗಳೂರು (ಅಕ್ಟೋಬರ್​ 13); ದೇಶದಲ್ಲಿ ಕಳೆದ 15 ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ತೈಲ ಬೆಲೆ ಇಂದು ಸ್ಥಿರವಾಗಿದೆ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇತರೆ ಕಾರಣಗಳಿಂದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್​ (Petrol-Diesel Rate) ಬೆಲೆಯಲ್ಲಿ ಅಲ್ಪ ಬದಲಾವಣೆಯಾಗಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Banglore) ಇಂದು 1 ಲೀಟರ್ ಪೆಟ್ರೋಲ್ ಅನ್ನು 108.08 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 98.89 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಚಿತ್ರದುರ್ಗದಲ್ಲಿ (Chitradurga) ಪೆಟ್ರೋಲ್ ಬೆಲೆ ಇಂದು ಏರಿಕೆ ಕಾಣದಿದ್ದರೂ ಸಹ ಅತ್ಯಧಿಕ 110.40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ದಾವಣಗೆರೆಯಲ್ಲಿ (Davanagere) ಡೀಸೆಲ್​ ಅನ್ನು 100.76 ರೂ.ಗೆ ಮಾರಾಟ ಮಾಡಲಾಗುತ್ತಿದೆ.

 4. Ayudha Pooja Special: ಮಲ್ಲಿಗೆ ₹1000, ಕನಕಾಂಬರ ₹1500.. ಆಯುಧ ಪೂಜೆಗೆ ಬೆಲೆಯೇರಿಕೆ ಬಿಸಿ

ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬಕ್ಕಾಗಿ ನಗರದಲ್ಲಿ ತಯಾರಿ ಭರದಿಂದ ಸಾಗಿದ್ದು,  ಜನರು ಸಂಭ್ರಮ ಸಡಗರದಿಂದ ಈಗಾಗಲೇ ಹಬ್ಬದ ಆಚರಣೆಯನ್ನು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸಹ ಜನರು ಹಬ್ಬದ ಹಿನ್ನಲೆ ಹೂವಿನ ಖರೀದಿ ಮಾಡುತ್ತಿದ್ದು, ನಗರದ  ಕೆ.ಆರ್ ಮಾರುಕಟ್ಟೆ ಸೇರಿದಂತೆ ಮಲ್ಲೇಶ್ವರಂನಲ್ಲಿ ಬೆಳ್ಳಂಬೆಳಿಗ್ಗೆ ವ್ಯಾಪಾರ ಜೋರಾಗಿದೆ. ಹೂವು ಖರೀದಿ ಮಾಡಲು ಜನ ಜಾತ್ರೆಯಂತೆ ಸೇರಿದ್ದು, ರಸ್ತೆಯ ಬದಿಯಲ್ಲಿಯೇ ಹಣ್ಣು, ಹೂವು ಮಾರಾಟ ಮಾಡಲಾಗುತ್ತಿದೆ.  ಇನ್ನು ಹಬ್ಬದ ಹಿನ್ನಲೆ ಹೂವಿನ ಬೆಲೆಗಳು ಗಗನಕ್ಕೇರಿದ್ದು ಕೆ. ಆರ್. ಮಾರುಕಟ್ಟೆಯಲ್ಲಿ ಭರ್ಜರಿ ಜನ ಸೇರಿದ್ದಾರೆ.

5. Lakhimpur Kheri Massacre: ಯೂತ್ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಪಂಜಿನ ಮೆರವಣಿಗೆ, ಕೇಂದ್ರ ಸಚಿವರ ವಜಾಕ್ಕೆ ಆಗ್ರಹ

ನವದೆಹಲಿ, ಅ. 13: ಉತ್ತರಪ್ರದೇಶದ (Uttar Pradesh) ಲಖೀಂಪುರ್​ ಖೇರಿಯಲ್ಲಿ (Lakhimpur Kheri) ಇದೇ ಅಕ್ಟೋಬರ್​ 3ರಂದು ನಡೆದಿದ್ದ ರೈತರ ಹತ್ಯಾಕಾಂಡಕ್ಕೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಪುತ್ರ ಆಶೀಶ್​ ಮಿಶ್ರಾ (Ashish Mishra) ಕಾರಣಕರ್ತನಾಗಿದ್ದು ಕೂಡಲೇ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ (Union Cabinet) ವಜಾ ಮಾಡಬೇಕು. ಲಖೀಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (All India Youth Congress President Srinivas BV) ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ (Torch Light Parade) ಮಾಡಲಾಯಿತು.
Published by:Sandhya M
First published: