Morning Digest: ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ- ಚಿನ್ನ ಪೆಟ್ರೋಲ್ ಬೆಲೆಯಲ್ಲಿ ಏರಿಳಿತ.. ಬೆಳಗಿನ ಟಾಪ್ ನ್ಯೂಸ್​​ಗಳು

Top News of the day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Infosys 1, : ಆದಾಯ ತೆರಿಗೆ ಪೋರ್ಟಲ್​ನಲ್ಲಿ ಈಗ ತಾಂತ್ರಿಕ ದೋಷಗಳಿಲ್ಲ, ಮತ್ತಷ್ಟು ಉತ್ತಮ ಸ್ವರೂಪ ಪಡೆದುಕೊಂಡಿದೆ; ಇನ್ಫೋಸಿಸ್

  ಆದಾಯ ತೆರಿಗೆ ಇ-ಫೈಲಿಂಗ್(Income Tax E-Filing Portal) ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳಿಗಾಗಿ ತ್ವರಿತ ಪರಿಶೀಲನೆ ನಡೆಸಿದ ನಂತರ ಇನ್ಫೋಸಿಸ್(Infosys) ಕೆಲವೊಂದು ಅಂಶಗಳನ್ನು ಗುರುತಿಸಿದೆ. ಇಲ್ಲಿಯವರೆಗೆ 1.5 ಕೋಟಿ ರಿಟರ್ನ್‌ಗಳನ್ನು ಫೈಲ್ ಮಾಡಲಾಗಿದೆ ಎಂಬುದನ್ನು ಸಂಸ್ಥೆ ತಿಳಿಸಿದ್ದು ಮೂರು ಕೋಟಿಗಿಂತಲೂ ಅಧಿಕ ತೆರಿಗೆ ಪಾವತಿದಾರರು ವಿವಿಧ ವಹಿವಾಟುಗಳನ್ನು ಪೋರ್ಟಲ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂಬ ಮಾಹಿತಿ ನೀಡಿದೆ. ಸೆಪ್ಟೆಂಬರ್‌ನಲ್ಲಿ, ಸರಾಸರಿ 15 ಲಕ್ಷಕ್ಕಿಂತಲೂ ಅಧಿಕ ಅನನ್ಯ ತೆರಿಗೆ ಪಾವತಿದಾರರು ನಿತ್ಯವೂ ಪೋರ್ಟಲ್‌ಗೆ ಲಾಗಿನ್ ಮಾಡಿದ್ದಾರೆ ಎಂದು ತಿಳಿಸಿದೆ.

  2. Petrol Price | ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಳಿತ

  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Banglore) ಕಳೆದ ಎರಡು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಯಾವುದೇ ಬದಲಾವಣೆ ಇಲ್ಲ. ಆದರೆ, ತೆರಿಗೆಯಲ್ಲಿನ ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದಾಗಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮಾತ್ರ ಅಲ್ಪ ಬದಲಾವಣೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಂದು ಲಿಟರ್​ ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ 94.27 ರೂ.ಗೆ ಮಾರಾಟ ಮಾಡಲಾಗುತ್ತಿದೆ.

  3. Karnatka  weather Today: ಕರಾವಳಿ, ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ - ಬೆಂಗಳೂರಿನ ಹವಾಮಾನ ಹೀಗಿರಲಿದೆ.

  Karnataka Rains Today: ಬೆಂಗಳೂರು(ಸೆ.25):ಕಳೆದ ಕೆಲವು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮುಂಗಾರು ಮತ್ತೆ ಚುರುಕಾಗಿದ್ದು, ಮುಂದಿನ ಕೆಲ ದಿನ ಮಳೆಯಾಗುವ(Rainfall) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಮುನ್ಸೂಚನೆ ನೀಡಿದ್ದು, ವಿಶೇಷವಾಗಿ, ಕರಾವಳಿ(Coastal Karnataka) ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಮುಂಗಾರು ಜೈಸಲ್ಮೇರ್, ಕೋಟ, ಪಾಟ್ನಾ, ದಾಲ್ತೊಂಗಂಜ್, ಜಮ್ಶೆಡ್‌ಪುರ, ಬಾಲಸೋರ್ ಮೂಲಕ ಹಾದುಹೋಗಿ ನಂತರ ಆಗ್ನೇಯ ದಿಕ್ಕಿನಲ್ಲಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಗೆ ಹಾದುಹೋಗಲಿದೆ ಎಂದು ತಿಳಿಸಿದೆ.

  4. Gold Price Today: ಇಂದು ಮತ್ತೆ ಕಡಿಮೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ

  ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ? ಮತ್ಯಾಕೆ ತಡ ಇಂದೇ ಹೋಗಿ ಬಂಗಾರ ಖರೀದಿಸಿ. ಯಾಕೆಂದರೆ ನಿನ್ನೆಯಿಂದ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಏರಿಕೆಯಾಗಿದ್ದ ಬಂಗಾರದ ಬೆಲೆ (Gold Price) ನಿನ್ನೆಯಿಂದ ಕಡಿಮೆಯಾಗುತ್ತಿದೆ. ಆಭರಣ ಪ್ರಿಯರು ಚಿನ್ನ ಖರೀದಿಸಲು ಇದೇ ಸಕಾಲವಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ ಮತ್ತೆ 60 ರೂಪಾಯಿ ಇಳಿದಿದೆ. ನಿನ್ನೆಯೂ 10 ಗ್ರಾಂ ಚಿನ್ನಕ್ಕೆ 60 ರೂಪಾಯಿ ಕಡಿಮೆಯಾಗಿತ್ತು. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,300 ರೂ. ಇತ್ತು. ಇಂದು 45,240 ರೂ.ಗೆ ಇಳಿದಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,300 ರೂ. ಇತ್ತು. ಇಂದು 46,240 ರೂಪಾಯಿಗೆ ಇಳಿದಿದೆ.

  5. ಗಮನಿಸಿ.. ಅಕ್ಟೋಬರ್ 1ರಿಂದ ಈ ಬ್ಯಾಂಕ್​​​ಗಳ ಚೆಕ್​​​ಬುಕ್​​ಗಳು ಅಮಾನ್ಯ ಆಗಲಿದೆ..

  ಬ್ಯಾಂಕ್​​ ಸೇವೆಗಳು, ಚೆಕ್​​ ಬುಕ್ ನಿಯಮ​​ಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಈ ಬಗ್ಗೆ ಬ್ಯಾಂಕ್​​ ಗ್ರಾಹಕರು ಮಾಹಿತಿ ಪಡೆದು ಮುಂದುವರೆಯುವುದು ಒಳಿತು. ಇಲ್ಲವೇ ಬ್ಯಾಂಕ್​​ ಕೆಲಸಗಳು, ಹಣಕಾಸಿನ ವ್ಯವಹಾರಗಳಲ್ಲಿ ಸಮಸ್ಯೆಗಳು ತಲೆದೂರಬಹುದು. ತನ್ನ ಗ್ರಾಹಕರಿಗೆ ಒಂದು ಪ್ರಮುಖ ಎಚ್ಚರಿಕೆಯನ್ನು ನೀಡುತ್ತಾ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಕ್ಟೋಬರ್​​ 1ನೇ ತಾರೀಖಿನಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳ ಚೆಕ್ ಪುಸ್ತಕಗಳನ್ನು ನಿಲ್ಲಿಸುವುದಾಗಿ ಘೋಷಿಸಿದೆ.
  Published by:Sandhya M
  First published: